ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಮೊಮೊಸ್ ಸಹವಾಸಕ್ಕೆ ಹೋಗ್ಬೇಡಿ

By Roopa Hegde  |  First Published May 29, 2024, 12:51 PM IST

ಮೊಮೊಸ್ ಹೆಸರು ಕೇಳ್ತಿದ್ದಂತೆ ಕೆಲವರ ಬಾಯಲ್ಲಿ ನೀರು ಬರುತ್ತೆ. ಮೊಮೊಸ್ ಎಷ್ಟು ರುಚಿಯೋ ಅಷ್ಟೇ ಅಪಾಯಕಾರಿ. ಬಿರು ಬೇಸಿಗೆಯಲ್ಲಿ ನೀವು ಮೊಮೊಸ್ ತಿಂದ್ರೆ ಆಸ್ಪತ್ರೆ ಸೇರೋದು ನಿಶ್ಚಿತ. ಆ ಕ್ಷಣಕ್ಕೆ ಅದ್ರ ಪರಿಣಾಮ ತೋರಿಸಿಲ್ಲ ಅಂದ್ರೂ ದೀರ್ಘಸಮಯದಲ್ಲಿ ಅದ್ರ ಪರಿಣಾಮ ಹೆಚ್ಚಿರುತ್ತದೆ.
 


ಮೊಮೊಸ್ ಬಹುತೇಕ ಎಲ್ಲರ ಫೆವರೆಟ್. ವೆಜ್, ನಾನ್ ವೆಜ್ ಸೇರಿದಂತೆ ನಾನಾ ರೀತಿಯ ಮೊಮೊಸ್ ಲಭ್ಯವಿದೆ. ಜನಪ್ರಿಯ ಬೀದಿ ಆಹಾರದಲ್ಲಿ ಮೊಮೊಸ್ ಕೂಡ ಸೇರಿದೆ. ಬೀದಿ ಬದಿಯಲ್ಲಿ ಮಾತ್ರವಲ್ಲದೆ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಕೂಡ ನೀವು ಮೊಮೊಸ್ ರುಚಿ ಸೇವಿಯಬಹುದು. ಮೊಮೊಸ್ ಎಷ್ಟೇ ರುಚಿ ಇದ್ರೂ ಅದು ಆರೋಗ್ಯಕ್ಕೆ ಹಾನಿಕರ. ಅದ್ರ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುವ ಮಾತುಗಳು ಕೇಳಿ ಬರ್ತಿರುತ್ತವೆ. ಮೊಮೊಸನ್ನು ಬೇಸಿಗೆಯಲ್ಲಿ ಸೇವನೆ ಮಾಡೋದು ಮತ್ತಷ್ಟು ಅಪಾಯಕಾರಿ. ಅದು ದೀರ್ಘಕಾಲ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಮೊಮೊಸ್ ಸೇವನೆ ಮಾಡೋದ್ರಿಂದ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ನಾವಿಂದು ಬೇಸಿಗೆಯಲ್ಲಿ ಮೊಮೊಸ್ ತಿನ್ನೋದ್ರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಹೇಳ್ತೇವೆ.

ಬೇಸಿಗೆ (Summer) ಯಲ್ಲಿ ಮೊಮೊಸ್ (Momos) ಸೇವನೆಯಿಂದಾಗುವ ನಷ್ಟ : ಬೀದಿ ಬದಿಯಲ್ಲಿ ಮೊಮೊಸ್ ಮಾರಾಟ ಮಾಡೋದು ಹೆಚ್ಚು. ಅದನ್ನು ತಯಾರಿಸಿ ತೆರೆದಿಡಲಾಗುತ್ತದೆ. ಉಷ್ಣತೆ (Warmth) ಯು ಅಧಿಕವಾಗಿದ್ದಾಗ, ತೆರೆದ ಆಹಾರವು ಕೊಳಕು ಮತ್ತು ಸೂಕ್ಷ್ಮಜೀವಿಗಳಿಂದ ತುಂಬಿರುತ್ತದೆ. ಇದ್ರಿಂದ ಆಹಾರ ವಿಷವಾಗುತ್ತದೆ. ತಾಪಮಾನ ಹೆಚ್ಚಾದಂತೆ ಆಹಾರ ಅಥವಾ ಪಾನೀಯದ ಮಾಲಿನ್ಯದ ಅಪಾಯವೂ ಹೆಚ್ಚಾಗುತ್ತದೆ. ನೀವು ಇದನ್ನು ಸೇವನೆ ಮಾಡೋದ್ರಿಂದ ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಮೊಮೊಸ್ ತಕ್ಷಣ ನಿಮ್ಮ ದೇಹದ ಮೇಲೆ ಪರಿಣಾಮ ಬೀರದೆ ಹೋದ್ರೂ ದೀರ್ಘಕಾಲದಲ್ಲಿ ಅದ್ರ ಪರಿಣಾಮ ಕಾಣಿಸುತ್ತದೆ. 

Tap to resize

Latest Videos

undefined

ಛೋಲೆ ಭಟುರೆ ತಿನ್ನಿ..ತೂಕ ಇಳಿಸಿ; ಗಮನ ಸೆಳೆದ ರೆಸ್ಟೊರೆಂಟ್ ಪೋಸ್ಟರ್!

ಮೊಮೊಸನ್ನು ಚಿಕನ್, ಹಂದಿಮಾಂಸ ಅಥವಾ ಇತರ ಮಾಂಸ ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಆವಿಯಲ್ಲಿ ಬೇಯಿಸುವ ಮೊದಲು ಈ ಮಾಂಸ ಹಸಿಯಾಗಿರುತ್ತದೆ. ನಂತ್ರ ಅದನ್ನು ಸ್ಟಫ್ ಮಾಡಿ ಆವಿಯಲ್ಲಿ ಬೇಯಿಸಲಾಗುತ್ತದೆ. ಅದನ್ನು ತಯಾರಿಸುವ ವಿಧಾನ ಗ್ಯಾಸ್ಟ್ರಿಕ್ ಸೋಂಕು, ಅಸ್ವಸ್ಥತೆ ಮತ್ತು ಆಹಾರ ವಿಷವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಕೆಲವು ಸಂಶೋಧನಾ ವರದಿಗಳ ಪ್ರಕಾರ, ಮೊಮೊಸ್‌ ಗೆ ಅಗ್ಗದ ನೀರನ್ನು ಬಳಸಲಾಗುತ್ತದೆ. ಹಾಗೆಯೇ ಕಡಿಮೆ ಬೆಲೆಯ ಹಾಗೂ ಸತ್ತ ಕೋಳಿ ಮಾಂಸವನ್ನು ಬಳಸುವವರ ಸಂಖ್ಯೆ ಹೆಚ್ಚಿದೆ. ಕಡಿಮೆ ಬೆಲೆಗೆ ಮೊಮೊಸ್ ಸಿಗುವ ಕಾರಣ ಜನರು ಅದನ್ನು ತಿನ್ನುತ್ತಾರೆ. ಆದ್ರೆ ಈ ಅಗ್ಗದ ಮೊಮೊಸ್ ಆಸ್ಪತ್ರೆಗೆ ಸೇರುವಂತೆ ಮಾಡುತ್ತದೆ. ಬರೀ ಮಾಂಸ ಮಾತ್ರವಲ್ಲ ತರಕಾರಿ ಮೊಮೊಸ್ ಕೂಡ ಆರೋಗ್ಯ ಹಾಳು ಮಾಡುತ್ತದೆ. ಅನೈರ್ಮಲ್ಯ, ಇ ಕೋಲಿಯಂತಹ ಬ್ಯಾಕ್ಟೀರಿಯಾ ಹರಡುತ್ತದೆ.

ಮೊಮೊಸ್ ಗೆ ಬಳಸುವ ಮಸಾಲೆ : ಮೊಮೊಸ್ ಗೆ ಅಜಿನೊಮೊಟೊ ಅಥವಾ ಮೊನೊಸೋಡಿಯಂ ಗ್ಲುಟಮೇಟ್ (MSG) ಸೇರಿಸಲಾಗುತ್ತದೆ. ಇದು ಬೊಜ್ಜನ್ನು ಹೆಚ್ಚಿಸುತ್ತದೆ. ನರಗಳ ಅಸ್ವಸ್ಥತೆ, ಬೆವರು, ಎದೆ ನೋವು, ವಾಕರಿಕೆ ಮತ್ತು ಹೆದರಿಕೆಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ರಾಸಾಯನಿಕವು ಕಾರ್ಸಿನೋಜೆನಿಕ್ ಆಗಿರುವುದರಿಂದ, ಇದು ದೀರ್ಘಾವಧಿಯಲ್ಲಿ ಕ್ಯಾನ್ಸರ್ ಗೂ ಕಾರಣವಾಗುತ್ತದೆ. 

ಟೇಪ್ ವರ್ಮ್ ಅಪಾಯ : ಎಲೆಕೋಸಿನಿಂದ ಮೊಮೊಸ್ ತಯಾರಿಸಲಾಗುತ್ತದೆ. ಅದನ್ನು ಸರಿಯಾಗಿ ಬೇಯಿಸದ ಕಾರಣ ಟೇಪ್ ವರ್ಮ್ ಸೋಂಕು ಹರಡುವ ಸಾಧ್ಯತೆ ಇದೆ. ಇದು ಹೊಟ್ಟೆ ನೋವು, ವಾಕರಿಕೆ, ಅತಿಸಾರ, ಹಸಿವಿನ ನಷ್ಟ, ತೂಕ ನಷ್ಟ, ಮತ್ತು ದೌರ್ಬಲ್ಯವನ್ನುಂಟು ಮಾಡುತ್ತದೆ. 

ಅವಲಕ್ಕಿ ಅತ್ಯಂತ ಕೆಟ್ಟ ತಿಂಡಿ ಎಂದ ಯುವತಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮಧುಮೇಹದ ಅಪಾಯ : ಮೊಮೊಸನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅದನ್ನು ಬ್ಲಿಜ್ ಮಾಡಲಾಗುತ್ತದೆ. ಬ್ಲಿಜ್ ಮಾಡಲು ಬೆನ್ಝಾಯ್ಲ್ ಪೆರಾಕ್ಸೈಡ್ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ಮೇದೋಜ್ಜೀರಕ ಗ್ರಂಥಿಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ, ಇದರಿಂದಾಗಿ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್ ಹಾರ್ಮೋನ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದ್ರಿಂದಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. 

click me!