
ಕಲೆಯನ್ನು ಇಷ್ಟಪಡದವರು ವಿರಳ. ಸುಂದರವಾದ ಕಲಾಕೃತಿ ಎಂಥವರ ಮನಸ್ಸನ್ನು ಥಟ್ಟಂತ ಸೆಳೆದು ಬಿಡುತ್ತದೆ. ಸಣ್ಣಪುಟ್ಟ ವಿಚಾರಗಳೂ ಅಚ್ಚರಿ ಮೂಡಿಸುತ್ತವೆ. ಎಲ್ಲಾ ವಸ್ತುಗಳಲ್ಲೂ ಕಲಾತ್ಮಕತೆಯನ್ನು ಹುಡುಕುವವರಿದ್ದಾರೆ. ಹಾಗೆಯೇ ಇಲ್ಲೊಬ್ಬ ಯುವತಿ ಆಹಾರದಲ್ಲೂ ಕಲಾಕೃತಿ ಮೂಡಿಸಿದ್ದಾರೆ. ಆಹಾರವನ್ನು ತುಂಬಾ ಇಷ್ಟಪಡುವ ಮಹಿಳೆಯೊಬ್ಬರು ಆಹಾರದ ಆರ್ಟ್ ಸಿದ್ಧಪಡಿಸಿದ್ದಾರೆ. ಮಸಾಲೆದೋಸೆ, ಪಾವ್ ಭಾಜಿ, ಉತ್ತಪ್ಪ, ಅಪ್ಪಂನ ಸುಂದರವಾದ ಫುಡ್ ಆರ್ಟ್ ಎಲ್ಲರ ಮನಸ್ಸು ಗೆದ್ದಿದೆ. ವೈರಲ್ ಆಗಿರುವ ಈ ಪೋಸ್ಟ್ ಅನ್ನು ನೆಟ್ಟಿಗರು ಬಿಟ್ಟಕಣ್ಣಿನಿಂದ ನೋಡುತ್ತಾ ಕುಳಿತಿದ್ದಾರೆ. ಯಾಕೆಂದರೆ ಅಷ್ಟು ಸುಂದರವಾಗಿದೆ ಆಹಾರದ ತಟ್ಟೆಯ ಈ ಫುಡ್ ಆರ್ಟ್.
ಮಹಿಳೆ ಸಿದ್ಧಪಡಿಸಿದ ಆಕರ್ಷಕ ಆಹಾರ ವರ್ಣಚಿತ್ರಗಳು
ಕಲೆಯ ಹಲವಾರು ಶೈಲಿಗಳಿವೆ (Variety) ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಚಿತ್ರಕಲೆ, ಶಿಲ್ಪಕಲೆ ಮತ್ತು ವಾಸ್ತುಶಿಲ್ಪವು ಕಲೆಯನ್ನು ಗ್ರಹಿಸಬಹುದಾದ ಹಲವಾರು ವಿಧಾನಗಳ ಕೆಲವು ಉದಾಹರಣೆಗಳಾಗಿವೆ. ಇಲ್ಲೊಬ್ಬ ಮಹಿಳೆ ಸಿದ್ಧಪಡಿಸಿದ ಆಹಾರ ವರ್ಣಚಿತ್ರಗಳು ಎಷ್ಟು ನೈಜವಾಗಿ ಕಾಣುತ್ತವೆ ಎಂದರೆ ನೀವು ಅವುಗಳನ್ನು ಪದೇ ಪದೇ ನೋಡುವುದು ಖಂಡಿತ. ಜನರು ಆಹಾರವನ್ನು ಕಲಾತ್ಮಕ ರೀತಿಯಲ್ಲಿ ರಚಿಸುವುದು ಮತ್ತು ಪ್ರಸ್ತುತಪಡಿಸುವುದು ಮಾತ್ರವಲ್ಲದೆ ಅದರ ಬಗ್ಗೆ ಚಿತ್ರಿಸಲು ಇಷ್ಟಪಡುತ್ತಾರೆ. ಸಾಮಾಜಿಕ ಮಾಧ್ಯಮದಿಂದ (Social media) ಇಂಥಾ ಕಲಾತ್ಮಕ ಚಿತ್ರವನ್ನು ಎಲ್ಲರೂ ನೋಡುವಂತಾಗಿದೆ.
ಪೋಷಕಾಂಶ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯ, ಹೆಲ್ದೀಯಾಗಿರಬೇಕಾದ್ರೆ ಇವೆಲ್ಲಾ ತಿನ್ಬೇಕು
ಇತ್ತೀಚಿಗೆ ಮಹಿಳೆಯ ವಿಶಿಷ್ಟ ಆಹಾರ (Food) ಕಲೆ ಹಲವರ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರುಚಾ ಲಿಮಯೆ, @ruandchai, ಎಂಬವರು ಒಂದು ಸಣ್ಣ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ದೋಸೆ ಸಾಂಬಾರ್, ಅಪ್ಪಂ ಮತ್ತು ಪಾವ್ ಭಾಜಿಯ ಪೇಂಟಿಂಗ್‌ಗಳನ್ನು ಉತ್ತಪಮ್ ಪ್ಲೇಟ್‌ನೊಂದಿಗೆ ಪ್ರಸ್ತುತಪಡಿಸಿದ್ದಾರೆ.
ಲಿಮಾಯೆ ತನ್ನ ಕಲಾಕೃತಿಯ (Painting) ಮುಂದೆ ಪೋಸ್ ನೀಡುತ್ತಾರೆ. ಯಾವುದು ನಿಜವಾದ ಆಹಾರ ಎಂದು ಊಹಿಸಲು ತನ್ನ ಫಾಲೋವರ್ಸ್‌ನ್ನು ಕೇಳುತ್ತಾಳೆ. ವೀಡಿಯೊದ ಕೊನೆಯಲ್ಲಿ, ಉತ್ತಪಂ ಮಾತ್ರ ನಿಜವಾದ ಆಹಾರ ಎಂದು ಲಿಮಾಯೆ ಬಹಿರಂಗಪಡಿಸುತ್ತಾಳೆ. ಇದನ್ನು ನೋಡಿ ಆಕೆಯ ಹಿಂಬಾಲಕರು (Followers) ಸಹ ಅಚ್ಚರಿಗೊಂಡಿದ್ದಾರೆ.
ಕರ್ನಾಟಕದ ಈ ಫುಡ್ ದೇಶಾದ್ಯಂತ ಫೇಮಸ್, ನೀವು ಟೇಸ್ಟ್ ಮಾಡಿದ್ದೀರಾ ?
ರುಚಾ ಲಿಮಾಯೆ ಅವರ ಕಲಾಕೃತಿಯನ್ನು ಇಲ್ಲಿ ನೋಡೋಣ:
ವೈರಲ್ ಆದ ಫುಡ್ ಆರ್ಟ್‌ಗೆ ಜನರ ಮೆಚ್ಚುಗೆ
ಈ ವಿಡಿಯೋ ಶೇರ್ ಆದ ನಂತರ ಆರು ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ (Views). ರೀಲ್ 15,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್‌ಗಳನ್ನು ಹೊಂದಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, 'ಎಲ್ಲಾ ಆಹಾರ ನಿಜವೆಂದು ನಾನು ಭಾವಿಸಿದೆವು' ಎಂದಿದ್ದಾರೆ. 'ಎಲ್ಲವೂ ತುಂಬಾ ಚೆನ್ನಾಗಿದೆ" ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾರೆ, "ಓಹ್ ವಾವ್. ಇವುಗಳು ನಿಜವಾಗಿಯೂ ತುಂಬಾ ರುಚಿಕರವಾಗಿ ಕಾಣುತ್ತವೆ." ಎಂದು ಯಾರೋ ಸೇರಿಸಿದ್ದಾರೆ, "ನಿಮ್ಮ ಕಲಾಕೃತಿಯನ್ನು ಪ್ರೀತಿಸಿ. ಈ ರೀತಿಯ ಪರಿಪೂರ್ಣತೆಗಾಗಿ ನೀವು ಎಷ್ಟು ಶ್ರಮಿಸಿದ್ದೀರಿ ಎಂಬುದನ್ನು ನಿಜವಾಗಿ ನೋಡಬಹುದು' ಎಂದು ನಾಲ್ಕನೇ ವ್ಯಕ್ತಿ ಬರೆದಿದ್ದಾರೆ. ಒಟ್ನಲ್ಲಿ ಫುಡ್ ಆರ್ಟ್‌ಗೆ ಎಲ್ಲರೂ ಫಿದಾ ಆಗಿರೋದಂತೂ ನಿಜ.
ಸಮೋಸಾ ಫಿಲ್ಲಿಂಗ್ ಏನು ಅಂತ ತಲೆಕೆಡಿಸ್ಕೊಳ್‌ಬೇಕಾಗಿಲ್ಲ, ಅಲ್ಲೇ ಅಚ್ಚಾಗಿದೆ ನೋಡಿ !
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.