ನಾನಾ ಹೆಸರಿನಿಂದ ಕರೆಯಲ್ಪಡು, ಬಹುತೇಕರ ಫೆವರೆಟ್ ಗೋಲ್ಗಪ್ಪಾವನ್ನು ಜನರು ಚಿತ್ರವಿಚಿತ್ರವಾಗಿ ತಿಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೊಂದು ನೋಡಲು ಅಸಹ್ಯವೆನಿಸಿದ್ರೆ ಮತ್ತೆ ಕೆಲವರು ಇಂಟರೆಸ್ಟಿಂಗ್ ಆಗಿದೆ.
ಸಂಜೆಯಾಗ್ತಿದ್ದಂತೆ ಒಂದೇ ಸಮನೆ ಸುರಿಯುವ ಮಳೆ.. ಮೋಡ, ತಂಪಾದ ವಾತಾವರಣ ನಾಲಿಗೆ ರುಚಿಯನ್ನು ಕೆರಳಿಸುತ್ತೆ. ರುಚಿಯಾಗಿರುವ, ಬಿಸಿ ಬಿಸಿ, ಖಾರದ ಆಹಾರವನ್ನು ನಾಲಿಗೆ ಬಯಸುತ್ತೆ. ಮನೆಯಲ್ಲೇ ಮಾಡಿದ ಉಪ್ಪಿಟ್ಟು, ಇಡ್ಲಿ, ದೋಸೆ ಬಯಸದ ಮನಸ್ಸು ಸ್ಟ್ರೀಟ್ ಫುಡ್ ಕಡೆ ಎಳೆಯುತ್ತೆ. ಅದ್ರಲ್ಲೂ ಪಾನಿಪುರಿ ವಾಸನೆ ಕೇಳಿದ್ರೆ ಸಾಕು ಒಂದು ಬೈಟ್ ತಿನ್ನೋಣ ಎನ್ನಿಸದೆ ಇರದು. ಮಳೆಗಾಲದಲ್ಲಿ ಪಾನಿಪುರಿ ಅಂಗಡಿ ಮುಂದೆ ಜನ ಹೆಚ್ಚಿನ ಸಂಖ್ಯೆಯಲ್ಲಿರ್ತಾರೆ. ಪಾನಿಪುರಿ ಪ್ರಿಯರಿಗೆ ಪಾನಿಪುರಿ ತಿನ್ನದೆ ಇರೋದು ಕಷ್ಟ. ಬೀದಿ ಬದಿಯಲ್ಲಿ ಸಿಗೋದಾಗ್ಲಿ ಇಲ್ಲ ಮನೆಯಲ್ಲೇ ಮಾಡಿರೋದಾಗ್ಲಿ ವಾರಕ್ಕೆ ಒಂದೋ ಎರಡು ಬಾರಿ ಪಾನಿಪುರಿ ಹೊಟ್ಟೆ ಸೇರ್ಬೇಕು. ಜನರ ಪಾನಿಪುರಿ ಪ್ರೀತಿ ಎಲ್ಲರಿಗೂ ತಿಳಿದಿದೆ. ಇದೇ ಕಾರಣಕ್ಕೆ ವೆರೈಟಿ ಪಾನಿಪುರಿಗಳು ಮಾರುಕಟ್ಟೆಗೆ ಲಗ್ಗೆ ಇಡ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಫುಡ್ ಎಕ್ಸ್ಪಿರಿಮೆಂಟ್ ಜಾಸ್ತಿಯಾಗಿದೆ. ಅದ್ರಲ್ಲಿ ಕೆಲ ವಿಡಿಯೋಗಳನ್ನು ನೋಡಿದ್ರೆ ವಿಚಿತ್ರವೆನ್ನಿಸುತ್ವೆ. ಗೊಲ್ಗಪ್ಪವನ್ನು ಹೀಗೂ ತಿನ್ಬಹುದಾ ಎಂಬ ಪ್ರಶ್ನೆ ಮೂಡುತ್ತೆ. ನಾವಿಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲ ಗೋಲ್ಗಪ್ಪಾ ಬಗ್ಗೆ ನಿಮಗೆ ತಿಳಿಸ್ತೇವೆ.
ಜುಲೈ 12 ಬುಧವಾರದಂದು ಗೂಗಲ್ (Google), ಡೂಡಲ್ ಮೂಲಕ ಪಾನಿಪುರಿ (Panipuri) ದಿನವನ್ನು ಆಚರಿಸುತ್ತಿದೆ. ಬ್ರೌಸರ್‌ನಲ್ಲಿ ಪ್ಲೇ ಮಾಡಬಹುದಾದ ಪಾನಿಪುರಿ ಗೇಮ್ ಬಿಡುಗಡೆ ಮಾಡಿದೆ.
HEALTH TIPS: ಆರೋಗ್ಯಕ್ಕೆ ಬಲು ಉಪಕಾರಿ ರಾಗಿ ಮುದ್ದೆ ರಾತ್ರಿ ಸೇವಿಸ್ಬೋದಾ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಎಲ್ಲ ಗೋಲ್ಗಪ್ಪ:
ಮಾವಿನ ಗೋಲ್ಗಪ್ಪ : ಹಣ್ಣುಗಳ ರಾಜ ಮಾವು. ಮಾವಿನ ಹಣ್ಣಿನ ಋತುವಿನಲ್ಲಿ ಜನರು ಮಾವಿನ ಹಣ್ಣನ್ನು ಹೆಂಗ್ ಹೆಂಗೋ ತಿಂದಿದ್ದಾರೆ. ಮಾವು ಪ್ರೇಮಿಗಳು ಗೊಲ್ಗಪ್ಪ ಕೂಡ ಬಿಡಲಿಲ್ಲ. ಮಾವಿನ ಹಣ್ಣಿನ ಜ್ಯೂಸ್ ತಯಾರಿಸಿ ಅದನ್ನು ಪುರಿಗೆ ಹಾಕಿ ಸೇವನೆ ಮಾಡಿದ್ದಾರೆ.
ಐಸ್ ಕ್ರೀಂ ಗೋಲ್ಗಪ್ಪ : ಹೌದು, ಬೇಸಿಗೆಯಲ್ಲಿ ಐಸ್ ಕ್ರೀಂ ತಿನ್ನೋರ ಸಂಖ್ಯೆ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಫ್ಲೇವರ್ ಐಸ್ ಕ್ರೀಂಗಳನ್ನು ನಾವು ನೋಡ್ಬಹುದು. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ ಐಸ್ ಕ್ರೀಂ ಗೋಲ್ಗಪ್ಪ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಇನ್ಸ್ಟಾಗ್ರಾಮ್ ನಲ್ಲಿ ಐಸ್ ಕ್ರೀಂ ಗೋಲ್ಗಪ್ಪ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಪುರಿಯ ಮಧ್ಯೆ ವೆನಿಲಾ ಹಾಗೂ ಚರ್ರಿ ಗೋಲ್ಗಪ್ಪವನ್ನು ಹಾಕಿ ಮಾರಾಟ ಮಾಡಲಾಗಿತ್ತು.
ಬಿಸಿ ಬಿಸಿ ಕಡಿ ಜೊತೆ ಪಾನಿಪುರಿ : ಅಹಮದಾಬಾದ್ ನ ವ್ಯಕ್ತಿಯೊಬ್ಬ ಬಿಸಿ ಬಿಸಿ ಕಡಿ ಜೊತೆ ಪಾನಿಪುರಿ ನೀಡಿದ್ದ. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜನರು ಪಾನಿಪುರಿಯನ್ನು ಈ ಸ್ಥಿತಿಯಲ್ಲಿ ನೋಡಿ ಕೋಪಗೊಂಡಿದ್ದರು.
Viral Video: ಜಿಲೇಬಿ ಜೊತೆ ಆಲೂಗಡ್ಡೆ ಪಲ್ಯ? ಜನರು ಏನ್ ತಿನ್ತಿದ್ದಾರೆ ಸ್ವಾಮಿ!?
ಚಾಕೋಲೇಟ್ ಪಾನಿಪುರಿ : ಬರೀ ಐಸ್ ಕ್ರೀಂ ಪಾನಿಪುರಿ ಮಾತ್ರವಲ್ಲ ಚಾಕೋಲೇಟ್ ಪಾನಿಪುರಿ ಕೂಡ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಪುರಿ ಮಧ್ಯೆ ಚಾಕೋಲೇಟ್ ಸಿರಪ್ ಹಾಕಿ ಮಾರಾಟ ಮಾಡಲಾಗುತ್ತದೆ.
ಫೈಯರ್ ಪಾನಿಪುರಿ : ಈ ಗೋಲ್ಗಪ್ಪದಲ್ಲಿ ಬೆಂಕಿ ಬರ್ತಿದೆ. ಹೌದು ಅಹಮದಾಬಾದ್ ನಲ್ಲಿ ಈ ಪಾನಿಪುರಿ ಮಾರಾಟ ಮಾಡಲಾಗ್ತಿದೆ.
ಗೋಲ್ಗಪ್ಪಾ ಶೇಕ್ : ಗೋಲ್ಗಪ್ಪಗೆ ಬಳಸುವ ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಶೇಕ್ ಮಾಡಿ ನೀಡಲಾಗುತ್ತೆ. ಅದ್ರ ಮೇಲೆ ಪುರಿ ಇಟ್ಟು ಸರ್ವ್ ಮಾಡಲಾಗುತ್ತೆ.
ಮೊಟ್ಟೆ ಪಾನಿಪುರಿ : ಕೆಲ ದಿನಗಳ ಹಿಂದಷ್ಟೆ ಇದು ಸುದ್ದಿ ಮಾಡಿತ್ತು. ಇದಕ್ಕೆ ಟೊಮೆಟೊ ಸಾಸ್, ಕ್ರೀಮ್, ಚೀಸ್ ಮತ್ತು ಕೆಲವು ವಿಶೇಷ ಮಸಾಲಾ ಬಳಸಲಾಗಿದೆ. ಆದ್ರೆ ಇಲ್ಲಿ ಪಾನಿ ಹಾಗೂ ಪುರಿ ಇಲ್ಲ.
ಮ್ಯಾಗಿ ಗೋಲ್ಗಪ್ಪ : ಸಾಮಾನ್ಯ ಗೋಲ್ಗಪ್ಪದಂತೆ ಇದನ್ನು ತಯಾರಿಸಿ ಮೇಲೆ ಮ್ಯಾಗಿ ಹಾಕಿ ಸರ್ವ್ ಮಾಡಲಾಗುತ್ತೆ.