ಈ ರೆಸ್ಟೋರೆಂಟ್‌ನಲ್ಲಿ ಯುವತಿಯ ಬೆತ್ತಲೆ ದೇಹವೇ ಪ್ಲೇಟ್, ಭರ್ಜರಿ ಡಿನ್ನರ್‌ಗೆ 2.58 ಲಕ್ಷ ರೂ!

By Chethan Kumar  |  First Published Jun 30, 2024, 10:32 PM IST

ಪ್ರಖ್ಯಾತ ರೆಸ್ಟೋರೆಂಟ್. ಇಲ್ಲಿ ಆಹಾರವನ್ನು ಪ್ಲೇಟ್‌ನಲ್ಲಿ ನೀಡುವುದಿಲ್ಲ. ಬದಲಾಗಿ ಸುಂದರಿಯ ಬೆತ್ತಲೆ ದೇಹದಲ್ಲಿ ಬಡಿಸಲಾಗುತ್ತದೆ. ಮತ್ತೊಂದು ವಿಶೇಷತೆ ಅಂದರೆ ಸ್ಪೂನ್ ಬಳಸುವಂತಿಲ್ಲ. ಕೈಯಿಂದಲೇ ಭೋಜನ ಸವಿಯಬೇಕು. ಕೇವಲ ಬೆತ್ತಲೆ ಸುಂದರಿ ದೇಹದ ಬೋಜನಕ್ಕೆ 2.58 ಲಕ್ಷ ರೂಪಾಯಿ. 


ಬೀಝಿಂಗ್(ಜೂ.30) ರುಚಿ ರುಚಿಯಾದ ಆಹಾರ ಎಷ್ಟೇ ದೂರವಿದ್ದರೂ ತೆರಳುತ್ತಾರೆ. ಇತ್ತ ಗ್ರಾಹಕರನ್ನು ಆಕರ್ಷಿಸಲು ಹೊಟೆಲ್, ರೆಸ್ಟೋರೆಂಟ್ ಕಾಂಬೋ ಆಫರ್, ಡಿಸ್ಕೌಂಟ್ ಆಫರ್ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡುತ್ತದೆ. ಆದರೆ ಇದೀಗ ಕ್ಲಬ್ ರೆಸ್ಟೋರೆಂಟ್ ಒಂದು ಬೆತ್ತಲೆ ಸುಂದರಿ ದೇಹದ ಮೇಲೆ ಭೋಜನ ಆರಂಭಿಸಿದೆ. ಇಲ್ಲಿ ಪ್ಲೇಟ್ ಇಲ್ಲ. ಪ್ಲೇಟ್ ಬದಲು ಸುಂದರಿಯ ಬೆತ್ತಲೆ ದೇಹದ ಮೇಲೆ ಭೋಜನ ಬಡಿಸಲಾಗುತ್ತದೆ. ಸಂಪೂರ್ಣ ದೇಹದ ಮೇಲೆ ಸಲಾಡ್ ಸೇರಿದಂತೆ ಒಂದೊಂದು ಆಹಾರಗಳನ್ನು ಬಡಿಸಲಾಗುತ್ತದೆ. ಗ್ರಾಹಕರು ಸ್ಪೂನ್ ಬಳಸುವಂತಿಲ್ಲ. ಕೈಗಳಿಂದಲೇ ತೆಗೆದು ತಿನ್ನಬೇಕು. ಈ ರೆಸ್ಟೋರೆಂಟ್‌ನಲ್ಲಿ ನಗ್ನ ಬೋಜನ ಕೊಂಚ ದುಬಾರಿ. ಆದರೆ ಈ ಕ್ಲಬ್ ರೆಸ್ಟೋರೆಂಟ್ ಇರುವುದು ತೈವಾನ್ ಕರಾವಳಿ ಬಾಗದ ತೈಚುಂಗ್ ವಲಯದಲ್ಲಿ. ಇದೀಗ ಕ್ಲಬ್ ರೆಸ್ಟೋರೆಂಟ್‌ಗೆ ಸಂಕಷ್ಟ ಎದುರಾಗಿದೆ. 

ಈ ಭೋಜನಕ್ಕೆ ನ್ಯೊಟೈಮೊರಿ ಡಿನ್ನರ್ ಎಂದು ಹೆಸರಿಡಲಾಗಿದೆ. ಗ್ರಾಹಕರು ಈ ಡಿನ್ನರ್‌ಗೆ ಮೊದಲೇ ಬುಕ್ ಮಾಡಬೇಕು. ಬುಕ್ ಮಾಡಿದ ಗ್ರಾಹಕರು ಈ ಕ್ಲಬ್‌ಗೆ ತೆರಳಿದರೆ ಸಾಕು. ಟೇಬಲ್ ಮೇಲೆ ಪ್ಲೇಟ್‌ಗಳನ್ನು ಇಟ್ಟು ಭೋಜನ ಬಡಿಸುವ ಬದಲು, ಮೊದಲು ಬೆತ್ತಲೆಯಾದ ಸುಂದರ ಯುವತಿ ಟೇಬಲ್ ಮೇಲೆ ಮಲಗುತ್ತಾಳೆ. ಬಳಿಕ ಸುಂದರಿ ನಗ್ನ ದೇಹದ ಮೇಲೆ ತಿನಿಸುಗಳನ್ನು ಬಡಿಸಲಾಗುತ್ತದೆ.

Tap to resize

Latest Videos

undefined

ಅಯನ ಸಂಕ್ರಾಂತಿಗೆ ಇಲ್ಲಿ ನಡೆಯತ್ತೆ ಬೆತ್ತಲೆ ಈಜಾಟ, ಈ ಬಾರಿ 3,000 ಮಂದಿ ಭಾಗಿ!

ಹೀಗೆ ಸುಂದರ ಯುವತಿಯ ಬೆತ್ತಲೆ ದೇಹದ ಪ್ಲೇಟ್‌ಗೆ ಸುಶಿ ಬೋಟ್ ಎಂದು ಕರೆಯುತ್ತಾರೆ. ಸುಶಿ ಬೋಟ್‌ನಲ್ಲಿ ಭೋಜನ ಬಡಿಸಲಾಗುತ್ತದೆ. ಸ್ಪೂನ್, ಫೋರ್ಕ್ ಬಳಸುವಂತಿಲ್ಲ. ಇದರಿಂದ ಯುವತಿಯ ದೇಹಕ್ಕೆ ಗಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಕೈಗಳಿಂದಲೇ ತಿನಿಸುಗಳನ್ನು ತೆಗೆದು ತಿನ್ನಬೇಕು. ಈ ಕ್ಲಬ್‌ನಲ್ಲಿ ಸುಶಿ ಬೋಟ್ ಭೋಜನ ಸೇವಿಸಲು ಜನರು ಕ್ಯೂ ನಿಲ್ಲುತ್ತಿದ್ದಾರೆ. ಬುಕಿಂಗ್ ಫುಲ್ ಆಗಿದೆ. 

ಈ ಭೋಜನಕ್ಕೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 2.58 ಲಕ್ಷ ರೂಪಾಯಿ. ದುಬಾರಿಯಾದರೂ ಈ ಭೋಜನಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತದೆ ಎಂದು ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಭೋಜನ ಸವಿದ ವ್ಯಕ್ತಿಯೊಬ್ಬರು ಪ್ರತಿಕ್ರೆಯ ನೀಡಿದ್ದಾರೆ. ಭೋಜನ ಸವಿಯಲು ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಹೆಚ್ಚಿನವರಿಗೆ ತಾವು ಏನು ತಿಂದಿದ್ದೇವೆ ಅನ್ನೋದು ನೆನಪೇ ಇರುವುದಿಲ್ಲ ಎಂದಿದ್ದಾರೆ.

ಈ ಮಾಹಿತಿ, ಫೋಟೋಗಳು ವೈರಲ್ ಆಗುತ್ತಿದ್ದಂತೆ ತೈವಾನ್ ಪೊಲೀಸರು ಹಾಗೂ ಅಧಿಕಾರಿಗಳ ತಂಡ ತನಿಖೆಗೆ ಮುಂದಾಗಿದೆ. ಈ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಕ್ಲಬ್ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದೀಗ ಮುಂಗಡ ಪಾವತಿಸಿ ಬುಕ್ ಮಾಡಿದವರ ಎದೆಬಡಿತ ಹೆಚ್ಚಾಗುತ್ತಿದೆ.

ಬ್ರಿಡ್ಜ್‌ರ್ಟೋನ್ ಸೀಸನ್ 3 ಬೆತ್ತಲೆ ಸೀನ್ ಲೀಕ್, ನಟಿಯ ರೋಮ್ಯಾನ್ಸ್‌ಗೆ ಹೌಹಾರಿದ ಫ್ಯಾನ್ಸ್!

click me!