ಭಾರತೀಯರ ಪಾಲಿಗೆ ಬೆಳಗ್ಗೆ ಆಗೋದೆ ಟೀ ಕುಡಿಯೋದ್ರಿಂದ. ಬಿಸಿ ಬಿಸಿ ಚಹಾ ಕುಡಿ್ದ್ರೆ ದಿನವಿಡೀ ಫ್ರೆಶ್ ಆಗಿರುತ್ತೆ ಎಂದು ಹೆಚ್ಚಿನವರು ಅಂದ್ಕೊಳ್ತಾರೆ. ಸಂಜೆ ಹೊತ್ತು ಸಹ ಟೀ ಜೊತೆ ಬಿಸ್ಕೆಟ್ ಸವಿಯೋದೆ ಚೆಂದ. ಹೀಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿರುವ ಚಹಾವನ್ನುಭಾರತದ ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು ಎಂದು ಅಸ್ಸಾಂನ ಬಿಜೆಪಿ ರಾಜ್ಯಸಭಾ ಸಂಸದ ಪಬಿತ್ರಾ ಮಾರ್ಗರಿಟಾ ಒತ್ತಾಯಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ: ಚಹಾವನ್ನು ಭಾರತದ ರಾಷ್ಟ್ರೀಯ ಪಾನೀಯ (National drink) ಎಂದು ಘೋಷಿಸಬೇಕು ಎಂದು ಅಸ್ಸಾಂನ ಬಿಜೆಪಿ ರಾಜ್ಯಸಭಾ ಸಂಸದ ಪಬಿತ್ರಾ ಮಾರ್ಗರಿಟಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ, ಚಹಾವು ಅನೇಕ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಮಾರ್ಗರಿಟಾ ಹೇಳಿದರು, ದೇಶದ ನಾಗರಿಕರು ತಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ ಎಂದು ಹೇಳಿದರು. 'ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಈಶಾನ್ಯದವರೆಗೆ ಪ್ರತಿ ಮನೆಯ ಅಡುಗೆಮನೆಯಲ್ಲಿ (Cooking) ಚಹಾ ಲಭ್ಯವಿದೆ. ಹಾಗಾಗಿ ಇದನ್ನು ನಮ್ಮ ದೇಶದ ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು' ಎಂದರು.
ಚಹಾ ತೋಟದ ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸಹ ಮಾರ್ಗರಿಟಾ ಒತ್ತಾಯಿಸಿದರು. ಈಶಾನ್ಯ ರಾಜ್ಯಗಳಲ್ಲಿ ಸುಮಾರು 50 ಲಕ್ಷ ಚಹಾ (Tea) ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. 2023ರಲ್ಲಿ ಅಸ್ಸಾಂ ಚಹಾ 200 ವರ್ಷಗಳನ್ನು ಪೂರೈಸಲಿದೆ ಎಂದು ಬಿಜೆಪಿ ಸಂಸದರು ಸದನದಲ್ಲಿ ಹೇಳಿದರು. ಅಸ್ಸಾಂನ ಜನರು ಈ ಸಂದರ್ಭವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಆದ್ದರಿಂದ, ಅಸ್ಸಾಂನ ಚಹಾ ಉದ್ಯಮದ ಉತ್ತೇಜನಕ್ಕೆ ಕೇಂದ್ರವು ತನ್ನ ಸಹಕಾರವನ್ನು ನೀಡುವಂತೆ ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.
ಕಿತ್ತಳೆ ಸಿಪ್ಪೆ ಬಿಸಾಕ್ಬೇಡಿ… ಚಹಾ ಮಾಡಿ ಕುಡಿದ್ರೆ ಹಲವು ರೋಗಕ್ಕೆ ಮದ್ದು
ಚಹಾದ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಚಹಾ ಪಾನೀಯಗಳು ಲಭ್ಯವಿವೆ. ಇದು ಚಹಾ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮಾರ್ಗರಿಟಾ ಸದನಕ್ಕೆ ತಿಳಿಸಿದರು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಒತ್ತಾಯಿಸಿದರು.
ಚಹಾ ಸೇವನೆಯ ಪ್ರಯೋಜನಗಳು
1. ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ: ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಅಗತ್ಯವಾಗಿದೆ. ಚಹಾ ಸೇವನೆಯಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ (Body) ದೊರಕುತ್ತದೆ. ಬಿಳಿ ಚಹಾ, ಇದು ಕಪ್ಪು ಅಥವಾ ಹಸಿರು ಚಹಾಕ್ಕಿಂತ ಕಡಿಮೆ ಸಂಸ್ಕರಿಸಲ್ಪಡುತ್ತದೆ ಆದ್ದರಿಂದ ಇದು ಹೆಚ್ಚು ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳನ್ನು ಉಳಿಸಿಕೊಳ್ಳುತ್ತದೆ.
2. ಕಾಫಿಗಿಂತ ಟೀಯಲ್ಲಿ ಕೆಫೀನ್ ಕಡಿಮೆ ಇರುತ್ತದೆ: ಗಿಡಮೂಲಿಕೆಗಳ ಮಿಶ್ರಣಗಳು ಕೆಫೀನ್ ಅನ್ನು ಹೊಂದಿರುವುದಿಲ್ಲ. ಹೀಗಾಗಿ ಚಹಾದಲ್ಲಿ ಕೆಫೀನ್ ಅಂಶ, ಕಾಫಿಯಲ್ಲಿ ಕಂಡುಬರುವ 50%ಕ್ಕಿಂತ ಕಡಿಮೆಯಿರುತ್ತವೆ. ಚಹಾ ಸೇವನೆಯಿಂದ ನರಮಂಡಲದ ಮೇಲೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಚಹಾ ಸೇವನೆ ಒತ್ತಡ (Pressure)ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರಿಬಯಾಟಿಕ್ ಆಗಿದೆ ಆದ್ದರಿಂದ ನಿಮ್ಮ ಕರುಳಿನ ಆರೋಗ್ಯಕ್ಕೂ (Gut health) ಇದು ಒಳ್ಳೆಯದು.
ಬಾಳೆಹಣ್ಣಿನ ಚಹಾ ಕುಡಿದ್ರೆ ರಕ್ತದೊತ್ತಡ ಕಡಿಮೆಯಾಗುತ್ತೆ
3. ಹೃದಯಾಘಾತ, ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ: ಚಹಾ ಮತ್ತು ಹೃದಯದ (Heart) ಆರೋಗ್ಯಕ್ಕೆ ಸಂಬಂಧವಿದೆ. ಚಹಾ ಸೇವನೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ. ದಿನಕ್ಕೆ ಒಂದರಿಂದ ಮೂರು ಕಪ್ ಹಸಿರು ಚಹಾವನ್ನು ಸೇವಿಸುವವರಲ್ಲಿ 35% ರಷ್ಟು ಪಾರ್ಶ್ವವಾಯು ಅಪಾಯವನ್ನು ಕಡಿಮೆಯಾಗಿದೆ. ಪ್ರತಿನಿತ್ಯ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕಪ್‌ಗಳಷ್ಟು ಹಸಿರು ಚಹಾವನ್ನು ಸೇವಿಸುವವರಲ್ಲಿ ಹೃದಯಾಘಾತ ಮತ್ತು ಕಡಿಮೆ ಮಟ್ಟದ ಎಲ್‌ಡಿಎಲ್ ಕೊಲೆಸ್ಟ್ರಾಲ್‌ನ ಅಪಾಯವು 32% ರಷ್ಟು ಕಡಿಮೆಯಾಗಿದೆ.
4. ತೂಕ ನಷ್ಟಕ್ಕೆ ಚಹಾ ಸಹಕಾರಿ: ತೂಕ (Weight) ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಆದ್ರೆ ಚಹಾ ಸೇವಿಸುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಕೆಫೀನ್‌ಯುಕ್ತ ಕಾಫಿ ಸೇವನೆಯಿಂದ ತೂಕ ಹೆಚ್ಚಳವಾಗಬಹುದು. ಆದ್ರೆ ಚಹಾ ಸೇವನೆಯಿಂದ ಈ ರೀತಿಯ ತೊಂದರೆಯಾಗುವುದಿಲ್ಲ.
5. ಮೂಳೆಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ: ಹಸಿರು ಚಹಾವು ಮೂಳೆಯ (Bone) ನಷ್ಟವನ್ನು ತಡೆಯುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ದಕ್ಷಿಣ ಏಷ್ಯಾಕ್ಕೆ ಸ್ಥಳೀಯವಾಗಿರುವ ಮೊರಿಂಗಾ ಸಸ್ಯವು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಜೊತೆಗೆ ಕಬ್ಬಿಣ, ವಿಟಮಿನ್ ಎ ಮತ್ತು ಕೆ ಜೊತೆಗೆ, ಮೊರಿಂಗಾ ಚಹಾವು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.