Health
ಮಳೆಗಾಲದಲ್ಲಿ ತೂಕ ಇಳಿಸ್ಕೋಳ್ಳೋದು ತುಂಬಾ ಸುಲಭ, ಈ ಟಿಪ್ಸ್ ಟ್ರೈ ಮಾಡಿ
ಮಳೆಗಾಲದಲ್ಲಿ ಮನೆಯಿಂದ ಹೊರಗಡೆ ಹೋಗಿ ವರ್ಕೌಟ್ ಮಾಡುವುದು ಸ್ಪಲ್ಪ ಕಷ್ಟ. ಹೀಗಿರುವಾಗ ನೀವು ಇಂಡೋರ್ ವರ್ಕೌಟ್‌ಗೆ ಪ್ರಾಶಸ್ತ್ರ್ಯ ನೀಡಬಹುದು. ಯೋಗ, ಡ್ಯಾನ್ಸ್ ಮಾಡುವ ಮೂಲಕ ತೂಕ ಇಳಿಸಿಕೊಳ್ಳಬಹುದು.
ಮಳೆಗಾಲದಲ್ಲಿ ಹಲವಾರು ಆರೋಗ್ಯಕರ ಹಣ್ಣುಗಳು, ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಲಿಚಿ, ಚೆರಿ, ಸೊಪ್ಪು ತರಕಾರಿಗಳು, ಕಾಳುಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸಿ. ಇದು ದೇಹವನ್ನು ಸ್ಟ್ರಾಂಗ್ ಮಾಡುತ್ತದೆ.
ಮಳೆಗಾಲದಲ್ಲಿ ಬೆಚ್ಚಗಿರಲು ತರಕಾರಿಗಳ ಸೂಪ್ ಕುಡಿಯಿರಿ. ಇದಕ್ಕೆ ಸೀಸನಲ್ ವೆಜಿಟೇಬಲ್ ಸೇರಿಸುವುದನ್ನು ಮರೆಯದಿರಿ. ಇಂಥಾ ಸೂಪ್ ಕುಡಿಯುವುದು ಮಳೆಗಾಲದಲ್ಲಿ ತೂಕವನ್ನು ಸಮರ್ಪಕವಾಗಿ ನಿರ್ವಹಿಸಲು ನೆರವಾಗುತ್ತದೆ.
ಮಳೆಗಾಲದಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಹೆಚ್ಚು ಕುಡಿಯಿರಿ. ಇದು ಆರೋಗ್ಯಕ್ಕೆ ಬೇಕಾದ ನ್ಯೂಟ್ರಿಯೆಂಟ್ಸ್‌ನ್ನು ಒದಗಿಸುವುದರ ಜೊತೆಗೆ ತೂಕ ಇಳಿಸಲು ಸಹ ನೆರವಾಗುತ್ತದೆ.
ಮಳೆಗಾಲದ ಚಳಿಗೆ ಹರ್ಬಲ್ ಟೀ ಕುಡಿಯುವುದು ತುಂಬಾ ಒಳ್ಳೇದು. ಲಿಂಬೆ, ಲವಂಗ, ತುಳಸಿ, ಪುದೀನಾ ಮೊದಲಾದವುಗಳನ್ನು ಸೇರಿಸಿದ ಹರ್ಬಲ್ ಟೀ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಮಳೆಗಾಲದಲ್ಲಿ ಆಹಾರದಲ್ಲಿ ಅರಿಶಿನ, ಶುಂಠಿ, ಮೆಂತೆ ಮೊದಲಾದ ಪದಾರ್ಥಗಳನ್ನು ಸೇರಿಸುವುದನ್ನು ಮರೆಯದಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ತೂಕ ಇಳಿಕೆಗೂ ನೆರವಾಗುತ್ತದೆ.
ಮಳೆ ಬಂದಾಗ ಸಹಜವಾಗಿಯೇ ಕರಿದ ತಿಂಡಿ ತಿನ್ನುವ ಬಯಕೆಯಾಗುತ್ತದೆ. ಆದರೆ ಇಂಥಾ ಸ್ನ್ಯಾಕ್ಸ್ ತಿನ್ನುವುದನ್ನು ಕಡಿಮೆ ಮಾಡಿದರೆ ತೂಕ ಹೆಚ್ಚಳವಾಗುವ ಭಯ ಕಾಡುವುದಿಲ್ಲ.
ಆರೋಗ್ಯ ಚೆನ್ನಾಗಿರಲು ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ಮುಖ್ಯ. ದೇಹಕ್ಕೆ ನಿದ್ದೆ ಕಡಿಮೆಯಾದರೆ ಸುಲಭವಾಗಿ ತೂಕ ಹೆಚ್ಚಾಗಬಹುದು. ಹಾಗಂತ ನಿದ್ದೆ ಅತಿಯಾದರೂ ಒಳ್ಳೆಯದಲ್ಲ.