ಪಾಂಡಾ ಲದ್ದಿಯ ಒಂದು ಕಪ್ ಗ್ರೀನ್ ಟೀಗೆ 2.5 ಲಕ್ಷ..! ಜೊಲ್ಲುರಸ, ವಾಂತಿಯಿಂದಲೂ ತಯಾರಿಸ್ತಾರೆ ಕಾಫಿ..!
ಅಕ್ಷಯ್ ಕುಮಾರ್ ಆನೆ ಲದ್ದೀ ಟೀ ಕುಡಿದ ಮೇಲೆ ಆನೆ ಲದ್ದಿಯ ಟೀ ಕಾಫಿ ವೈರಲ್ ಆಗಿದೆ. ಇದಷ್ಟೆ ಅಲ್ಲ ಜೊಲ್ಲು ರಸ, ವಾಂತಿಯಿಂದಲೂ ಕಾಫಿ ಮಾಡ್ತಾರೆ. ಏನಿದು ವಿಚಿತ್ರ..? ಇಲ್ಲಿ ನೋಡಿ.
ಲದ್ದಿ, ಜೊಲ್ಲುರಸ, ವಾಂತಿಯಿಂದ ಮಾಡುವ ಕಾಫಿ ವಿಧಗಳು: ಆಹಾರದ ಬಗ್ಗೆ ಮಾತನಾಡುವಾಗ ಲದ್ದಿ, ವಾಂತಿ, ಜೊಲ್ಲು ಎಂಬಂತಹ ಪದಗಳೆಲ್ಲ ಅಷ್ಟು ಬೇಗ ತಲೆಗೆ ಬರುವುದಿಲ್ಲ.
ತಿನ್ನುವುದರ ಬಗ್ಗೆ ಮಾತಾಡುವಾಗ ಇದೆಂತಹ ಲದ್ದಿ ಕಥೆ ಅನ್ಬೇಡಿ. ಇದಕ್ಕೂ ಸಂಬಂಧವಿದೆ. ಲದ್ದಿ ಎಮೋಜಿಯಲ್ಲಿ ಚಾಕಲೇಟ್ ಇರುವುದಿಲ್ಲವೇ..? ಅದೇ ತರ.
ನಿಮಗೆ ಅಚ್ಚರಿ ಎನಿಸಬಹುದು. ಆದರೆ ಬಹಳಷ್ಟು ಆಹಾರ ಪದಾರ್ಥಗಳಲ್ಲಿ ವೇಸ್ಟ್ ಬಳಸಲಾಗುತ್ತದೆ.
ಪ್ರಾಣಿಗಳ ವೇಸ್ಟ್, ಲದ್ದಿಯಿಂದ ತಯಾರಿಸೋ ಕೆಲವು ಕಾಮನ್ ಕಾಫಿ ಟೀಗಳನ್ನು ಪರಿಚಯಿಸಿಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ಇದರ ಸೈನ್ಸ್ ಏನು ಅನ್ನೋದನ್ನು ತಿಳಿದುಕೊಳ್ಳೋಣ
ಟೀ, ಕಾಫಿಯನ್ನು ಪ್ರಾಣಿಗಳ ಮೂಲಕ ಏಕೆ ಪ್ರಾಸೆಸ್ ಮಾಡಿಸುತ್ತಾರೆ..? : ಪ್ರಾಣಿಗಳಿಗೆ ತಿನ್ನಿಸಿ ಅವುಗಳ ಲದ್ದಿಯಿಂದ ಕಾಫಿ ಆಯೋದರ ಮುಖ್ಯ ಕಾರಣ ಅವುಗಳಿಗೆ ಸಿಗುವ ರುಚಿ. ಕಾಫಿ ಆನೆಯ ಹೊಟ್ಟೆ ಸೇರಿ ಲದ್ದಿಯಾಗಿ ಬಂದಾಗ ಸೂಪರ್ ಟೇಸ್ಟ್ ಸಿಗುತ್ತಂತೆ.
ಪ್ರತ್ಯೇಕ ಪ್ರಾಣಿಗೆ ಕಾಫಿ ಚೆರಿಗಳನ್ನು ಆಹಾರದಲ್ಲಿ ಬೆರೆಸಿ ತಿನ್ನಿಸಲಾಗುತ್ತದೆ. ನಂತರ ಅವುಗಳನ್ನು ಅವುಗಳ ವೇಸ್ಟ್‌ನಿಂದ ಆಯ್ದುಕೊಳ್ಳಲಾಗುತ್ತದೆ.
ಕೊನೆಗೆ ಸಿಗುವ ಈ ಬೀಜಗಳು ಸ್ಮೂತ್ ಆಗಿ ಕಡಿಮೆ ಅಸಿಡಿಟಿ ಹೊಂದಿರುತ್ತದೆ. ಈಗ ಜಗತ್ತಿನಾದ್ಯಂತ ಕಾಫಿ ಬೀಜಗಳನ್ನು ಬೇರೆ ಬೇರೆ ಪ್ರಾಣಿಗಳ ಮೂಲಕ ಪ್ರಾಸೆಸ್ ಮಾಡಿ ನೋಡಲಾಗುತ್ತಿದೆ.
ಮಂಕಿ ಪರ್ಚ್‌ಮೆಂಟ್ ಕಾಫಿ: ಭಾರತದ ಪೂರ್ವ ಮತ್ತು ದಕ್ಷಿಣ ಘಟ್ಟಗಳಲ್ಲಿರುವ ಮಂಗಗಳು ಕಾಫಿ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತವೆ. ಅವುಗಳ ಹಣ್ಣು ತಿಂದು ಬೀಜ ಉಗುಳುತ್ತವೆ. ಇದರಲ್ಲಿ ತೆಳುವಾದ ಒಂದು ಪದರವೂ ಇರುತ್ತದೆ. ಮಂಗದ ಜೊಲ್ಲುರಸದಿಂದ ಬಂದ ಕಾಫಿ ಬೀಜದ ಕಾಫಿ ರುಚಿ ಹೆಚ್ಚಿರುತ್ತದೆ.
ಮುಂಗುಸಿಯ ವಾಂತಿ: ಮುಂಗುಸಿಗಳು ಕಾಫಿ ಹಣ್ಣು ತಿಂದು ಚೆನ್ನಾಗಿ ತಿನ್ನುತ್ತವೆ. ಆದರೆ ಅವುಗಳಿಗೆ ಬೀಜ ಅರಗಿಸಿಕೊಳ್ಳಲಾಗುವುದಿಲ್ಲ. ಹಾಗಾಗಿ ಅಜೀರ್ಣದಿಂದ ವಾಂತಿ ಮಾಡಿಕೊಳ್ಳುತ್ತವೆ. ಸ್ಥಳೀಯ ಜನ ಇದನ್ನು ಹೆಕ್ಕಿ ಕಾಫಿ ಮಾಡುತ್ತಾರೆ. ಇದಕ್ಕೆ ಅದ್ಭುತ ರುಚಿ ಇರುತ್ತದೆ.
ಕೊಪಿ ಲುವಾಕ್: ಸಿವೆಟ್ ಎಂಬ ಪ್ರಾಣಿ ಕಾಫಿ ಹಣ್ಣು ಸೇವಿಸುತ್ತದೆ. ನಂತರ ಅರೆ ಜೀರ್ಣಗೊಂಡ ಬೀಜ ಹೊರ ಹಾಕುತ್ತದೆ. ಇದರಿಂದ ತಯಾರಿಸುವ ಕಾಫಿ ಅತ್ಯಂತ ದುಬಾರಿ ಮತ್ತು ಅಪರೂಪ.
ಪಾಂಡಾ ಲದ್ದಿ ಕಾಫಿ: ಪಾಂಡಾ ಲದ್ದಿಯಿಂದ ಮಾಡೋ ಒಂದು ರೀತಿಯ ಗ್ರೀನ್ ಟೀ ಚೀನಾದಲ್ಲಿ ಸಿಗುತ್ತದೆ. ಚೀನಾದ ಸಿಚುವಾನ್‌ನಲ್ಲಿ ಬಹಳಷ್ಟು ಪಾಂಡಾ ಕೇಂದ್ರಗಳಿವೆ. ಅವುಗಳ ಲದ್ದಿ ಗೊಬ್ಬರವಾಗಿ ಬಳಸಲಾಗುತ್ತದೆ.
ಪಾಂಡಾ ಬಿದಿರು ಹಾಗೂ ಗಿಡಗಳನ್ನಷ್ಟೇ ಸೇವಿಸೋದ್ರಿಂದ ಇದರ ಲದ್ದಿಯಲ್ಲಿ ಪೌಷ್ಟಿಕಾಂಶವಿರುತ್ತದೆ. ಗ್ರೀನ್ ಟೀ ಅಂಶವೂ ಇರುತ್ತದೆ. 50 ಗ್ರಾಂ ಟೀಗೆ 2.5 ಲಕ್ಷ ರೂಪಾಯಿ ಬೆಲೆ ಇದೆ.
ಆನೆ ಲದ್ದಿ ಕಾಫಿ: ಇದಕ್ಕಾಗಿ ಆನೆಗಳಿಗೆ ಅವುಗಳ ಮಾಮೂಲು ಆಹಾರದಲ್ಲಿ ಥಾಯ್ ಅರೆಬಿಕಾ ಚೆರಿಯನ್ನು ಮೊದಲು ತಿನ್ನಿಸಲಾಗುತ್ತದೆ. ನಂತರ ಪ್ರಾಸೆಸ್ ಬೀಜದಿಂದ ಕಾಫಿ ಮಾಡಲಾಗುತ್ತದೆ