ವರ್ಷದವರೆಗೆ ದಂಪತಿಗೆ ಉಚಿತ ಫಿಜ್ಜಾ ಕೊಡುಗೆ ನೀಡಿದ ಪಿಜ್ಜಾಹಟ್... ಕಾರಣವೇನು?

By Anusha Kb  |  First Published Oct 17, 2022, 10:12 AM IST

ಮದುವೆ ಸಮಯದಲ್ಲಿ ಡೀಲ್ ಮಾಡಿಕೊಂಡಿದ್ದ ಜೋಡಿಗೆ ವರ್ಷದವರೆಗೆ ಉಚಿತ ಪಿಜ್ಜಾ ನೀಡಲು ಬಹುರಾಷ್ಟ್ರೀಯ ಪಿಜ್ಜಾ ಸಂಸ್ಥೆ ಪಿಜ್ಜಾ ಹಟ್ ಮುಂದಾಗಿದೆ. 


ಅಸ್ಸಾಂ: ಕೆಲ ದಿನಗಳ ಹಿಂದೆ ಜೋಡಿಯೊಂದು ತಮ್ಮ ಮದುವೆ ದಿನ ವಿಶೇಷವಾದ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಆ ಒಪ್ಪಂದದಂತೆ ವಧುವೊಬ್ಬಳು ಪ್ರತಿದಿನವೂ ಜಿಮ್‌ಗೆ ಹೋಗುವುದು, ಪ್ರತಿ 15 ದಿನಕ್ಕೊಮ್ಮೆ ಶಾಪಿಂಗ್ ಹೋಗುವುದು. ಪ್ರತಿ ತಿಂಗಳಿಗೊಮ್ಮೆ ಫಿಜ್ಜಾ ತಿನ್ನುವುದು ಎಂಬ ತಮಾಷೆಯ  ಒಪ್ಪಂದವೊಂದಕ್ಕೆ ತನ್ನ ಗಂಡನಿಂದ ಆಕೆ ಸಹಿ ಹಾಕಿಸಿಕೊಂಡಿದ್ದಳು. 

ಅಸ್ಸಾಂನ ಶಾಂತಿ ಪ್ರಸಾದ್ (Shanti Prasad) ಹಾಗೂ ಮಿಂಟು ರೈ (Mintu Rai) ಎಂಬ ಜೋಡಿ ತಮ್ಮ ಮದುವೆಯ ದಿನ ಈ ತಮಾಷೆಯಿಂದ ಕೂಡಿದ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಇದು ಹಳೆ ವಿಚಾರ. ಹೊಸ ವಿಚಾರ ಏನೆಂದರೆ ಈಗ ಈ ದಂಪತಿಗೆ ಫಿಜ್ಜಾ ಹಟ್ ತಿಂಗಳಿಗೊಮ್ಮೆ ಉಚಿತವಾಗಿ ಫಿಜ್ಜಾವನ್ನು ಮನೆಗೆ ತಲುಪಿಸಲು ಮುಂದಾಗಿದೆ.  ಮದುವೆಯಾಗಿ ಹಲವು ತಿಂಗಳುಗಳಾಗಿದ್ದು, ಕರ್ವಾಚೌತ್ (Karwa chouth) ವಿಶೇಷ ದಿನದಂದು ಪಿಜ್ಜಾ ಹಟ್ ದಂಪತಿಗೆ ಈ ಕೊಡುಗೆಯನ್ನು ಘೋಷಿಸಿದೆ. ಆದರೆ ದಂಪತಿ ಈ ಶರತ್ತುಗಳನ್ನು ಅನುಸರಿಸುತ್ತಿದ್ದಾರೆಯೇ ಗೊತ್ತಿಲ್ಲ. ಆದರೆ ಬಹುರಾಷ್ಟ್ರೀಯ ಪಿಜ್ಜಾ ಸಂಸ್ಥೆ ಪಿಜ್ಜಾ ಹಟ್‌ ಈ ದಂಪತಿಗೆ ತಿಂಗಳಿಗೊಮ್ಮೆ ಉಚಿತ ಪಿಜ್ಜಾದ ಪ್ರಾಯೋಜಕತ್ವ ವಹಿಸಿದೆ.

Tap to resize

Latest Videos

 

ಬೆಂಗಳೂರು: ಡಾಮಿನೋಸ್‌ ಪಿಜ್ಜಾ ತಟ್ಟೆ ಮೇಲೆ ಟಾಯ್ಲೆಟ್‌ ಬ್ರಷ್‌..!


ಒಂದು ತಿಂಗಳಿಗೆ ಒಂದು ಪಿಜ್ಜಾ, ಸುಧೀರ್ಘ ಹಾಗೂ ಸಂತೋಷದ ಜೀವನ, ಈ ಒಪ್ಪಂದದೊಂದಿಗೆ ನಾವು ಬದುಕುತ್ತಿದ್ದೇವೆ  ಪಿಜ್ಜಾವನ್ನು ಪ್ರೀತಿಸುವ ಎಲ್ಲ ಪ್ರೀತಿಯ ಜೋಡಿಗಳಿಗೂ ಕರ್ವಚೌತ್ ಶುಭಾಶಯಗಳು ಎಂದು ಬರೆದು ಇನ್ಸ್ಟಾಗ್ರಾಮ್‌ನಲ್ಲಿ ಪಿಜ್ಜಾ ಹಟ್ ಸಂಸ್ಥೆ ಈ ಜೋಡಿಯ ಫೋಟೋ (Photo) ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಈ ಜೋಡಿ ತಮ್ಮ ಸಮೀಪದ ಪಿಜ್ಜಾ ಹಟ್‌ ಶಾಪ್‌ಗೆ ಭೇಟಿ ನೀಡಿ ಅಲ್ಲಿ ಹಲವು ವಿಧದ ರುಚಿಯಾದ ಪಿಜ್ಜಾಗಳನ್ನು ಸೇವಿಸುತ್ತಿದ್ದಾರೆ. ಜೊತೆಗೆ ಅಲ್ಲಿ ಅವರು ಆಹಾರಕ್ಕಾಗಿ ವೈಟ್ ಮಾಡುತ್ತಾ ಫೋಟೋಗಳನ್ನು ತೆಗೆಯುತ್ತಿರುವುದನ್ನು ಕಾಣಬಹುದು. ಗುರುವಾರ ಫಿಜ್ಜಾ ಹಟ್ ಈ ಪೋಸ್ಟ್ ಮಾಡಿದ್ದು, ಸಾಕಷ್ಟು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಜನರೇಷನ್ ಜನ ಈ ಪಿಜ್ಜಾಗೆ ಮನಸೋತಿದ್ದಾರೆ. ಉಚಿತ ಪಿಜ್ಜಾ ಗಳಿಸಲು ಇದೊಂದು ಟೆಕ್ನಿಕ್ ಆ ಅಂತ ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಯಾವಾಗ್ಲೂ ಪಿಜ್ಜಾ, ಬರ್ಗರ್ ತಿನ್ತಿರ್ಬೇಕು ಅಂತನಿಸುವುದು ಯಾಕೆ? 

ರೆಸ್ಟೋರೆಂಟ್‌ ಗಳಿಗೆ ಹೋಗಿ ಬಾಯಲ್ಲಿ ನೀರೂರಿಸುವ ಸ್ವಾದಭರಿತ ಆಹಾರವನ್ನು (Food) ಆರ್ಡರ್‌ ಮಾಡುತ್ತೇವೆ. ಅಲ್ಲಿ ಬೆಣ್ಣೆಯಲ್ಲಿ ಅದ್ದಿದ ಪಿಜ್ಜಾವನ್ನೋ, ಸ್ಯಾಂಡ್‌ ವಿಚ್‌ ಅನ್ನೋ ಸೇವಿಸಿ ಖುಷಿಯಾಗಿ ಬರುತ್ತೇವೆ. ಆದರೆ, ಆ ಆಹಾರಗಳಲ್ಲಿರುವ ಕ್ಯಾಲರಿ (Calorie) ಬಗ್ಗೆ ಎಂದಾದರೂ ವಿಚಾರ ಮಾಡುತ್ತೇವಾ? ಸಾಮಾನ್ಯವಾಗಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಗಳು ಉಪ್ಪು (Salt), ಎಣ್ಣೆ (Oil), ಬೆಣ್ಣೆ (Cheese) ಹಾಗೂ ಸಕ್ಕರೆ (Sugar)ಯನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಕೆ ಮಾಡುತ್ತವೆ. ಹಾಗಾಗಿಯೇ ಅಲ್ಲಿನ ಆಹಾರ ಹೆಚ್ಚು ರುಚಿಕರವೆನಿಸುತ್ತದೆ. ಆದರೆ, ನೀವು ಕ್ಯಾಲರಿ ಬಗ್ಗೆ ಚಿಂತಿಸುವವರಾಗಿದ್ದರೆ ಕೆಲವು ಆಹಾರಗಳಿಂದ ದೂರವಿರಬೇಕಾಗುತ್ತದೆ. ಹಾಗೆಯೇ, ಹೃದಯ, ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆ ನಿಮ್ಮೊಂದಿಗಿದ್ದರೆ ಆಹಾರದಲ್ಲಿರುವ ಕ್ಯಾಲರಿ ಬಗ್ಗೆ ನೀವು ಯೋಚನೆ ಮಾಡಬೇಕಾಗುತ್ತದೆ. ಬೊಜ್ಜು ಹೊಂದಿದ್ದರಂತೂ ಹೆಚ್ಚು ಎಚ್ಚರಿಕೆ ಅಗತ್ಯ.  

ಬೆಣ್ಣೆ ಬೆರೆಸಿ ಮಾಡುವ ತಿನಿಸು ಸೇರಿದಂತೆ ಕೆಲವು ಆಹಾರಗಳು ಅಧಿಕ ಕ್ಯಾಲರಿ ಹೊಂದಿರುತ್ತವೆ. ಈ ವಿಚಾರದಲ್ಲಿ ಅವು ಆರೋಗ್ಯಕ್ಕೆ ನಿಜಕ್ಕೂ  ಅಪಾಯಕಾರಿಯೇ ಆಗಿರುತ್ತವೆ. 

click me!