ಕ್ರೀಮ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಹಾಗೆ ಸಿಹಿ (Sweet)ಯಾಗಿ, ಟೇಸ್ಟಿ (Tasty)ಯಾಗಿರುತ್ತದೆ. ಆದ್ರೆ ಕ್ರೀಮ್ ಹುಳಿ ಹುಳಿಯಾದರೆ ಹೇಗಿರುತ್ತೆ. ಛೀ ಅಂತ ಮೂಗು ಮುರೀಬೇಡಿ. ಸದ್ಯದ ಟ್ರೆಂಡಿಂಗ್ ಇದುವೇ ಸೋರ್ ಕ್ರೀಮ್ (Sour Cream)
ಸಿಹಿಯಾದ, ರುಚಿಕರವಾದ ಕ್ರೀಮ್‌ನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಸದ್ಯ ವಿದೇಶಗಳಲ್ಲಿ ಹಲವರ ಫೇವರಿಟ್ ಹುಳಿ ಹುಳಿಯಾದ ಕ್ರೀಮ್. ಯುರೋಪಿಯನ್, ಮಧ್ಯ ಮತ್ತು ಉತ್ತರ ಅಮೆರಿಕಾದ ಭಾಗವಾಗಿರುವ ಹುಳಿ ಕ್ರೀಮ್ (Sour Cream) ಈ ದಿನಗಳಲ್ಲಿ ಹಲವರ ನೆಚ್ಚಿನ ಆಯ್ಕೆಯಾಗಿದೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾದೊಂದಿಗೆ ಹೆವಿ ಕ್ರೀಮ್ ಅನ್ನು ಹುದುಗಿಸುವ ಮೂಲಕ ಹುಳಿ ಕ್ರೀಮ್‌ನ್ನು ತಯಾರಿಸಲಾಗುತ್ತದೆ, ಹುಳಿ ಕ್ರೀಮ್ ಅನ್ನು ಮೇಯನೇಸ್ ಅಥವಾ ಚೀಸ್ ಡಿಪ್ಸ್‌ನಂತಹ ಅದ್ದುಗಳಿಗೆ ಆರೋಗ್ಯ (Health)ಕರ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ನೀವು ತಿಳಿದುಕೊಳ್ಳಬೇಕಾದ ಹುಳಿ ಕ್ರೀಮ್‌ನ ಕೆಲವು ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಇಲ್ಲಿವೆ.
ಅಂಗಡಿಯಲ್ಲಿ ಖರೀದಿಸಿದ ಹುಳಿ ಕ್ರೀಮ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಿದ್ರೆ ಯಾವುದೇ ರಾಸಾಯನಿಕಗಳಿಲ್ಲದ ಮತ್ತು ಅತ್ಯಂತ ರುಚಿಕರವಾದ ಹುಳಿ ಕ್ರೀಮ್ ಅನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ನಾವು ಹೇಳುತ್ತೇವೆ, ಆದರೆ ಅದಕ್ಕಿಂತಲೂ ಮೊದಲು ಹುಳಿ ಕ್ರೀಮ್ ಎಂದರೇನು ? ಹುಳಿ ಕ್ರೀಮ್ ಪ್ರಯೋಜನಗಳೇನು ? ಹುಳಿ ಕ್ರೀಮ್ ತಿನ್ನೋದ್ರಿಂದ ಇರೋ ಅಡ್ಡಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್.. ಹೊಸ ತಿನಿಸು ಬಿಡುಗಡೆ ಮಾಡಿದ ಮ್ಯಾಕ್‌ಡೊನಾಲ್ಡ್
ಹುಳಿ ಕ್ರೀಮ್ ಪ್ರಯೋಜನಗಳು
ಹುಳಿ ಕ್ರೀಮ್ ತಿನ್ನೋದ್ರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಹ ಇವೆ. ಹುಳಿ ಕ್ರೀಮ್‌ನಲ್ಲಿ ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಪ್ರಮುಖ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಷ್ಟೇ ಅಲ್ಲ, ಹುಳಿ ಕ್ರೀಮ್ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಹುಳಿ ಕ್ರೀಮ್‌ನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಇದು ಆರೋಗ್ಯಕರ ಆಹಾರದ ಭಾಗವಾಗಬಹುದು. ಹುಳಿ ಕ್ರೀಮ್, ಡಯಟ್‌ನಲ್ಲಿರುವ ಜನರಿಗೆ ಸೂಕ್ತವಾದ ಆಯ್ಕೆಯಾಗಿದೆ. 1 ಚಮಚ ಹುಳಿ ಕ್ರೀಮ್ ಕೇವಲ 23 ಕ್ಯಾಲೊರಿ (Calorie)ಗಳನ್ನು ಹೊಂದಿರುತ್ತದೆ.
ಹುಳಿ ಕ್ರೀಮ್ ಅಡ್ಡಪರಿಣಾಮಗಳು
ಹುಳಿ ಕ್ರೀಮ್ ಆರೋಗ್ಯಕ್ಕೆ ಉತ್ತಮವಾದಾರೂ ಇದನ್ನು ಯಾವಾಗಲೂ ಮಿತ ಪ್ರಮಾಣದಲ್ಲಿ ಸೇವಿಸಲು ಸೂಚಿಸಲಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆ ಉಬ್ಬುವುದು ಮತ್ತು ವಾಕರಿಕೆ ಸೇರಿದಂತೆ ಕೆಲವು ಅಲ್ಪಾವಧಿಯ ಅಡ್ಡಪರಿಣಾಮಗಳು ಕಂಡು ಬರಬಹುದು. ಮಾತ್ರವಲ್ಲ ಸತತವಾಗಿ ಹುಳಿ ಕ್ರೀಮ್ ಸೇವಿಸಿದರೆ, ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು. ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೆ ಇದು ಹೃದಯ ಸಂಬಂಧಿತ ಕಾಯಿಲೆಗೂ ಕಾರಣವಾಗಬಹುದು.
Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್
ಮನೆಯಲ್ಲಿ ಹುಳಿ ಕ್ರೀಮ್ ತಯಾರಿಸುವುದು ಹೇಗೆ ?
ಬೇಕಾಗುವ ಪದಾರ್ಥಗಳು
ಮನೆಯಲ್ಲಿ ಹುಳಿ ಕ್ರೀಮ್ ತಯಾರಿಸಲು, ನಿಮಗೆ ಕೇವಲ 3 ಪದಾರ್ಥಗಳು ಬೇಕಾಗುತ್ತವೆ. ಅವುಗಳೆಂದರೆ 1 ಕಪ್ ಹೆವಿ ಕ್ರೀಮ್, 2 ಟೀಸ್ಪೂನ್ ನಿಂಬೆ ರಸ ಮತ್ತು 1/4 ಕಪ್ ಬೇಯಿಸಿದ ಮತ್ತು ತಂಪಾಗಿಸಿದ ಹಾಲು (Milk).
ಹುಳಿ ಕ್ರೀಮ್ ತಯಾರಿಸಲು ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ, ಭಾರೀ ಕೆನೆ ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ, ಮಿಶ್ರಣಕ್ಕೆ ಹಾಲು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳು ಸೇರಿಕೊಳ್ಳುವವರೆಗೆ ನಿಧಾನವಾಗಿ ಬೆರೆಸಿ. ನಂತರ ಈ ಮಿಶ್ರಣವನ್ನು ಗಾಜಿನ ಜಾರ್‌ಗೆ ವರ್ಗಾಯಿಸಿ ಮತ್ತು ರಬ್ಬರ್ ಬ್ಯಾಂಡ್ ಸಹಾಯದಿಂದ ಗಟ್ಟಿಯಾಗಿ ಮುಚ್ಚಿ. ಈ ಮಿಶ್ರಣವನ್ನು ಅಡುಗೆಮನೆಯಲ್ಲಿ ಅಥವಾ ರೆಫ್ರಿಜರೇಟರ್ ನಲ್ಲಿ 24 ಗಂಟೆಗಳ ಕಾಲ ಹಾಗೆಯೇ ಇಡಿ. ಈಗ ತಾಜಾ ಹುಳಿ ಕ್ರೀಮ್ ಸಿದ್ಧವಾಗಿದೆ. ಕುರುಕಲು ತಿಂಡಿಗಳನ್ನು ಈ ಹುಳಿ ಕ್ರೀಮ್‌ನಲ್ಲಿ ಅದ್ದಿ ಸವಿಯಬಹುದು.