ಮುಂಬೈ ಸ್ಟೈಲಿನ ಮಿರ್ಚಿ ವಡಪಾವ್ ಎಲ್ಲರಿಗೂ ಗೊತ್ತು. ಗುಜರಾತ್ ಸ್ಟೈಲ್ ವೈರಲ್ ಆಗ್ತಿದೆ. ಏನದು ಗೊತ್ತಾ..? ಗುಲಾಬ್ ಜಾಮೂನ್ ಪಾನ್ ಕೇಕ್‌ನಿಂದ, ನೂಡಲ್ಸ್ ಪಾನಿಪೂರಿ ತನಕ ಜನ ಸಾಕಷ್ಟು ರೆಸಿಪಿ ನೋಡಿಯಾಗಿದೆ. ಈಗ ಹೊಸದೇನಿದೆ ನೋಡಿ
ಈ ವರ್ಷ ವಿಶೇಷವಾಗಿ ಕೊರೋನಾ ಬಂದ ಮೇಲೆ ಎಕ್ಸಪರಿಮೆಂಟ್‌ಗಳು ಹೆಚ್ಚಾಗಿವೆ. ಮಿರ್ಚಿಗೇ ಫೇಮಸ್ ಆಗಿರೋ ವಡಪಾವ್ ಈಗ ಐಸ್‌ಕ್ರೀಂ ವಡಪಾವ್ ಆಗಿದೆ, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಮುಂಬೈ ಸ್ಟೈಲಿನ ಮಿರ್ಚಿ ವಡಪಾವ್ ಎಲ್ಲರಿಗೂ ಗೊತ್ತು. ಗುಜರಾತ್ ಸ್ಟೈಲ್ ವೈರಲ್ ಆಗ್ತಿದೆ. ಏನದು ಗೊತ್ತಾ..? ಗುಲಾಬ್ ಜಾಮೂನ್ ಪಾನ್ ಕೇಕ್‌ನಿಂದ, ನೂಡಲ್ಸ್ ಪಾನಿಪೂರಿ ತನಕ ಜನ ಸಾಕಷ್ಟು ರೆಸಿಪಿ ನೋಡಿಯಾಗಿದೆ.
ವೇಯಿಟ್ ಲಾಸ್ ಜೊತೆ ಇಮ್ಯುನಿಟಿ ಹೆಚ್ಚಿಸುತ್ತೆ ಗುಲಾಬಿ ಟೀ: ರೆಸಿಪಿ ಸುಲಭ, ಇಲ್ಲಿ ನೋಡಿ
ಭಾರತದ ಹಲವು ಪ್ರದೇಶದ ಭಿನ್ನ ಆಹಾರ ವಸ್ತುಗಳು ಮಿಕ್ಸ್ ಆಗಿ ಹೊಸ ರೆಸಿಪಿಗಳು ಸೃಷ್ಟಿಯಾಗ್ತಿವೆ. ಇದೀಗ ಗುಜರಾತ್‌ನ ಒಂದು ಫುಡ್‌ಸ್ಟಾಲ್ ಐಸ್‌ಕ್ರೀಂ ವಡಾಪಾವ್ ಮಾರಾಟ ಮಾಡುತ್ತಿದೆ.
ಏನೇನೋ ಎಕ್ಸಪರಿಮೆಂಟ್‌ಗಳು ನಡೆಯುತ್ತಿರುವಾಗ ಗುಜರಾತ್‌ನ ಫುಡ್ ಸ್ಟಾಲ್ ಒಂದು ಐಸ್‌ಕ್ರೀಂ ವಡಪಾವ್ ಟ್ರೈ ಮಾಡಿದೆ. ಟೇಸ್ಟ್ ಹೇಗಿದ್ಯೋ ಗೊತ್ತಿಲ್ಲ. ಲುಕ್ ಮಾತ್ರ ಸಖತ್ತಾಗಿದೆ.
ಸಂಧಿವಾತ-ಮೊಣಕಾಲು ನೋವು: ಅಡುಗೆಯಲ್ಲಿ ಸೇರಲಿ ಚಿಟಿಕೆ ಅರಶಿನ..!
ಏನೇ ಅಂದ್ರು ಮುಂಬೈನ ಫೇಮಸ್ ಸ್ಟ್ರೀಟ್ ಫೂಡ್ ವಡಪಾವ್‌ಗೆ ಸರಿಸಾಟಿ ಇಲ್ಲ. ಆದರೆ ಈ ಹೊಸ ಎಕ್ಸಪರಿಮೆಂಟ್ ಕೂಡ ಕಮ್ಮಿ ಏನಿಲ್ಲ. ಟೇಸ್ಟ್ ನೋಡಿ ಮೆಚ್ಚಿಕೊಂಡಿದ್ದಾರೆ ಜನ.
Gujarat's answer to Vada Pav is here. Vada Pav in mud. pic.twitter.com/RoTv67xVnh
— canteen quarantino (@Sahil_Adhikaari)ಟ್ವಿಟರ್‌ನಲ್ಲಿ ಸಾಹಿಲ್ ಎಂಬವರು ವಿಡಿಯೋ ಶೇರ್ ಮಾಡಿಕೊಂಡಿದ್ದು, ಪಾವ್ ಮಧ್ಯೆ ವಡಾದ ಬದಲು ಐಸ್‌ಕ್ರೀಂ ಸ್ಕೂಪ್ ಇಡಲಾಗುತ್ತಿದೆ. ಪಾವ್‌ನ ಮೇಲೆ ಗೋಲಾದಲ್ಲಿ ಬಳಸಲಾಗೋ ನಿಮಗಿಷ್ಟದ ಫ್ಲೇವರ್‌ನ್ನು ಟಾಪಿಂಗ್ಸ್ ತರ ಹಾಕುತ್ತಾರೆ.
ಪಾಂಡಾ ಲದ್ದಿಯ ಒಂದು ಕಪ್ ಗ್ರೀನ್ ಟೀಗೆ 2.5 ಲಕ್ಷ..! ಜೊಲ್ಲುರಸ, ವಾಂತಿಯಿಂದಲೂ ತಯಾರಿಸ್ತಾರೆ ಕಾಫಿ..!
ವಡಪಾವ್‌ಗೆ ಗುಜರಾತ್‌ನ ಉತ್ತರವಿದು. ವಡಪಾವ್ ಇನ್ ಮಡ್ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ವೆಂಟಿವ್ ಐಡಿಯಾದಿಂದ ಜನರು ಇಂಪ್ರೆಸ್ ಆಗಿದ್ದಾರೆ. ಡಿನ್ನರ್ ಕಂ ಡೆಸರ್ಟ್, ಗುಜರಾತಿಗರು ಜೀನಿಯಸ್ ಎಂದು ಕಮೆಂಟ್ಸ್ ಬಂದಿದೆ.