ಮೂವತ್ತು ವರ್ಷಗಳ ಹಿಂದೆ ಇಷ್ಟು ಅಗ್ಗದ ಬೆಲೆಗೆ ಸಿಗ್ತಿತ್ತು ಬಿಗ್ ಮ್ಯಾಕ್

By Suvarna News  |  First Published Feb 29, 2024, 12:35 PM IST

ಮೆಕ್ಡೋನಾಲ್ಡ್ ಪ್ರೇಮಿಗಳ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಬರ್ಗರ್ ಬೆಲೆ ಸ್ವಲ್ಪ ಕಡಿಮೆ ಇದ್ದಿದ್ರೆ ಇನ್ನೆರಡು ತಿನ್ನುತ್ತಿದ್ವಿ ಎನ್ನುವವರಿದ್ದಾರೆ. ಅಂಥವರು ಮೂವತ್ತು ವರ್ಷದ ಹಿಂದಿನ ಮೆನ್ಯು ನೋಡಿ ಬನ್ನಿ. 
 


ನಮ್ಮ ಅಜ್ಜ, ಮುತ್ತಜ್ಜಂದಿರು ಆಣೆ, ಪೈಸೆ ಲೆಕ್ಕದಲ್ಲಿ ವ್ಯವಹಾರ ನಡೆಸುತ್ತಿದ್ದರು. ನಾಲ್ಕಾಣೆ, ಐದು ಪೈಸೆ ನಾಣ್ಯಗಳು ಈಗ ಮ್ಯೂಜಿಯಂನಲ್ಲಿ ಸಿಗ್ತಿವೆ. ಈಗ ಒಂದು ರೂಪಾಯಿ, ಎರಡು ರೂಪಾಯಿ ನಾಣ್ಯಕ್ಕೂ ಬೆಲೆ ಇಲ್ಲದಂತಾಗಿದೆ. ಹತ್ತು ರೂಪಾಯಿ ಕಡಿಮೆ ಬೆಲೆಗೆ ವಸ್ತುಗಳು ಸಿಗೋದೇ ಇಲ್ಲ. ನೀವು ಒಂದು ಬಾರಿ ಮಾರುಕಟ್ಟೆಗೆ ಹೋಗಿ ಸಣ್ಣಪುಟ್ಟ ದಿನಸಿ ತೆಗೆದುಕೊಂಡು ಬಂದ್ರೆ ಕಡಿಮೆ ಅಂದ್ರೂ ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಆಗ ಇಪ್ಪತ್ತು – ಮೂವತ್ತು ರೂಪಾಯಿ ಖರ್ಚಾಗುತ್ತಿರಲಿಲ್ಲ. ಆಗ ನೂರು ರೂಪಾಯಿಗೆ ಈಗಿನ ಸಾವಿರ ರೂಪಾಯಿ ಬೆಲೆಯಿತ್ತು. ಆಗಿನ ಕಾಲದಲ್ಲಿ ನೂರು ರೂಪಾಯಿ ಸಂಪಾದನೆ ಮಾಡೋದು ಕೂಡ ಕಷ್ಟವೇ ಆಗಿತ್ತು. ಕಾಲ ಬದಲಾದಂತೆ ಬೆಲೆ, ದರಗಳು ಕೂಡ ಬದಲಾಗುತ್ತವೆ. ದಿನಬಳಕೆ ವಸ್ತುಗಳು, ಬಟ್ಟೆ, ಮನೆ ಬಾಡಿಗೆ ಸೇರಿದಂತೆ ಹೊಟೇಲ್ ಆಹಾರದಲ್ಲೂ ಈಗ ಏರಿಕೆ ಕಂಡು ಬಂದಿದೆ. ಹಿಂದಿನ ಕಾಲದಲ್ಲಿದ್ದ ಹೊಟೇಲ್ ರೇಟ್ ನೋಡಿದ್ರೆ ಈಗ ಖುಷಿಯಾಗುತ್ತದೆ. ಅಷ್ಟು ಕಡಿಮೆಗೆ ಟೀ, ಇಡ್ಲಿ ಸಿಗ್ತಿತ್ತಾ ಎನ್ನಿಸುತ್ತದೆ. ಅದೇ ರೀತಿ ಮೆಕ್‌ಡೊನಾಲ್ಡ್‌ ಬೆಲೆಯೂ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತೆ.

ಬರ್ಗರ್‌ (Burger) ಗಳಿಗೆ ವಿಶ್ವಪ್ರಸಿದ್ಧವಾಗಿರುವ ಮೆಕ್ ಡೊನಾಲ್ಡ್ (McDonald) ಆಹಾರ ಬೆಲೆಗಳು ಇಂದು ಸಾಕಷ್ಟು ದುಬಾರಿಯಾಗಿವೆ. ಆದ್ರೆ ಮೂವತ್ತು ವರ್ಷಗಳ ಹಿಂದೆ ಅದ್ರ ಬೆಲೆಗಳು ತುಂಬಾ ಕಡಿಮೆ ಇತ್ತು. ಹಣದುಬ್ಬರ, ಪೆಟ್ರೋಲ್-ಗ್ಯಾಸ್ ಬೆಲೆಗಳು, ವಾಣಿಜ್ಯ ಆಸ್ತಿ ಬೆಲೆ, ಬಡ್ಡಿದರ, ಆರೋಗ್ಯ ವಿಮೆ ಬೆಲೆ ಸೇರಿದಂತೆ ಅವಲಂಬಿತ ವಸ್ತು, ಸೇವೆ ಬೆಲೆ ಹೆಚ್ಚಾದಂತೆ ಆಹಾರದ ಬೆಲೆ ಕೂಡ ಹೆಚ್ಚಾಗಿದೆ.

Tap to resize

Latest Videos

undefined

ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ಜಗತ್ತಿನ ಶ್ರೀಮಂತ ವ್ಯಕ್ತಿಯ ಸರಳತೆಗೆ ನೆಟಿಜನ್ಸ್ ಫಿದಾ

ಮೆಕ್ ಡೊನಾಲ್ಡ್ ವಿಶ್ವದ ಬಹುತೇಕ ದೇಶಗಳಲ್ಲಿ ತನ್ನ ಶಾಖೆ ಹೊಂದಿದೆ. ಅಮೆರಿಕದ ಅಲಾಸ್ಕಾ ಪ್ರದೇಶದ ನಿರ್ಜನ ದ್ವೀಪವೊಂದರಲ್ಲೂ  ಮೆಕ್ಡೋನಾಲ್ಡ್ ಇತ್ತು. ಆ ದ್ವೀಪವನ್ನು ಅಡಾಕ್ ದ್ವೀಪ, ಅಲಾಸ್ಕಾ (Alaska) ಯುಎಸ್ ಎ ಎಂದು ಕರೆಯಲಾಗುತ್ತದೆ. ಅಡಾಕ್ ದ್ವೀಪದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇದೆ. 2020 ರಲ್ಲಿ ಅಲ್ಲಿ 171 ಮಂದಿ ವಾಸವಾಗಿದ್ದರು. ವಿಶೇಷ ಅಂದ್ರೆ ಈ ದ್ವೀಪದಲ್ಲಿ ಮೆಕ್ಡೋನಾಲ್ಡ್ ಇರೋದು.  

ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನ್ಯ ಮತ್ತು ನೌಕಾಪಡೆಯ ನೆಲೆಯನ್ನಾಗಿ ಈ ದ್ವೀಪವನ್ನು ಮಾರ್ಪಡಿಸಲಾಗಿತ್ತು. 1986ರಲ್ಲಿ ಇಲ್ಲಿ ಮೆಕ್‌ಡೊನಾಲ್ಡ್ ಸ್ಥಾಪನೆಯಾಯಿತು. 1990 ರ ದಶಕದಲ್ಲಿ ಭದ್ರತಾ ಪಡೆಗಳು ಈ ದ್ವೀಪದಿಂದ ಹೊರ ಹೋದ ಮೇಲೆ ಮೆಕ್‌ಡೊನಾಲ್ಡ್ ಕೂಡ ತನ್ನ ವ್ಯವಹಾರವನ್ನು ನಿಲ್ಲಿಸಿತು. ಮೆಕ್ಡೋನಾಲ್ಡ್ ತನ್ನ ವ್ಯವಹಾರ ನಿಲ್ಲಿಸಿದ್ರೂ ಅದ್ರ ಕಟ್ಟಡ ಹಾಗೆಯೇ ಇದೆ. ರೆಸ್ಟೋರೆಂಟ್ ಹೊರಗೆ ಮೆಕ್ಡೋನಾಲ್ಡ್ ಆಹಾರದ ಮೆನ್ಯುವನ್ನು ಕೂಡ ನೋಡಬಹುದು.

ದಿನಾ ಬೆಳಗ್ಗೆದ್ದು ಈ ರೊಟೀನ್ ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ಬೊಜ್ಜು ಕರಗುತ್ತೆ

ದ್ವೀಪಕ್ಕೆ ಹೋದ ಅನೇಕರು ಆಗಾಗ ಅದ್ರ ಮೆನು (Menu) ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಇತ್ತೀಚಿಗೆ ವ್ಯಕ್ತಿಯೊಬ್ಬರು ಯುಟ್ಯೂಬ್ ನಲ್ಲಿ 1990 ರ ದಶಕದಲ್ಲಿ ಮೆಕ್ಡೋನಾಲ್ಡ್ ಆಹಾರದ ಬೆಲೆ ಎಷ್ಟಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಮೆಕ್ಡೋನಾಲ್ಡ್ ರೆಸ್ಟೋರೆಂಟ್ ಮುಂದೆ ಹಾಕಿರುವ ಮೆನ್ಯು ಪ್ರಕಾರ, ಆಗ ಬಿಗ್ ಮ್ಯಾಕ್ ಬೆಲೆ 1.93 ಪೌಂಡ್‌ ಅಂದ್ರೆ 202 ರೂಪಾಯಿಗೆ ಸಿಗ್ತಾಯಿತ್ತು. ಆದರೆ ಇಂದು ಅದೇ ಬಿಗ್ ಮ್ಯಾಕ್ ನಮಗೆ 512 ರೂಪಾಯಿಗೆ ಸಿಗ್ತಿದೆ. ಆಗ ಚಿಕನ್ ನಗೆಟ್ ಬೆಲೆ ಕೇವಲ 73 ರೂಪಾಯಿ ಆಗಿತ್ತು. ಮೆಕ್ಡೋನಾಲ್ಡ್ ಹ್ಯಾಪಿ ಮೀಲ್ ಬೆಲೆ 105 ರೂಪಾಯಿ ಆಗಿತ್ತು. ಆದ್ರೀಗ ಅವುಗಳ ಬೆಲೆ ಗಗನಕ್ಕೇರಿದೆ.  ಮೆಕ್‌ಡೊನಾಲ್ಡ್ ಸಹೋದರರು ತಮ್ಮ ಮೊದಲ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್ ಅನ್ನು ಮೇ 15, 1940 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊದಲ್ಲಿ ತೆರೆದ್ದರು. ಅಲ್ಲಿಂದ ಇಲ್ಲಿಯವರೆಗೂ ಮೆಕ್ಡೋನಾಲ್ಡ್ ತನ್ನ ಪ್ರಸಿದ್ಧಿ ಕಳೆದುಕೊಂಡಿಲ್ಲ. 

click me!