ಬೆಂಗಳೂರು ನಗರದಲ್ಲಿ ಮತದಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿಸರ್ಗ ಗ್ರ್ಯಾಂಡ್ ಹೊಟೇಲ್. ಮತದಾನ ಮಾಡಿದವರಿಗೆ ಉಚಿತ ತಿಂಡಿ ನೀಡುವುದಾಗಿ ಘೋಷಿಸಿದೆ. ಮಾತ್ರವಲ್ಲ ಮೊದಲ ಬಾರಿ ಮತ ಚಲಾಯಿಸುವ ಮೊದಲ 100 ಜನರಿಗೆ ಕನ್ನಡ ಸಿನಿಮಾಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು: ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರಾಗಿ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಪಕ್ಷಗಳು ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಇದೆಲ್ಲದರ ಮಧ್ಯೆ ಜನರಲ್ಲಿ ಮತಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ. ಕಡ್ಡಾಯವಾಗಿ ಮತದಾನ ಮಾಡುವಂತೆ ಜನರಿಗೆ ಸೂಚಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜನರು ಮತದಾನದಂದು ಮತಗಟ್ಟೆಗೆ ಹೋಗುವುದನ್ನೇ ಮರೆಯುತ್ತಿದ್ದಾರೆ. ಕೆಲವು ಕಂಪೆನಿಗಳು ಉದ್ಯೋಗಿಗಳು ಮತ ಹಾಕಲು ಅನುಕೂಲವಾಗುವಂತೆ ಎಲೆಕ್ಷನ್ ದಿನ ರಜೆಯನ್ನು ಘೋಷಿಸಿದೆ. ಆದರೆ ಹೆಚ್ಚಿನವರು ಚುನಾವಣಾ ದಿನವನ್ನು ಹಾಲಿಡೇಯಂತೆ ಪರಿಗಣಿಸಿ ಮನೆಯಲ್ಲಿ ಇದ್ದು ಬಿಡುತ್ತಾರೆ. ಹೀಗಿರುವಾಗ ಇಲ್ಲೊಂದು ಹೊಟೇಲ್ ವೋಟ್ ಮಾಡುವವರಿಗೆ ಸ್ಪೆಷಲ್ ಆಫರ್‌ವೊಂದು ನೀಡ್ತಿದೆ.
ಬೆಂಗಳೂರು ನಗರದಲ್ಲಿ ಮತದಾನಕ್ಕೆ (Vote) ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿಸರ್ಗ ಗ್ರ್ಯಾಂಡ್ ಹೊಟೇಲ್. ಮತದಾನ ಮಾಡಿದವರಿಗೆ ಉಚಿತ ತಿಂಡಿ (Free breakfast) ನೀಡುವುದಾಗಿ ಘೋಷಿಸಿದೆ. ಮಾತ್ರವಲ್ಲ ಮೊದಲ ಬಾರಿ ಮತ ಚಲಾಯಿಸುವ ಮೊದಲ 100 ಜನರಿಗೆ ಕನ್ನಡ ಸಿನಿಮಾಗೆ ಉಚಿತ ಟಿಕೆಟ್ (Free ticket) ನೀಡುವುದಾಗಿ ಘೋಷಿಸಿದೆ. ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ನಿಸರ್ಗ ಗ್ರ್ಯಾಂಡ್ ಹೊಟೇಲ್ ಇದೆ.
ಮತ ಹಾಕಿಸಲು 5000+ ಬಸ್, ಮಿನಿಬಸ್ ಬುಕಿಂಗ್: ಮೇ 9ರಂದು ರಾಜ್ಯದಲ್ಲಿ ದುಪ್ಪಟ್ಟು ಬಸ್ ಸಂಚಾರ
ಮೇ.10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಮತದಾನ ಮಾಡಿದ ಗುರುತು ತೋರಿಸಿ ನಿಸರ್ಗ ಗ್ರ್ಯಾಂಡ್‌ನಲ್ಲಿ ಉಚಿತವಾಗಿ ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನಕ ಸವಿಯಬಹುದಾಗಿದೆ. 'ಇದೊಂದು ಅಪ್ಪಟ ಸಾಮಾಜಿಕ ಕಳಕಳಿಯುಳ್ಳ ರಾಜಕಿಯೇತರ ಕಾರ್ಯಕ್ರಮವಾಗಿದೆ' ಎಂದು ಹೊಟೇಲ್‌ನ ಮಾಲೀಕ ಎಸ್.ಪಿ ಕೃಷ್ಣರಾಜು ತಿಳಿಸಿದ್ದಾರೆ.
ಹೊಟೇಲ್ ಎದುರಿಗೆ ಈ ಕುರಿತಾಗಿ ದೊಡ್ಡದಾಗಿ ಫಲಕವನ್ನು ಇರಿಸಲಾಗಿದೆ. 'ಮತದಾನದ ಹಕ್ಕು ಚಲಾಯಿಸಿ, ಸಮೃದ್ಧ ಭಾರತವನ್ನು ನಿರ್ಮಿಸಿ', 'ಮತದಾನ ಸಂಭ್ರಮ ಆದಾಗ ದೇಶ ಬದಲಾಗುತ್ತದೆ' ಎಂದು ಬರೆಯಲಾಗಿದೆ.
ಮಾಂಗ್ರೋವ್ ವನದ ಮಧ್ಯೆ ಕಯಾಕ್ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ
ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ, ವಂಡರ್ ಲಾ ಟಿಕೆಟ್ ಮೇಲೆ ಡಿಸ್ಕೌಂಟ್ ಪಡೆಯಿರಿ..!
ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಹಾಗೂ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಭಾರತದ ಅತಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ವಿಶೇಷ ರಿಯಾಯಿತಿ ಘೊಷಿಸಿದೆ.
ಹೌದು, ಮೇ.10 ರಂದು ಮತದಾನ ಮಾಡುವ ಪ್ರತಿಯೊಬ್ಬ ನಾಗರಿಕನಿಗೂ ವಂಡರ್ ಲಾ ಪ್ರವೇಶ ಶುಲ್ಕದ ಮೇಲೆ ಶೇ.15 ರಷ್ಟು ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಮೇ. 10 ರಿಂದ ಮೇ. 12ರವರೆಗೂ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದು, ಬುಕ್ಕಿಂಗ್ ಪೋರ್ಟಲ್ ಮೇ.5ರಿಂದ ತೆರೆಕೊಳ್ಳಲಿದೆ. ತಮ್ಮ ಬುಕ್ಕಿಂಗ್‌ನನ್ನು https://www.wonderla.com/ ಮೂಲಕ ಮಾಡಿಕೊಳ್ಳಬಹುದು. ಪ್ರವೇಶ ದ್ವಾರದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಮತದಾರರಿಗೆ ಕೈ ಬೆರಳಿಗೆ ಹಾಕಿದ ಶಾಹಿಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.
ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿತ್ತಿಲಪಿಲ್ಲಿ, ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡುವುದು ಅವರ ಕರ್ತವ್ಯವಾಗಿದೆ. ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ನಮ್ಮ ಪುಟ್ಟ ಹೆಜ್ಜೆ ಎಂದರು. ಹೆಚ್ಚಿನ ಮಾಹಿತಿಗಾಗಿ +91 80372 30333 ಅಥವಾ +91 80350 73966 ಸಂಪರ್ಕಿಸಿಬಹುದಾಗಿದೆ.