ಭಾರತೀಯರು ಸ್ವಭಾತಹಃ ಆಹಾರ ಪ್ರಿಯರು. ತಿನ್ನೋ ಆಹಾರ ರುಚಿಕರ ಆಗಿರೋದು ಮಾತ್ರವಲ್ಲ ಪರ್ಫೆಕ್ಟ್ ಆಗಿರಬೇಕೆಂದು ಸಹ ಬಯಸುತ್ತಾರೆ. ಹೊಟೇಲ್‌ಗಳಲ್ಲಿ ಆಹಾರ ಸರ್ವ್ ಮಾಡಿದ್ದು ಸರಿಯಾಗಿಲ್ಲಾಂದ್ರೆ ಕಿರಿಕ್ ಸಹ ಮಾಡಿಕೊಳ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಮಸಾಲೆದೋಸೆ ವಿಚಾರಕ್ಕೆ ಜಗಳ ಮಾಡ್ಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಸಾಲೆ ದೋಸೆ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಆಲೂಪಲ್ಯ ಸ್ಟಫಿಂಗ್ ಇರೋ ಬಿಸಿಬಿಸಿ ಮಸಾಲೆ ದೋಸೆಯನ್ನು ಚಟ್ನಿ, ಸಾಂಬಾರಿನಲ್ಲಿ ಅದ್ದಿ ಬಾಯಿಗಿಟ್ರೆ ಸ್ವರ್ಗಕ್ಕೆ ಮೂರೇ ಗೇಣು. ಚಟ್ನಿ ಮತ್ತು ಸಾಂಬಾರೇ ಮಸಾಲೆ ದೋಸೆಯ ರುಚಿಯನ್ನು ಹೆಚ್ಚಿಸುತ್ತೆ. ಹೀಗಾಗಿಯೇ ಬಹುತೇಕರು ಬೆಳಗ್ಗೆ, ಸಂಜೆ ಹೊತ್ತು ರುಚಿಕರವಾದ ಮಸಾಲೆದೋಸೆಯನ್ನು ತಿನ್ನಲು ಇಷ್ಟಪಡುತ್ತಾರೆ. ಆದ್ರೆ ಟೇಸ್ಟೀ ಮಸಾಲೆ ದೋಸೆ ಜೊತೆ ಸಾಂಬಾರೇ ಕೊಡದಿದ್ರೆ ಹೇಗಿರಬೇಡ. ಇಲ್ಲೊಬ್ಬ ವ್ಯಕ್ತಿಗೆ ಹಾಗೆಯೇ ಆಗಿದೆ. ಈ ವಿಚಾರವಾಗಿ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ರೆಸ್ಟೋರೆಂಟ್‌ಗೆ ದಂಡ ಸಹ ವಿಧಿಸಿದೆ.
ಗ್ರಾಹಕರೊಬ್ಬರು (Customer) ರೆಸ್ಟೋರೆಂಟ್ ಒಂದರಿಂದ ರಾತ್ರಿ ಹೊತ್ತು ಮನೆಗೆ ಮಸಾಲ್ ದೋಸೆ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್ ತೆರೆದ ಮೇಲೆ ದೋಸೆಯೊಂದಿಗೆ ಬರೀ ಚಟ್ನಿ ಮಾತ್ರ ಇರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ (Court) ಮೊರೆ ಹೋಗಿದ್ದಾರೆ. ರೆಸ್ಟೋರೆಂಟ್ ಸಿಬ್ಬಂದಿಗಳ ಬೇಜಾವಬ್ದಾರಿ ವರ್ತನೆಗೆ 3,500 ರೂ. ದಂಡ (Fine) ವಿಧಿಸುವ ಕುರಿತು ಕೋರ್ಟ್ ಮೆಟ್ಟಿಲೇರಿದ್ದಾರೆ.
2 ಮಸಾಲೆ ದೋಸೆ, 2 ಕಾಫಿ ಬೆಲೆ ಎರಡೇ ರೂಪಾಯಿ! 1971ರ ರೆಸ್ಟೋರೆಂಟ್ ಬಿಲ್ ವೈರಲ್
ವರ್ಷದ ಹಿಂದೆ ನಡೆದಿರುವ ಘಟನೆ:
ಬಾಂಗ್ಲಾ ಘಾಟ್‌ನ ನಿವಾಸಿ ಮನೀಶ್ ಪಾಠಕ್ ಆಗಸ್ಟ್ 15,2022ರಂದು ಅವರ ಬರ್ತ್‌ಡೇ ಆಗಿದ್ದ ಕಾರಣ ರಾತ್ರಿಯ ಊಟ ಹೊರಗಡೆಯಿಂದ ತರಲು ನಿರ್ಧರಿಸಿದ್ದರು. ಗೋಲಾ ಮಾರ್ಕೆಟ್‌ನಲ್ಲಿರುವ ರೆಸ್ಟೋರೆಂಟ್‌ಗೆ ಹೋಗಿ ಸ್ಪೆಷಲ್ ಮಸಾಲಾ ದೋಸೆಗೆ ಆರ್ಡರ್ ಮಾಡಿದ್ದರು. ಮಸಾಲೆ ದೋಸೆಗೆ 140 ರೂಪಾಯಿ ಕೊಟ್ಟು ಮನೆಗೆ ವಾಪಸ್ ಪಾರ್ಸೆಲ್ ತೆಗೆದುಕೊಂಡು ಬಂದಿದ್ದರು. ಆದರೆ ಮನೆಗೆ ಬಂದು ಪಾರ್ಸೆಲ್ ತೆರೆದಾಗ ದೋಸೆ ಜೊತೆ ಸಾಂಬಾರ್ ಇರಲಿಲ್ಲ. ದೋಸೆ ಮತ್ತು ಚಟ್ನಿ ಮಾತ್ರ ಇತ್ತು. ರಾತ್ರಿಯ ಸಮಯವಾದ್ದರಿಂದ (Night time) ಮನೀಶ್ ಮರುದಿನ ಬೆಳಗ್ಗೆ ರೆಸ್ಟೋರೆಂಟ್‌ಗೆ ಹೋಗಿ ಮಾಲೀಕರಿಗೆ ದೂರು ನೀಡಿದ್ದಾರೆ.
ಅದಕ್ಕೆ ಹೊಟೇಲ್ ಮಾಲೀಕರು 140 ರೂ.ಗೆ ಇಡೀ ರೆಸ್ಟೋರೆಂಟ್ ಅನ್ನು ಖರೀದಿಸುತ್ತೀರಾ ಎಂದು ಮನೀಶ್ ಅವರನ್ನು ವ್ಯಂಗ್ಯವಾಗಿ ಕೇಳಿದ್ದಾರೆ. ಇದರಿಂದ ಕೋಪಗೊಂಡ ಮನೀಶ್ ರೆಸ್ಟೋರೆಂಟ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆದರೆ, ನೋಟಿಸ್‌ಗೆ ರೆಸ್ಟೋರೆಂಟ್ ಮಾಲೀಕರು ಯಾವುದೇ ಪ್ರತಿಕ್ರಿಯೆ (Response) ನೀಡಿಲ್ಲ. ಇದಾದ ಬಳಿಕ ವಕೀಲರು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. 11 ತಿಂಗಳ ವಿಚಾರಣೆಯ ನಂತರ, ನ್ಯಾಯಾಲಯವು ರೆಸ್ಟೋರೆಂಟ್ ಅನ್ನು ತಪ್ಪಿತಸ್ಥರೆಂದು ಪರಿಗಣಿಸಿತು ಮತ್ತು ಗ್ರಾಹಕರಿಗೆ ದಂಡವನ್ನು ಪಾವತಿಸಲು ಆದೇಶಿಸಿತು.
ದೋಸೆ ಟೇಸ್ಟಿ ಮಾತ್ರ ಅಲ್ಲ, ಸಿಕ್ಕಾಪಟ್ಟೆ ಹೆಲ್ತಿ ಕೂಡಾ: ಪ್ರಯೋಜನ ಏನೇನು ತಿಳ್ಕೊಳ್ಳಿ
,3500 ರೂ ದಂಡ ಪಾವತಿಸುವಂತೆ ರೆಸ್ಟೋರೆಂಟ್ ಮಾಲೀಕರಿಗೆ ಕೋರ್ಟ್ ಆದೇಶ
ಇದು ಗ್ರಾಹಕರ ನಂಬಿಕೆಗೆ ವಂಚನೆ ಪ್ರಕರಣವಾಗಿರುವುದರಿಂದ ಗ್ರಾಹಕ ಆಯೋಗದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ ಎಂದು ಮನೀಶ್ ಹೇಳಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಬಿಹಾರದ ಸ್ಥಳೀಯ ನ್ಯಾಯಾಲಯವು ದೋಸೆಯೊಂದಿಗೆ ಸಾಂಬಾರ್ ಅನ್ನು ಬಡಿಸದಿದ್ದಕ್ಕಾಗಿ 3,500 ರೂ ದಂಡವನ್ನು ಪಾವತಿಸುವಂತೆ ರೆಸ್ಟೋರೆಂಟ್ ಮಾಲೀಕರಿಗೆ ಆದೇಶಿಸಿತ್ತು. 45 ದಿನಗಳಲ್ಲಿ ಪಾವತಿಯನ್ನು ಪೂರ್ಣಗೊಳಿಸಲು ರೆಸ್ಟೋರೆಂಟ್ ಮಾಲೀಕರಿಗೆ ನ್ಯಾಯಾಲಯ ಸೂಚಿಸಿತ್ತು. ಇಲ್ಲದಿದ್ದರೆ ಪಾವತಿ ವಿಳಂಬವಾದರೆ (Late) ಶೇಕಡಾ 8 ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ ಎಂದು ಹೇಳಿತ್ತು. ಗ್ರಾಹಕನಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ತೊಂದರೆ ಉಂಟು ಮಾಡಿದ್ದಕ್ಕಾಗಿ ರೆಸ್ಟೋರೆಂಟ್‌ಗೆ 2000 ರೂ. ದಂಡ ಮತ್ತು ವ್ಯಾಜ್ಯ ವೆಚ್ಚವಾಗಿ 1,500 ರೂ. ಪ್ರತ್ಯೇಕ ದಂಡವನ್ನು ಆಯೋಗ ವಿಧಿಸಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಖುಷಿ ವ್ಯಕ್ತಪಡಿಸಿದ ಪಾಠಕ್, ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ನ್ಯಾಯಾಲಯದ ತೀರ್ಪಿನಿಂದ ಖುಷಿಯಾಗಿರುವುದಾಗಿ ತಿಳಿಸಿದರು.