ಇಲ್ಲಿ ತಯಾರಾಗೋ ಪಾನಿಪುರಿ ನೋಡಿದ್ರೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ!

By Suvarna News  |  First Published Sep 15, 2023, 5:15 PM IST

ಪಾನಿಪುರಿ ಬೇಕು ಅಂತಾ ಮಕ್ಕಳು ಹಠ ಹಿಡಿದ್ರೆ, ಛೀ ಎಷ್ಟು ಕೊಳಕಾಗಿ ಅದನ್ನು ತಯಾರಿಸ್ತಾರೆ ಗೊತ್ತಾ ಅಂತಾ ಸುಮ್ಮನಿರಿಸ್ತೇವೆ. ಆದ್ರೆ ಈ ವಿಡಿಯೋ ನೋಡಿದ್ಮೇಲೆ ಮಕ್ಕಳ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ. ಅವರಿರಲಿ ನೀವೂ ನಿಶ್ಚಿಂತೆಯಿಂದ ಇನ್ನೊಂದರೆಡು ಪ್ಲೇಟ್ ಪಾನಿಪುರಿ ತಿನ್ನೋದ್ರಲ್ಲಿ ಡೌಟ್ ಇಲ್ಲ.
 


ಪಾನಿಪುರಿ, ಗೋಲ್ಗಪ್ಪಾ ಭಾರತೀಯರ ಮೆಚ್ಚಿನ ಸ್ಟ್ರೀಟ್ ಫುಡ್. ರಣಬಿಸಿಲಿನಲ್ಲೂ ಪಾನಿಪುರಿ ಸವಿ ಸವಿಯುವವರಿದ್ದಾರೆ. ಪಾನಿಪುರಿ ತಯಾರಿಸೋದು ಸುಲಭ. ಈಗ ಮಾರುಕಟ್ಟೆಯಲ್ಲಿ ಅದಕ್ಕೆ ಬೇಕಾದ ಎಲ್ಲ ಪದಾರ್ಥ ಸಿಗೋದ್ರಿಂದ ಮನೆಗೆ ಬಂದು ಮಿಕ್ಸ್ ಮಾಡಿ ತಿನ್ನೋರಿದ್ದಾರೆ. ಬೀದಿ ಬದಿಯಲ್ಲಿ ಪಾನಿಪುರಿ, ಮಸಾಲೆ ಪುರಿ ಮಾರಾಟಗಾರರು ಕೂಡ ರೆಡಿಮೆಡ್ ಪುರಿಯನ್ನು ಬಳಕೆ ಮಾಡ್ತಾರೆ. 

ಇಷ್ಟು  ದಿನ ನಾವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋ (Video,) ಗಳನ್ನು ನೋಡಿದ್ದೇವೆ. ಅದ್ರಲ್ಲಿ ಪುರಿ (Puri) ತಯಾರಿಸುವ ಹಿಟ್ಟನ್ನು ಕಾಲಲ್ಲಿ ತುಳಿಯೋದು, ಕೊಳಕು ಪ್ರದೇಶದಲ್ಲಿ ನಾದೋದು, ಕೊಳಕು ಕೈನಲ್ಲಿ ಅಥವಾ ಮಶಿನ್ (Machin) ನಲ್ಲಿ ಅದನ್ನು ಸಿದ್ಧಪಡಿಸಿ ಪ್ಯಾಕಿಂಗ್ ಮಾಡುವ ವಿಡಿಯೋಗಳಿರ್ತಿದ್ದವು. ಇದನ್ನು ತೋರಿಸಿ ನಾವೇ ಎಷ್ಟೋ ಬಾರಿ ಪಾನಿಪುರಿ ತಿನ್ನುತ್ತೀರಾ? ಇಲ್ನೋಡಿ ಅದನ್ನು ಎಷ್ಟು ಕೊಳಕಾಗಿ ಸಿದ್ಧಪಡಿಸ್ತಾರೆ ಅಂತಾ ಶೀರ್ಷಿಕೆ ಹಾಕಿದ್ದೂ ಇದೆ. ಆದ್ರೆ ಈಗ ನಾವು ನಿಮಗೊಂದು ಅಧ್ಬುತ ಸುದ್ದಿ ತಂದಿದ್ದೇವೆ. 

Tap to resize

Latest Videos

HEALTH TIPS: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?

ಕೊಳಕು ಜಾಗದಲ್ಲಿ ಪುರಿ ಮಾಡೋದನ್ನು ನೋಡಿ ಪಾನಿಪುರಿ ತಿನ್ನುವ ಚಟವನ್ನೇ ಬಿಟ್ಟವರು ಈ ಸುದ್ದಿ ಓದಿ ಮತ್ತೆ ಪಾನಿಪುರಿ ಸೇವನೆ ಶುರು ಮಾಡ್ಬಹುದು. ಈಗಾಗಲೇ ವಾರಕ್ಕೆ ಒಂದು ಭಾರಿ ಪಾನಿಪುರಿ ತಿನ್ನುತ್ತಿದ್ದವರು ಎಷ್ಟು ಹೈಜಿನ್ ಆಗಿದೆ ಅಂತಾ ವಾರಕ್ಕೆ ಎರಡು ಬಾರಿ ಪಾನಿಪುರಿ ಸೇವನೆ ಮಾಡ್ಬಹುದು. ಯಾಕೆಂದ್ರೆ ಈ ಪಾನಿಪುರಿ ಸಿದ್ಧವಾಗುವ ಸ್ಥಳ ಹಾಗಿದೆ. ತುಂಬಾ ಸ್ವಚ್ಛವಾದ ಪ್ರದೇಶದಲ್ಲಿ, ಕೊಳಕಿಲ್ಲದ ಮಶಿನ್ ನಲ್ಲಿ ಪಾನಿಪುರಿ ಸಿದ್ಧವಾಗ್ತಿದೆ.

the__bearded__foodie ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪಾನಿಪುರಿ ತಯಾರಾಗುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಗುಜರಾತಿನ ಸೂರತ್‌ನಲ್ಲಿರುವ ಕಾರ್ಖಾನೆಯೊಂದರಲ್ಲಿ ಈ ಪಾನಿಪುರಿ ಸಿದ್ಧವಾಗ್ತಿದೆ.  ಜಲ್ಪುರಿ, ಸೂರತ್ ಗುಜರಾತ್ ಎಂದು ಕಾರ್ಖಾನೆ ಲೊಕೇಷನ್ ಕೂಡ ಹಾಕಲಾಗಿದೆ. 

ಕೋತಿಗಳ ಐಸ್ ಕ್ರೀಂ ಪಾರ್ಟಿ ನೋಡಿದ್ರೆ ಎಂಥವರೂ ಬಾಯಲ್ಲೂ ಬರುತ್ತೆ ನೀರು!

ಫ್ರೈಡ್ ಪಾನಿಪುರಿ ಮಶಿನ್ ನಿಂದ ಹೊರಗೆ ಬರೋದನ್ನು ನೀವು ವಿಡಿಯೋ ಆರಂಭದಲ್ಲಿ ನೋಡ್ಬಹುದು. ನಂತ್ರ ಹಿಟ್ಟನ್ನು ಮಿಕ್ಸ್ ಮಾಡುವ ಮಶಿನ್ ಕಾಣಿಸುತ್ತದೆ. ಹಿಟ್ಟನ್ನು ಮಿಶನ್ ಗೆ ಹಾಕ್ತಿದ್ದಂತೆ ಅದು ಮಿಕ್ಸ್ ಆಗುತ್ತದೆ. ನಂತ್ರ ಗೋಧಿ ಹಿಟ್ಟಿನ ತೆಳುವಾದ ಹಾಳೆಯನ್ನು ನೀವು ನೋಡ್ಬಹುದು.  ಅದು ಇನ್ನೊಂದು ಗೋಲಾಕಾರದ ಮಶಿನ್ ಸೇರುತ್ತದೆ. ಅಲ್ಲಿ ಗೋಲಾಕಾರದ ಸಾಕಷ್ಟು ಅಚ್ಚುಗಳಿದ್ದು, ಆ ಅಚ್ಚಿಗೆ ತಕ್ಕಂತೆ ಗೋಧಿ ಹಿಟ್ಟಿನ ಹಾಳೆ ಕಟ್ ಆಗಿ ಬರುತ್ತದೆ. ನಂತ್ರ ಅದು ಎಣ್ಣೆಯಲ್ಲಿ ಬೀಳೋದನ್ನು ನೀವು ನೋಡ್ಬಹುದು. ನಂತ್ರ ಫ್ರೈ ಆದ ಪಾನಿಪುರಿ ಹೊರಗೆ ಬರುತ್ತದೆ. ನಂತ್ರ ಅವು ಪ್ಯಾಕಿಂಗ್ ಆಗಿ ಹೊರ ಬರೋದನ್ನು ನೀವು ನೋಡ್ಬಹುದು. ಈ ಪಾನಿಪುರಿ ಕವರ್ ಮೇಲೆ ಜಾಲ್ಪುರೇ (Jalpooree) ಎಂಬ ಹೆಸರಿದೆ.  ಮೋಸ್ಟ್ ಹೈಜಿನಿಕ್ ಪಾನಿಪುರಿ ಎಂದು ವಿಡಿಯೋ ಮೇಲೆ ಶೀರ್ಷಿಕೆ ಹಾಕಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ತಯಾರಕರು ನಿರ್ವಹಿಸಿದ ಶುಚಿತ್ವವನ್ನು ಹಲವರು ಶ್ಲಾಘಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಇದು ಏಕೈಕ ಶುದ್ಧ ಪಾನಿ ಪುರಿ ಎಂದು ಹಲವಾರು ಬಳಕೆದಾರರು ಹೊಗಳಿದ್ದಾರೆ. ಭಾರತದಲ್ಲಿ ತಿನ್ನಲು ಯೋಗ್ಯವಾದ ಪಾನಿಪುರಿ ಇದೊಂದೇ ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೆ ಕೆಲವರು ಭಾರತದಲ್ಲಿ ನೈರ್ಮಲ್ಯದಿಂದ ತಯಾರಿಸಿದ ಪಾನಿಪುರಿಯನ್ನು ತಿನ್ನೋದಿಲ್ಲ ಎಂದ್ರೆ ಇನ್ನೊಬ್ಬರು ಅಸಲಿ ರುಚಿ ಬೆವರು ಮತ್ತು ಕೊಳಕಿನಿಂದ್ಲೇ ಬರೋದು ಎಂದಿದ್ದಾರೆ. ಕಾರ್ಪೋರೇಟ್ ಸಿಸ್ಟಂನಲ್ಲಿ ಸಿದ್ಧವಾದ ಈ ಪಾನಿಪುರಿ ಬೆಲೆ ಕೂಡ ಹೆಚ್ಚು ಎನ್ನುವುದು ಕೆಲವರ ವಾದ. ಬರೀ ಐದು ಪಾನಿಪುರಿಗೆ 30 ರೂಪಾಯಿ ಎಂದು ತಮ್ಮ ವಿರೋದ ವ್ಯಕ್ತಪಡಿಸಿದ್ದಾರೆ.

click me!