ರೆಸ್ಟೋರೆಂಟ್‌ನಲ್ಲಿ ಬೆಕ್ಕಿನ ಮಾಂಸಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್‌, 300 ಬೆಕ್ಕನ್ನು ನೀರಲ್ಲಿ ಮುಳುಗಿಸಿ ಕೊಂದೇ ಬಿಟ್ರು!

By Vinutha PerlaFirst Published Dec 27, 2023, 4:18 PM IST
Highlights

ವಿಯೆಟ್ನಾಂನಲ್ಲಿ ಎಲ್ಲರೂ ಬೆಚ್ಚಿ ಬೀಳುವಂಥಾ ಘಟನೆಯೊಂದು ನಡೆದಿದೆ. ಇಲ್ಲಿನ ರೆಸ್ಟೋರೆಂಟ್‌ವೊಂದು ಸೂಪ್‌ ತಯಾರಿಸಲು ಒಂದು ತಿಂಗಳಲ್ಲಿ ಬರೋಬ್ಬರಿ  300 ಬೆಕ್ಕುಗಳನ್ನು ಸಾಯಿಸಿದೆ. ಈ ಘಟನೆ ಎಲ್ಲೆಡೆ ವೈರಲ್ ಆಗಿದೆ.

ಪ್ರಪಂಚದಾದ್ಯಂತ ಮನುಷ್ಯನ ಆಹಾರಕ್ರಮದ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇದೆ. ಕೆಲವೊಬ್ಬರು ಸಸ್ಯಾಹಾರ ಉತ್ತಮ ಅಂದರೆ, ಇನ್ನು ಕೆಲವರು ಮಾಂಸಾಹಾರಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ. ತಿನ್ನೋ ಆಹಾರ ಪ್ರತಿಯೊಬ್ಬರ ಹಕ್ಕು ಎಂದು ಮತ್ತೆ ಕೆಲವರು ವಾದಿಸುತ್ತಾರೆ. ಹೀಗಾಗಿಯೇ ಆಹಾರಕ್ರಮ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಕೆಲವು ದೇಶದಲ್ಲಿ ಸಾಕುಪ್ರಾಣಿಯಾಗಿರುವವುಗಳು ಮತ್ತೆ ಕೆಲವು ದೇಶದಲ್ಲಿ ಜನರ ಆಹಾರ. ಹುಳ ಹುಪ್ಪಟೆಗಳೂ ಕೆಲವು ದೇಶದಲ್ಲಿ ಮೃಷ್ಠಾನ್ನ ಭೋಜನವೆಂಬಂತೆ ಪರಿಗಣಿಸಲ್ಪಟ್ಟಿವೆ.

ಭಾರತದಲ್ಲಿ ಕೋಳಿ, ಕುರಿ, ಮೀನು, ಆಡು, ಬಾತುಕೋಳಿ ಮೊದಲಾದ ಪ್ರಾಣಿಗಳ ಮಾಂಸಗಳನ್ನು ಹಲವೆಡೆ ತಿನ್ನುತ್ತಾರೆ. ಇದಕ್ಕೆ ಪರಿಸರ ಪ್ರೇಮಿಗಳಿಂದ ಪೇಟಾದಿಂದ ಆಗಾಗ ವಿರೋಧ ವ್ಯಕ್ತವಾಗುತ್ತಲೇ ಇರುತ್ತದೆ. ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಹೀಗಾಗಿ ಅವುಗಳನ್ನು ಕೊಂದು ತಿನ್ನಬಾರದು ಎಂದು ಪೇಟಾ ಹೇಳುತ್ತದೆ. ಇದಕ್ಕೆ ಪ್ರತಿಯಾಗಿ ಆಹಾರ, ಪ್ರತಿಯೊಬ್ಬರ ಹಕ್ಕು ಎಂದು ಹೇಳಿ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಇವೆಲ್ಲದರ ಮಧ್ಯೆ,, ವಿಯೆಟ್ನಾಂನಲ್ಲಿ ಇದೆಲ್ಲಕ್ಕಿಂತ ವಿಚಿತ್ರವಾದ ಘಟನೆಯೊಂದು ನಡೆದಿದೆ. ಆಹಾರ ಸಿದ್ಧಪಡಿಸುವ ಸಲುವಾಗಿ ಇಲ್ಲಿ ಬರೋಬ್ಬರಿ 300 ಬೆಕ್ಕುಗಳನ್ನು ಸಾಯಿಸಲಾಗಿದೆ.

Latest Videos

ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?

ಒಂದು ತಿಂಗಳಲ್ಲಿ ಬರೋಬ್ಬರಿ  300 ಬೆಕ್ಕು ಸಾಯಿಸಿದ ರೆಸ್ಟೋರೆಂಟ್ ಮಾಲೀಕ
ನಂಬೋಕೆ ಕಷ್ಟವೆನಿಸಿದರೂ ಇದು ನಿಜ..ವಿಯೆಟ್ನಾಂನಲ್ಲಿ ಹೀಗೆ ಎಲ್ಲರೂ ಬೆಚ್ಚಿ ಬೀಳುವಂಥಾ ಘಟನೆ ನಡೆದಿದೆ. ಇಲ್ಲಿನ ರೆಸ್ಟೋರೆಂಟ್‌ವೊಂದು ಸೂಪ್‌ ತಯಾರಿಸಲು ಒಂದು ತಿಂಗಳಲ್ಲಿ ಬರೋಬ್ಬರಿ  300 ಬೆಕ್ಕುಗಳನ್ನು ಸಾಯಿಸಿದೆ. ಘಟನೆ ಎಲ್ಲೆಡೆ ವೈರಲ್ ಆಗಿ ಈ ಬಗ್ಗೆ ಚರ್ಚೆ ನಡೆದಿತ್ತು. ಹೀಗಿದ್ದೂ ರೆಸ್ಟೋರೆಂಟ್ ಮಾಲೀಕ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಂಡಿಲ್ಲ. 

ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ರೆಸ್ಟೋರೆಂಟ್ ಮಾಲೀಕ ಫಾಮ್ ಕ್ವಾಕ್‌ ಡಾನ್‌ ನಡೆಸಿರುವ ಈ ಕೃತ್ಯ ಈ ತಿಂಗಳಲ್ಲಿ ಬಯಲಾಗಿರುವುದಾಗಿ ತಿಳಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಫಾಮ್ ಕ್ವಾಕ್‌ ಡಾನ್‌ ಮಾತನಾಡಿ, 'ನಾನು ಮೊದಲು ಈ ರೆಸ್ಟೋರೆಂಟ್‌ನಲ್ಲಿ ಸಾಮಾನ್ಯ ಆಹಾರ ಮತ್ತು ಪಾನೀಯವನ್ನು ಸರ್ವ್‌ ಮಾಡುತ್ತಿದ್ದೆ. ಆದರೆ ಇದರಿಂದ ನನಗೆ ಯಾವುದೇ ರೀತಿಯ ಲಾಭ ಆಗುತ್ತಿರಲ್ಲಿಲ್ಲ. ಕುಟುಂಬವನ್ನು ನಿರ್ವಹಿಸಲು ಹಣ ಸಾಕಾಗುತ್ತಿರಲ್ಲಿಲ್ಲ. ಹೀಗಾಗಿ ನಮ್ಮ ರೆಸ್ಟೋರೆಂಟ್‌ನಲ್ಲಿ ಬೆಕ್ಕಿನ ಮಾಂಸ ದೊರಕುತ್ತದೆ ಎಂದು ಜಾಹೀರಾತು ನೀಡಲು ಆರಂಭಿಸಿದೆ.' ಎಂದಿದ್ದಾರೆ.

ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

ರೆಸ್ಟೋರೆಂಟ್ ಮುಚ್ಚಿ ದಿನಸಿ ಅಂಗಡಿ ಆರಂಭಿಸಲು ನಿರ್ಧರಿಸಿದ ವ್ಯಕ್ತಿ
ಹ್ಯೂಮನ್ ಸೊಸೈಟಿ ಇಂಟರ್‌ ನ್ಯಾಷನಲ್ ಪ್ರಕಾರ, ಪ್ರತಿ ವರ್ಷ ವಿಯೆಟ್ನಾಂನಲ್ಲಿ ಕದ್ದ ಸಾಕುಪ್ರಾಣಿಗಳು ಮತ್ತು ರಸ್ತೆಯಲ್ಲಿ ಸಿಕ್ಕ ಬೆಕ್ಕುಗಳು ಸೇರಿ ಸುಮಾರು ಒಂದು ಮಿಲಿಯನ್ ಬೆಕ್ಕುಗಳನ್ನು ಸಾಯಿಸಲಾಗುತ್ತದೆ. ರೆಸ್ಟೋರೆಂಟ್ ಮಾಲೀಕ ಈ ಬಗ್ಗೆ ಮಾತನಾಡಿ, 'ನೀರಿನಲ್ಲಿ ಮುಳುಗಿಸಿ ಬೆಕ್ಕುಗಳನ್ನು ಸಾಯಿಸುತ್ತಿದ್ದೆ. ಹೀಗೆ ಮಾಡಲು ತುಂಬಾ ಬೇಸರವಾಗುತ್ತಿತ್ತು. ಆದರೆ ನನ್ನ ಕುಟುಂಬವನ್ನು ನಿರ್ವಹಿಸಲು ಹೀಗೆ ಮಾಡಬೇಕಾಯಿತು' ಎಂದು ಹೇಳಿದ್ದಾರೆ.

ರೆಸ್ಟೋರೆಂಟ್ ಮಾಲೀಕರು ಸದ್ಯ ತಮ್ಮ ಬೆಕ್ಕಿನ ಮಾಂಸದ ರೆಸ್ಟೋರೆಂಟ್ ಮುಚ್ಚಿ ದಿನಸಿ ಅಂಗಡಿಯನ್ನು ತೆರೆಯಲು ಮುಂದಾಗಿದ್ದಾರೆ. 'ನಾನು ವರ್ಷಗಟ್ಟಲೆ ಇಲ್ಲಿ ಕೊಂದು ಬಡಿಸಿದ ಎಲ್ಲಾ ಸಾವಿರಾರು ಬೆಕ್ಕುಗಳ ಬಗ್ಗೆ ಯೋಚಿಸಿದಾಗ ನನಗೆ ಬೇಸರವಾಗುತ್ತದೆ. ವಿಯೆಟ್ನಾಂನಲ್ಲಿ ಬೆಕ್ಕು ಕಳ್ಳತನವು ತುಂಬಾ ಸಾಮಾನ್ಯವಾಗಿದೆ. ಆದ್ರೆ ಇಲ್ಲಿ ಮಾರಾಟವಾದ ಅನೇಕ ಬೆಕ್ಕುಗಳು ಯಾರೊಬ್ಬರ ಪ್ರೀತಿಯ ಕುಟುಂಬದ ಒಡನಾಡಿ ಎಂದು ನನಗೆ ತಿಳಿದಿದೆ ಮತ್ತು ಅದರ ಬಗ್ಗೆ ನಾನು ತುಂಬಾ ವಿಷಾದಿಸುತ್ತೇನೆ. ಹೀಗಾಗಿ ಇನ್ನು ಮುಂದೆ ಬೆಕ್ಕಿನ ಮಾಂಸವನ್ನು ಮಾರುವುದಿಲ್ಲ' ಎಂದು ತಿಳಿಸಿದ್ದಾರೆ.

click me!