ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಸ್ಪೆಷಲ್ ಸ್ವೀಟ್ ವಿಡಿಯೋ. ತಿಂದವರು ಬಾತ್‌ರೂಮ್‌ನಲ್ಲಿ ಕುಳಿತುಕೊಳ್ಳುವುದು ಗ್ಯಾರಂಟಿ ಎಂದು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ದೇಶ-ವಿದೇಶಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನು ನಾವು ಒಂದು ಮೂಲೆಯಲ್ಲಿ ಕುಳಿತುಕೊಂಡು ನೋಡಬಹುದು ಅಂದ್ರೆ ಅದು ಮೊಬೈಲ್‌ನಿಂದ ಮಾತ್ರ ಸಾಧ್ಯ.ಈ ಕಾಲದಲ್ಲಿ ಯಾರು ಎಲ್ಲೇ ಹೋದರು ಏನೇ ನೋಡಿದರು ಮೊದಲು ಮೊಬೈಲ್ ತೆಗೆದು ರೆಕಾರ್ಡ್ ಮಾಡ್ತಾರೆ.ಅದನ್ನು ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡೋವವರೆಗೂ ಸಮಾಧಾನ ಇರಲ್ಲ. ಅಪ್ಪಿತಪ್ಪಿ ಡಿಜಿಟಲ್ ಕ್ರಿಯೇಟರ್‌ಗಳು ವಿಡಿಯೋ ರೆಕಾರ್ಡ್ ಮಾಡಿಬಿಟ್ಟರೆ ಲೆಕ್ಕವಿಲ್ಲದಷ್ಟು ವೀಕ್ಷಣ ಪಡೆಯುತ್ತದೆ. ಅತಿ ಹೆಚ್ಚು ವ್ಯೂಸ್ ಪಡೆದಿರುವುದರಲ್ಲಿ ಈ ವಿಡಿಯೋ ಕೂಡ ಒಂದು, ಅದು ಥೈಲ್ಯಾಂಡ್ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಸ್ವೀಟ್.
ಥೈಲ್ಯಾಂಡ್‌ನ ಜನಪ್ರಿಯ ರಸ್ತೆವೊಂದರಲ್ಲಿ ಈ ರೀತಿ ಸ್ವೀಟ್ ಗಾಡಿಯಲ್ಲಿ ಹಲವರು ಸ್ವೀಟ್ ಮಾರಾಟ ಮಾಡುತ್ತಾರೆ. ವೆರೈಟಿ ಹೆಚ್ಚಿರುತ್ತದೆ ಆದರೆ ಬೆಲೆ ತೀರ ಕಡಿಮೆ ಕೂಡ. ಒಂದು ಆರೇಂಜ್ ಬಣ್ಣದ ನಾರ್ ನಾರ್ ತರ ಇರುವ ಸ್ವೀಟ್‌ನ ಮೇಲೆ ಸಿಕ್ಕಾಪಟ್ಟೆ ಜೇನುಹುಳಗಳು ಕುಳಿತಿರುತ್ತದೆ. ಜನರು ಅದೇ ಸ್ವೀಟ್ ಬೇಕು ಎಂದು ಹುಡುಕಿಕೊಂಡು ಬರ್ತಾರೆ. ರುಚಿ ಮಜಾ ಇದೆ ಎಂದು ಜನರು ಖರೀದಿಸುತ್ತಾರೆ ಅದು ಕೇಲವ ಒಂದು ಸೌಟ್ ಮಾತ್ರ. ಇದಾದ ಮೇಲೆ ಕಸಾವ ಪುಡ್ಡಿಂಗ್,ಕಾನಮ್ ಮೋ ಕಾಂಗ್,ಖನಮ್ ಚಾ,ಕುಂಬಳಕಾಯಿ ಕಸ್ಟರ್ಡ್,ತೆಂಗಿನಕಾಯಿ ಜೆಲ್ಲಿ, ಥೈಲ್ಯಾಂಡ್ ಸ್ಟಿಕ್ಕಿ ರೈಸ್ ವಿತ್ ಕಸ್ಟರ್ಡ್,ತೆಂಗಿನ ತುರಿ ಮತ್ತು ಕಾಯಿ ರಸ...ಹೀಗೆ ಲೆಕ್ಕವಿಲ್ಲದಷ್ಟು ಸ್ವೀಟ್‌ಗಳನ್ನು ಮಾರಾಟ ಮಾಡ್ತಾರೆ ಅದು ಕೇವಲ 10 ಬಾಟ್‌ಗೆ. ಥೈಲ್ಯಾಂಡ್‌ನ 10 ಬಾಟ್ ಅಂದ್ರೆ ನಮ್ಮ ಭಾರತದಲ್ಲಿ 26 ರೂಪಾಯಿಗಳು. ಅಲ್ಲಿಗೆ ಇದು ತೀರಾ ಕಡಿಮೆ ಬೆಲೆ ಹೀಗಾಗಿ ಜನರು ಹುಳ ಲೆಕ್ಕ ಮಾಡದೆ ತಿನ್ನಬಹುದು ಅಥವಾ ಹುಳ ತಿನ್ನುವುದ ಕೆಲವರಿಗೆ ಕಷ್ಟವಲ್ಲ ಅದಕ್ಕೆ ಆದರೂ ಇದನ್ನು ಪಾರ್ಸಲ್ ತೆಗೆದುಕೊಂಡು ಹೋಗಬಹುದು.
Anti-Dandruff ಶಾಂಪೂನ ಜಾಸ್ತಿ ದಿನ ಬಳಸಬೇಡಿ...ಈ ಅಪಾಯ ತಪ್ಪಿದಲ್ಲ
'ಥೈಲ್ಯಾಂಡ್‌ನ ಜನರು ಕ್ಲೀಸ್ ಆಗಿಲ್ಲ ಅದಿಕ್ಕೆ ಹೇಗೆ ಇದ್ರೂ ತಿನ್ನುತ್ತಾರೆ, ನೊಣಗಳು ಇರುವ ಊಟವನ್ನು ನಾವು ತಿನ್ನಬಾರದು ಆದರೆ ಜೇನುಹುಳಗಳು ಇರುವುದನ್ನು ತಿನ್ನಬಹುದು, ಇದು ನ್ಯಾಚುರಲ್ ಇಂಗ್ರೀಡಿಯಂಟ್ಸ್‌ನಿಂದ ಮಾಡಿರುವ ಕಾರಣ ಜೇನುಗಳು ಬರುತ್ತದೆ ಆರ್ಟಿಫಿಶಿಯಲ್ ಬಳಸಿದರೆ ಮಾತ್ರ ನೊಣಗಳು ಬರುವುದು, ಮಾರಾಟ ಮಾಡುತ್ತಿರುವ ಮಹಿಳೆ ಭಯ ಪಡದೆ ಜೇನುಹುಳಗಳನ್ನು ಕೈಯಲ್ಲಿ ಓಡಿಸುತ್ತಿರುವುದು ನೋಡಲು ಶಾಕ್ ಆಗುತ್ತದೆ ಒಂದು ಕಚ್ಚಿದರೆ ಗೋವಿಂದ ನಮ್ಮ ಪರಿಸ್ಥಿತಿ, ಜೇನುಹುಳಗಳು ಕೇವಲ ಹೂವು ಮತ್ತು ನ್ಯಾಚುರಲ್ ಐಟಂಗಳ ಮೇಲೆ ಕುಳಿತುಕೊಳ್ಳುವ ಕಾರಣ ಭಯವಿಲ್ಲದೆ ತಿನ್ನಬಹುದು, ಥೈಲ್ಯಾಂಡ್‌ನಲ್ಲಿ ಜಾಸ್ತಿ ಹುಳಪಳ ತಿನ್ನುವ ಜನರಿಗೆ ಈ ಸ್ವೀಟ್ ತಿನ್ನುವುದು ಕಷ್ಟ ಆಗಲ್ಲ' ಹೀಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ.
Please..ಯಾವುದೇ ಕಾರಣಕ್ಕೂ ಮೂಲಂಗಿ ತಿಂದು ಚಹಾ ಕುಡಿಯಬೇಡಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...