
ಆನ್‌ಲೈನ್ ಆಹಾರ ಮಾರ್ಗದರ್ಶಿ ಟೇಸ್ಟ್‌ಅಟ್ಲಾಸ್ ಇತ್ತೀಚೆಗೆ ಟಾಪ್ 10 ಅತ್ಯುತ್ತಮ ಮತ್ತು ಕೆಟ್ಟ-ಶ್ರೇಣಿಯ ಭಾರತೀಯ ಭಕ್ಷ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಗೆ ಭಾರತೀಯರು ತಕರಾರು ತೆಗೆದಿದ್ದಾರೆ.
ಮೊದಲು ರುಚಿಕರವಾದ ಭಾಗವನ್ನು ಪರಿಶೀಲಿಸೋಣ. ಟೇಸ್ಟ್ ಅಟ್ಲಾಸ್ ರಿಫ್ರೆಶ್ ಮಾವಿನ ಲಸ್ಸಿಯನ್ನು ಭಾರತೀಯ ಪಾಕಪದ್ಧತಿಯ ರಾಜ ಎಂದು ಕಿರೀಟವನ್ನು ನೀಡಿದೆ. ನಂತರ ಸಾಂತ್ವನ ನೀಡುವ ಚಾಯ್ ಮಸಾಲಾ ಮತ್ತು ಎಂದೆಂದಿಗೂ ಜನಪ್ರಿಯ ಬಟರ್ ಗಾರ್ಲಿಕ್ ನಾನ್ ಇರಿಸಿದೆ. ಅಮೃತಸರಿ ಕುಲ್ಚಾ, ಬಟರ್ ಚಿಕನ್, ಹೈದರಾಬಾದಿ ಬಿರಿಯಾನಿ, ಶಾಹಿ ಪನೀರ್, ಚೋಲೆ ಭಟೂರ್, ತಂದೂರಿ ಚಿಕನ್ ಮತ್ತು ಕೊರ್ಮಾದಂತಹ ಇತರ ಮೆಚ್ಚಿನವುಗಳು ಟಾಪ್ 10 ರಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.
ಇನ್ನು ಕೆಟ್ಟ ಭಕ್ಷ್ಯಗಳ ಪಟ್ಟಿಯಲ್ಲಿ ಜಲ್ ಜೀರಾ ಟಾಪ್‌ನಲ್ಲಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇಂಥದೊಂದು ರಿಫ್ರೆಶಿಂಗ್ ಪಾನೀಯವನ್ನು ಕೆಟ್ಟದೆಂದಿದ್ದು ಭಾರತೀಯರಿಗೆ ಹಿಡಿಸಿಲ್ಲ. ಆಲೂ ಬೈಂಗನ್ (ಆಲೂಗಡ್ಡೆ ಮತ್ತು ಬಿಳಿಬದನೆ ಕರಿ) ಮತ್ತು ಉಪ್ಮಾ (ಉಪ್ಪಿಟ್ಟು)ಕಡಿಮೆ ರೇಟಿಂಗ್ ಪಡೆದಿರುವುದು ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ ನೆಟಿಜನ್ಸ್. ಹೆಚ್ಚಿನ ಭಾರತೀಯರು ದ್ವೇಷಿಸುತ್ತಲೇ ಸವಿಯುವ ತಿಂಡಿ ಉಪ್ಪಿಟ್ಟು ಎಂಬುದರಲ್ಲಿ ಎರಡು ಮಾತಿಲ್ಲ.
ಥಾಂಡೈ, ಅಚಪನ್, ಮಲ್ಪುವಾ, ಮಿರ್ಚಿ ಕಾ ಸಲನ್ ಈ ಕೆಟ್ಟ ರೇಟಿಂಗ್ ಪಡೆದ ಇತರ ಭಕ್ಷ್ಯಗಳು. ಆದರೆ, ಈ ಪಟ್ಟಿಗಳು ಭಾರತೀಯರಿಗೆ ಹಿಡಿಸಿದಂತಿಲ್ಲ. 'ಯಾರು ಇದನ್ನು ರೇಟ್ ಮಾಡಿದ್ದಾರೆ? ಪಾಶ್ಚಿಮಾತ್ಯರು ಎಂದು ನಾನು ಊಹಿಸುತ್ತೇನೆ' ಎಂದೊಬ್ಬರು ಹೇಳಿದ್ದಾರೆ. ಮತ್ತೆ ಹಲವರು ಮ್ಯಾಂಗೋ ಲಸ್ಸಿಗಿಂತ ರುಚಿಕರ ಭಾರತೀಯ ಆಹಾರವಿಲ್ಲ ಎಂದರೆ ಭಾರತೀಯ ಆಹಾರಗಳಿಗೆ ಅವಮಾನ ಮಾಡಿದಂತೆ. ಒಂದಕ್ಕಿಂತ ಒಂದು ರುಚಿಕಟ್ಟಾದ ಆಹಾರಗಳು ಭಾರತೀಯ ಭಕ್ಷ್ಯಗಳಲ್ಲಿವೆ. ಈ ಟೇಸ್ಟ್ ಅಟ್ಲಾಸ್‌ನಲ್ಲಿ ಟೇಸ್ಟ್ ಬಡ್ ಇಲ್ಲದಿರುವವರೇ ಇರುವುದೇ ಎಂದೊಬ್ಬರು ಪ್ರಶ್ನಿಸಿದ್ದಾರೆ.
ರುಚಿ ವ್ಯಕ್ತಿನಿಷ್ಠವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಇಷ್ಟ ಪಡುವುದನ್ನು ಮತ್ತೊಬ್ಬರು ದೂರವಿಡಬಹುದು. ಈ ಪಟ್ಟಿಗಳು TasteAtlas ವೆಬ್‌ಸೈಟ್‌ನಲ್ಲಿ ಬಳಕೆದಾರರ ರೇಟಿಂಗ್‌ಗಳನ್ನು ಆಧರಿಸಿರಬಹುದು ಮತ್ತು ಭಾರತದಲ್ಲಿನ ಒಟ್ಟಾರೆ ಅಭಿಪ್ರಾಯವನ್ನು ಪ್ರತಿಬಿಂಬಿಸದಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.