ನಮ್ಮ ಹೊಟ್ಟೆ ಸೇರುವ ಆಹಾರ ಆರೋಗ್ಯಕರವಾಗಿರೋದು ಎಷ್ಟು ಮುಖ್ಯವೋ ಆ ಆಹಾರವನ್ನು ನಾವು ಹೇಗೆ ಮತ್ತು ಎಲ್ಲಿ ಸೇವನೆ ಮಾಡುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ದುಃಖದಲ್ಲಿ ತಿಂದ ಆಹಾರ ಜೀರ್ಣವಾಗೋದು ಕಷ್ಟ. ಆಹಾರ ಪರಿಣಾಮ ಬೀರಬೇಕೆಂದ್ರೆ ಇವರು ಟಿಪ್ಸ್ ಫಾಲೋ ಮಾಡಿ.
ಊಟ ಮಾಡಲು ಅಥವಾ ತಿಂಡಿ ತಿನ್ನಲು ಕೆಲವು ಪದ್ಧತಿ ಇವೆ. ಭಾರತೀಯ ಸಂಸ್ಕೃತಿಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಹಾಗೂ ಊಟ ಬಡಿಸಲು ಕೂಡ ನಿಯಮವಿದೆ. ಹೀಗೆ ಪದ್ಧತಿ ಪ್ರಕಾರ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ, ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗಿ ಶರೀರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ನಾವು ಸೇವಿಸುವ ಆಹಾರ (Food) ಕ್ಕೆ ಗೌರವ ಸಲ್ಲಿಸಬೇಕು. ಸರಿಯಾದ ವಿಧಾನದಲ್ಲಿ ಆಹಾರವನ್ನು ತಿನ್ನಬೇಕು ಎನ್ನುವುದನ್ನು ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತದೆ. ತಿನ್ನುವ ಅನ್ನಕ್ಕೆ ಗೌರವ ಕೊಡುವುದು ಮತ್ತು ಯಾರಿಗಾದರೂ ಅನ್ನವನ್ನು ಕೊಡುವಾಗಲೂ ಗೌರವದಿಂದಲೇ ಕೊಡಬೇಕು ಎನ್ನುವುದು ಭಾರತೀಯ ಪದ್ಧತಿಯಾಗಿದೆ. ಅನೇಕ ಕಡೆಗಳಲ್ಲಿ ಊಟ ಮಾಡುವಾಗ ಅನ್ನಕ್ಕೆ ನಮಸ್ಕರಿಸಿ ಶ್ಲೋಕ, ಮಂತ್ರಗಳ ಪಠನೆ ಮಾಡಲಾಗುತ್ತದೆ. ಇಂತಹ ಪದ್ಧತಿ, ಶಾಸ್ತ್ರಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ. ರಾಧಿ ದೇವ್ಲುಕಿಯಾ ಶೆಟ್ಟಿ ಎಂಬ ಲೈಫ್ ಕೋಚ್ (Life Coach) ಕೂಡ ಆಹಾರ ಸೇವಿಸುವುದರ ಬಗ್ಗೆ ಕೆಲವು ಮಾಹಿತಿಗಳನ್ನು ಹೇಳಿದ್ದಾರೆ. ಲೈಫ್ ಕೋಚ್ ಆಗಿರುವ ಇವರು ಆಹಾರ ಸೇವಿಸುವ ಮುನ್ನ ಸಂಗೀತವನ್ನು ಕೇಳುವುದರಿಂದ ಆರೋಗ್ಯ (Health) ದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ.
undefined
ಈ ಆಹಾರಗಳ ಜೊತೆ ಬೆಣ್ಣೆ ಸೇರಿಸಿದ್ರೆ… ವಿಷವಾಗೋದು ಖಂಡಿತಾ… ಹುಷಾರಾಗಿರಿ!
ಹಾಡನ್ನು ಕೇಳುತ್ತ ಆಹಾರ ಸೇವಿಸಿ : ಆಹಾರ ಸೇವನೆಗೆ ಸಂಬಂಧಿಸಿದಂತೆ ರಾಧಿ ದೇವ್ಲುಕಿಯಾ ಶೆಟ್ಟಿ ಆಸಕ್ತಿಕರ ವಿಷ್ಯವೊಂದನ್ನು ಹೇಳಿದ್ದಾರೆ. ಅವರ ಪ್ರಕಾರ, ಆಹಾರ ಸೇವಿಸುವ ಮುನ್ನ ಒಂದಿಷ್ಟು ಸಂಗೀತ ನುಡಿಸಿದರೆ ಆರೋಗ್ಯದ ಮೇಲೆ ಅದು ಸಕಾರಾತ್ಮಕ ಪರಿಣಾಮ (Positive Impact) ಬೀರುತ್ತದೆ ಎನ್ನುತ್ತಾರೆ. ಈ ಪರಿಣಾಮಗಳನ್ನು ವಿಜ್ಞಾನಿಗಳು ಪರೀಕ್ಷಿಸಿದ್ದಲ್ಲದೆ ಒಪ್ಪಿಕೊಂಡಿದ್ದಾರೆ.
ಮನುಷ್ಯನ ಶರೀರವು ಪ್ರತಿಶತ 70 ರಷ್ಟು ನೀರನ್ನು ಒಳಗೊಂಡಿರುತ್ತದೆ. ಆದ್ದರಿಂದ ಒಳ್ಳೆಯ ಮತ್ತು ಹಿತವಾದ ಪದಗಳು ಹಾಗೂ ಸಂಗೀತ ಶರೀರದಲ್ಲಿ ಸ್ನೋ ಫ್ಲೇಕ್ ಗಳಂತಹ ರಚನೆಯನ್ನು ಸೃಷ್ಟಿಸುತ್ತವೆ. ಇದರಿಂದ ಅದ್ಭುತ ಪರಿಣಾಮಗಳಾಗುತ್ತವೆ ಎಂದು ರಾಧಿ ಹೇಳುತ್ತಾರೆ. 33 ವರ್ಷದ ರಾಧಿ ಅವರು ತಮ್ಮ ಅಡುಗೆ ಪುಸ್ತಕ ಜಾಯ್ ಫುಲ್ ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಜಾಯ್ ಫುಲ್ ಪುಸ್ತಕದಲ್ಲಿ ಅವರು, ಅಡುಗೆ ಮಾಡುವಾಗ ಸಂತೋಷದಿಂದ ಹಾಗೂ ಮನಸ್ಥಿತಿಯನ್ನು ಸುಧಾರಿಸುವ ಸಂಗೀತವನ್ನು ಕೇಳಬೇಕು ಅಥವಾ ಹಾಡಬೇಕು ಎಂದು ಬರೆದಿದ್ದಾರೆ. ಇದರಿಂದ ದೇಹದಲ್ಲಿರುವ ನೀರಿನ ಅಣುಗಳ ಮೇಲೆ ಒಳ್ಳೆಯ ಪರಿಣಾಮ ನೀಡುತ್ತದೆ ಎಂದು ವಿಜ್ಞಾನಿಗಳು ಕೂಡ ಹೇಳಿದ್ದಾರೆ. ಇದರ ಬದಲು ದುಃಖದ ಅಥವಾ ಕೋಪದ ಸಂಗೀತ ನೀರಿನ ಅಣುಗಳನ್ನು ವಿಘಟಿಸುತ್ತದೆ ಎಂದು ರಾಧಿ ಹೇಳಿದ್ದಾರೆ.
ಊಟ ಮಾಡುವಾಗ ಸಂಗೀತ ಹಾಡುವಂತೆ ಅಡುಗೆ ಮಾಡುವಾಗಲೂ ಸಂಗೀತ ಜೊತೆಗಿದ್ದರೆ ಇದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ಊಟ ಆರಂಭಿಸಿದ ನಂತರ ಮೊದಲು ಸಿಹಿಯನ್ನು ತಿನ್ನಬೇಕು. ಏಕೆಂದರೆ ನಮ್ಮ ಶರೀರ ಸಿಹಿಯನ್ನು ಮೊದಲು ಜೀರ್ಣಿಸುತ್ತದೆ. ಅದರ ನಂತರ ನಾವು ಹುಳಿ ಅಥವಾ ಖಾರದ ಆಹಾರ ಸೇವಿಸಿದಾಗ ಜೀರ್ಣಕ್ರಿಯೆ ನಿಲ್ಲುತ್ತದೆ. ಹಾಗಾಗಿ ಮೊದಲು ಸಿಹಿಯನ್ನು ಸೇವಿಸುವುದು ಉತ್ತಮ ಅಭ್ಯಾಸ. ಇದರಿಂದ ಆರೋಗ್ಯದಲ್ಲೂ ಅನೇಕ ಸುಧಾರಣೆಗಳನ್ನು ಕಾಣಬಹುದು ಎಂದು ಲೈಫ್ ಕೋಚ್ ರಾಧಿ ದೇವ್ಲುಕಿಯಾ ಹೇಳುತ್ತಾರೆ.
ಕಹಿಯಾಗಿದ್ದರೂ ಇಂಥಾ ಆಹಾರ ತಿನ್ನಿ..ಡಯಾಬಿಟಿಸ್, ಕೊಲೆಸ್ಟ್ರಾಲ್‌ನಿಂದ ದೂರವಿರ್ಬೋದು
ಸಂಗೀತದಿಂದ ಅನೇಕ ರೀತಿಯ ಅದ್ಭುತ ಪರಿಣಾಮಗಳಾಗುತ್ತವೆ. ಸಂಗೀತದಕ್ಕೆ ಅಂತಹ ಅದ್ಭುತ ಶಕ್ತಿಯಿದೆ. ಆದ್ದರಿಂದಲೇ ಅನಾದಿ ಕಾಲದಿಂದಲೂ ಸಂಗೀತಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಉತ್ತಮ ಸಂಗೀತದಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ (Mental Health) ಸುಧಾರಿಸುತ್ತದೆ. ಇದೇ ರೀತಿ ಸಿನಿಮಾ, ಧಾರಾವಾಹಿಗಳನ್ನು ನೋಡ್ತಾ, ಮೊಬೈಲ್ ನೋಡ್ತಾ ಆಹಾರ ಸೇವನೆ ಮಾಡಿದ್ರೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲಿ ಬರುವ ದುಃಖದ ಘಟನೆ, ಕ್ರೌರ್ಯದ ಘಟನೆ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.