ಆಹಾರ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ವೆರೈಟಿ ವೆರೈಟಿ ಆಹಾರ ಟೇಸ್ಟ್ ಮಾಡೋಕೆ ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿಯೇ ಫುಡ್ ಫೋಟೋಸ್, ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಹಾಗೆಯೇ ಸದ್ಯ ಟ್ರಕ್ ಡ್ರೈವರ್ ಫುಡ್ ವ್ಲಾಗಿಂಗ್ ಎಲ್ಲೆಡೆ ಸುದ್ದಿಯಾಗ್ತಿದೆ.
ಆಹಾರ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ವೆರೈಟಿ ವೆರೈಟಿ ಆಹಾರ ಟೇಸ್ಟ್ ಮಾಡೋಕೆ ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಫುಡ್ ಫೋಟೋಸ್, ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಮಾತ್ರವಲ್ಲ ಫುಡ್ ವ್ಲಾಗಿಂಗ್ ಮಾಡೋದು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಹೊಟೇಲ್‌ಗೆ ಹೋದಾಗ ಆಹಾರ ತಯಾರಿಸುವ ವೀಡಿಯೋವನ್ನು ಹಂಚಿಕೊಳ್ಳುವುದು ಮಾಡುತ್ತಾರೆ. ಇನ್ನು ಕೆಲವರು ಆಹಾರ ತಿನ್ನುವ ವೀಡಿಯೋವನ್ನು ಸಹ ಹಂಚಿಕೊಳ್ಳುತ್ತಾರೆ. ಇಂಥಾ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ಲಕ್ಷಗಟ್ಟಲೆ ಲೈಕ್ಸ್, ವೀವ್ಸ್ ಗಳಿಸುತ್ತವೆ.
ಗ್ರಾಮೀಣ ಭಾರತದ ಅನೇಕ ಜನರು ತಮ್ಮ ದೈನಂದಿನ ಜೀವನದ ಬಗ್ಗೆ ವ್ಲಾಗ್ ಮಾಡುವ ಮೂಲಕ ಮತ್ತು ಅವರ ಹಳ್ಳಿಗಾಡಿನ ಭಾಷೆ ಮತ್ತು ಸರಳತೆಯ ಮೂಲಕ ಜನರೊಂದಿಗೆ ಸಂಪರ್ಕವನ್ನು ಹೊಂದುವ ಮೂಲಕ ಅಪಾರ ಅನುಯಾಯಿಗಳನ್ನು ಗಳಿಸಿದ್ದಾರೆ. ಗುಡಿಸಲೊಂದರಲ್ಲಿ ವಾಸವಿದ್ದು, ಪಕ್ಕದ ತೊರೆಯಿಂದ ಮೀನು ತಂದು ಕರಿ ಮಾಡುವವರು, ಲಭ್ಯವಿರೋ ಪದಾರ್ಥಗಳನ್ನು ಬಳಸಿ ಸಿಂಪಲ್ ಆಗಿ ಅಡುಗೆ ಮಾಡುವವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಹಾಗೆಯೇ ಇಲ್ಲೊಬ್ಬ ಟ್ರಕ್ ಡ್ರೈವರ್, ಫುಡ್ ವ್ಲಾಗಿಂಗ್ ಇತ್ತೀಚಿಗೆ ಸಖತ್ ವೈರಲ್ ಆಗಿದೆ.
undefined
50 ಕೆ.ಜಿ ತೂಕ 7 ಅಡಿ ಉದ್ದದ ಮೀನನ್ನು ಹೆಂಗೆಲ್ಲ ತಿಂದ ಗೊತ್ತಾ?
ಟ್ರಕ್‌ನಲ್ಲೇ ಅಡುಗೆ ಮಾಡಿಕೊಳ್ಳುವ ಡ್ರೈವರ್, ಫುಡ್ ವ್ಲಾಗಿಂಗ್ ವೈರಲ್
ಟ್ರಕ್ ಡ್ರೈವರ್ ರಾಜೇಶ್ ರಾವಾನಿ, ತಮ್ಮ ದೈನಂದಿನ ಅಡುಗೆಯ ಬಗ್ಗೆ ಫುಡ್ ವ್ಲಾಗಿಂಗ್ ಮಾಡುತ್ತಾರೆ. ಅವರ ಯೂಟ್ಯೂಬ್ ಚಾನೆಲ್‌ನಲ್ಲಿ, ಅವರು "ಡೈಲಿ ವ್ಲಾಗ್ಸ್ ಆಫ್ ಇಂಡಿಯನ್ ಟ್ರಕ್ ಡ್ರೈವರ್" ಎಂದು ಬರೆದಿದ್ದಾರೆ. ಈ ವೀಡಿಯೊಗಳು ಭಾರತದಲ್ಲಿನ ಟ್ರಕ್ ಡ್ರೈವರ್‌ನ ಜೀವನದ ಕುರಿತಾದ ಚಿತ್ರಣವನ್ನು ನೀಡುತ್ತವೆ, ವೀಡಿಯೋಗಳಲ್ಲಿ ರಾಜೇಶ್, ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ತಯಾರಿಸುವ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಫಿಶ್, ಚಿಕನ್ ಕರಿ, ಮಟನ್ ಬಿರಿಯಾನಿ ಮೊದಲಾದವುಗಳನ್ನು ತಯಾರಿಸುವ ವೀಡಿಯೋ ಬಾಯಲ್ಲಿ ನೀರು ತರಿಸುವಂತಿದೆ.
ಇನ್‌ಸ್ಟಾಗ್ರಾಂನಲ್ಲಿ ರಾಜೇಶ್, 4.12 ಲಕ್ಷ ಅನುಯಾಯಿಗಳು ಮತ್ತು ಯೂಟ್ಯೂಬ್‌ನಲ್ಲಿ 1.2 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇತ್ತೀಚಿಗೆ ಅವರು ಹೈದರಾಬಾದ್‌ನ ಪ್ರಸಿದ್ಧ ಖಾದ್ಯವಾದ ಚಿಕನ್ ಬಿರಿಯಾನಿಯನ್ನು ತಮ್ಮ ಸಹಚರರೊಂದಿಗೆ ಸವಿಯುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್ಮುಂದೆ ಎಟಿಎಂನಲ್ಲೇ ಸಿಗುತ್ತೆ ಬಿರಿಯಾನಿ: 4 ನಿಮಿಷದಲ್ಲಿ ಸಿಗುತ್ತೆ ಬಿಸಿ ಬಿಸಿ, ಸ್ವಾದಿಷ್ಟ ಆಹಾರ..!
ಮಟನ್, ಚಿಕನ್ ಕರಿ, ಫಿಶ್ ಫ್ರೈಗೆ ನೆಟ್ಟಿಗರು ಫಿದಾ
ರಾಜೇಶ್, ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿನ ವೀಕ್ಷಣೆಗಳು ಮಿಲಿಯನ್‌ಗಟ್ಟಲೆ ದಾಟುತ್ತವೆ. ನೆಟಿಜನ್‌ಗಳು ವಿವಿಧ ಪ್ರೋತ್ಸಾಹದಾಯಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ವೈರಲ್ ಆಗಿರುವ ಕುಕ್ಕಿಂಗ್ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, 'ಬ್ರೋ ನಮಗಿಂತ ವೆರೈಟಿ ಆಹಾರ ತಿನ್ನುತ್ತಾರೆ' ಎಂದು ಕಮೆಂಟಿಸಿದ್ದಾರೆ.
ಇನ್ನೊಬ್ಬರು, 'ನಿಮಗೆ ಪ್ರತ್ಯೇಕ ಕಿಚನ್ ಸೆಟಪ್ ಅಗತ್ಯವಿಲ್ಲ. ಬ್ಯಾಕ್‌ಗ್ರೌಂಡ್ ಚೆನ್ನಾಗಿದೆ' ಎಂದು ತಿಳಿಸಿದ್ದಾರೆ. ಮತ್ತೊಬ್ಬರು, 'ನಿಮ್ಮ ಟ್ರಕ್‌ನಲ್ಲಿ ಕೆಲಸ ಖಾಲಿ ಇದೆಯೇ' ಎಂದು ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ಟ್ರಕ್ ಕುಕ್ಕಿಂಗ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರೋದಂತೂ ನಿಜ.