ಕೆಲವು ಹಣ್ಣನ್ನು ಸಿಪ್ಪೆ ಜೊತೆಯೇ ತಿಂದ್ರೆ ಆರೋಗ್ಯಕ್ಕೆ ಬೆಸ್ಟ್!
ಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಈ ಸಂಗತಿ ತಿಳಿದಿದೆ. ಆದ್ರೆ ರುಚಿಯಿರೋದಿಲ್ಲ ಎಂಬ ಕಾರಣಕ್ಕೆ ಸಿಪ್ಪೆ ತಿನ್ನೋದಿಲ್ಲ. ರುಚಿ ಬಿಟ್ಟು ಆರೋಗ್ಯ ಬೇಕು ಎನ್ನೋರು ಇಂದಿನಿಂದ್ಲೇ ಸಿಪ್ಪೆ ಬಿಡ್ಬೇಡಿ.
ಹಣ್ಣು ತಿನ್ನಿ ಆರೋಗ್ಯವಾಗಿರಿ ಅಂತಾ ಎಲ್ಲರೂ ಸಲಹೆ ನೀಡ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವ ಜನರು ಹಣ್ಣು ತಿನ್ನಲು ಆದ್ಯತೆ ನೀಡ್ತಾರೆ. ಪ್ರತಿ ದಿನ ಒಂದಿಷ್ಟು ಹಣ್ಣು ಸೇವನೆಯನ್ನು ಡಯಟ್ ನಲ್ಲಿ ಸೇರಿಸಿಕೊಳ್ತಾರೆ. ಆದರೆ ಹಣ್ಣು ತಿನ್ಬೇಕು ಎನ್ನುವ ಕಾರಣಕ್ಕೆ ತಿನ್ನೋದಲ್ಲ. ಆ ಹಣ್ಣುಗಳ ಸೇವನೆ ಮೊದಲು ಅದನ್ನು ಹೇಗೆ ಸೇವನೆ ಮಾಡ್ಬೇಕು ಎಂಬುದು ಗೊತ್ತಿರಬೇಕು. ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಹಣ್ಣು ತಿನ್ನುತ್ತಾರೆ. ಮತ್ತೆ ಕೆಲವರು ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುತ್ತಾರೆ. ಎಲ್ಲ ಹಣ್ಣುಗಳೂ ಒಂದೇ ರೀತಿ ಇರೋದಿಲ್ಲ. ಒಂದೊಂದು ಹಣ್ಣಿನ ಸ್ವಭಾವ ಒಂದೊಂದು ರೀತಿ ಇರೋದ್ರಿಂದ ಅದ್ರ ಸೇವನೆ ಕೂಡ ಭಿನ್ನವಾಗಿರುತ್ತದೆ. ಕೆಲ ಹಣ್ಣಿನ ಸಿಪ್ಪೆ ತೆಗೆದು ತಿಂದ್ರೆ ಒಳ್ಳೆಯದು. ಮತ್ತೆ ಕೆಲ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕು. ಈ ವಿಷ್ಯ ಜನರಿಗೆ ಸರಿಯಾಗಿ ಗೊತ್ತಿಲ್ಲ. ಬಹುತೇಕರು ಸಿಪ್ಪೆ ಸೇವನೆ ವಿಚಾರಕ್ಕೆ ಬಂದಾಗ ಗೊಂದಲಕ್ಕೊಳಗಾಗ್ತಾರೆ. ಹೇಗೆ ಸೇವನೆ ಮಾಡಿದ್ರೆ ಒಳ್ಳೆಯದು ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಯಾವ ಹಣ್ಣನ್ನು ಸಿಪ್ಪೆ ತೆಗೆದು ತಿನ್ನಬೇಕು, ಯಾವುದನ್ನು ತೆಗೆಯದೆ ತಿನ್ನಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಕಿತ್ತಳೆ ಹಣ್ಣು (Orange Fruit) ಸೇವನೆ ಮಾಡೋದು ಹೇಗೆ ? : ಅರೇ, ಕಿತ್ತಳೆ ಹಣ್ಣಿನ ಸಿಪ್ಪೆ (Peel) ತಿನ್ನೋಕೆ ಸಾಧ್ಯವಾ ಅಂತಾ ನೀವು ಕೇಳಬಹುದು. ಖಂಡಿತವಾಗಿಯೂ ಸಾಧ್ಯವಿಲ್ಲ. ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆಯಲೇಬೇಕು. ಆದ್ರೆ ಸಿಪ್ಪೆ ತೆಗೆಯುವಾಗ ನಾರಿನಾಂಶ ಹೋಗದಂತೆ ನೋಡಿಕೊಳ್ಳಿ. ಹಣ್ಣನ್ನು ನಾರಿನ ಸಮೇತ ತಿಂದ್ರೆ ಒಳ್ಳೆಯದು. ಕೆಲವರು ತೊಳೆಯ ಮೇಲ್ಭಾಗವನ್ನೂ ತೆಗೆದು ಒಳಗಿನ ಭಾಗವನ್ನು ಮಾತ್ರ ಸೇವನೆ ಮಾಡ್ತಾರೆ ಇದು ತಪ್ಪು ಎನ್ನುತ್ತಾರೆ ತಜ್ಞರು.
ಕೆಟ್ಟ ಕೊಬ್ಬು ಬೇಡ ಅಂದ್ರೆ ಈ ಆಹಾರಗಳಿಗೆ ಬೈ ಬೈ ಹೇಳಿ
ಬಾಳೆ ಹಣ್ಣು (Banana Fruit) : ಬಾಳೆ ಹಣ್ಣಿನ ಸಿಪ್ಪೆ ಬಹಳ ಪ್ರಯೋಜನಕಾರಿ. ಸಿಪ್ಪೆ ಸಮೇತ ಬಾಳೆ ಹಣ್ಣು ತಿನ್ನುವವರು ಅಲ್ಲೋ ಇಲ್ಲೋ ಸಿಗ್ತಾರೆ. ಸಿಪ್ಪೆ ಸುಲಿಯದೆ ಬಾಳೆ ಹಣ್ಣು ತಿಂದ್ರೆ ಮಂಗನಂತೆ ತಿಂತಿಯಾ ಅಂತಾ ನಾವೇ ಆಡಿಕೊಳ್ತೇವೆ. ಆದ್ರೆ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ವಿಟಮಿನ್ ಬಿ 6, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳು ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಕಂಡುಬರುತ್ತವೆ. ಇದೆಲ್ಲ ನಿಮ್ಮ ದೇಹ ಸೇರಬೇಕೆಂದ್ರೆ ಸಿಪ್ಪೆ ತೆಗೆಯದೆ ಬಾಳೆ ಹಣ್ಣು ತಿನ್ನೋದು ಉತ್ತಮ.
ಸೇಬು ಹಣ್ಣು : ಕೆಲವರು ಸೇಬು ಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಇದು ತಪ್ಪು ವಿಧಾನ ಎನ್ನುತ್ತಾರೆ ವೈದ್ಯರು. ಸೇಬು ಹಣ್ಣಿನ ಸಿಪ್ಪೆ ತೆಗೆದ್ರೆ ಅದರ ನಾರಿನಾಂಶ ಹೋಗುತ್ತದೆ. ಇದ್ರಿಂದ ದೇಹಕ್ಕೆ ಸಿಗಬೇಕಾಗಿದ್ದ ಎಲ್ಲ ಪೌಷ್ಠಿಕಾಂಶಗಳು ಸಿಗೋದಿಲ್ಲ.
ಪ್ಲಮ್ : ಪ್ಲಮ್ ಗಳು ಪೌಷ್ಟಿಕಾಂಶ ಭರಿತ ಹಣ್ಣಾಗಿದೆ. ಅದು ವ್ಯಾಪಕವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪ್ಲಮ್ ಹಣ್ಣನ್ನು ಸಿಪ್ಪೆ ಸಮೇತ ಸೇವನೆ ಮಾಡಬೇಕು. ಪ್ಲಮ್ ಫೈಬರ್‌ನ ಸಮೃದ್ಧ ಮೂಲವಾಗಿರುವುದರಿಂದ ಮಲಬದ್ಧತೆಗೆ ಒಳ್ಳೆಯ ಮದ್ದು. ಪೇರಳೆ ಹಣ್ಣು : ಪೇರಳೆ ಹಣ್ಣನ್ನು ಕೂಡ ಸಿಪ್ಪೆ ಸಮೇತ ತಿನ್ನಬೇಕು. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.
Monsoon Food: ಮಳೆಗಾಲದ ಆಹಾರದಲ್ಲಿ ಮೆಕ್ಕೆಜೋಳವೂ ಇರಲಿ
ಕಿವೀಸ್ : ಕಿವಿ ಹಣ್ಣನ್ನು ಸಿಪ್ಪೆ ತೆಗೆಯದೆ ತಿನ್ನಬಹುದು ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಈ ಹಣ್ಣಿನ ಸಿಪ್ಪೆ ಫೈಬರ್, ಫೋಲೇಟ್, ವಿಟಮಿನ್ ಇ ಮತ್ತು ವಿಟಮಿನ್ ಸಿ ಯಿಂದ ತುಂಬಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.