
ದಿನಕ್ಕೊಂದು ಸೇಬು ತಿಂದು ವೈದ್ಯರಿಂದ ದೂರವಿರಿ. ಇದು ಎಲ್ಲರೂ ಹೇಳುವ ಮಾತು. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಸಂಗತಿ ಎಲ್ಲಿರಿಗೂ ತಿಳಿದಿದೆ. ಸೇಬು ಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಇದನ್ನು ತಿನ್ನುವುದರಿಂದ ಅಸ್ತಮಾ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳು ದೂರವಾಗುತ್ತವೆ. ಸೇಬು ಹಣ್ಣಿನಲ್ಲಿ ಸಮತೋಲಿತ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತದೆ. ಕಬ್ಬಿಣ ಮತ್ತು ಬೋರಾನ್ ಸಹ ಹಣ್ಣಿನಲ್ಲಿ ಕಂಡುಬರುತ್ತದೆ. ಸೇಬು ಹಣ್ಣಿನಲ್ಲಿರುವ ಪೌಷ್ಟಿಕಾಂಶ ಮೂಳೆಗಳನ್ನು ಬಲಪಡಿಸುವ ಕೆಲಸ ಮಾಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೇಬು (Apple) ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಕೆಲವೊಮ್ಮೆ ಅದು ಆರೋಗ್ಯ (Health) ಹದಗೆಡಿಸುವ ಕೆಲಸ ಮಾಡುತ್ತದೆ. ಸೇಬು ಹಣ್ಣಿನ ಸೇವನೆಯಿಂದ ಯಾವೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
Healthy Food: ಸೇಬು ಸೇವನೆಗೆ ಯಾವುದು ಬೆಸ್ಟ್ ಟೈಂ ?
ಸೇಬು ಹಣ್ಣನ್ನು ಇವರು ತಿನ್ನಬಾರದು :
ಸೇಬಿನ ಸೇವನೆಯಿಂದ ಪರಾಗ ಅಲರ್ಜಿ : ಕೆಲವರಿಗೆ ಹಣ್ಣಿನ ಅಲರ್ಜಿ ಇರುತ್ತದೆ. ಹಣ್ಣು (Fruit) ಗಳ ಪರಾಗ ಸ್ಪರ್ಶದಿಂದಲೇ ಅವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದನ್ನು ಪರಾಗ ಅಲರ್ಜಿ ಎಂದು ಕರೆಯಲಾಗುತ್ತದೆ. ಸೇಬು ಹಣ್ಣನ್ನು ಅತಿಯಾಗಿ ತಿನ್ನುವ ಕಾರಣ ಈ ಅಲರ್ಜಿ ಕಂಡು ಬರುತ್ತದೆ. ಹಣ್ಣಿನ ಪರಾಗ ಅಲರ್ಜಿಯಲ್ಲಿ ಬಾಯಿ ಮತ್ತು ಮುಖ ಊದಿಕೊಳ್ಳುತ್ತದೆ. ಇದರಲ್ಲಿ ಇನ್ನೂ ಹಲವು ಲಕ್ಷಣಗಳಿವೆ. ಸೇಬನ್ನು ಅತಿಯಾಗಿ ಸೇವಿಸಿದ ಒಂದು ಅಥವಾ ಎರಡು ಗಂಟೆಗಳ ನಂತರ ದೇಹದಲ್ಲಿ ಅಲರ್ಜಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಪರಾಗ ಅಲರ್ಜಿಯ ಲಕ್ಷಣಗಳು : ಪರಾಗ ಅಲರ್ಜಿಗೆ ಒಳಗಾದ ಜನರಿಗೆ ಜ್ವರ ಕಾಡುತ್ತದೆ. ಈ ಜ್ವರದಲ್ಲಿ ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುತ್ತಿರುತ್ತದೆ. ಅಲ್ಲದೆ ಕಣ್ಣು ಮತ್ತು ಮೂಗಿನಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲ ಪರಾಗ ಅಲರ್ಜಿಗೆ ಒಳಗಾದ ಜನರ ತುಟಿ, ನಾಲಿಗೆ ಮತ್ತು ಗಂಟಲು ಊದಿಕೊಳ್ಳುತ್ತದೆ. ಇವರಿಗೆ ಆಹಾರ ಸೇವನೆ ಮಾಡೋದು ಕಷ್ಟವಾಗುತ್ತದೆ. ಮುಖದಲ್ಲೂ ಊತ ಕಾಣಿಸಿಕೊಳ್ಳುವುದಲ್ಲದೆ ಉಸಿರಾಡಲು ಇವರು ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಅಜೀರ್ಣ, ಹೊಟ್ಟೆಯಲ್ಲಿ ಸೆಳೆತ, ಅತಿಸಾರ ಇತ್ಯಾದಿ ಸಮಸ್ಯೆ ಪ್ರಾರಂಭವಾಗುತ್ತವೆ. ಮುಖ ಮಾತ್ರವಲ್ಲದೆ ನಿಮ್ಮ ದೇಹದ ಇತರ ಭಾಗದಲ್ಲಿಯೂ ತುರಿಕೆ ಕಾಣಿಸಿಕೊಳ್ಳುತ್ತದೆ. ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಂಭವವಿರುತ್ತದೆ. ವ್ಯಕ್ತಿಗೆ ತಲೆ ಸುತ್ತಿದ ಅನುಭವವಾಗುತ್ತದೆ. ಅಲರ್ಜಿ ಸಮಸ್ಯೆ ಹೆಚ್ಚಾದಂತೆ ರಕ್ತದೊತ್ತಡ ಕಡಿಮೆಯಾಗಿ ಮೂರ್ಛೆ ಹೋಗುವ ಸಂಭವವಿರುತ್ತದೆ. ನಿಮಗೂ ಸೇಬು ಅಲರ್ಜಿಯಿದೆ ಅಂದ್ರೆ ಅದ್ರಿಂದ ದೂರವಿರಿ.
ಕೆಲವು ಹಣ್ಣನ್ನು ಸಿಪ್ಪೆ ಜೊತೆಯೇ ತಿಂದ್ರೆ ಆರೋಗ್ಯಕ್ಕೆ ಬೆಸ್ಟ್!
ಸೇಬು ಹಣ್ಣಿನ ಸೇವನೆಯಿಂದಾಗುವ ಇನ್ನಷ್ಟು ಅಡ್ಡಪರಿಣಾಮಗಳು :
ಜೀರ್ಣಕ್ರಿಯೆ ಸಮಸ್ಯೆ : ವ್ಯಕ್ತಿಯನ್ನು ಆರೋಗ್ಯವಾಗಿಡಲು ಫೈಬರ್ ಬಹಳ ಮುಖ್ಯ. ಸೇಬು ಹಣ್ಣಿನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಹೆಚ್ಚು ತಿನ್ನೋದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಮಲಬದ್ಧತೆ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಪ್ರತಿ ದಿನ 70 ಗ್ರಾಂಗಿಂತ ಹೆಚ್ಚು ಫೈಬರ್ ಸೇವನೆ ಮಾಡಬಾರದು.
ತೂಕ ಏರಿಕೆ : ಸಾಮಾನ್ಯ ಸೇಬಿನಲ್ಲಿ 25 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ಇದರ ಹೆಚ್ಚಿನ ಸೇವನೆಯಿಂದ ತೂಕದಲ್ಲಿ ಏರಿಕೆಯಾಗುತ್ತದೆ. ಹಾಗಾಗಿ ದಿನಕ್ಕೆ ಒಂದು ಸೇಬು ಹಣ್ಣನ್ನು ಮಾತ್ರ ತಿನ್ನಿ.
ಸಕ್ಕರೆ ಪ್ರಮಾಣದಲ್ಲಿ ಏರಿಳಿತ : ರಕ್ತದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಅಪಾಯವಿರುತ್ತದೆ.
ಹಲ್ಲು ಹಾಳು ಮಾಡುತ್ತೆ ಸೇಬು : ಸೇಬು ಹಣ್ಣನ್ನು ಅತಿಹೆಚ್ಚು ತಿನ್ನುವುದ್ರಿಂದ ಹಲ್ಲಿನ ಸಮಸ್ಯೆ ಕಾಡುತ್ತದೆ. ಸೇಬು ಹಣ್ಣಿನಲ್ಲಿ ಎಸಿಡ್ ಇರುವ ಕಾರಣ ಹಲ್ಲನ್ನು ಕೆಡಿಸುವ ಕೆಲಸ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.