ಈಗಂತೂ ಕಲಬೆರಕೆ ಇಲ್ಲದ ವಸ್ತುವೇ ಇಲ್ಲ. ಮಾರುಕಟ್ಟೆ (Market)ಯಲ್ಲಿ ಸಿಗುವ ಎಲ್ಲಾ ವಸ್ತುಗಳಲ್ಲಿ ಎಸೆನ್ಸ್, ಫ್ರಾಗ್ರೆನ್ಸ್ ಎಂದು ಏನಾದರೊಂದನ್ನು ಸೇರಿಸಿಯೇ ಇರುತ್ತಾರೆ. ಹೀಗಿದ್ದಾಗ ಪುಟ್ಟ ಮಕ್ಕಳಿಗೆ ರೆಡಿಮೇಡ್ ಬೇಬಿ ಫುಡ್ (Baby Food)ಕೊಡಲು ತಾಯಂದಿರು ಹಿಂಜರಿಯುತ್ತಾರೆ. ಹಾಗಿದ್ರೆ ಮನೆ (Home)ಯಲ್ಲೇ ಬೇಬಿ ಫುಡ್ ತಯಾರಿಸುವುದು ಹೇಗೆ ?
ಅಂಬೆಗಾಲಿಡುವ ಮಗು (Baby)ವಿಗೆ ಆಹಾರ ನೀಡುವ ವಿಷಯಕ್ಕೆ ಬಂದಾಗ, ಎಲ್ಲಾ ಹೊಸ ತಾಯಂದಿರು ತಮ್ಮ ಮಗುವಿಗೆ ಎಲ್ಲಾ ಸರಿಯಾದ ಪೋಷಕಾಂಶಗಳು ಮತ್ತು ವಿಟಮಿನ್ (Vitamin)ಗಳನ್ನು ಪಡೆಯುವ ಸಾಮಾನ್ಯ ಕಾಳಜಿಯನ್ನು ಹೊಂದಿರುತ್ತಾರೆ. ಶಿಶುಗಳು 6 ತಿಂಗಳ ನಂತರ ತಮ್ಮ ತಾಯಿಯ ಹಾಲು ಬಿಟ್ಟು ಬೇರೆ ಆಹಾರ ತಿನ್ನಬಹುದಾಗಿದೆ. ಸೆರೆಲಾಕ್, ಹಣ್ಣಿನ ಪುಡಿ, ಸ್ಮಾಶ್ ಮಾಡಿದ ತರಕಾರಿ ಮೊದಲಾದ ಆಹಾರ (Food) ಪದಾರ್ಥಗಳನ್ನು ತಿನ್ನಲು ಪ್ರಾರಂಭಿಸಬಹುದು.
ಪ್ಯಾಕ್ ಮಾಡಲಾದ ಸೆರೆಲಾಕ್ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ, ಇದು ಶಿಶುಗಳಿಗೆ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅವರ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ. ನೀವು ಅಂಗಡಿಯಲ್ಲಿ ಖರೀದಿಸಿದ ಸೆರೆಲಾಕ್ ಮತ್ತು ಇತರ ಮಗುವಿನ ಆಹಾರಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಲು ಬಯಸದಿದ್ದರೆ, ಮನೆಯಲ್ಲಿ ಸಂರಕ್ಷಕ ಮುಕ್ತ ಮಗುವಿನ ಆಹಾರವನ್ನು ತಯಾರಿಸಬಹುದಾಗಿದೆ. ಈ ಮಗುವಿನ ಆಹಾರವನ್ನು 6-12 ತಿಂಗಳ ವಯಸ್ಸಿನ ಶಿಶುಗಳು ಸೇವಿಸಬಹುದು.
Kids Food: ಮಕ್ಕಳಿಗೆ ಪ್ರೋಟೀನ್ ಪೌಡರ್ ಕೊಡೋದು ಒಳ್ಳೇದಾ ?
ಮನೆಯಲ್ಲಿ ತಯಾರಿಸಿದ ಸೆರೆಲಾಕ್
ಮನೆಯಲ್ಲೇ ತಯಾರಿಸಿದ ಸೆರೆಲಾಕ್ ಮಕ್ಕಳಿಗೆ ಅತ್ಯುತ್ತಮ ಆಹಾರವಾಗಿದೆ. ಇದನ್ನು ತಯಾರಿಸಲು 1 ಕಪ್ ಅಕ್ಕಿಯನ್ನು ಸರಿಯಾಗಿ ತೊಳೆಯಿರಿ. ನೀರನ್ನು ಸೋಸಿ ಈ ಅಕ್ಕಿಯನ್ನು ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ. ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಈಗ ಒಂದು ಬೌಲ್‌ಗೆ 4 ಚಮಚ ಮೂಂಗ್ ದಾಲ್, 4 ಚಮಚ ಮಸೂರ್ ದಾಲ್, 2 ಚಮಚ ಉದ್ದಿನ ಬೇಳೆ ಮತ್ತು 7 ಬಾದಾಮಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ತೊಳೆಯಿರಿ ಮತ್ತು ಹೆಚ್ಚುವರಿ ನೀರನ್ನು ತೆಗೆಯಿರಿ. ಇದನ್ನು ಸಹ ಬಟ್ಟೆಯ ಮೇಲೆ ಹರಡಿ, ಸಂಪೂರ್ಣವಾಗಿ ಒಣಗಲು ಬಿಡಿ.
4 ಟೇಬಲ್ ಸ್ಪೂನ್ ನುಚ್ಚು ಗೋಧಿ ಜೊತೆಗೆ ಬಾಣಲೆಗೆ ಅಕ್ಕಿ ಸೇರಿಸಿ. ಎಲ್ಲವನ್ನೂ ಕೆಲವು ನಿಮಿಷಗಳ ಕಾಲ ಬಾಡಿಸಿಕೊಳ್ಳಿ. ಇದಕ್ಕೇ. ಒಣಗಲು ಇಟ್ಟ ಬೇಳೆಗಳನ್ನು ಬಾಣಲೆಗೆ ಸೇರಿಸಿ ಸ್ಪಲ್ಪ ಬಿಸಿ ಮಾಡಿಕೊಳ್ಳಿ.. ಈಗ ಎಲ್ಲಾ ಹುರಿದ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಅವುಗಳನ್ನು ಗ್ರೈಂಡರ್‌ನಲ್ಲಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಿ. ಸೆರೆಲಾಕ್ ಮಾಡಲು, 1 ಟೇಬಲ್ ಸ್ಪೂನ್ ಪುಡಿಯನ್ನು 1 ಕಪ್ ನೀರಿನೊಂದಿಗೆ 8-10 ನಿಮಿಷಗಳ ಕಾಲ ಅಥವಾ ಸ್ವಲ್ಪ ದಪ್ಪವಾಗುವವರೆಗೆ ಬೇಯಿಸಿ.
ಬಾಳೆಹಣ್ಣಿನ ಪೇಸ್ಟ್
ಬಾಳೆಹಣ್ಣಿನ ಪೇಸ್ಟ್ ಕೊಡುವುದು ಪುಟ್ಟ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಅರ್ಧ ಬಾಳೆಹಣ್ಣನ್ನು (Banana) ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ½ ಕಪ್ ನೀರಿನೊಂದಿಗೆ ಬಾಳೆಹಣ್ಣಿನ ತುಂಡುಗಳನ್ನು ಬ್ಲೆಂಡರ್‌ಗೆ ಸೇರಿಸಿ. ಈ ಪೇಸ್ಟ್‌ನ್ನು ಹಾಲಿನೊಂದಿಗೆ ಸೇರಿಸಿ ಮಕ್ಕಳಿಗೆ ಕೊಡಬಹುದು.
Babycare: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಜೇನು ನೀಡಬಹುದು?
ಕ್ಯಾರೆಟ್ ಪೇಸ್ಟ್
1 ಸಣ್ಣ ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.1/2 ಕಪ್ ನೀರಿನೊಂದಿಗೆ ಪ್ಯಾನ್‌ಗೆ ಕ್ಯಾರೆಟ್ (Carrot) ತುಂಡುಗಳನ್ನು ಸೇರಿಸಿ. 10-12 ನಿಮಿಷ ಬೇಯಿಸಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ. ಕ್ಯಾರೆಟ್ ಅನ್ನು ನೀರಿನೊಂದಿಗೆ ಬ್ಲೆಂಡರ್‌ಗೆ ವರ್ಗಾಯಿಸಿ ಮತ್ತು ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಮಕ್ಕಳಿಗೆ ಇದನ್ನು ಬಿಸಿ ನೀರು ಅಥವಾ ಹಾಲಿನೊಂದಿಗೆ ಸೇರಿಸಿ ಕೊಡಬಹುದು.
ಸ್ಟ್ರಾಬೆರಿ ಪೇಸ್ಟ್
ನಾಲ್ಕು ಸಂಪೂರ್ಣ ಸ್ಟ್ರಾಬೆರಿ (Strawberry)ಗಳನ್ನು ತೆಗೆದುಕೊಂಡು ಬೇಯಿಸಿಕೊಓಳ್ಳಿ. ಸ್ಟ್ರಾಬೆರಿ ಮೆತ್ತಗಾಗಲು ಐದು ನಿಮಿಷಗಳ ಕಾಲ ಬೇಯಸಿದರೂ ಸಾಕು. ಸ್ಟ್ರಾಬೆರಿ ತಣ್ಣಗಾದ ನಂತರ ¼ ಕಪ್ ನೀರಿನೊಂದಿಗೆ ಬೆರ್ರಿಗಳನ್ನು ಬ್ಲೆಂಡರ್‌ಗೆ ಸೇರಿಸಿ. ಈಗ ಸ್ಟ್ರಾಬೆರಿ ಪೇಸ್ಟ್ ಸಿದ್ಧವಾಗಿದೆ,
ಕುಂಬಳಕಾಯಿ ಪೇಸ್ಟ್
ಕುಂಬಳಕಾಯಿ (Pumpkin)ಯ ಸ್ಲೈಸ್ ತೆಗೆದುಕೊಂಡು ಬೀಜಗಳನ್ನು ತೆಗೆದುಹಾಕಿ ಮತ್ತು ಸಿಪ್ಪೆ ತೆಗೆಯಿರಿ. ಕುಂಬಳಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 4-5 ತುಂಡುಗಳಿದ್ದರು ಸಾಕು. ಕುಂಬಳಕಾಯಿ ತುಂಡುಗಳನ್ನು ಸ್ಟೀಮರ್‌ಗೆ ಸೇರಿಸಿ ಮತ್ತು 20 ನಿಮಿಷಗಳ ಕಾಲ ಬೇಯಿಸಿ. ಕುಂಬಳಕಾಯಿ ಮೃದುವಾದ ನಂತರ, ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಇದನ್ನು ¼ ಕಪ್ ನೀರಿನೊಂದಿಗೆ ಬ್ಲೆಂಡರ್‌ಗೆ ಸೇರಿಸಿ.ಈ ರೀತಿಯ ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆಗೆ ಪೂರಕವಾದ ಎಲ್ಲಾ ಪೋಷಕಾಂಶಗಳು ಮಕ್ಕಳಿಗೆ ದೊರಕಿದಂತಾಗುತ್ತದೆ.