ಹಳ್ಳಿ ಕಡೆ ಒಂದು ಸಣ್ಣ ಮಳೆ ಬಿದ್ರೆ ಸಾಕು ಮಳೆ ಹಾತೆಗಳು ಮನೆ ತುಂಬಾ ಮುತ್ಕೊಂಡು ಬಿಡ್ತವೆ. ಮನೆಮಂದಿಗೆಲ್ಲಾ ಇದನ್ನು ಓಡ್ಸೋದೆ ಒಂದು ಕೆಲ್ಸವಾಗಿ ಬಿಡುತ್ತೆ. ಆದ್ರೆ ಈ ಊರಿನ ಜನ್ರು ಹಾತೆ ಓಡಿಸಲ್ಲ ಬದಲಿಗೆ, ಹಿಡಿತಾರೆ. ಅಷ್ಟೆ ಅಲ್ಲ ಹಾತೆ ಫ್ರೈ ಮಾಡಿ ಸಖತ್ತಾಗಿ ತಿನ್ತಾರೆ.
ಹಳ್ಳಿ ಕಡೆ ಒಂದು ಸಣ್ಣ ಮಳೆ ಬಿದ್ರೆ ಸಾಕು ಮಳೆ ಹಾತೆಗಳು ಮನೆ ತುಂಬಾ ಮುತ್ಕೊಂಡು ಬಿಡ್ತವೆ. ಲೈಟ್ ಕಂಬಗಳು, ಮನೆಯ ಬಲ್ಪ್‌ಗಳು, ಉರಿಸಿಟ್ಟ ದೀಪಗಳ ಬಳಿ ಹೀಗೆ ಎಲ್ಲಾ ಕಡೆಯು ಅವುಗಳದ್ದೇ ಹಾವಳಿ. ಇದನ್ನು ಓಡಿಸೋಕೆ ಜನ್ರು ಲೈಟ್ ಆಫ್ ಮಾಡಿ ಕತ್ತಲಲ್ಲಿ ಕೂರೋದು ಇದೆ. ಇನ್ನು ಕೆಲವರು ಅಗಲವಾದ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ದೀಪ ಇಟ್ಟು ಎಲ್ಲಾ ಎಲ್ಲಾ ಹಾತೆಯನ್ನು ಅತ್ತ ಸೆಳೆಯೋಕೆ ಟ್ರೈ ಮಾಡ್ತಾರೆ. ಈ ಸಿಂಪಲ್ ಟೆಕ್ನಿಕ್ ಮೂಲಕ ಹಾತೆಯನ್ನು ಓಡಿಸ್ತಾರೆ. ಆದ್ರೆ ಈ ಊರಲ್ಲಿ ಜನ್ರು ಮಳೆಹಾತೆ ಬಂದ್ರೆ ಸಾಕು ಓಡ್ಸೋಕೇನು ಹೋಗಲ್ಲ..ಮತ್ತೇನ್ ಮಾಡ್ತಾರೆ.
ಆಹಾರಪದ್ಧತಿ ಆಯಾ ದೇಶಕ್ಕೆ, ಆಯಾ ರಾಜ್ಯಕ್ಕೆ, ಆಯಾ ಜಿಲ್ಲೆಗೆ ಅಷ್ಟೇ ಯಾಕೆ ಆಯಾ ಊರಿಗೆ ವಿಭಿನ್ನವಾಗಿರುತ್ತೆ. ಸಸ್ಯಾಹಾರಿಗಳು, ಮಾಂಸಾಹಾರಿಗಳಲ್ಲದೆಯೂ ಆಯಾ ಪ್ರದೇಶಕ್ಕೆ ತಕ್ಕಂತೆ ಆಹಾರ ಬದಲಾಗುತ್ತಾ ಹೋಗುತ್ತದೆ. ಒಂದೊಂದು ಪ್ರದೇಶದಲ್ಲಿ ಆಹಾರ (Food) ಪದ್ಧತಿ ವಿಭಿನ್ನವಾಗಿರುತ್ತದೆ, ವಿಚಿತ್ರವಾಗಿರುತ್ತದೆ. ಕೆಲವೊಬ್ಬರು ವಾವ್ಹ್ ಅಂತ ಬಾಯಿ ಚಪ್ಪರಿಸಿಕೊಂಡು ತಿನ್ನೋ ಆಹಾರ ಇನ್ನು ಕೆಲವರಿಗೆ ಛೀ, ಥೂ ಅನಿಸಬಹುದು. ಅಂಥಾ ಹಲವು ಆಹಾರಗಳು ಪ್ರಪಂಚದಲ್ಲಿವೆ. ಶಾರ್ಕ್ ಕರಿ, ನಾಯಿ ಮಾಂಸ, ಹಂದಿ ಸಲಾಡ್, ಕಪ್ಪೆ ಮಾಂಸವನ್ನು ಸವಿಯುವವರು ಇದ್ದಾರೆ. ಹಾಗೆಯೇ ಕೇರಳದಲ್ಲೊಂದೆಡೆ ಮಳೆಹಾತೆ (Insects)ಯನ್ನು ಫ್ರೈ ಮಾಡಿ ಸವೀತಾರೆ ನೋಡಿ.
ಕೆಂಪು ಇರುವೆ ಚಟ್ನಿ ಮಾಡಿ ಸವಿದ ಬಿಗ್ ಬಾಸ್ ಕಿಶನ್, ಏನೆಲ್ಲಾ ತಿನ್ತೀರಪ್ಪಾ ಕಾಲೆಳೆದ ನೆಟ್ಟಿಗರು
ಪಾಪ.. ಮಳೆಹಾತೆಯನ್ನು ಬಿಡ್ತಿಲ್ಲ..ಫ್ರೈ ಮಾಡಿ ತಿಂದೇ ಬಿಟ್ರು
ಹೌದು, ಅಚ್ಚರಿ ಅನಿಸಿದರೂ ಇದು ನಿಜ. ಇಲ್ಲಿನ ಜನರು ಮಳೆಹಾತೆಯನ್ನು ಬಿಡ್ತಿಲ್ಲ. ಮಳೆ ಬಂದಾಗ ರಾಶಿ ರಾಶಿಯಾಗಿ ಮುತ್ತಿಕೊಳ್ಳೋ ಹಾತೆಯನ್ನೆಲ್ಲಾ ಸಂಗ್ರಹಿಸ್ತಾರೆ. ನಂತರ ದೊಡ್ಡ ಪಾತ್ರೆಯಲ್ಲಿ ಹಾಕಿ ಫ್ರೈ ಮಾಡ್ತಾರೆ. ನಂತರ ಇದಕ್ಕೆ ಮಿಕ್ಚರ್, ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಮೇಲಿನಿಂದ ನಿಂಬೆ ರಸವನ್ನು (Lemon juice) ಸಹ ಸೇರಿಸಿ ಎಲ್ಲವನ್ನೂ ಸೇರಿಸಿ ಮಿಕ್ಸ್ ಮಾಡ್ತಾರೆ. ನಂತರ ಸಖತ್ತಾಗಿದೆ ಅಂತ ಸವಿಯುವುದನ್ನು ನೋಡಬಹುದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಇಂಥಾ ಅಸಹ್ಯ ವಿಡಿಯೋಗೆ ಅಪ್ಲೋಡ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, 'ಯಾಕೆ ಭಾರತೀಯರು ಚೀನೀಯರಂತೆ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, 'ಇಂಥಾ ಆಹಾರ ನಿಜವಾಗಿಯೂ ಕೇರಳದಲ್ಲಿ ಮಾಡುತ್ತಾರಾ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು, 'ತಿನ್ನೋ ಆಹಾರ ಅವರವರ ಇಷ್ಟ' ಎಂದು ವಿಡಿಯೋಗೆ ಸಪೂರ್ಟ್ ಮಾಡಿದ್ದಾರೆ.
ಎಗ್ ಪಾನಿಪುರಿ ವಿಡಿಯೋ ವೈರಲ್; ಏನೆಲ್ಲಾ ಅವಾಂತರ ಮಾಡ್ತೀರಪ್ಪಾ ಕ್ಯಾಕರಿಸಿ ಉಗಿದ ನೆಟ್ಟಿಗರು!