ಉಪ್ಪು(Salt) ದೇಹದ ಬೆಳವಣಿಗೆಗೆ ಬೇಕಾದ ಅಂಶ. ಉಪ್ಪಿಗಿಂತ ರುಚಿ ಮತ್ತೊಂದಿಲ್ಲ ಎಂದು ಹಿರಿಯರು(Elders) ಹೇಳುತ್ತಲೇ ಇರುತ್ತಾರೆ. ಬಾಳೆಯಲ್ಲಿ ಮೊದಲು ಉಪ್ಪು ಬಡಿಸಿಯೇ ನಂತರ ಉಳಿದ ಪದಾರ್ಥಗಳನ್ನು ಬಡಿಸುತ್ತಾರೆ. ಹಾಗಾದರೆ ಉಪ್ಪಿಗೆ ಅಷ್ಟೊಂದು ಪ್ರಮುಖ್ಯತೆ ನೀಡಿರುವ ನಾವು, ಹೆಚ್ಚಾಗಿ ತಿಂದರೆ (Consume) ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಅದರಲ್ಲೂ ಪುಟ್ಟ ಮುಗುವಿಗೆ (Infants) ಉಪ್ಪು ಕೊಡಬೇಕೋ ಬೇಡವೋ ಎಂಬುದು ದೊಡ್ಡ ಪ್ರಶ್ನೆ. ಏಕೆಂದರೆ ಇನ್ನು ಎಳೆಯ ವಯಸ್ಸಿನವರು, ಈಗಷ್ಟೇ ಅಂಗಾಂಗಗಳು ಬೆಳೆಯುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಕ್ಕಳ ಬೆಳವಣಿಗೆಗೆ ಉಪ್ಪು ಸಹ ಪ್ರಮುಖ ಪಾತ್ರವಹಿಸುತ್ತದೆ. ಉಪ್ಪಿಲ್ಲದೆ ತಿನ್ನುವುದು ದೊಡ್ಡವರಿಗೆ ಕಷ್ಟ ಎಂದ ಮೇಲೆ ಪುಟ್ಟ ಮಗು ಹೇಗೆ ತಿನ್ನುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಆ ಮಗುವಿಗೆ ಉಪ್ಪಿನ ಪ್ರಮಾಣ ದಿನ ನಿತ್ಯ ಎಷ್ಟು ಕೊಡಬೇಕು ಎಂಬುದು ಹಿರಿಯರಿಗೆ ತಿಳಿದಿರಬೇಕು.
ಮಗುವಿನ ಊಟದಲ್ಲಿ ಉಪ್ಪು ಎಷ್ಟು ಹಾಕಬೇಕು?
ಒಂದು ವರ್ಷದೊಳಗಿನ(One Year) ಮಗುವಿನ ಕಿಡ್ನಿ(Kidney) ಇನ್ನು ಎಳೆಯದಾಗಿದ್ದು, ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗಿರುವುದಿಲ್ಲ. ಹಾಗಾಗಿ ಊಟದಲ್ಲಿ ಉಪ್ಪು ಕಡಿಮೆ ಹಾಕುವುದು ಒಳ್ಳೆಯದು. ಸಪ್ಪೆ ಇರುವ ಆಹಾರ ಪದಾರ್ಥಗಳನ್ನು ಈ ಮಕ್ಕಳಿಗೆ ನೀಡಬಹುದು. ಇದರಿಂದ ಜೀರ್ಣ ಶಕ್ತಿಯೂ(Digestive System) ಹೆಚ್ಚುತ್ತಲ್ಲದೆ, ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಆದರೆ ದಿನಕ್ಕೆ 1 ಗ್ರಾಂ ನಷ್ಟು ಉಪ್ಪು ನೀಡಬಹುದು ಎಂದು ವೈದ್ಯರು ಹೇಳುತ್ತಾರೆ. ಒಂದರಿAದ ಮೂರು ವರ್ಷದ ಮಗುವಿಗೆ ದಿನಕ್ಕೆ 2ಗ್ರಾಂ ನಷ್ಟು ಉಪ್ಪನ್ನು ನೀಡಬೇಕು.
ಪದೆ ಪದೇ ಉಪ್ಪು ಚೆಲ್ಲುತ್ತಿದ್ದೀರಾ? ಅಪಶಕುನದ ಸೂಚನೆ ಇರಬಹುದು ಇದು!
ಅತಿಯಾದರೆ ಏನಾಗುತ್ತೆ?
ಸಣ್ಣ ವಯಸ್ಸಿನಲ್ಲಿಯೇ ಅತಿಯಾಗಿ ಉಪ್ಪು ತಿನ್ನುವುದು ಒಳ್ಳೆಯದಲ್ಲ. ಏಕೆಂದರೆ ಸಣ್ಣ ವಯಸ್ಸಿನಲ್ಲಿ ಉಪ್ಪು ಹೆಚ್ಚು ತಿಂದರೆ ಭವಿಷ್ಯದಲ್ಲಿ ಹಲವಿಉ ಖಾಯಿಲೆಗಳಿಗೆ(Diseases) ಕಾರಣವಾಗುತ್ತದೆ. ಮಕ್ಕಳು ಅತಿಯಾಗಿ ಉಪ್ಪು ತಿನ್ನುವುದರಿಂದ ಅವರ ಮುಂದಿನ ಜೀವನದಲ್ಲಿ ಹೈಪರ್‌ಟೆನ್ಷನ್(Hypertension) ಕಾಣಿಸಿಕೊಳ್ಳಬಹುದು. ಹೈಪರ್‌ಟೆನ್ಷನ್ ಎನ್ನುವುದು ಹಿರಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅದಲ್ಲದೆ ಹೃದಯ ಸಂಬಂಧಿ(Heart Diseases) ಖಾಯಿಲೆಗಳು ಹೆಚ್ಚುತ್ತವೆ.
ಅತಿ ಎಂದರೆ ಹೇಗೆ?
ಮಗುವಿಗೆ ಹಾಲುಣಿಸುವುದು(Weaning) ಪ್ರಾರಂಭವಾದ ನಂತರ ಹಾಗೂ ಹಾಲಿನ ಪ್ರಮಾಣ ಕಡಿಮೆಯಾದಲ್ಲಿ ಮಗು ತಾನು ಸೇವಿಸುವ ಆಹಾರದಿಂದ ತನ್ನ ಉಪ್ಪಿನ ಅಗತ್ಯವನ್ನು ಹುಡುಕುತ್ತದೆ. ಈ ಸಂದರ್ಭದಲ್ಲಿ ದೊಡ್ಡವರು ಸೇವಿಸುವ ಆಹಾರವನ್ನು ಮಗುವಿಗೆ ಪರಿಚಯಿಸಲೇ ಬಾರದು. ಅದು ಸಿಹಿ(Sweet) ಇರಲಿ, ಉಪ್ಪಿರಲಿ(Salt). ಪೋಷಕರು(Parents) ಹಾಗೂ ಹಿರಿಯರು ಮಕ್ಕಳ ಆಹಾರ ಪದಾರ್ಥಕ್ಕೆ ಸಾಮಾನ್ಯವಾಗಿ ಉಪ್ಪನ್ನು ಸೇರಿಸುತ್ತಾರೆ. ಉಪ್ಪು ಆಹಾರದ ರುಚಿ(Taste) ಹೆಚ್ಚಿಸುತ್ತದೆ, ಮಕ್ಕಳು ಚೆನ್ನಾಗಿ ಊಟ ಮಾಡುತ್ತವೆ ಎಂದು ಹೀಗೆ ಮಾಡಲಾಗುತ್ತದೆ. ಇದರ ಬದಲು ವೆಜ್ ಸಾಕ್(Veg Stock) ಮಾಡಿ ಕೊಟ್ಟರೆ ತರಕಾರಿಯೂ(Vegetables) ಸೇವಿಸಿದ ಹಾಗೆ ಆಗುತ್ತದೆ. ಮಕ್ಕಳು ತಮ್ಮಷ್ಟಕ್ಕೆ ತಾವೇ ತಿನ್ನಲು ಇಚ್ಚಿಸುತ್ತವೆ. ಅದಕ್ಕಾಗಿ ಕಡಿಮೆ ಉಪ್ಪಿನಾಂಶವಿರುವ ಪಾಸ್ಟಾ(Pasta), ಅನ್ನ(Rice), ತರಕಾರಿಗಳನ್ನು(Vegetables) ಅವರಿಗೇ ತಿನ್ನಲು ಬಿಡಿ.
ಮಾಡಿದ ಅಡುಗೆ ಉಪ್ಪಾಗಿದ್ಯಾ? ಇಲ್ಲಿದೆ ಅದಕ್ಕೊಂದು ಪರಿಹಾರ
ಉಪ್ಪು ಹೆಚ್ಚಿರುವ ಆಹಾರ ಬೇಡ
ಮೊದಲೇ ಪ್ಯಾಕ್(Pack) ಮಾಡಿದ ಆಹಾರ ಪದಾರ್ಥಗಳು ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ. ಅಂದರೆ, ಬಿಸ್ಕೆಟ್(Biscuit), ಕ್ಯಾಕರಸ್(Crackers), ರೆಡಿಮೇಡ್ ಸೂಪ್(Ready made Soup), ಚಿಪ್ಸ್ (Chips), ಪ್ಯಾಕೇಜ್ ನೂಡಲ್ಸ್(Packed Noodles), ಡಯೆಟ್ ಸ್ನ್ಯಾಕ್ಸ್ ರೀತಿಯ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದು ಒಳ್ಳೆಯದಲ್ಲ. ಇದರ ಬದಲು ಮನೆಯಲ್ಲೇ ತಿಂಡಿಗಳನ್ನು ಮಾಡಿಕೊಡುವುದು ಉತ್ತಮ.
ಉಪ್ಪು ಹೆಚ್ಚು ತಿಂದರೆ ಆಗುವ ಪರಿಣಾಮ
ಪ್ರತೀ ದಿನ ಮಗು ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುತ್ತಿದ್ದರೆ, ಅವರಿಗೆ ಹೆಚ್ಚು ಬಾಯಾರಿಕೆ(Thirst) ಆಗುತ್ತಿದೆ ಎಂದರ್ಥ. ಉಪ್ಪು ಸೇವಿಸುವುದರಿಂದ ಹೈಪರ್ ಟೆನ್ಷನ್(Hypertension) ಬರುವುದು ಬಲು ಅಪರೂಪ. ಇದರಿಂದ ರಕ್ತದ ಸೋಡಿಯಂ ಲೆವೆಲ್(Blood Sodium Level) ಹೆಚ್ಚಾಗಬಹುದು. ಕಿರಿಕಿರಿ(Irritation), ಅರೆನಿದ್ರಾವಸ್ಥೆ(Drowsiness), ಆಲಸ್ಯ(Lethargy), ಕೋಮಾ(Coma). ಇವು ಹೈಪರ್‌ಟೆನ್ಷನ್‌ನ ಲಕ್ಷಣಗಳು.
Dehydrating Foods: ಈ ಆಹಾರಗಳು ದೇಹ ಒಣಗಿಸುತ್ತವೆ, ಎಚ್ಚರ
ಉಪ್ಪನ್ನು ಹೇಗೆ ಅವಾಯ್ಡ್ ಮಾಡಬಹುದು
1. ಮಗುವಿಗೆ ಆಹಾರ(Food) ಪದಾರ್ಥಗಳನ್ನು ತಯಾರಿಸುವಾಗ ಉಪ್ಪನ್ನು ಹಾಕಲೇಬೇಡಿ.
2. ಆಹಾರ ತಯಾರಿಸುವಾಗ ಬಾಡಿದ ತರಕಾರಿಯಲ್ಲಿ(Vegetable) ಉಪ್ಪಿನಾಂಶ ಹೆಚ್ಚಿರುತ್ತದೆ. ಹಾಗಾಗಿ ತಾಜಾ ತರಕಾರಿಯನ್ನು ಬಳಸುವುದು ಒಳ್ಳೆಯದು.
3. ಇಡೀ ಫ್ಯಾಮಿಲಿಗೆ ಅಡುಗೆ ಮಾಡುತ್ತಿದ್ದರೆ ಅದರಲ್ಲಿ ಉಪ್ಪು ಹಾಕುವುದಕ್ಕು ಮೊದಲು ಸ್ವಲ್ಪ ಪ್ರಮಾಣದಲ್ಲಿ ಮಗುವಿಗೆ ಎತ್ತಿಡಿ. ಹೀಗೆ ಎತ್ತಿಟ್ಟ ಪದಾರ್ಥಕ್ಕೆ ಗಿಡಮೂಲಿಕೆ(Herbs) ಹಾಗೂ ಮಸಾಲೆಗಳನ್ನು(Spicy) ಸೇರಿಸಬಹುದು.
4. ನೀವು ಡಿನ್ನರ್‌ಗೆಂದು ಹೊರಗೆ ಹೊರಟಿದ್ದರೆ ಮಗುವಿಗೆ ಮೊದಲೇ ಮನೆಯಿಂದಲೇ ಊಟ ಮಾಡಿಸಿಕೊಂಡು ಕರೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಹೊರಗಿನ ತಿಂಡಿಗಳು ಮಗುವಿಗೆ ಪರಿಚಯಿಸುವುದು ಒಳ್ಳೆಯದಲ್ಲ.