ನಮ್ಮಂತ ಸಾಮಾನ್ಯ ಜನರು ಆಹಾರ ತಯಾರಿಸಿದಾಗ ಅದನ್ನ ಆಪ್ತರು ರುಚಿ ನೋಡಿಲ್ಲ ಅಂದ್ರೆ ಎಷ್ಟು ಬೇಸರವಾಗುತ್ತೆ. ಇನ್ನು ಪ್ರಸಿದ್ಧ ಬಾಣಸಿಗರ ಫುಡ್ ಸ್ಟಾಲ್ ಗೆ ಒಬ್ಬೇ ಒಬ್ಬ ಬಂದಿಲ್ಲ ಅಂದ್ರೆ ಹೇಗಾಗಿರಬೇಡ. ಸ್ವಲ್ಪವೂ ಬೇಸರಗೊಳ್ಳದೆ ತಮ್ಮ ಕೆಲಸ ಮಾಡಿದ ಈ ಬಾಣಸಿಗರಿಗೆ ಒಂದು ಸಲಾಂ.
ತಮ್ಮ ಕೈರುಚಿಯನ್ನು ಆಹಾರ ಪ್ರೇಮಿಗಳಿಗೆ ಉಣಬಡಿಸಬೇಕು ಎನ್ನುವ ಕಾರಣಕ್ಕೆ ಬಾಣಸಿಗರು ಫುಡ್ ಸ್ಟಾಲ್ ತೆರೆಯುತ್ತಾರೆ. ರುಚಿ ರುಚಿ ಅಡುಗೆ ಮಾಡಿ, ಫುಡ್ ಸ್ಟಾಲ್ ನಲ್ಲಿಟ್ಟು ಗ್ರಾಹಕರಿಗೆ ಕಾಯ್ತಾರೆ. ಆಹಾರ ಮೇಳಗಳಲ್ಲಿ ಕೆಲವೊಂದು ಫುಡ್ ಸ್ಟಾಲ್ ಮುಂದೆ ಜನರ ಕ್ಯೂ ಇರುತ್ತೆ. ಮತ್ತೆ ಕೆಲ ಸ್ಟಾಲ್ ನಲ್ಲಿ ಕಡಿಮೆ ಜನರಿರ್ತಾರೆ. ಆದ್ರೆ ಒಂದೇ ಒಂದು ಗ್ರಾಹಕನಿಲ್ಲದ ಫುಡ್ ಸ್ಟಾಲ್ ಸಿಗಲು ಸಾಧ್ಯವೇ ಇಲ್ಲ. ಕಷ್ಟಪಟ್ಟು ಅಡುಗೆ ಮಾಡಿ, ಫುಡ್ ಸ್ಟಾಲ್ ನಲ್ಲಿಟ್ಟು ಗ್ರಾಹಕರಿಗಾಗಿ ಇಡೀ ದಿನ ಕಾದ್ರೂ ಒಬ್ಬರೂ ಅಲ್ಲಿಗೆ ಬಂದಿಲ್ಲ ಅಂದ್ರೆ ಎಷ್ಟು ಬೇಸರವಾಗುತ್ತೆ. ಒಂದ್ಕಡೆ ಆಹಾರ ಹಾಳಾದ ನೋವಾದ್ರೆ ಇನ್ನೊಂದು ಕಡೆ ಸಮಯ ವ್ಯರ್ಥವಾದ ಬೇಸರ. ಆ ಪರಿಸ್ಥಿತಿಯಲ್ಲಿ ನಾವಿದ್ರೆ ಅಳು ಬರೋದು ನಿಶ್ಚಿತ. ಪಾಪ, ಭಾರತೀಯ ಮೂಲದ ಬಾಣಸಿಗನಿಗೂ ಇದೇ ಸ್ಥಿತಿ ಒದಗಿ ಬಂದಿದೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಭಾವುಕರಾಗಿದ್ದಾರೆ. ಬಳಕೆದಾರರು ಈ ಬಾಣಸಿಗನಿಗೆ ಬೆಂಬಲ ನೀಡಿದ್ದಾರೆ. ಪದ್ಮಾ ವ್ಯಾಸ್ ಹೆಸರಿನ ಬಾಣಸಿಗರು, ಫುಡ್ ಸ್ಟಾಲ್ ಓಪನ್ ಮಾಡಿ, ಗ್ರಾಹಕರಿಲ್ಲದೆ ಬರಿಗೈನಲ್ಲಿ ಮನೆಗೆ ಹೋಗಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.
ಪದ್ಮಾ ವ್ಯಾಸ್ (Padma Vyas) ಅವರು ದಿ ಕಲೋನಿಯಲ್ ರೆಸ್ಟೋರೆಂಟ್ (Restaurant) ನ ಮುಖ್ಯ ಬಾಣಸಿಗರಾಗಿದ್ದಾರೆ. ಆಸ್ಟ್ರೇಲಿಯಾ (Australia) ದ ಸಿಡ್ನಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ವೀಡಿಯೊದಲ್ಲಿ ಅವರನ್ನು ಕಲೋನಿಯಲ್ ರೆಸ್ಟೋರೆಂಟ್‌ಗಳ ಮುಖ್ಯ ಬಾಣಸಿಗ ಎಂದು ಹೆಸರಿಸಲಾಗಿದೆ. ಅವರ ವೀಡಿಯೊವನ್ನು ದಿ ಕಲೋನಿಯಲ್ ರೆಸ್ಟೋರೆಂಟ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
undefined
ಮಟನ್ ಬೇಗ ಬೇಯಲ್ಲ ಅಂತ ಚಿಂತೆನಾ? ಬೇಯಿಸುವಾಗ ಈ ತಪ್ಪುಗಳನ್ನ ಮಾಡಬೇಡಿ!
ಇವರ ಆಹಾರದ ರುಚಿ ನೋಡಲು ಯಾರೂ ಬರಲಿಲ್ಲ ಎಂದು ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ. ನಮ್ಮ ಪ್ರೀತಿಯ ಮುಖ್ಯ ಬಾಣಸಿಗ @himalayansaltsydney ಸಿಡ್ನಿಯ ಜನರಿಗೆ ಆಹಾರವನ್ನು ತಯಾರಿಸಿದರು ಆದರೆ ಯಾರೂ ಬರಲಿಲ್ಲ ಎಂದು ರೆಸ್ಟೋರೆಂಟ್ ವಿವರ ನೀಡಿದೆ. ಈ ವಿಡಿಯೋದಲ್ಲಿ ನೀವು ಪದ್ಮಾ ವ್ಯಾಸ್ ಒಂದು ಟೇಬಲ್ ಮುಂದೆ ಕುಳಿತಿರೋದನ್ನು ನೋಡ್ಬಹುದು. ಟೇಬಲ್ ಮೇಲೆ ಒಂದಿಷ್ಟು ಆಹಾರವಿದೆ. ಶಾಂತವಾಗಿ ಕುಳಿತುಕೊಂಡಿದ್ದ ಪದ್ಮಾ ವ್ಯಾಸ್, ಮಳೆ ಬರ್ತಿದ್ದಂತೆ ಅಲ್ಲಿಂದ ಹೋಗ್ತಾರೆ.
ವಿಡಿಯೋ ವೇಗವಾಗಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಪದ್ಮಾ ವ್ಯಾಸ್ ಬೆಂಬಲಕ್ಕೆ ನಿಂತಿದ್ದಾರೆ. ಈವರೆಗೆ ಒಂದು ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 21 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಮುಖ್ಯ ಬಾಣಸಿಗರಾಗಿರುವ ಪದ್ಮಾ ವ್ಯಾಸ್ ಸ್ಟಾಲ್ ಮುಂದೆ ಗ್ರಾಹಕರಿಗಾಗಿ ಕಾಯ್ತಿರೋದನ್ನು ನೋಡಿದ ಜನರು, ಪದ್ಮಾ ವ್ಯಾಸ್ ತಾಳ್ಮೆಗೆ ಮೆಚ್ಚಬೇಕು ಎಂದಿದ್ದಾರೆ. ಆಹಾರ ತುಂಬಾ ರುಚಿ ಎನ್ನಿಸುತ್ತಿದೆ ಎಂದು ಮತ್ತೆ ಕೆಲವರು ಬರೆದಿದ್ದಾರೆ. ಇಷ್ಟು ರುಚಿಯಾದ ಆಹಾರವನ್ನು ಸೇವನೆ ಮಾಡದ ಜನರು ಮೂರ್ಖರು ಎಂದು ಬಳಕೆದಾರರು ಹೇಳಿದ್ದಾರೆ.
ಅಮ್ಮನ ಹಾಲು ಮಗುವಿಗೆ ಮೀಸಲು: ಮಾರಾಟ ಮಾಡುವಂತಿಲ್ಲ: FSSAI ಎಚ್ಚರಿಕೆ
ಇವರು ತಯಾರಿಸಿದ ಆಹಾರ ಬಹಳ ರುಚಿಯಾಗಿದೆ ಎಂಬುದು ನೋಡಿದ್ರೆ ತಿಳಿಯುತ್ತದೆ. ಜನರಿಗೆ ಯಾವುದು ಒಳ್ಳೆ ಕ್ವಾಲಿಟಿ ಎಂಬುದೇ ತಿಳಿದಿಲ್ಲ. ನನಗೆ ತುಂಬಾ ಬೇಸರವಾಗ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಾನು ಸಿಡ್ನಿಯಲ್ಲಿದ್ದರೆ ನಿಮ್ಮ ಆಹಾರದ ರುಚಿ ನೋಡ್ತಿದ್ದೆ ಎಂದು ಪದ್ಮಾ ವ್ಯಾಸ್ ಗೆ ಒಬ್ಬರು ಬೆಂಬಲ ನೀಡಿದ್ರೆ ಎಲ್ಲ ಆಹಾರವನ್ನು ನಾನೇ ಖರೀದಿ ಮಾಡ್ತಿದ್ದೆ ಎಂದು ಇನ್ನೊಬ್ಬರು ಸಪೋರ್ಟ್ ಮಾಡಿದ್ದಾರೆ. ಆನ್ಲೈನ್ ನಲ್ಲಿ ಪದ್ಮಾ ವ್ಯಾಸ್ ಗೆ ಸಿಕ್ಕಿರುವ ಬೆಂಬಲ, ಮುಂದಿನ ದಿನಗಳಲ್ಲಿ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಬಳಕೆದಾರರು ನಿರೀಕ್ಷಿಸಿದ್ದಾರೆ.