ರಾಗಿ ಮುದ್ದೆ ಇಲ್ಲದೆ ಊಟವಿಲ್ಲ ಎನ್ನುವವರು ಕರ್ನಾಟಕದಲ್ಲಿ ಹಲವು ಮಂದಿ. ತಡರಾತ್ರಿಯಾದ್ರೂ ಮುದ್ದೆ ತಿಂದು ಮಲಗುವವರಿದ್ದಾರೆ. ನೀವೂ ಈ ಅಭ್ಯಾಸ ಹೊಂದಿದ್ರೆ ಇಂದೇ ಇದಕ್ಕೆ ಅಂತ್ಯ ಹಾಡಿ, ಆರೋಗ್ಯ ಕಾಪಾಡಿಕೊಳ್ಳಿ.
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ರಾಗಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬಳಕೆ ಮಾಡ್ತಾರೆ. ರಾಗಿಯಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್ ಫೈಬರ್, ಲೈಸಿನ್ ಅಮಿನೋ ಆಸಿಡ್, ಮೆಥಿಯೋನಿನ್ ಮತ್ತು ವಿಟಮಿನ್ ಡಿ ಇದ್ದು, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಪ್ರತಿ ದಿನ ತಿನ್ನುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ರಾಗಿ (Ragi) ಮುದ್ದೆ ತಿಂದು ಮೈ ಕೈ ಗಟ್ಟಿಯಾಗಿದೆ ಎನ್ನುವ ಮಾತನ್ನು ನೀವು ಕೇಳಿರ್ತೀರಿ. ಆದ್ರೆ ಈ ರಾಗಿ ಮುದ್ದೆಯನ್ನು ಸೇವನೆ ಮಾಡಲು ಒಂದು ಸೂಕ್ತವಾದ ಸಮಯವಿದೆ. ನಮ್ಮಲ್ಲಿ ಬಹುತೇಕರು ಮುದ್ದೆ ಸೇವನೆ ಮಾಡೋದು ರಾತ್ರಿ (Night) ಸಮಯದಲ್ಲಿ. ರಾತ್ರಿ 9 ಗಂಟೆ ನಂತ್ರ 11 ಗಂಟೆಯವರೆಗೂ ರಾಗಿ ಮುದ್ದೆ ತಿನ್ನುವವರಿದ್ದಾರೆ. ಆದ್ರೆ ರಾತ್ರಿ 7 ಗಂಟೆ ನಂತ್ರ ಆಹಾರ ಸೇವನೆ ಮಾಡೋದೇ ಒಳ್ಳೆಯದಲ್ಲ. ಅದ್ರಲ್ಲೂ ರಾತ್ರಿ 11 ಗಂಟೆಗೆ ರಾಗಿ ಮುದ್ದೆ ಸೇವನೆ ಮಾಡಿದ್ರೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ರಾತ್ರಿ 11 ಗಂಟೆಗೆ ರಾಗಿ ಮುದ್ದೆ ತಿನ್ನೋದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಗಿ ಮುದ್ದೆಯಲ್ಲಿರುವ ಪೌಷ್ಟಿಕಾಂಶ ರಾತ್ರಿ ಸೇವನೆ ಮಾಡಿದ್ರೆ ಸರಿಯಾಗಿ ಜೀರ್ಣ (Digestion) ವಾಗೋದಿಲ್ಲ. ರಾಗಿ ಮುದ್ದೆಯಲ್ಲಿರುವ ಪೋಷಕಾಂಶ ನಮ್ಮ ದೇಹಕ್ಕೆ ಸೇರಿಯಾಗಿ ಸೇರಬೇಕು ಅಂದ್ರೆ ಬಿಸಿಲು ನಮ್ಮ ದೇಹಕ್ಕೆ ಸಿಗಬೇಕು. ರಾತ್ರಿ ಬಿಸಿಲು ಇರೋದಿಲ್ಲ. ನಮ್ಮ ದೇಹದಲ್ಲೂ ಹೆಚ್ಚು ಅಗ್ನಿಯ ಉತ್ಪತ್ತಿ ಆಗೋದಿಲ್ಲ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ರಾತ್ರಿ ತಡವಾಗಿ ನೀವು ರಾಗಿ ಮುದ್ದೆ ಸೇವನೆ ಮಾಡೋದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಮಳೆಗಾಲದಲ್ಲಿ ತೂಕ ಇಳಿಸ್ಕೊಳ್ಳೋದು ತುಂಬಾ ಸುಲಭ, ಈ ಟಿಪ್ಸ್ ಟ್ರೈ ಮಾಡಿ
ರಾತ್ರಿ ರಾಗಿ ಮುದ್ದೆ ತಿಂದ್ರೆ ನಷ್ಟವೇನು? : ರಾತ್ರಿ ರಾಗಿ ಮುದ್ದೆ ಸೇವನೆ ಮಾಡೋದ್ರಿಂದ ಹೊಟ್ಟೆ ಭಾರವಾದ ಅನುಭವವಾಗುತ್ತದೆ. ಸರಿಯಾಗಿ ನಿದ್ರೆ ಬರುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಜಠರಗರುಳಿನ ಆಮ್ಲವು ಹಗಲಿನಲ್ಲಿ ಸ್ರವಿಸುತ್ತದೆ. ಇದು ರಾಗಿಯಲ್ಲಿರುವ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಕಾರಣವಾಗುತ್ತದೆ. ಅದೇ ರಾತ್ರಿ ಜಠರಗರುಳು ಆಮ್ಲವನ್ನು ಸ್ರವಿಸದ ಕಾರಣ, ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ರಾಗಿಯು ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಂತಹ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ರಾಗಿ ಜೀರ್ಣವಾಗಲು ತುಂಬಾ ಸಮಯ ಬೇಕು. ರಾಗಿ ಸೇವನೆ ಮಾಡಿದ ನಂತ್ರ ನಿಮಗೆ ಕಡಿಮೆ ಹಸಿವಾಗಲು ಹಾಗೂ ಹೊಟ್ಟೆ ತುಂಬಿದ ಅನುಭವವಾಗಲು ಇದೇ ಕಾರಣ. ಹಾಗಾಗಿ ನೀವು ರಾತ್ರಿ ಬದಲು ಹಗಲಿನಲ್ಲಿ ರಾಗಿ ಸೇವನೆ ಮಾಡಬೇಕು.
ಮಳೆ ಬಂದಿದೆ, ಆಟಿ ತಿಂಗಳಲ್ಲಿ ಪತ್ರೊಡೆ ತಿನ್ನದಿದ್ದರೆ ಹೇಗೆ? ಇಲ್ಲಿದೆ ರೆಸಿಪಿ
ರಾತ್ರಿ 7 ಗಂಟೆ ಮೊದಲು ಆಹಾರ ಸೇವನೆ ಮಾಡೋದ್ರಿಂದ ಆಗುವ ಲಾಭ : ರಾಗಿಯನ್ನು ರಾತ್ರಿ ಸೇವನೆ ಮಾಡಬಾರದು ಹಾಗೆಯೇ ರಾತ್ರಿ ಆಹಾರವನ್ನು 7 ಗಂಟೆ ಮೊದಲು ತೆಗೆದುಕೊಳ್ಳಬೇಕು. ಇದ್ರಿಂದ ಸಾಕಷ್ಟು ಲಾಭವಿದೆ. ನಿಮ್ಮ ದೇಹ ಹಗುರವೆನ್ನಿಸುತ್ತದೆ. ನಿಮ್ಮ ಕೂದಲು ಬೆಳವಣಿಗೆಗೆ ಕೂಡ ಇದು ಸಹಕಾರಿ. ಇಷ್ಟು ಬೇಗ ನೀವು ಆಹಾರ ಸೇವನೆ ಮಾಡಿದ್ರೆ ನಿದ್ದೆ ಸರಿಯಾಗಿ ಆಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಇದು ಸಹಕಾರಿಯಾಗಿದೆ. ಆದ್ರೆ ಈ ಸಮಯದಲ್ಲಿ ಕೂಡ ಚೀಸ್ ಹಾಗೂ ಕಾರ್ಬ್ಸ್ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು.
ಜೀವನದಲ್ಲಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದಿನಚರಿಯಲ್ಲಿ ನೀವು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡಿದಾಗ, ಆಹಾರದಲ್ಲಿರುವ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್ ನಿಮ್ಮ ದೇಹವನ್ನು ಸೇರುತ್ತದೆ. ಉದ್ಯೋಗಸ್ಥರಿಗೆ 7 ಗಂಟೆ ಮೊದಲು ಊಟ ಸೇವನೆ ಮಾಡೋದು ಕಷ್ಟವಾದ್ರೆ ರಾಗಿ ಮುದ್ದೆ ಸೇರಿದಂತೆ ಕಾರ್ಬ್ಸ್ ಅನ್ನು ರಾತ್ರಿ ತಿನ್ನಬೇಡಿ.