ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನ್ನು ಆ ಪುಟ್ಟ ಮಗುವಿನ ಫೋಟೋವಿಲ್ಲದೆ ಊಹಿಸುವುದು ಸಹ ಕಷ್ಟ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ರ್ಯಾಪರ್‌ನಲ್ಲಿ ಪುಟ್ಟ ಮಗುವಿನ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ಆದ್ರೆ ಇತ್ತೀಚಿಗೆ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕ್‌ನಲ್ಲಿರುವ ಹುಡುಗಿಯ ಫೋಟೋ ಬದಲಾಗಿದೆ.
ಪಾರ್ಲೆಜಿ ಬಿಸ್ಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. 80-90ರ ದಶಕಗಳಲ್ಲಿ ಹುಟ್ಟಿ ಬೆಳದವರ ನೆಚ್ಚಿನ ಬಿಸ್ಕೆಟ್‌ಗಳಲ್ಲಿ ಒಂದು ಈ ಪಾರ್ಲೆ-ಜಿ. ಪ್ರತಿದಿನ ಬೆಳಿಗ್ಗೆ ಚಾಯ್ ಅಥವಾ ಟೀ ಜೊತೆ ಪಾರ್ಲೆ-ಜಿ ಬಿಸ್ಕೆಟ್ ಬೇಕು ಎಂದು ಜನರು ಹೇಳುವ ಕಾಲವೊಂದಿತ್ತು. ಏಕೆಂದರೆ ಈ ಬಿಸ್ಕತ್ತುಗಳು ಬಾಲ್ಯದಿಂದಲೂ ಪ್ರತಿಯೊಬ್ಬ ಭಾರತೀಯರ ಮೆಚ್ಚಿನವುಗಳಾಗಿವೆ. ಪಾರ್ಲೆ ಜೀ ಬಿಸ್ಕೆಟ್‌ನ ರುಚಿ ಬೇರೆ ಯಾವ ಬಿಸ್ಕೆಟ್‌ಗೂ ಸರಿಸಾಟಿಯಾಗಲ್ಲ ಎಂಬ ಮಾತನ್ನು ಅನೇಕರು ಈಗಲೂ ಹೇಳುತ್ತಾರೆ. ಅದರಲ್ಲೂ ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನಲ್ಲಿರುವ ಪುಟ್ಟ ಬಾಲಕಿಯ ಪೋಟೋ ಎಲ್ಲರಿಗೂ ಅಚ್ಚುಮೆಚ್ಚು.
ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನ್ನು ಆ ಪುಟ್ಟ ಮಗುವಿನ ಫೋಟೋವಿಲ್ಲದೆ ಊಹಿಸುವುದು ಸಹ ಕಷ್ಟ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ರ್ಯಾಪರ್‌ನಲ್ಲಿ ಪುಟ್ಟ ಮಗುವಿನ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ಆದ್ರೆ ಇತ್ತೀಚಿಗೆ ಪಾರ್ಲೆ-ಜಿ ಐಕಾನಿಕ್ ಹುಡುಗಿಯ ಚಿತ್ರವನ್ನು ಈ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿ ಮುಖದೊಂದಿಗೆ ಬದಲಾಯಿಸಿದೆ.
undefined
ಹೊಸ ಫ್ಲೇವರ್, ಪ್ಯಾಕ್ ಬಿಡುಗಡೆ ಮಾಡಿದ ಪಾರ್ಲೆಜಿ: ನೆಟ್ಟಿಗರಿಂದ ತೀವ್ರ ಚರ್ಚೆ..!
ಬಿಸ್ಕೆಟ್ ಪ್ಯಾಕ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮುಖ
ಬಿಸ್ಕತ್ತು ತಯಾರಕ ಪಾರ್ಲೆ ತನ್ನ ಪ್ಯಾಕೆಟ್‌ನ ಕವರ್‌ನಲ್ಲಿ ಐಕಾನಿಕ್ ಪಾರ್ಲೆ-ಜಿ ಹುಡುಗಿಯ ಬದಲಿಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮುಖವನ್ನು ಒಳಗೊಂಡ ಪೋಸ್ಟ್‌ನ್ನು ಹಂಚಿಕೊಂಡ ನಂತರ ಇದು ಇಂಟರ್‌ನೆಟ್ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಹಲವರು ಈ ರ್ಯಾಪರ್ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಇತಿಹಾಸವಿರುವ ಪಾರ್ಲೆ ಜಿ ಬಿಸ್ಕೆಟ್‌ನ ಕವರ್ ಬದಲಾಯಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ವಾಸ್ತವದಲ್ಲಿ, ಪಾರ್ಲೆ ಜಿ ಕಂಪೆನಿ ತನ್ನ ಬಿಸ್ಕೆಟ್ ಕವರ್‌ನಿಂದ ಮಗುವಿನ ಫೋಟೋವನ್ನು ಬದಲಾಯಿಸಿಲ್ಲ. ಬದಲಿಗೆ ಇದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮಾಷೆಗೆ ಮಾಡಿರುವ ವೀಡಿಯೋ ಆಗಿದೆ.
ಕಂಟೆಂಟ್ ಕ್ರಿಯೇಟರ್ ಝೆರ್ವಾನ್ ಜೆ ಬುನ್‌ಶಾ, ಈ ವೀಡಿಯೋವನ್ನು ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು, 'ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಹೇಗೆ ಕರೆಯುತ್ತೀರಿ' ಎಂದು ಪ್ರಶ್ನಿಸಿದ್ದಾರೆ. ಬುನ್‌ಶಾಹ್ ಫೋಟೋ ಇರುವ ಪಾರ್ಲೆ-ಜಿ ಪ್ಯಾಕೆಟ್ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಬುನ್‌ಶಾಹ್ ಕಾರಿನಲ್ಲಿ ಗೊಂದಲದ ಮುಖದೊಂದಿಗೆ ಕುಳಿತಿರುವುದು ಕಂಡುಬರುತ್ತದೆ. ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಕೊರೋನಾದಲ್ಲಿ ದಾಖಲೆ ಬರೆದಿತ್ತು ಪಾರ್ಲೇಜಿ ಬಿಸ್ಕತ್ ಸೇಲ್!
ಒಬ್ಬ ಬಳಕೆದಾರರು, 'ನಿಮ್ಮನ್ನು OG ಎಂದು ಕರೆಯಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಪಾರ್ಲೆ-ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ನೀವು ಲೆಕ್ಕಾಚಾರ ಮಾಡುವಾಗ, ಒಂದು ಕಪ್ ಚಾಯ್ ಜೊತೆ ನೆಚ್ಚಿನ ಬಿಸ್ಕತ್ತು ಸವಿಯಬಹುದು' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಬುನ್‌ಶಾ, ಬಾಲ್ಯದಲ್ಲಿ ಪಾರ್ಲೆ-ಜಿ ಬಿಸ್ಕೆಟ್‌ಗಳನ್ನು ಹೇಗೆ ಪ್ರೀತಿಸುತ್ತಿದ್ದರು ಎಂಬುದರ ಕುರಿತು ಮಾತನಾಡಿದರು. ಮತ್ತೊಬ್ಬ ಬಳಕೆದಾರರು, 'ಇದು ನರಕ, ಕ್ರಿಯೇಟಿವ್ ಅಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.