Latest Videos

ಫೇವರಿಟ್ ಅಂತ ತಿಂದ್ರೆ ರೋಗ ಕಟ್ಟಿಟ್ಟ ಬುತ್ತಿ, ರಾಜ್ಯಾದ್ಯಂತ ಶವರ್ಮಾದಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ ಪತ್ತೆ!

By Gowthami KFirst Published Jun 30, 2024, 11:19 AM IST
Highlights

ಶವರ್ಮಾದಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ಗಳು ಪತ್ತೆಯಾಗಿದ್ದು, ತಯಾರಕರ ಮೇಲೆ ಕಾನೂನು ಕ್ರಮ ಕೈಗೊಳ್ಳುಲು ನಿರ್ಧರಿಸಿಲಾಗಿದೆ. ಇದರ ಜೊತೆಗೆ ಹೊರ ರಾಜ್ಯದ ವ್ಯಾಪಾರಿಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು (ಜೂ.30): ಗೋಬಿ, ಕಬಾಬ್ ಕಾಟನ್ ಕ್ಯಾಂಡಿಗೆ ಬಳಸ್ತಿದ್ದ ಕೃತಕ‌ ಬಣ್ಣ ಬ್ಯಾನ್ ಮಾಡಿದ್ದಾಯ್ತು ಇದೀಗ ರಾಜ್ಯಾದ್ಯಂತ ಸಂಗ್ರಹಿಸಿರುವ ಹಲವು ಶವರ್ಮಾ ಮಾದರಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ಗಳು ಪತ್ತೆಯಾಗಿವೆ. ಹೀಗಾಗಿ ಸುರಕ್ಷಿತ ನಿಯಮಗಳನ್ನು ಪಾಲಿಸದ ಶವರ್ಮಾ ತಯಾರಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಶವರ್ಮಾ ಆಹಾರ ಪದಾರ್ಥ ಸೇವಿಸಿ ಫುಡ್‌ ಪಾಯಿಸನ್‌ ಆಗಿರುವ ವರದಿಗಳ ಹಿನ್ನೆಲೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಕಡೆ 17 ಶವರ್ಮಾ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ.

ಹನಿಮೂನ್ ಫೋಟೋ ಹಂಚಿಕೊಂಡು ಕ್ಷಮಿಸಿ ಎಂದ ವಿಜಯ್‌ ಮಲ್ಯ ಸೊಸೆ ಜಾಸ್ಮಿನ್‌!

ಇದರಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದು, 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ಗಳು ಕಂಡು ಬಂದಿವೆ. ಹೀಗಾಗಿ ಅಸುರಕ್ಷಿತ ಎಂದು ದೃಢಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಆಹಾರ ತಯಾರಿಕೆ ಸಂದರ್ಭದಲ್ಲಿನ ನೈರ್ಮಲ್ಯದ ಕೊರತೆ, ದೀರ್ಘಕಾಲದಿಂದ ಸಂಗ್ರಹಿಸಿರುವುದು ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯ ಕೊರತೆಯಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ಗಳು ಕಂಡು ಬರುತ್ತವೆ. ಹೀಗಾಗಿ ಎಲ್ಲಾ ಶವರ್ಮಾ ಆಹಾರ ತಯಾರಕರು ಆಹಾರ ಸುರಕ್ಷತಾ ನಿಯಮ ಪಾಲಿಸಬೇಕು.

ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಬೇಕು. ಎಫ್‌ಎಸ್‌ಎಸ್‌ಎಐ ನೋಂದಣಿ, ಪರವಾನಗಿ ಕಡ್ಡಾಯವಾಗಿ ಪಡೆದು ವ್ಯಾಪಾರ ಸ್ಥಳದಲ್ಲಿ ಪ್ರದರ್ಶಿಸಬೇಕು. ಸಾರ್ವಜನಿಕರು ಸಹ ಎಫ್‌ಎಸ್‌ಎಸ್‌ಐ ನೋಂದಾಯಿತ ಮಾರಾಟಗಾರರಿಂದಲೇ ಶವರ್ಮಾ ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬಿರ್ಲಾ ಕುಟುಂಬ ಅಲ್ಲ, ಭಾರತದಲ್ಲಿ ಮೊದಲು ಕಾರು ಕಾರ್ಖಾನೆ ಸ್ಥಾಪಿಸಿದ್ದು ಇವರೇ ನೋಡಿ!

ಹೊರರಾಜ್ಯದ ವ್ಯಾಪಾರಿಗಳಿಗಿಲ್ಲ ಕರ್ನಾಟಕದಲ್ಲಿ ಅವಕಾಶ:
ಕರ್ನಾಟಕದಲ್ಲಿ ಇನ್ಮುಂದೆ ಹೊರರಾಜ್ಯದವರು ಬಂದು ಬೀದಿ ಬದಿ ವ್ಯಾಪಾರ ಮಾಡುವಂತಿಲ್ಲ. ಗೋಬಿ, ಕಬಾಬ್, ಪಾನಿಪುರಿ, ಶವರ್ಮಾದಲ್ಲಿ ಕೃತಕ ಕಲರ್ ಬೆರಕೆ ಬೆನ್ನಲ್ಲೆ ಹೊರರಾಜ್ಯದ ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಕತ್ತರಿ  ಬಿದ್ದಿದೆ. ಹೊರರಾಜ್ಯದಿಂದ ವಲಸೆ ಬಂದು ಬೀದಿ ಬದಿ ವ್ಯಾಪಾರ ಮಾಡ್ತಿದ್ದ ಸಾವಿರಾರು ವ್ಯಾಪಾರಿಗಳು ಇನ್ನು ಮುಂದೆ ಕರ್ನಾಟಕದಲ್ಲಿ ಬೀದಿ ಬದಿ ವ್ಯಾಪಾರ ಮಾಡುವಂತಿಲ್ಲ.

ತಾವು ವ್ಯಾಪಾರ ಮಾಡೋ ಪಾನಿಪುರಿ, ಗೋಬಿ ಕಬಾಬ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬಣ್ಣ ಬಳಕೆ ಆರೋಪ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ. ಅಲ್ಲದೆ ರಾಜ್ಯದ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಸಿಗ್ಬೇಕು ಅನ್ನೋ ನಿಟ್ಟಿನಲ್ಲಿ ಪಟ್ಟಣ ವ್ಯಾಪಾರ ಸಮಿತಿಯಿಂದ ಬಿಬಿಎಂಪಿ ಗೆ ದೂರು ಬಂದಿತ್ತು. ಹೀಗಾಗಿ ಜುಲೈ ಒಂದರಿಂದ ಹೊರರಾಜ್ಯದ ಬೀದಿಬದಿ ವ್ಯಾಪಾರಿಗಳ ಸರ್ವೆ ನಡೆಯಲಿದೆ. ಸರ್ವೆ ಬಳಿಕ ವ್ಯಾಪಾರಿಗಳಿಗೆ ಆಧಾರ್, ರೇಷನ್, ಮತದಾರರ ಚೀಟಿ ಕಡ್ಡಾಯವಾಗಿರಲಿದೆ. ಗುರುತಿನ ಚೀಟಿ ಹಾಕಿಕೊಂಡು ವ್ಯಾಪಾರ ಮಾಡಲು ಸೂಚಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳ‌ ಸರ್ವೆ ಬಳಿಕ ಹೊಸ ನಿಯಮ ಜಾರಿಯಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಈ ನಿಯಮ ಜಾರಿಯಲ್ಲಿದೆ.

click me!