Kids Food: ಮಕ್ಕಳಿಗೆ ಪ್ರೋಟೀನ್ ಪೌಡರ್ ಕೊಡೋದು ಒಳ್ಳೇದಾ ?

By Suvarna NewsFirst Published Mar 3, 2022, 1:08 PM IST
Highlights

ಮಕ್ಕಳಿಗೆ ಆಹಾರ (Food) ನೀಡುವುದು ಅಂದ್ರೆ ಪೋಷಕರಿಗೆ ಅತ್ಯಂತ ದೊಡ್ಡ ಸವಾಲಿನ ಕೆಲಸ. ಮಕ್ಕಳು (Children) ಯಾವ ರೀತಿಯಲ್ಲಿ ಅಡುಗೆ ಮಾಡಿ ಬಾಯಿಗಿಟ್ಟರೂ ತುಪುಕ್ ಎಂದು ಉಗುಳಿಬಿಡುತ್ತಾರೆ. ಹೀಗಿದ್ದಾಗ ಪೋಷಕರು (Parents) ಮಕ್ಕಳಿಗೆ ಪೋಷಕಾಂಶದ ಕೊರತೆಯಾಗಬಾರದು ಅನ್ನೋ ಕಾರಣಕ್ಕೆ ಪ್ರೋಟೀನ್ ಪೌಡರ್ (Protein Powder) ನೀಡುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೇದಾ ?

ಪುಟ್ಟ ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ (Health)ಕ್ಕೆ ಬೇಕಾದ ಪೋಷಕಾಂಶಗಳು ಲಭಿಸಿದಾಗಲಷ್ಟೇ ಆರೋಗ್ಯವಂತರಾಗಿ ಬೆಳೆಯುತ್ತಾರೆ. ದೈನಂದಿನ ಆಹಾರ (Food)ಕ್ರಮಕ್ಕೆ ಬಂದಾಗ ಮಕ್ಕಳ ಹೆಚ್ಚಾಗಿ ಪೌಷ್ಟಿಕಾಂಶ ಇರುವ ಆಹಾರದ ಬದಲು ಹೆಚ್ಚು ರುಚಿಯಿರುವ ಆಹಾರವನ್ನು ಆರಿಸಿಕೊಳ್ಳುತ್ತಾರೆ.ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇತ್ತೀಚಿಗೆ ಪೋಷಕರು ಈ ರುಚಿ ಮತ್ತು ಪೋಷಣೆಯ ಅಂತರವನ್ನು ತಪ್ಪಿಸಲು ಮಕ್ಕಳ ಆಹಾರದಲ್ಲಿ ಪೂರಕಗಳನ್ನು ಸೇರಿಸಲು ಮುಂದಾಗುತ್ತಾರೆ. ಅತ್ಯಂತ ಸಾಮಾನ್ಯವಾದ ಪೂರಕ ಆಹಾರವೆಂದರೆ ಪ್ರೋಟೀನ್ ಪುಡಿ (Protein Powder). ಆದರೆ, ಈ ಪ್ಯಾಕೇಜ್ಡ್ ಪ್ರೊಟೀನ್ ಪೌಡರ್ ಮಕ್ಕಳಿಗೆ ಕೆಟ್ಟದ್ದು ಎಂದು ನಿಮಗೆ ತಿಳಿದಿದೆಯೇ ?

ಪ್ಯಾಕೇಜ್ಡ್ ಪ್ರೊಟೀನ್ ಪೌಡರ್ ಮಕ್ಕಳಿಗೆ ಒಳ್ಳೆಯದಲ್ಲ
ಮಾರುಕಟ್ಟೆಯಲ್ಲಿ ಖರೀದಿಸಿದ ಪ್ರೋಟೀನ್ ಪುಡಿಗಳು ಕೃತಕ ಸುವಾಸನೆ ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ. ಹೀಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ಒಳ್ಳೆಯದಲ್ಲ. ಸಂಶೋಧಕರ ಪ್ರಕಾರ ಪ್ಯಾಕೇಜ್ ಮಾಡಲಾದ ಪ್ರೊಟೀನ್ ಪೌಡರ್ ಮಕ್ಕಳ ತೂಕ, ಎತ್ತರ ಅಥವಾ ಪೌಷ್ಟಿಕಾಂಶದ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸುವುದಿಲ್ಲ, ಬದಲಿಗೆ ಅವು ಸಂರಕ್ಷಕಗಳ ಅತಿಯಾದ ಬಳಕೆಯಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತವೆ. ಮಕ್ಕಳ ಪ್ರೋಟೀನ್ ಅಗತ್ಯತೆಗಳು ಮತ್ತು ಉತ್ತಮ ನೈಸರ್ಗಿಕ ಮೂಲಗಳು ಯಾವುವು ಎಂಬುದನ್ನು ತಿಳಿಯೋಣ.

Kids Food: ಮಕ್ಳು ಏನ್ ಕೊಟ್ರೂ ತಿನ್ತಾನೆ ಇಲ್ವಾ ? ಈ ಟ್ರಿಕ್ಸ್ ಯೂಸ್ ಮಾಡಿ

ಮಕ್ಕಳಿಗೆ ಎಷ್ಟು ಪ್ರೋಟೀನ್ ಬೇಕು ?
ತಜ್ಞರ ಪ್ರಕಾರ, ಮಗುವಿಗೆ ದಿನವೊಂದಕ್ಕೆ ಬೇಕಾದ ಪ್ರೋಟೀನ್‌ನ ಅಗತ್ಯವು ಅವರ ವಯಸ್ಸು, ಚಟುವಟಿಕೆಯ ಮಟ್ಟ ಮತ್ತು ಲಿಂಗವನ್ನು ಅವಲಂಬಿಸಿರುತ್ತದೆ. 1ರಿಂದ 3 ವರ್ಷಗಳ ವರೆಗೆ ದಿನಕ್ಕೆ 13 ಗ್ರಾಂಗಳಷ್ಟು ಮೂಲಭೂತ ಪ್ರೋಟೀನ್‌ನ ಅವಶ್ಯಕತೆಯಿರುತ್ತದೆ. 4-8 ವರ್ಷಗಳ ವರೆಗೆ 19 ಗ್ರಾಂಗಳು, 9-13 ವರ್ಷಗಳ ವರೆಗೆ 34 ಗ್ರಾಂಗಳು, 14-18 ವರ್ಷಗಳು (ಹೆಣ್ಣು) 46 ಗ್ರಾಂಗಳು ಮತ್ತು 14- 18 ವರ್ಷಗಳಲ್ಲಿ (ಗಂಡು) 52 ಗ್ರಾಂ ಪ್ರೋಟೀನ್‌ನ ಅಗತ್ಯವಿರುತ್ತದೆ.

ಪ್ರೋಟೀನ್ ಪುಡಿಯಲ್ಲಿ ಏನು ನೋಡಬೇಕು ?
ನಿಯಮಿತ ಊಟದ ಮೂಲಕ ಮಕ್ಕಳು ಸಾಕಷ್ಟು ಪ್ರೋಟೀನ್ ಪಡೆಯದಿದ್ದಾಗ ಪ್ರೋಟೀನ್ ಪೌಡರ್ ಅಗತ್ಯವೆಂದು ತಜ್ಞರು ಸೂಚಿಸುತ್ತಾರೆ. ಮಕ್ಕಳು ಆಹಾರವನ್ನು ಸರಿಯಾಗಿ ಸೇವಿಸದ ಕಾರಣ ಪ್ರೋಟೀನ್ ಪುಡಿಯನ್ನು ಸೇವಿಸುವುದು ಅನಿವಾರ್ಯವಾಗುತ್ತದೆ. ಪ್ರೋಟೀನ್ ಪೌಡರ್ ಬೆಳೆಯುತ್ತಿರುವ ಮಕ್ಕಳಿಗೆ ಅಪಾಯಕಾರಿಯಾದ ಹೆಚ್ಚುವರಿ ಪದಾರ್ಥಗಳನ್ನು ಒಳಗೊಂಡಿರಬಹುದು. ಹೀಗಾಗಿ ಖರೀದಿಸುವ ಮುನ್ನ ಪ್ರೋಟೀನ್ ಪೌಡರ್ ಯಾವುದೇ ಹೆಚ್ಚುವರಿ ಸಕ್ಕರೆಗಳನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರೋಟೀನ್ ಪೌಡರ್ ಕೊಡುವ ಮುನ್ನ ಆಹಾರ ತಜ್ಞರು ಅಥವಾ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ

ಪ್ಯಾಕೇಜ್ಡ್  ಪ್ರೋಟೀನ್ ಪೌಡರ್‌ನಿಂದ ಅಪಾಯಗಳಿವೆಯೇ ?
2013ರ ಅಧ್ಯಯನದ ಪ್ರಕಾರ, ಪ್ಯಾಕೇಜ್ ಮಾಡಿದ ಪ್ರೋಟೀನ್ ಪೌಡರ್ ನ ನಿಯಮಿತ ಸೇವನೆಯು ಮೂತ್ರಪಿಂಡದ ಕಲ್ಲುಗಳು, ಯಕೃತ್ತಿನ ಅಪಸಾಮಾನ್ಯ ಕ್ರಿಯೆ, ಪರಿಧಮನಿಯ ಕಾಯಿಲೆ ಮತ್ತು ಮೂಳೆ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ಪ್ರೋಟೀನ್‌ನ ಇತರ ಮೂಲಗಳು
ಪ್ರೋಟೀನ್‌ನ ಇತರ ಮೂಲಗಳೆಂದರೆ ತಾಜಾ ಮಾಂಸ, ಎಣ್ಣೆಯುಕ್ತ ಮೀನು, ಮೊಟ್ಟೆಗಳು, ತಾಜಾ ಡೈರಿ ಉತ್ಪನ್ನಗಳು, ಕಾಳುಗಳು, ನಟ್ ಬಟರ್, ಮತ್ತು ಬ್ರೊಕೊಲಿಯಂತಹ ತರಕಾರಿಗಳಾಗಿವೆ.

ಮನೆಯಲ್ಲಿ ಪ್ರೋಟೀನ್ ಪುಡಿಯನ್ನು ಹೇಗೆ ತಯಾರಿಸುವುದು ?
ಮನೆಯಲ್ಲೇ ಸುಲಭವಾಗಿ ಪ್ರೋಟೀನ್ ಪೌಡರ್‌ನ್ನು ತಯಾರಿಸಬಹುದು. ಇದನ್ನು ತಯಾರಿಸಲು ಬ್ಲೆಂಡರ್‌ನಲ್ಲಿ 3 ಕಪ್ ಹಾಲಿನ ಪುಡಿ, 1 ಕಪ್ ಓಟ್ಸ್, 1 ಕಪ್ ಬಾದಾಮಿ.  ಬೆಲ್ಲ ಅಥವಾ ಸಕ್ಕರೆ ಅಥವಾ ಸಿಹಿಕಾರಕವನ್ನು ಸೇರಿಸಿ. ಇವೆಲ್ಲವನ್ನೂ ಒಟ್ಟಿಗೆ ಗ್ರೈಂಡ್ ಮಾಡಿ ಮತ್ತು ಪುಡಿಯನ್ನು ಸ್ವಚ್ಛವಾದ ಡಬ್ಬದಲ್ಲಿ ಸಂಗ್ರಹಿಸಿ. ಇದು ಹೆಚ್ಚು ಕಾಲ ಬಾಳ್ವಿಕೆ ಬರದಲು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಹುದು. ತಜ್ಞರ ಪ್ರಕಾರ, ಈ ಪ್ರೋಟೀನ್ ಪುಡಿಯ ½ ಸ್ಕೂಪ್ ಸುಮಾರು 180 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್‌ನ್ನು ಹೊಂದಿರುತ್ತದೆ.

click me!