ಅದೆಷ್ಟೇ ಹೊತ್ತಾದ್ರೂ ಸರಿ, ಗಲ್ಲಿಯಲ್ಲಿ ಮನೆಯಿದ್ರೂ ಸರಿ. ಡೆಲಿವರಿ ಬಾಯ್ (Delivery Boy) ಸರಿಯಾದ ಸಮಯಕ್ಕೆ ಆಹಾರ (Food)ವನ್ನು ತಂದು ಡೋರ್ ಮುಂದೆಯಿರುತ್ತಾರೆ. ಆದ್ರೆ ವೆರೈಟಿ (Variety) ಫುಡ್ ಡೆಲಿವರಿ ಮಾಡುವವರು ಊಟ ಮಾಡ್ತಾರಾ, ಇಲ್ವಾ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಆದ್ರೆ ಇಲ್ಲೊಬ್ಬರು ಅಪರಿಚಿತ ಫುಡ್ ಡೆಲಿವರಿ ಬಾಯ್ ಬಗ್ಗೆ ಕಾಳಜಿ ವಹಿಸಿದ್ದಾರೆ. ಅವ್ರೇನು ಮಾಡಿದ್ರು ?
ಕಾಲ ಬದಲಾಗುತ್ತಿರುವ ಹಾಗೆಯೇ ಮನುಷ್ಯನ ಸ್ವಭಾವಗಳೂ ಬದಲಾಗುತ್ತಿವೆ. ಒತ್ತಡದ ಬದುಕಿನಲ್ಲಿ ಮನುಷ್ಯ ಸ್ವಾರ್ಥಿಯಾಗುತ್ತಾ ಹೋಗುತ್ತಿದ್ದಾನೆ. ನಾನು, ನನ್ನದು, ನನಗಾಗಿ ಎಂಬ ಮೋಹ ಹೆಚ್ಚಾಗುತ್ತಿದೆ. ಮತ್ತೊಬ್ಬರ ದುಃಖ, ನೋವು, ಅಳು ನಮ್ಮಲ್ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ದಯೆ, ಕರುಣೆ, ಅನುಕಂಪವೇ ಇಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಮತ್ತೊಬ್ಬನ ಕಷ್ಟ ಕಂಡು ಮರುಗುವವರಿಗಿಂತ ನಗುವವರೇ ಹೆಚ್ಚಾಗಿ ಹೋಗಿದ್ದಾರೆ. ಹೀಗಿದ್ದೂ ಇನ್ನೂ ಮನುಕುಲದಲ್ಲಿ ಮಾನವೀಯತೆ ಉಳಿದುಕೊಂಡಿದೆ ಎಂಬುದನ್ನು ಸಾಬೀತುಪಡಿಸುವ ಕೆಲವೊಂದು ಘಟನೆಗಳು ನಡೆಯುತ್ತವೆ. ಇದು ಅಂಥಾ ಘಟನೆಯಲ್ಲೊಂದು.
ಆನ್‌ಲೈನ್ ಫುಡ್ ಆರ್ಡರ್ (Order) ಪಡೆದು ಡೆಲಿವರಿ ಮಾಡುವ ಹುಡುಗರು ಪ್ರತಿ ಗಲ್ಲಿಗೂ ಬರುತ್ತಾರೆ. ಅಡ್ರೆಸ್ ತಪ್ಪಾದಾಗಲೂ ಕಾಲ್ ಮಾಡಿ ವಿಚಾರಿಸಿ ಸರಿಯಾದ ಸ್ಥಳಕ್ಕೆ ಬಂದು ಫುಡ್ ಕೊಟ್ಟು ಹೋಗುತ್ತಾರೆ. ಬಿರಿಯಾನಿ, ಫ್ರೈಡ್ ರೈಸ್, ಬಿಗ್ ಥಾಲಿ, ಡೆಸರ್ಟ್, ಪಿಜ್ಜಾ ಎಂದು ವೆರೈಟಿ ವೆರೈಟಿ ಆಹಾರ ಡೆಲಿವರಿ ಮಾಡಿ ಹೋಗುವವರಿಗೆ ಸರಿಯಾಗಿ ಊಟ ಮಾಡಲು ಸಹ ಸಮಯವಿರುವುದಿಲ್ಲ. ಸ್ವಾದಿಷ್ಟಕರ ಭೋಜನವನ್ನು ಸವಿಯೋದಂತೂ ದೂರದ ಮಾತು. ಹೀಗಿದ್ದಾರ ವಾಷಿಂಗ್ಟನ್ ಮೂಲದ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಫುಡ್‌ನ್ನು ಡೆಲಿವರಿ ಬಾಯ್ ((Delivery Boy))ಗೆ ಹಿಂದಿರುಗಿಸಿದ್ದಾರೆ. ಆತನ ಪ್ರತಿಕ್ರಿಯೆ ಇಂಟರ್‌ನೆಟ್‌ನ್ನು ನಿಬ್ಬೆರಗೊಳಿಸಿದೆ. ಅನಿರೀಕ್ಷಿತವಾಗಿ ಆಹಾರ ಸಿಕ್ಕಿದ್ದಕ್ಕೆ ಡೆಲಿವರಿ ಎಕ್ಸಿಕ್ಯೂಟಿವ್ ಪ್ರತಿಕ್ರಿಯೆ ಹೇಗಿತ್ತು ನೋಡೋಣ.
Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ
ವಾಷಿಂಗ್ಟನ್ ಮೂಲದ ಶಾ ಡೇವಿಸ್ ಎಂಬ ವ್ಯಕ್ತಿ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಆಹಾರಕ್ಕಾಗಿ ಆರ್ಡರ್ ಮಾಡಿದ್ದಾರೆ. ಆದರೆ ಆರ್ಡರ್ ಡೆಲಿವರಿಗೆ ತಪ್ಪು ವಿಳಾಸ ನಮೂದಾಗಿತ್ತು. ಡೆಲಿವರಿ ಬಾಯ್ ಅದೆಷ್ಟು ಹುಡುಕಿದರು ಸಹ ವಿಳಾಸ ಪತ್ತೆ ಹಚ್ಚಲು ಆಗಿರಲ್ಲಿಲ್ಲ. ಹೀಗಾಗಿ ಶಾ ಡೇವಿಸ್, ಡೆಲಿವರಿ ಬಾಯ್ ಆಹಾರವನ್ನು ಇಟ್ಟುಕೊಳ್ಳುವಂತೆ ಕೇಳಿಕೊಂಡರು. ಚಾಲಕ ಇದಕ್ಕೆ ಪ್ರತಿಕ್ರಿಯಿಸಿದ ರೀತಿ ಡೇವಿಸ್ ಮತ್ತು ಇಂಟರ್‌ನೆಟ್ ಅನ್ನು ಅತ್ಯಂತ ಭಾವನಾತ್ಮಕವಾಗಿಸಿದೆ. ಡೇವಿಸ್ ತಮ್ಮ ಫೇಸ್‌ಬುಕ್ (Facebook) ಪ್ರೊಫೈಲ್‌ನಲ್ಲಿ ಸಂಭಾಷಣೆಯ ಸ್ಕ್ರೀನ್‌ಗ್ರಾಬ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಶಾ ಡೇವಿಸ್ ಹಂಚಿಕೊಂಡಿರುವ ಪೋಸ್ಟ್ 110 ಸಾವಿರ ಪ್ರತಿಕ್ರಿಯೆಗಳು, 2200 ಕಾಮೆಂಟ್ (Comment)ಗಳು ಮತ್ತು 82 ಶೇರ್‌ಗಳನ್ನು ಪಡೆದುಕೊಂಡಿದೆ.. ಡೇವಿಸ್ ಶಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಹಾರದೊಂದಿಗೆ ಸ್ಥಳದಲ್ಲಿದ್ದೇನೆ ಎಂದು ಸಂದೇಶ ಕಳುಹಿಸಿದ್ದರು. ಇದಕ್ಕೆ ಡೇವಿಸ್ ಶಾ ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ ಮತ್ತು ಊಟವನ್ನು ಆನಂದಿಸಿ. ನಾನು ನನ್ನ ವಿಳಾಸವನ್ನು ಬದಲಾಯಿಸಲು ಮರೆತಿದ್ದೇನೆ ಮತ್ತು ನಾನು ಪ್ರಸ್ತುತ ಮೇರಿಲ್ಯಾಂಡ್‌ನಲ್ಲಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
Health Tips: ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುವ ಅದ್ಭುತ ಆಹಾರಗಳು
ಇದಕ್ಕೆ ಡೆಲಿವರಿ ಎಕ್ಸಿಕ್ಯೂಟಿವ್ 'ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ನನ್ನ ಸಹೋದರನ ಜನ್ಮದಿನವಾಗಿದೆ. ಆತ ನೀವು ಡೆಲಿವರಿ ಆರ್ಡರ್ ಮಾಡಿದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದಾನೆ. ನಿಮ್ಮಿಂದಾಗಿ ನಾನು ಇಂದು ಅವನೊಂದಿಗೆ ಊಟ ಮಾಡುತ್ತಿದ್ದೇನೆ. ನಿಮ್ಮಿಂದಾಗಿ ಇದು ಸಾಧ್ಯವಾಯಿತು. ಹೀಗಾಗಿ ನಿಮ್ಮ ಕಾರ್ಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ' ಎಂದು ಅವರು ಸೇರಿಸಿದರು.
ಡೆಲಿವರಿ ಏಜೆಂಟ್‌ನ ಪ್ರತಿಕ್ರಿಯೆಗೆ ಇಂಟರ್‌ನೆಟ್ ಬಳಕೆದಾರರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೊಬ್ಬರು ನಾನು ಅಳುತ್ತಿದ್ದೇನೆ ಎಂದರೆ, ಇನ್ನು ಕೆಲವರು, ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ನಿಮ್ಮಂತಹ ಅದ್ಭುತ ಜನರು ಮಾನವೀಯತೆ (Humanity)ಯ ಮೇಲೆ ನನ್ನ ನಂಬಿಕೆಯನ್ನು ಮರುಸ್ಥಾಪಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಅದೇನೆ ಇರಲಿ, ಮನುಷ್ಯನ ಇಂಥಾ ನಡವಳಿಕೆಗಳು ಮಾನವೀಯತೆಯ ಬಗ್ಗೆ ನಂಬಿಕೆ ಮೂಡುವಂತೆ ಮಾಡುತ್ತಿರುವುದಂತೂ ನಿಜ.