ದಿನಾ ಬೆಳಗ್ಗೆದ್ದು ಈ ರೊಟೀನ್ ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ಬೊಜ್ಜು ಕರಗುತ್ತೆ

By Vinutha PerlaFirst Published Feb 29, 2024, 10:40 AM IST
Highlights

ಬೊಜ್ಜು, ಹಲವರನ್ನು ಕಾಡ್ತಿರೋ ಸಮಸ್ಯೆ..ಏನ್‌ ಮಾಡಿದ್ರೂ ಹೊಟ್ಟೆ ಕರಗಿಸೋಕಾಗ್ತಿಲ್ಲಪ್ಪಾ ಅಂತ ಒದ್ದಾಡ್ತಾರೆ. ಆದ್ರೆ ನೀವು ಈ ಕೆಳಗೆ ಹೇಳಿದ ಮಾರ್ನಿಂಗ್ ರೊಟೀನ್ ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ಬೊಜ್ಜು ಕರಗೋದು ಗ್ಯಾರಂಟಿ.

ಫಿಟ್ ಮತ್ತು ಆರೋಗ್ಯಕರವಾಗಿರುವುದು ಹೇಗೆ ಅನ್ನೋದರ ಬಗ್ಗೆ ಇಂಟರ್‌ನೆಟ್‌ ಹಲವಾರು ರೀತಿಯ ಮಾಹಿತಿಗಳು ಲಭ್ಯವಿರುತ್ತದೆ. ಆದರೆ ಇದನ್ನು ಪಾಲಿಸುವುದು ಅಷ್ಟು ಸುಲಭವಲ್ಲ. ತಜ್ಞರು ಸೂಚಿಸಿದ ಸಲಹೆಗಳನ್ನು ಪಾಲಿಸಲು ಎಲ್ಲರಲ್ಲೂ ಸಮಯವಿರುವುದಿಲ್ಲ. ಹೀಗಾಗಿ ಎಲ್ಲರೂ ಹೆಚ್ಚಿದ ಬೊಜ್ಜನ್ನು ಇಳಿಸಿಕೊಳ್ಳಲು ಸರಳವಾದ ದಾರಿಯನ್ನು ಹುಡುಕಿಕೊಳ್ಳುತ್ತಾರೆ. ಹಾಗೆಯೇ ಪೌಷ್ಟಿಕತಜ್ಞ ಅವ್ನಿ ಕೌಲ್, ಬೊಜ್ಜಿನ ಸಮಸ್ಯೆ ಹೋಗಲಾಡಿಸಲು ಅನುಸರಿಸಬೇಕಾದ ಸರಳವಾದ ಸೂತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದಿನನಿತ್ಯದ ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ನೀವು ಕೆಲವೇ ತಿಂಗಳಲ್ಲಿ ಸುಲಭವಾಗಿ ಬೊಜ್ಜು ಇಳಿಸಿಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

1. ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರನ್ನು ಕುಡಿಯಿರಿ
ಸ್ಥೂಲಕಾಯದ ಮುಖ್ಯ ಕಾರಣ ನಿಧಾನ ಚಯಾಪಚಯ ಕ್ರಿಯೆ. ಚಯಾಪಚಯವನ್ನು ನಿಯಂತ್ರಣದಲ್ಲಿಡಲು, ಬೆಳಗ್ಗೆ ಎದ್ದ ನಂತರ ನೀವು ಕನಿಷ್ಟ 1-2 ಗ್ಲಾಸ್ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಆಯುರ್ವೇದದ ಪ್ರಕಾರ, ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿದ ನೀರನ್ನು ಕುಡಿಯುವುದು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಇಂಥಾ ಕಾಳು ತಿಂದ್ರೆ ಕಾಯಿಲೆ ಕಾಡೋ ಭಯವಿಲ್ಲ!

2. ವ್ಯಾಯಾಮ ಮಾಡುವುದನ್ನು ಬಿಡಬೇಡಿ
ದೇಹವನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ 25 ರಿಂದ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅತ್ಯಗತ್ಯ. ಹಗುರವಾದ ವ್ಯಾಯಾಮಗಳು ದಿನದ ಪ್ರಾರಂಭದಲ್ಲಿ ದೇಹಕ್ಕೆ ಸರಿಯಾದ ಶಕ್ತಿಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಜಿಮ್‌ಗೆ ಹೋಗಲು ಬಯಸುತ್ತಾರೆ. ಇದು ನಿಜವಾಗಿಯೂ ಸಾಕಷ್ಟು ಸಹಾಯಕವಾಗಿದೆ. ಜಿಮ್‌ಗೆ ಹೋಗಲು ಸಮಯವಿಲ್ಲದವರು ಬೆಳಗ್ಗೆ ಲಘು ವ್ಯಾಯಾಮ ಮಾಡುವ ಮೂಲಕ ಫಿಟ್ ಮತ್ತು ಆರೋಗ್ಯಕರವಾಗಿರಬಹುದು.

3. ಸೂರ್ಯನ ಬೆಳಕಿನಲ್ಲಿ ನಿಂತುಕೊಳ್ಳಿ
ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಮತ್ತು ಅವಶ್ಯಕವಾಗಿದೆ. ಬೆಳಗ್ಗಿನ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಇದು ನಮ್ಮ ದೇಹ ಮತ್ತು ಮನಸ್ಸಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಬೆಳಗ್ಗೆ ಅಥವಾ ಯಾವುದೇ ತೆರೆದ ಪ್ರದೇಶದಲ್ಲಿ ವ್ಯಾಯಾಮ ಮಾಡುವ ಅಭ್ಯಾಸ ದೇಹಕ್ಕೆ ಸುಲಭವಾಗಿ ವಿಟಮಿನ್‌ ಡಿಯನ್ನು ಒದಗಿಸುತ್ತದೆ. ಜೊತೆಗೆ, ವಿಟಮಿನ್ ಡಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಹಿಳೆಯರೇ ಎಚ್ಚರ..ಮಧುಮೇಹ ಮತ್ತು ಬಂಜೆತನಕ್ಕೆ ಇದೇ ಕಾರಣ!

4. ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಬೇಡಿ
ಹಲವಾರು ಜನರು ತಮ್ಮ ಬೆಳಗಿನ ಉಪಾಹಾರ ಸ್ಕಿಪ್ ಮಾಡುವ ಅಭ್ಯಾಸ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು ದೇಹಕ್ಕೆ ಹಾನಿಕಾರಕವೆಂದು ಹಲವರಿಗೆ ತಿಳಿದಿಲ್ಲ. ಯಾವುದೇ ರೀತಿಯ ಅಸಮರ್ಪಕ ಆಹಾರ ಸೇವನೆ ದೇಹವನ್ನು ದುರ್ಬಲಗೊಳಿಸುತ್ತದೆ. ಕೆಲವೊಮ್ಮೆ, ದೀರ್ಘಕಾಲದ ಹಸಿವು ತೂಕವನ್ನು ಕಳೆದುಕೊಳ್ಳುವ ಬದಲು ತೂಕ ಹೆಚ್ಚಾಗಲು ಕಾರಣವಾಗಬಹುದು ಏಕೆಂದರೆ ದೀರ್ಘಕಾಲದವರೆಗೆ ಹಸಿವಿನ ಭಾವನೆಯು ಅತಿಯಾಗಿ ತಿನ್ನುವಂತೆ ಮಾಡುತ್ತದೆ. ಅಲ್ಲದೆ, ಹಸಿವಿನಿಂದ ಬಳಲುವುದು ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು.

5. ದಿನದ ಊಟವನ್ನು ಪ್ಲಾನ್ ಮಾಡಿ
ಒಂದು ದಿನದಲ್ಲಿ ನೀವು ಏನನ್ನು ತಿನ್ನಲಿದ್ದೀರಿ ಎಂಬುದನ್ನು ಮೊದಲೇ ನಿರ್ಧರಿಸಿ. ಕಡಿಮೆ ಕ್ಯಾಲೋರಿ ಆಹಾರಗಳನ್ನು ಆಯ್ಕೆ ಮಾಡಿ. ಏನು ತಿನ್ನಬೇಕು, ಏನು ತಿನ್ನಬಾರದು ಅನ್ನೋ ಬಗ್ಗೆ ನೀವು ಮುಂಚಿತವಾಗಿ ಪ್ಲಾನ್ ಮಾಡಿದರೆ, ಹೆಚ್ಚು ಆರೋಗ್ಯಕರವಾಗಿರಬಹುದು.

click me!