ಹಸಿರು ಬಟಾಣಿಗಳಿಂದಾಗಿ ಅನೇಕರು ಚಳಿಗಾಲವನ್ನು ಇಷ್ಟಪಡುತ್ತಾರೆ. ಚಳಿಗಾಲದ ಆರಂಭದಲ್ಲಿ ಬಟಾಣಿ ಕಾಳುಗಳನ್ನು ಕಟಾವು ಮಾಡುವ ಕಾರಣ ಇವು ವ್ಯಾಪಕವಾಗಿ ಲಭ್ಯವಿರುತ್ತದೆ. ಆದರೆ ಅವುಗಳನ್ನು ಪ್ರತಿದಿನ ತಿನ್ನುವುದು ಆರೋಗ್ಯಜ್ಜೆ ಹಾನಿಕಾರಕವಾಗಿದೆ ಎಂಬುದು ನಿಮಗೆ ಗೊತ್ತಿದ್ಯಾ ?
ಆಹಾರದಲ್ಲಿ ಬಟಾಣಿ ಕಾಳು (Green peas)ಗಳನ್ನು ಸೇರಿಸಲು ಎಲ್ಲರೂ ಇಷ್ಟಪಡುತ್ತಾರೆ. ಇದು ಚಳಿಗಾಲ (Winter)ದಲ್ಲಿ ವ್ಯಾಪಕವಾಗಿ ದೊರಕುವ ಕಾರಣ ಹಲವು ರೆಸಿಪಿಗಳಿಗೆ ಬಟಾಣಿಗಳನ್ನು ಸೇರಿಸುತ್ತಾರೆ. ಪಲಾವ್, ಫ್ರೈಡ್ ರೈಸ್, ಚಾಟ್ಸ್‌ಗಳಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ತಜ್ಞರ ಪ್ರಕಾರ ಹೆಚ್ಚು ಹಸಿರು ಬಟಾಣಿಗಳನ್ನು ತಿನ್ನುವುದು ಆರೋಗ್ಯದ (Health) ದೃಷ್ಟಿಯಿಂದ ನೋಡಿದಾಗ ಒಳ್ಳೆಯದಲ್ಲ. ಹಸಿರು ಬಟಾಣಿ ಅತ್ಯಂತ ಪೌಷ್ಟಿಕವಾಗಿದೆ ಮತ್ತು ಒಬ್ಬರ ಆಹಾರದ ಭಾಗವಾಗಿರಬೇಕು ಎಂಬುದರಲ್ಲಿ ಸಂದೇಹವಿಲ್ಲ. ಅವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಜೊತೆಗೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ. ಮಧುಮೇಹಿ (Diabetes)ಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಫೈಬರ್‌ನ ಹೆಚ್ಚಿನ ಮೂಲವಾಗಿರುವುದರಿಂದ ಅವು ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತವೆ. ಆದರೆ ಆರೋಗ್ಯಕ್ಕೆ ಒಳ್ಳೆಯದೆಂದು ಇದನ್ನು ಅತಿಯಾಗಿ ತಿನ್ನುವುದು ಅನಾರೋಗ್ಯಕ್ಕೆ ಕಾರವಾಗಬಹುದು.
ಹಸಿರು ಬಟಾಣಿಗಳನ್ನು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು?
1. ಹೊಟ್ಟೆ ಉಬ್ಬುವಿಕೆಗೆ ಕಾರಣವಾಗುತ್ತದೆ: ಹೆಚ್ಚಿನ ಪ್ರಮಾಣದ ಹಸಿರು ಬಟಾಣಿಗಳನ್ನು ಸೇವಿಸುವುದು ಹೊಟ್ಟ ಉಬ್ಬುವಿಕೆಗೆ ಕಾರಣವಾಗುತ್ತದೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಧ್ಯಯನದ ಪ್ರಕಾರ, ಹಸಿ ಹಸಿರು ಬಟಾಣಿಗಳು ಲೆಕ್ಟಿನ್ ಮತ್ತು ಫೈಟಿಕ್‌ನಂತಹ ಕೆಲವು ಆಂಟಿ ನ್ಯೂಟ್ರಿಯೆಂಟ್‌ಗಳನ್ನು ಹೊಂದಿದ್ದು ಅದು ಗ್ಯಾಸ್ ಮತ್ತು ವಾಯುದೊಂದಿಗೆ ಉಬ್ಬುವಿಕೆಗೆ ಕಾರಣವಾಗಬಹುದು. ಲೆಕ್ಟಿನ್ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲವಾದ್ದರಿಂದ, ನೀವು ಒಂದು ಸಮಯದಲ್ಲಿ ತಿನ್ನುವ ಬಟಾಣಿ ಕಾಳುಗಳ ಪ್ರಮಾಣವನ್ನು 1/3 ಕಪ್‌ಗೆ ಕಡಿಮೆ ಮಾಡುವುದು ಸಾಕಷ್ಟು ಒಳ್ಳೆಯದು.
Winter Food: ಚಳಿಗಾಲದಲ್ಲಿ ಹೃದಯಾಘಾತ ಅಪಾಯ ತಪ್ಪಿಸಲು ಮೊಟ್ಟೆ ತಿನ್ನಿ
2. ಪೋಷಕಾಂಶಗಳ ಕಡಿಮೆ ಹೀರಿಕೊಳ್ಳುವಿಕೆಗೆ ಕಾರಣವಾಗುತ್ತದೆ: ಹಸಿರು ಬಟಾಣಿಗಳು ಪೋಷಕಾಂಶಗಳಿಂದ ತುಂಬಿವೆ. ಆದರೆ ಅವುಗಳು ಕೆಲವು ಆಂಟಿನ್ಯೂಟ್ರಿಯೆಂಟ್‌ಗಳನ್ನು ಸಹ ಒಳಗೊಂಡಿವೆ. ಹಸಿರು ಬಟಾಣಿಗಳಲ್ಲಿ ಫೈಟಿಕ್ ಆಮ್ಲವಿದೆ, ಇದು ನಿಮ್ಮ ದೇಹ (Body)ದಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತುವು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
3. ಮೂತ್ರಪಿಂಡದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ: ಹಸಿರು ಬಟಾಣಿಗಳಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದ್ದು, ಇದನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಮೂತ್ರಪಿಂಡಗಳ (Kidney) ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಇದು ಕೀಲು ನೋವನ್ನು ಉಂಟುಮಾಡುವ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸಬಹುದು.
Cucumber In Winter: ಚಳಿಗಾಲದಲ್ಲಿ ಸೌತೆಕಾಯಿ ತಿಂದ್ರೆ ಶೀತ, ಕೆಮ್ಮಿನ ಸಮಸ್ಯೆ ಜಾಸ್ತಿ
ಬಟಾಣಿ ಕಾಳು ತಿನ್ನುವುದನ್ನು ನಿಲ್ಲಿಸಬೇಕೆ ?
ಬಟಾಣಿ ಕಾಳುಗಳ ಸೇವನೆಯಿಂದ ಇಷ್ಟೆಲ್ಲಾ ತೊಂದ್ರೆಯಿದೆ ಎಂಬ ಮಾತ್ರಕ್ಕೆ ಅವುಗಳನ್ನು ತಿನ್ನದೇ ಇರಬೇಕಿಲ್ಲ. ಹಸಿರು ಬಟಾಣಿಗಳ ಆರೋಗ್ಯ ಪ್ರಯೋಜನಗಳು ಅದರ ಅಡ್ಡಪರಿಣಾಮಗಳನ್ನು ಮೀರಿಸುತ್ತದೆ, ಆದ್ದರಿಂದ ಒಬ್ಬರು ಖಂಡಿತವಾಗಿಯೂ ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಬದಲಾಗಿ, ಹಸಿರು ಬಟಾಣಿಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವ ಕೆಲವು ತಂತ್ರಗಳನ್ನು ನೀವು ಅನುಸರಿಸಬಹುದು:
* ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಿ
* ಪ್ರತಿನಿತ್ಯ ಬಟಾಣಿ ತಿನ್ನಬೇಡಿ
* ಬಟಾಣಿ ಬೇಯಿಸುವ ಮೊದಲು ನೆನೆಸಿ, ಹುದುಗಿಸುವುದು ಅಥವಾ ಮೊಳಕೆಯೊಡೆಸುವುದು ಹಸಿರು ಬಟಾಣಿಗಳಲ್ಲಿರುವ ಲೆಕ್ಟಿನ್ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ
ಹೀಗಾಗಿ ಬಟಾಣಿ ಕಾಳು ಸೀಸನಲ್, ಹೆಲ್ದೀ ಅಂತ ಬೇಕಾಬಿಟ್ಟಿ ತಿನ್ನೋ ಮುನ್ನ ಅವುಗಳ ಸೇವನೆಯಿಂದಾಗುವ ತೊಂದರೆಗಳ ಬಗ್ಗೆಯೂ ತಿಳಿದುಕೊಂಡಿರಿ ಅಷ್ಟೆ.