ಮನೆಯಲ್ಲಿ ಮೊಟ್ಟೆ (Egg) ಇದ್ರೆ ಅಡುಗೆ (Cooking) ಸೂಪರ್ ಈಝಿ. ಬೆಳಗ್ಗೆ ಬ್ರೆಡ್ ಆಮ್ಲೆಟ್ ಮಾಡ್ಕೋಬೋದು, ಮಧ್ಯಾಹ್ನ ಸ್ಪಲ್ಪ ಎಗ್ ಭುರ್ಜಿ ಮಾಡ್ಕೊಂಡರಾಯ್ತ. ರಾತ್ರಿಗೆ ಎರಡು ಮೊಟ್ಟೆ ಒಡೆದು ಫ್ರೈಡ್ ರೈಸ್ ಮಾಡಿದ್ರಾಯ್ತು. ಹೀಗೆ ಅಂದುಕೊಳ್ತಾ ಒಂದು ಟ್ರೇ ಎಗ್ ತಂದು ಫ್ರಿಡ್ಜ್ (Refrigerator) ನಲ್ಲಿಟ್ಟಿದ್ದೀರಾ. ಆದ್ರೆ ಅದಕ್ಕಿಂತ ಮೊದ್ಲು ತಿಳ್ಕೊಳ್ಳಿ. ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನೋದು ಆರೋಗ್ಯ (Health)ಕ್ಕೆ ಒಳ್ಳೇದಾ ?
ಮೊಟ್ಟೆ ಹಲವರ ಫೇವರಿಟ್. ಪ್ರೋಟೀನ್‌ನ ಉತ್ತಮ ಮೂಲ. ಮೊಟ್ಟೆ (Egg) ಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿ ತಿನ್ನಬಹುದು. ಮಾತ್ರವಲ್ಲ ಗ್ರೇವಿ, ಎಗ್ ಪೆಪ್ಪರ್, ಎಗ್ ಬಿರಿಯಾನಿ, ಎಗ್ ಫ್ರೈಡ್ ರೈಸ್ ಮೊದಲಾದ ರೆಸಿಪಿಗಳನ್ನು ಮೊಟ್ಟೆಯಿಂದ ತಯಾರಿಸಬಹುದು. ಮೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಮೊಟ್ಟೆಗಳನ್ನು ಮನೆಗೆ ತಂದೇನೋ ಇಡಬಹುದು. ಆದ್ರೆ ಇದು ಜಾಸ್ತಿ ದಿನ ಉಳಿಯುವುದಿಲ್ಲ ಹಾಳಾಗುತ್ತದೆ. ಹೀಗಾಗಿ ಹೆಚ್ಚಿನವರು ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಆದ್ರೆ ಮೊಟ್ಟೆಯನ್ನು ಫ್ರಿಡ್ಜ್ (Refrigerator) ನಲ್ಲಿಟ್ಟು ತಿನ್ನೋದು ಆರೋಗ್ಯ (Health) ಕ್ಕೆ ಒಳ್ಳೇದಾ ?
ಮೊಟ್ಟೆಯಲ್ಲಿರುವ ಪೋಷಕಾಂಶಗಳು
ಮೊಟ್ಟೆಯಲ್ಲಿ ದೇಹಕ್ಕೆ ದಿನದಲ್ಲಿ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ಇಡೀ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಮತ್ತು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. 44 ಗ್ರಾಂ ತೂಕದ 1 ಬೇಯಿಸಿದ ಮೊಟ್ಟೆ 5.5 ಗ್ರಾಂ ಪ್ರೋಟೀನ್‌ನ್ನು ಒಳಗೊಂಡಿದೆ. 4.2 ಗ್ರಾಂ ಕೊಬ್ಬಿನ ಪ್ರಮಾಣ, 24.6 ಮಿ.ಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣ, 5.3 ಮಿಗ್ರಾಂ ಮೆಗ್ನೀಸಿಯಮ್, 86.7 ಮಿಗ್ರಾಂ ರಂಜಕ, 60.3 ಮಿಗ್ರಾಂ ಪೊಟ್ಯಾಸಿಯಮ್, 0.6 ಮಿಗ್ರಾಂ ಸತು, 162 ಮಿಗ್ರಾಂ ಕೊಲೆಸ್ಟ್ರಾಲ್, 13.4 ಮೈಕ್ರೋಗ್ರಾಂ ಸೆಲೆನಿಯಮ್ ಒಳಗೊಂಡಿದೆ.
undefined
Egg Recipes: ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಫಟಾಫಟ್ ರೆಡಿ ಮಾಡ್ಬೋದು
ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ರೀತಿ ಯಾವುದು ?
ಆರೋಗ್ಯಕ್ಕೆ ಉತ್ತಮ ಎಂದು ಮನೆಗೆ ಒಂದು ಟ್ರೇ ತಂದಿಟ್ಟು ದಿನಕ್ಕೊಂದು ಮೊಟ್ಟೆ ಎಂದು ಬೇಯಿಸಿ ತಿನ್ಬೋದು ಎಂದು ನೀವು ಪ್ಲಾನ್ ಏನೋ ಮಾಡ್ಬೋದು. ಆದರೆ, ಮೊಟ್ಟೆಗಳನ್ನು ಸಂಗ್ರಹಿಸುವ ಸರಿಯಾದ ಮಾರ್ಗ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಕೆಲವು ದೇಶಗಳಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು ನಂಬಲಾಗಿದೆ. ಯಾಕೆಂದರೆ ಅದು ಮೊಟ್ಟೆಗಳ ರುಚಿಯ ಮೇಲೆ ಪರಿಣಾಮ ಬೀರಬಹುದು. ಆದರೆ ಇತರ ಸ್ಥಳಗಳಲ್ಲಿ ಮೊಟ್ಟೆಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುವ ಸರಿಯಾದ ಮಾರ್ಗವೆಂದರೆ ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದು ಎಂದು ನಂಬಲಾಗಿದೆ. ತಾಜಾತನವನ್ನು ಉಳಿಸಿಕೊಳ್ಳಲು ಮೊಟ್ಟೆಗಳನ್ನು ಸಂಗ್ರಹಿಸುವ ಸರಿಯಾದ ವಿಧಾನದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿದೆ.
ಕೆಲವು ಜನರು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಪ್ಯಾಂಟ್ರಿಯಲ್ಲಿ ಮೊಟ್ಟೆಗಳನ್ನು ಸಂಗ್ರಹಿಸುತ್ತಾರೆ, ಆದರೆ ಇತರರು ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸುತ್ತಾರೆ. ಮೊಟ್ಟೆಯನ್ನು ಹೇಗೆ ಸಂಗ್ರಹಿಸಬೇಕು ಎಂಬುದು ತಾಪಮಾನ ಮತ್ತು ಮೊಟ್ಟೆಗಳನ್ನು ಹೇಗೆ ಸಿದ್ಧಪಡಿಸಲಾಗುತ್ತದೆ ಅಥವಾ ಸ್ವಚ್ಛಗೊಳಿಸಲಾಗುತ್ತದೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಶುಚಿಗೊಳಿಸುವಿಕೆ ಮತ್ತು ಪ್ರದೇಶದ ತಾಪಮಾನವು ಮೊಟ್ಟೆಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
Food Tips: ಬಿರಿಯಾನಿ, ಬೇಯಿಸಿದ ಮೊಟ್ಟೆಯನ್ನು ಬಿಸಿ ಮಾಡಿ ತಿನ್ಬೋದಾ ?
ಮೊಟ್ಟೆಗಳು ಸರಿಯಾಗಿ ಶೇಖರಿಸದಿದ್ದರೆ ಅಪಾಯಕಾರಿ
ಮೀನು ಅಥವಾ ಮಾಂಸದಂತೆಯೇ ಮೊಟ್ಟೆಗಳು ಸರಿಯಾಗಿ ಶೇಖರಿಸದಿದ್ದರೆ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹುಟ್ಟುಹಾಕಬಹುದು. ಸಾಲ್ಮೊನೆಲ್ಲಾ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದ ಕಾರಣದಿಂದಾಗಿ ಮೊಟ್ಟೆಗಳು ವಿಷಕಾರಿಯಾಗಿ ಪರಿಣಮಿಸುತ್ತವೆ.
ಸಿಡಿಸಿ (ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು) ಪ್ರಕಾರ ಸಾಲ್ಮೊನೆಲ್ಲಾ ಮೊಟ್ಟೆಗಳಲ್ಲಿನ ಭಯಾನಕ ಬ್ಯಾಕ್ಟೀರಿಯಾ (Bacteria)ವಾಗಿದ್ದು, ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಕೋಳಿಯಂತಹ ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳ ಜೀರ್ಣಾಂಗಗಳಲ್ಲಿ ಇರುತ್ತದೆ. ಸಿಡಿಸಿ ಪ್ರಕಾರ 25 ಚಿಕನ್ (Chicken) ಪ್ಯಾಕೆಟ್‌ಗಳಲ್ಲಿ ಒಂದು ಸಾಲ್ಮೊನೆಲ್ಲಾದಿಂದ ಕಲುಷಿತವಾಗಲು ಇದು ಕಾರಣವಾಗಿದೆ.
ತಾಜಾ ಮೊಟ್ಟೆಗಳು ಚಿಕನ್‌ನಿಂದ ಬರುವುದರಿಂದ, ಮೊಟ್ಟೆಗಳು ಸಾಲ್ಮೊನೆಲ್ಲಾದಿಂದ ಕಲುಷಿತಗೊಳ್ಳುವ ಹೆಚ್ಚಿನ ಸಾಧ್ಯತೆಗಳಿವೆ, ಇದು ಹೊಟ್ಟೆಯ ಸೋಂಕು, ವಾಕರಿಕೆ ಮತ್ತು ತೀವ್ರವಾದ ಸೋಂಕಿನ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಬಹುದು. ಹೀಗಾಗಿ ಮೊಟ್ಟೆಗಳನ್ನು ಮಾರಾಟ ಮಾಡುವ ಮೊದಲು ಶುಚಿಗೊಳಿಸಲಾಗುತ್ತದೆ. ಏಕೆಂದರೆ ಬ್ಯಾಕ್ಟೀರಿಯಾದ ಕುರುಹುಗಳು ಮೊಟ್ಟೆಯ ಚಿಪ್ಪುಗಳ ಮೇಲೆ ಉಳಿದಿದ್ದರೆ ಇದು ಸೋಂಕುಗಳಿಗೆ ಕಾರಣವಾಗುತ್ತದೆ.. ಅದಕ್ಕಾಗಿಯೇ ಮೊಟ್ಟೆಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯ ನಂತರ ಅವುಗಳನ್ನು ಶೈತ್ಯೀಕರಣಗೊಳಿಸಲಾಗುತ್ತದೆ.
ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿಡಬೇಕೆ ಅಥವಾ ಬೇಡವೇ ?
ಕೆಲವು ದೇಶಗಳಲ್ಲಿ ಮೊಟ್ಟೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ, ಶೈತ್ಯೀಕರಣಗೊಳಿಸಲಾಗುತ್ತದೆ ಮತ್ತು ನಂತರ ರವಾನಿಸಲಾಗುತ್ತದೆ. ತಾಜಾತನವನ್ನು ಉಳಿಸಿಕೊಳ್ಳಲು ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಅತ್ಯಗತ್ಯ. ರೆಫ್ರಿಜರೇಟರ್‌ನ ಹೊರಗೆ ರೆಫ್ರಿಜರೇಟೆಡ್ ಮೊಟ್ಟೆಗಳನ್ನು ದೀರ್ಘಕಾಲ ಇಡುವುದರಿಂದ ಬ್ಯಾಕ್ಟೀರಿಯಾದ ಮಾಲಿನ್ಯದ ಸಾಧ್ಯತೆಗಳು ಹೆಚ್ಚಾಗಬಹುದು. ಆದರೆ ಸ್ಯಾನಿಟೈಸೇಶನ್ ಪ್ರಕ್ರಿಯೆಯ ನಂತರ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಹಾಕದಿದ್ದರೆ, ನೀವು ಅವುಗಳನ್ನು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು.