ಈತನಿಗೆ ದಿನಾ ತಿನ್ನೋಕೆ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ಬೇಕು, ಬುಲೆಟ್ ಹತ್ತಿದ್ರೆ ಗಾಡೀನೆ ನಿಲ್ಲುತ್ತೆ !

By Suvarna NewsFirst Published Jun 12, 2022, 12:13 PM IST
Highlights

ಸಾಮಾನ್ಯವಾಗಿ ತಿನ್ನೋಕೆ ಎಷ್ಟು ಆಹಾರ (Food) ಬೇಕಾಗುತ್ತೆ ಹೇಳಿ. ಒಂದೆರಡು ಚಪಾತಿ (ChapathI, ಸ್ಪಲ್ಪ ಅನ್ನ (Rice). ತುಂಬಾ ಹಸಿವಾಗಿದ್ರೆ ಒಂದು ಫುಲ್ ಬಿರಿಯಾನಿ (Biriyani) ತಿನ್ಬೋದು. ಆದ್ರೆ ಈತನಿಗೆ ಯಾವಾಗ್ಲೂ ತಿನ್ನೋಕೆ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ಬೇಕೇ ಬೇಕು. ಇವ್ನಿಗೆ ಅಡುಗೆ ಮಾಡೋಕೆ ಇಬ್ಬರು ಹೆಂಡ್ತಿ (Wife)ಯರ ಕೈಲೂ ಸಾಧ್ಯವಾಗ್ತಿಲ್ಲ. ನಡೆಯೋಕೆ ಆಗಲ್ಲ ಅಂತ ಈತ ಬೈಕ್ (Bike) ಹತ್ತಿದ್ರೆ ಬೈಕೇ ಕೆಟ್ಟು ಹೋಗುತ್ತಂತೆ.

ಸಾಮಾನ್ಯವಾಗಿ ತಿನ್ನೋಕೆ ಎಷ್ಟು ಆಹಾರ (Food) ಬೇಕಾಗುತ್ತೆ ಹೇಳಿ. ಒಂದೆರಡು ಚಪಾತಿ (ChapathI, ಸ್ಪಲ್ಪ ಅನ್ನ (Rice). ತುಂಬಾ ಹಸಿವಾಗಿದ್ರೆ ಒಂದು ಫುಲ್ ಬಿರಿಯಾನಿ (Biriyani) ತಿನ್ಬೋದು. ಆದ್ರೆ ಈತನಿಗೆ ಯಾವಾಗ್ಲೂ ತಿನ್ನೋಕೆ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ಬೇಕೇ ಬೇಕು. ಇವ್ನಿಗೆ ಅಡುಗೆ ಮಾಡೋಕೆ ಇಬ್ಬರು ಹೆಂಡ್ತಿ (Wife)ಯರ ಕೈಲೂ ಸಾಧ್ಯವಾಗ್ತಿಲ್ಲ. ನಡೆಯೋಕೆ ಆಗಲ್ಲ ಅಂತ ಈತ ಬೈಕ್ (Bike) ಹತ್ತಿದ್ರೆ ಬೈಕೇ ಕೆಟ್ಟು ಹೋಗುತ್ತಂತೆ.

ತೂಕ (Weight) ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ. 70-80ರ ಆಸುಪಾಸಿನಲ್ಲಿ ತೂಕ ಇದ್ದೋರು ಸಹ ನಡೆಯೋಕೆ ಆಗದೆ, ಕೂತ್ರೆ ಏಳೋಕೆ ಆಗದೆ ಒದ್ದಾಡ್ತಾರೆ. ಹೀಗಿರುವಾಗ 200 ಕೆ.ಜಿ ತೂಕ ಇದ್ರೆ ಹೇಗಿರುತ್ತೆ. ಅಬ್ಬಬ್ಬಾ 200 ಕೆ.ಜಿನಾ ಅಂತ ಬೆಚ್ಚಿಬೀಳ್ಬೇಡಿ. ಪಾಟ್ನಾದ ಕಟಿಹಾರದ ಮೊಹಮ್ಮದ್​ ರಫಿಕ್​ ಅದ್ನಾನ್ 200 ಕೆ.ಜಿ ತೂಕವಿದ್ದು, ತೂಕಾನೇ ಜೀನವದಲ್ಲಿ ಇವ್ರಿಗೆ ದೊಡ್ಡ ಸಮಸ್ಯೆಯಾಗಿದೆ. ಹೊಟ್ಟೆ ತುಂಬಾ ತಿನ್ನೋವಷ್ಟು ಬೇಯಿಸಿ ಹಾಕೋರು ಯಾರು ಇಲ್ಲ. ಹೊಟ್ಟೆ ತುಂಬಾ ತಿಂದ್ರೂ ನಡ್ಕೊಂಡು (Walk) ಹೋಗೋಕಾಗಲ್ಲ. ಗಾಡೀಲಿ ಹೋದ್ರೆ ಗಾಡೀನೆ ಕೆಟ್ಟು ಹೋಗುತ್ತೆ. ರಫೀಕ್ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಸಂಸದಗೆ ಗಡ್ಕರಿ ತೂಕ ಇಳಿಕೆ ಚಾಲೆಂಜ್: 15 ಕೇಜಿ ತೂಕ ಇಳಿಸಿ 15,000 ಕೋಟಿ ಕೇಳಿದ ಅನಿಲ್‌!

ಹೆಸರು ಮೊಹಮ್ಮದ್​ ರಫಿಕ್​ ಅದ್ನಾನ್. ವಯಸ್ಸು 30 ವರ್ಷ. ಈತ ಬಿಹಾರ ಮೂಲದವನು. 200 ಕೆಜಿ ತೂಕವಿದ್ದಾನೆ. ಪ್ರತಿದಿನ ಮಾಂಸಾಹಾರ ಸೇರಿದಂತೆ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ (Food) ತಿನ್ನುತ್ತಾನೆ. ರಫಿಕ್​, ದಿನವೊಂದಕ್ಕೆ 3 ಕೆಜಿ ಅನ್ನ, 4 ಕೆಜಿ ರೋಟಿ, 2 ಕೆಜಿ ಮಾಂಸ ಮತ್ತು 1.5 ಕೆಜಿ ಮೀನು ತಿನ್ನುತ್ತಾನೆ. ಎಲ್ಲ ಸೇರಿ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ ರಫಿಕ್​ಗೆ ಬೇಕು. ಅತಿಯಾದ ಆಹಾರ ಸೇವನೆಯಿಂದ ಆತನ ಗಾತ್ರದಲ್ಲೂ ಏರಿಕೆಯಾಗಿದ್ದು, ಸದ್ಯ 200 ಕೆಜಿ ಭಾರವಿದ್ದಾರೆ. 

ಇಬ್ಬರು ಹೆಂಡ್ತಿಯರಿದ್ರೂ ಬೇಯಿಸಿ ಹಾಕೋಕೆ ಆಗ್ತಿಲ್ಲ 
ಅತಿಯಾದ ದೇಹವನ್ನು ಹೊಂದಿರುವ ರಫೀಕ್‌ನ್ನು ನೋಡಿ ನಗುವವರೇ ಹೆಚ್ಚು. ರಫೀಕ್​ ಅವರ ಆಹಾರ ಪದ್ಧತಿಯಿಂದಾಗಿ, ಜನರು ಅವರನ್ನು ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಹೆದರುತ್ತಾರಂತೆ. ಎಲ್ಲಿ ಎಲ್ಲ ಊಟವನ್ನು ಆತನಿಗೆ ಬಡಿಸಬೇಕಾಗುತ್ತದೆ ಎಂಬ ಭಯವಂತೆ. ಅತಿಯಾದ ಬೊಜ್ಜು ಕಾರಣ ರಫೀಕ್‌​ಗೆ ಮಕ್ಕಳು ಸಹ ಆಗಿಲ್ಲ. ಇದರಿಂದಾಗಿ ರಫೀಕ್ ಎರಡನೇ ಮದುವೆ ಸಹ ಆಗಿದ್ದಾನೆ. ಸದ್ಯ, ಈತನಿಗೆ ಇಬ್ಬರು ಪತ್ನಿಯರಿದ್ದು, ಇವರಿಂದಲೂ ಈತನಿಗೆ ಸರಿಯಾಗಿ ಬೇಯಿಸಿ ಹಾಕಲು ಸಾಧ್ಯವಾಗುತ್ತಿಲ್ಲವಂತೆ.

ಅತಿಯಾದ ಭಾರದಿಂದ ಬುಲೆಟ್ ಕೂಡಾ ನಿಂತುಬಿಡುತ್ತೆ
ಅಧಿಕ ತೂಕದಿಂದ ರಫೀಕ್‌ಗೆ ನಡೆದಾಡೋದು ಕೂಡಾ ಕಷ್ಟವಾಗ್ತಿದೆ. ಬೈಕ್‌ನಲ್ಲಿ ಓಡಾಡೋಣ ಅಂದ್ರೆ ಸಾಮಾನ್ಯ ಬೈಕ್​ ಈತನ ಭಾರವನ್ನು ತಡೆಯುವುದೇ ಇಲ್ಲ. ಹೀಗಾಗಿ ಸದಾ ಬುಲೆಟ್ ಗಾಡಿಯಲ್ಲೇ ಓಡಾಡುತ್ತಾನೆ. ಈತನ ಅತಿಯಾದ ತೂಕದಿಂದ ಬುಲೆಟ್​ ಕೂಡ ಒಮ್ಮೊಮ್ಮೆ ನಿಂತುಬಿಡುವ ಮೂಲಕ ತೊಂದರೆ ಕೊಡುತ್ತದೆಯಂತೆ. ರಫಿಕ್​​ ಬಾಲ್ಯದಿಂದಲೂ ಹೀಗೆ ಬೆಳೆದುಕೊಂಡು ಬಂದಿದ್ದಾರೆ. ಮೊದ ಮೊದಲು ನಡೆದಾಡಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಈಗ ಕೊಂಚ ದೂರವು ನಡೆಯಲು ಆಗುವುದಿಲ್ಲ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ. 

Fitness tips: ಯಾವಾಗಲೂ ಅವಲಕ್ಕಿ ಅಂತ ಬೇಜಾರು ಬೇಡ, ತೂಕ ಇಳಿಸುತ್ತೆ ಇದು

ರಫೀಕ್‌ನ್ನು ಕಾಡುತ್ತಿದೆ ಬುಲಿಮಿಯಾ ನೆರ್ವೊಸಾ ಕಾಯಿಲೆ
ಇನ್ನು ರಫಿಕ್​ನ ಈ ಸ್ಥಿತಿಗೆ ಆತನಲ್ಲಿರುವ ರೋಗವೇ ಕಾರಣ. ರಫಿಕ್​ಗೆ ತಿನ್ನುವುದನ್ನು ನಿಯಂತ್ರಣ ಮಾಡಬೇಕೆಂಬ ಆಸೆಯಿದೆ. ಆದರೆ, ಆತನಲ್ಲಿರುವ ಆರೋಗ್ಯ ಪರಿಸ್ಥಿತಿ ನಿಯಂತ್ರಿಸಲು ಬಿಡುತ್ತಿಲ್ಲ. ಹೌದು. ರಫಿಕ್​ 'ಬುಲಿಮಿಯಾ ನೆರ್ವೊಸಾ' ಎಂಬ ರೋಗದಿಂದ ಬಳಲುತ್ತಿದ್ದಾನೆ. ಈ ಸಂಗತಿಯನ್ನು ಬಿಹಾರದ ಸದಾರ್​ ಆಸ್ಪತ್ರೆಯ ವೈದ್ಯ ಡಾ. ಮೃನಾಲ್​ ರಂಜನ್​ ಕೂಡ ತಿಳಿಸಿದ್ದಾರೆ. ಈ ರೋಗದಿಂದ ಬಳಲುತ್ತಿರುವ ಜನರು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ. ಸಮಯಕ್ಕೆ ಅದರ ಚಿಕಿತ್ಸೆಯನ್ನು ಪ್ರಾರಂಭಿಸುವುದು ಮುಖ್ಯ. ಇಲ್ಲದಿದ್ದರೆ ರೋಗಿಯ ಪ್ರಾಣವೂ ಹೋಗಬಹುದು ಎಂದಿದ್ದಾರೆ.

ಬುಲಿಮಿಯಾ ನೆರ್ವೊಸಾ ಎಂಬುದು ಒಂದು ತಿನ್ನುವ ಕಾಯಿಲೆ. ಇದು ಗಂಭೀರ ಮತ್ತು ಜೀವಕ್ಕೆ ಅಪಾಯಕಾರಿಯು ಹೌದು. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಅನಿಯಂತ್ರಿತ ಆಹಾರವನ್ನು ತಿನ್ನುವ ಮೂಲಕ ಕೊನೆಗೆ ಬಲಿಯಾಗುತ್ತಾನೆ. ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಮತ್ತು ನಂತರ ಸ್ಥೂಲಕಾಯದ ಭಯದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. 

ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ

90 ದಿನಗಳಲ್ಲಿ ತೂಕ ಕಡಿಮೆಗೊಳಿಸುವ ಭರವಸೆ ಕೊಟ್ಟ ವೈದ್ಯರು
ಈ ಮಧ್ಯೆ 200 ಕೆ.ಜಿ ತೂಕದ ಕಟಿಹಾರದ ರಫೀಕ್ ಅವರ ಬದುಕು ಈಗ ಬದಲಾಗಬಹುದು. ಬರಿಯಾಟ್ರಿಕ್ ಸರ್ಜರಿ ಮೂಲಕ 90 ದಿನಗಳಲ್ಲಿ ರಫೀಕ್ ನನ್ನು 100 ಕೆಜಿಗೆ ಇಳಿಸಬಹುದು ಎಂದು ಪಾಟ್ನಾದ ಮೆಡಿಮ್ಯಾಕ್ಸ್ ಆಸ್ಪತ್ರೆ ಹೇಳಿಕೊಂಡಿದೆ.  ಸರ್ಕಾರಿ ಆಸ್ಪತ್ರೆಗಳಂತೆ ಬೇರಿಯಾಟ್ರಿಕ್ ಸರ್ಜರಿ ಮಾಡಿದರೆ 3 ಲಕ್ಷ, ಖಾಸಗಿ ಆಸ್ಪತ್ರೆಗಳಂತೆ ಕೆಲಸ ಮಾಡಿದರೆ ಸುಮಾರು 5 ಲಕ್ಷ ಖರ್ಚಾಗುತ್ತದೆ ಎನ್ನುತ್ತಾರೆ ಡಾ.ಸಂಜೀವ್ ಕುಮಾರ್. ಇದು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 90 ದಿನಗಳನ್ನು ತೆಗೆದುಕೊಳ್ಳುತ್ತದೆ. ರೋಗಿಯನ್ನು ಸಂಪೂರ್ಣವಾಗಿ ಬೆಂಬಲಿಸಿದರೆ, ಅವನು 90 ದಿನಗಳಲ್ಲಿ 200 ರಿಂದ 100 ಕೆ.ಜಿ. ರೋಗಿ ಸಂಪರ್ಕಿಸಿದರೆ 200ರಿಂದ 100 ಕೆ.ಜಿ ತರಬಹುದು ಎನ್ನುತ್ತಾರೆ ವೈದ್ಯರು

click me!