ಬಿಸಿ ಬಿಸಿ ಜಿಲೇಬಿ ವಾಸನೆ ಕೇಳ್ತಿದ್ದರೆ ಬಾಯಲ್ಲಿ ನೀರು ಬರುತ್ತೆ. ಜಿಲೇಬಿ ಇಷ್ಟಪಡದವರು ಬಹಳ ಅಪರೂಪ. ಆದ್ರೆ ಜಿಲೇಬಿ ಜಿಲೇಬಿಯಾಗಿದ್ರೆ ಓಕೆ, ಅದಕ್ಕೆ ಏನೇನೋ ಬೆರೆಸಿ ರುಚಿ ಕೆಡಿಸಿದ್ರೆ ಹೇಗೆ?
ಈಗಿನ ದಿನಗಳಲ್ಲಿ ಜನರು ಅಚ್ಚರಿ ಹುಟ್ಟಿಸುವಂತಹ ಆಹಾರ ಸೇವನೆ ಮಾಡ್ತಿದ್ದಾರೆ. ಹೀಗೂ ಉಂಟಾ ಎನ್ನುವ ಪ್ರಶ್ನೆ ನಮ್ಮ ಮನದಲ್ಲಿ ಮೂಡುವಂತ ಆಹಾರ ಸೇವನೆ ಮಾಡ್ತಿದ್ದಾರೆ. ಆಹಾರ ಪ್ರೇಮಿಗಳ ಪ್ರಯೋಗಕ್ಕೆ ಎಲ್ಲೆಯಿಲ್ಲ. ಗುಲಾಬ್ ಜಾಮೂನ್ ಜೊತೆ ವೆನಿಲ್ಲಾ ಐಸ್ ಕ್ರೀಂ, ಚೋಲೆ ಜೊತೆ ಸಮೋಸ, ಚಿಕನ್ ಜೊತೆ ಪಾನಿಪುರಿ ಹೀಗೆ ವೆರೈಟಿ ವೆರೈಟಿ ಆಹಾರವನ್ನು ಮಿಕ್ಸ್ ಮಾಡಿ ಸೇವನೆ ಮಾಡ್ತಿರೋದನ್ನು ನಾವು ನೋಡ್ಬಹುದು.
ಗ್ರಾಹಕ (Customer) ರನ್ನು ಸೆಳೆಯಲು ಸ್ಟ್ರೀಟ್ ಫುಡ್ (Street Food) ಆಹಾರ ತಯಾರಕರು ವಿಲಕ್ಷಣ ಸಂಯೋಜನೆ ಮುಂದಾಗ್ತಿದ್ದಾರೆ. ಈಗ ಜಿಲೇಬಿ ಮೇಲೆ ಪ್ರಯೋಗ ನಡೆದಿದೆ. ಜಿಲೇಬಿ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಬಿಸಿ ಬಿಸಿ ಜಿಲೇಬಿ (Jalebi) ಬಾಯಲ್ಲಿಟ್ಟರೆ ಕರಗಿದ್ದೇ ಗೊತ್ತಾಗಲ್ಲ ಎನ್ನುತ್ತ ಐದಾರು ಜಿಲೇಬಿಯನ್ನು ಒಟ್ಟಿಗೆ ತಿನ್ನುವವರಿದ್ದಾರೆ. ಈ ಜಿಲೇಬಿಯನ್ನು ಮೊಸರು ಅಥವಾ ಹಾಲಿನ ಜೊತೆ ಸೇವನೆ ಮಾಡೋದು ಅನೇಕರಿಗೆ ತಿಳಿದಿದೆ. ಆದ್ರೆ ಈ ಜಿಲೇಬಿ ಮೇಲೆ ಈಗ ಮತ್ತೊಂದು ಪ್ರಯೋಗ ನಡೆದಿದೆ. ಜಿಲೇಬಿ ಜೊತೆ ಇವರು ತಿನ್ನುತ್ತಿರುವ ಕಾಂಬಿನೇಷನ್ ಅಚ್ಚರಿ ಹುಟ್ಟಿಸುತ್ತದೆ.
ಮಳೆ ಬಂದಿದೆ, ಆಟಿ ತಿಂಗಳಲ್ಲಿ ಪತ್ರೊಡೆ ತಿನ್ನದಿದ್ದರೆ ಹೇಗೆ? ಇಲ್ಲಿದೆ ರೆಸಿಪಿ
ಜಿಲೇಬಿ ಜೊತೆ ಇವರು ತಿನ್ನುತ್ತಿರುವುದು ಆಲೂಗಡ್ಡೆ ಸಬ್ಜಿ. ಅಚ್ಚರಿಯಾಯ್ತಾ? ಇದು ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ನೀವು ಜಿಲೇಬಿ ಜೊತೆ ಆಲೂಗಡ್ಡೆ ಸಬ್ಜಿ ತಿನ್ನೋದನ್ನು ನಾವು ನೋಡ್ಬಹುದು. ಈ ವೀಡಿಯೊವನ್ನು ಜುಲೈ 5 ರಂದು @MFuturewala ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಆಲೂಗೆಡ್ಡೆ ಸಬ್ಜಿಯೊಂದಿಗೆ ಜಲೇಬಿ… ಇಂಥ ಉಪಹಾರವೂ ಇರುತ್ತಾ? ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 55 ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. 150ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜನರು ಈ ವಿಡಿಯೋಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ.
ಜನರಲ್ಲಿ ಇನ್ನ್ಯಾವುದೇ ಟೇಸ್ಟ್ ಉಳಿದಿಲ್ಲ ಎಂದು ವ್ಯಕ್ತಿಯೊಬ್ಬ ಬರೆದಿದ್ದಾರೆ. ಇನ್ನೊಬ್ಬರು ಇದು ಗುಜರಾತ್ ಇರಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ಜನರಿಗೆ ಏನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೋ 22 ಸೆಕೆಂಡಿನದ್ದು. ಇದರಲ್ಲಿ ಮೊದಲು ಅಂಗಡಿಯವನು ಒಂದು ದೊನ್ನೆ ತೆಗೆದುಕೊಂಡು ಅದಕ್ಕೆ ಜಿಲೇಬಿ ಹಾಕುವುದನ್ನು ನೀವು ನೋಡಬಹುದು. ಇದಾದ ನಂತರ ಆತ ಆಲೂಗಡ್ಡೆ ಕರಿ, ಚಟ್ನಿ ಮತ್ತು ಮೊಸರು ಹಾಕುತ್ತಾನೆ. ನಂತ್ರ ಇದನ್ನು ಯುವತಿಗೆ ಸರ್ವ್ ಮಾಡ್ತಾನೆ. ಇದನ್ನು ತಿಂದ ಯುವತಿ ಚೆನ್ನಾಗಿದೆ ಎಂದು ಪ್ರತಿಕ್ರಿಯೆ ನೀಡ್ತಾಳೆ.
20 ರೂಪಾಯಿ ಸಮೋಸಾ ಆರ್ಡರ್ ಮಾಡಿ 1.4 ಲಕ್ಷ ರೂ ಕಳೆದುಕೊಂಡ ಡಾಕ್ಟರ್!
ಭಾರತದಲ್ಲಿ ಎಷ್ಟು ಪ್ರಕಾರದ ಜಿಲೇಬಿ ಇದೆ ಗೊತ್ತಾ? : ಜಿಲೇಬಿ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ದಕ್ಷಿಣ ಏಷ್ಯಾ, ಉತ್ತರ ಆಫ್ರಿಕಾ ಸೇರಿದಂತೆ ಪೂರ್ವ ಆಫ್ರಿಕಾ ದೇಶಗಳಲ್ಲಿ ಇದು ಒಂದು ಸಿಹಿ ತಿಂಡಿ. ಮೈದಾ ಹಿಟ್ಟಿನಲ್ಲಿ ಇದನ್ನು ತಯಾರಿಸಿ ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಇದ್ರಲ್ಲಿ ನಾನಾ ವಿಧಗಳಿವೆ. ಖೋಯಾ ಜಿಲೇಬಿ, ಆಲೂಗಡ್ಡೆ ಜಿಲೇಬಿ, ಪನ್ನೀರ್ ಜಿಲೇಬಿ, ರಾಬ್ರಿ ಜಿಲೇಬಿ, ಉದ್ದಿನ ಜಿಲೇಬಿ, ಸೇಬು ಜಿಲೇಬಿ ಹೀಗೆ ಬೇರೆ ಬೇರೆ ವಿಧದಲ್ಲಿ ಜಿಲೇಬಿ ತಯಾರಿಸಲಾಗುತ್ತದೆ. ಆದ್ರೆ ಮೈದಾದಲ್ಲಿ ಮಾಡಿದ ಜಿಲೇಬಿಯಂತ ರುಚಿ ಬೇರೆ ಜಿಲೇಬಿಯಲ್ಲಿ ಸಿಗೋದಿಲ್ಲ.
ಜವಾಹರ್ ಲಾಲ್ ನೆಹರೂಗೂ ಇಷ್ಟವಾಗಿತ್ತು ಈ ಜಿಲೇಬಿ : ರಾಷ್ಟ್ರ ರಾಜಧಾನಿ ದೆಹಲಿ ಫುಡ್ ಸ್ಟ್ರೀಟ್ ಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಚಾಂದಿನಿ ಚೌಕ್‌ನಲ್ಲಿರುವ ಓಲ್ಡ್ ಫೇಮಸ್ ಜಲೇಬಿ ವಾಲಾ ಸಾಕಷ್ಟು ಹಳೆಯ ಅಂಗಡಿ. ಇಲ್ಲಿ ತಯಾರಾಗುವ ಜಿಲೇಬಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂಗೂ ಇಷ್ಟವಾಗ್ತಿತ್ತು. ನೆಹರೂ ಕೂಡ ಇಲ್ಲಿಗೆ ಬಂದು ಈ ರಸಭರಿತವಾದ ಜಿಲೇಬಿಯನ್ನು ತಿನ್ನುತ್ತಿದ್ದರು.
Jalebi with Aloo Sabzi… Aisa bhi nashta hota hai kya? Batao mitron pic.twitter.com/90YnE03x9I
— Mohammed Futurewala (@MFuturewala)