ಬಾಲಿವುಡ್‌ನ ಕ್ಯೂಟ್ ಕಪಲ್ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಜೋಡಿ. 2018ರಲ್ಲಿ ಮದುವೆಯಾದ ರಣವೀರ್ ಹಾಗೂ ದೀಪಿಕಾ ನಾರ್ತ್ ಮತ್ತು ಸೌತ್ ಕಾಂಬಿನೇಷನ್‌ನ ಅತ್ಯುತ್ತಮ ಜೋಡಿ. ದೀಪಿಕಾ ಈಗಲೂ ಬೆಳಗ್ಗಿನ ಬ್ರೇಕ್ ಫಾಸ್ಟ್ ಸೌತ್ ಇಂಡಿಯನ್ ಇಡ್ಲಿ ಸಾಂಬಾರನ್ನೇ ತಿನ್ನುತ್ತಾರೆ. ಆದರೆ ನಿಮಗೆ ಗೊತ್ತಾ, ರಣವೀರ್ ಸಿಂಗ್‌ಗೂ ಕರ್ನಾಟಕ ಖಾದ್ಯ ಚಿರೋಟಿ ಹಾಲು (Chiroti Halu) ಖಾದ್ಯ ತುಂಬಾ ಇಷ್ಟವಂತೆ.
ನಗರಗಳಲ್ಲಿ ಕೆಲಸ ಮಾಡುವ ಎಲ್ಲರೂ ಊರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಆಹಾರ (Food)ದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಊರಿನ ಆಹಾರಗಳೇ ಹೆಚ್ಚು ಪ್ರಿಯವಾಗುತ್ತವೆ. ಊರಿಗೆ ಹೋದಾಗ ಅಲ್ಲಿನ ಸಿಹಿ, ಖಾರದ ಆಹಾರಗಳನ್ನು ಸವಿಯಲು ಬಯಸುತ್ತೇವೆ. ಇಂಥಾ ಅಭ್ಯಾಸಕ್ಕೆ ಸೆಲಬ್ರಿಟಿ (Celebrity)ಗಳೂ ಹೊರತಾಗಿಲ್ಲ. ಇತ್ತೀಚಿಗೆ ತಮ್ಮ ತವರೂರಾದ ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ಇದನ್ನೇ ಮಾಡಿದ್ದಾರೆ. ಬೆಂಗಳೂರಿಗೆ ಬಂದು ತಮ್ಮ ತವರು ಮನೆಯಲ್ಲಿ ಇಷ್ಟದ ಖಾದ್ಯಗಳನ್ನು ಸವಿದಿದ್ದಾರೆ. ಪತಿ ರಣವೀರ್ ಸಿಂಗ್ ಸಹ ಮಾವನ ಮನೆಯ ಆತಿಥ್ಯದಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲೂ ದಕ್ಷಿಣಭಾರತದ, ಕರ್ನಾಟಕ ಸ್ಪೆಷಲ್ ಚಿರೋಟಿ ಹಾಲು ರಣವೀರ್ ಸಿಂಗ್ (Ranveer Singh)ಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ಯಂತೆ.
ನಟ ರಣವೀರ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದು, ವಾರಾಂತ್ಯದಲ್ಲಿ ಅತ್ತೆಯ ಮನೆಯಲ್ಲಿ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಮಾವ ಪ್ರಕಾಶ್ ಪಡುಕೋಣೆಯ ಹಳೆಯ ಚಿತ್ರಗಳು ಮತ್ತು ದೀಪಿಕಾ ಅವರ ಬಾಲ್ಯದ ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ಆಶಾ ಸ್ವೀಟ್ಸ್ ಬಾದಾಮಿ ಹಾಲಿನ ಜತೆ ಚಿರೋಟಿ ಸವಿಯುವ ಫೋಟೋವನ್ನು ಸಹ ರಣವೀರ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ..
undefined
Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?
ಚಿರೋಟಿ ರುಚಿಕರವಾದ ಖಾದ್ಯ
ಚಿರೋಟಿಯು ಗರಿಗರಿಯಾದ ಮತ್ತು ಫ್ಲಾಕಿ ಗೋಲ್ಡನ್-ಬ್ರೌನ್ ಸಿಹಿಭಕ್ಷ್ಯವಾಗಿದೆ. ಇದು ಮುಖ್ಯವಾಗಿ, ದಕ್ಷಿಣಭಾರತದ, ಅದರಲ್ಲೂ ಕರ್ನಾಟಕದ ರುಚಿಕರವಾದ ಖಾದ್ಯವಾಗಿದೆ. ಆದರೆ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಸಹ ಈ ತಿಂಡಿಯನ್ನು ತಯಾರಿಸಲಾಗುತತದೆ. ಆದರೆ ಸ್ಪಲ್ಪ ವಿಭಿನ್ನವಾಗಿ ಇಲ್ಲಿ ಚಿರೋಟಿಯನ್ನು ತಯಾರಿಸಲಾಗುತ್ತದೆ. ಇತರ ರಾಜ್ಯಗಳಲ್ಲಿ ಫೆನಿ ಅಥವಾ ಪಧೀರ್ ಪೇಣಿ ಎಂದು ಇದನ್ನು ಜನಪ್ರಿಯವಾಗಿ ಕರೆಯಲಾಗುತ್ತದೆ.
ಕರ್ನಾಟಕದಲ್ಲಿ ಚಿರೋಟಿ ವಿಶೇಷ ತಿಂಡಿಯಾಗಿದ್ದು, ಮದುವೆ ಮನೆಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ, ಹಬ್ಬದ ದಿನಗಳಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ದೀಪಿಕಾ ಪಡುಕೋಣೆ (Deepika Padukone)ಯವರು ಪೋಷಕರು ಮನೆಗೆ ಅಳಿಯ ಭೇಟಿ ನೀಡಿದಾಗ ಚಿರೋಟಿಯನ್ನು ಉಣಬಡಿಸಿದ್ದು, ರಣವೀರ್ ಸಿಂಗ್ ಸಹ ಇದನ್ನು ತುಂಬಾ ಇಷ್ಟಪಟ್ಟಿದ್ದಾರಂತೆ.
Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
ಚಿರೋಟಿ ಹಾಲನ್ನು ತಯಾರಿಸುವುದು ಹೇಗೆ ?
ಚಿರೋಟಿ ಹಾಲನ್ನು ತಯಾರಿಸುವುದು ಸುಲಭ. ಇದನ್ನು ತಯಾರಿಸಲು ಸ್ವಲ್ಪ ಮೈದಾ, ರವೆ (Rava0, ತುಪ್ಪ ಪುಡಿ ಮಾಡಿದ ಸಕ್ಕರೆ, ಅಲಂಕರಿಸಲು ಹುರಿದ ಬಾದಾಮಿ, ಗೋಡಂಬಿಯಿದ್ದರೆ ಸಾಕು. ಚಿರೋಟಿ ಹಾಲನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.
ಮೊದಲಿಗೆ 2 ಕಪ್ ಚಿರೋಟಿ ರವೆಗೆ, 2 ದೊಡ್ಡ ಸ್ಪೂನ್ ಬೆಣ್ಣೆಯನ್ನು ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಮುಕ್ಕಾಲು ಕಪ್ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಬೇಕು. ಈಗ ಮೆದುವಾದ ಹಿಟ್ಟು ರೆಡಿಯಾಗುತ್ತದೆ. ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಇನ್ನೊಂದು ಪಾತ್ರೆಗೆ ಬೆಣ್ಣೆಯನ್ನು ಹಾಕಿಕೊಂಡು ಇದಕ್ಕೆ 2 ಸ್ಪೂನ್ ಅಕ್ಕಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕ್ರೀಮೀಯಾಗಿ ಬದಲಾಗುತ್ತದೆ. ನಂತರ ರವೆ ಹಿಟ್ಟನ್ನು ಉಂಡೆ ಮಾಡಿಕೊಂಡು ಚಪಾತಿಯಣತೆ ತೆಳುವಾಗಿ ಲಟ್ಟಿಸಿಕೊಳ್ಳಬೇಕು. ಇದರ ಮೇಲೆ ಈಗಾಗಲೇ ಸಿದ್ಧಪಡಿಸಿಟ್ಟಿರುವ ಕ್ರೀಮ್‌ನ್ನು ಹಚ್ಚಬೇಕು.
ಇದರ ಮೇಲೆ ಮತ್ತೊಮ್ಮೆ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಲೇಯರ್ ಹಾಕಿಕೊಳ್ಳಬೇಕು, ಹೀಗೆ ನಾಲ್ಕೈದು ಲೇಯರ್ ಮಾಡಿ ಕ್ರೀಮ್ ಹಚ್ಚಿಕೊಳ್ಳುತ್ತಾ ಹೋಗಬೇಕು. ಕೊನೆಗೆ ಎಲ್ಲವನ್ನೂ ಸೇರಿಸಿ ಒಟ್ಟಿಗೆ ರೋಲ್ ಮಾಡಿ, ಅಡ್ಡಕ್ಕೆ ಹಿಡಿದು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡುತ್ತಾ ಹೋಗಬೇಕು. ಹೀಗೆ ಮಾಡಿದ ತುಂಡನ್ನು ಚಿರೋಟಿಯಂತೆ ಮಾಡಿಕೊಂಡು ತುಪ್ಪ (Ghee) ಅಥವಾ ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ಸಿಹಿಖಾದ್ಯ ಸಿದ್ಧವಾದ ಕೂಡಲೇ ಬಾದಾಮಿ ಹಾಲಿನೊಂದಿಗೆ ಸರ್ವ್ ಮಾಡಬಹುದು.