
ಜನರು ಹೊಟೇಲ್‌ನಲ್ಲಿ ತಾವು ಮಾಡಿದ ಆರ್ಡರ್ ಹೆಚ್ಚಾಗಿ ಅಲ್ಲೇ ತಿನ್ನಲು ಸಾಧ್ಯವಾಗದೇ ಹೋದಾಗ ಪ್ಯಾಕ್ ಮಾಡಿ ನೀಡುವಂತೆ ರೆಸ್ಟೋರೆಂಟ್‌ಗಳಲ್ಲಿ ಕೇಳುವುದನ್ನು ನೋಡಿರಬಹುದು. ಹಾಗೇಯೇ ಹೊಟೇಲ್‌ನವರು ಗ್ರಾಹಕರ ಮನವಿಯಂತೆ ಅವರು ತಿಂದುಳಿದ ಆಹಾರವನ್ನು ಪ್ಯಾಕ್ ಮಾಡಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಹೊಟೇಲ್ ಸಿಬ್ಬಂದಿ ಹೊಟೇಲ್‌ನಲ್ಲಿ ಉಳಿದ ಆಹಾರವನ್ನು ಮತ್ತೆ ತೊಳೆದು ಮತ್ತೆ ಬಳಕೆಗೆ ಪ್ಲಾನ್ ಮಾಡಿದ್ದು, ಹೊಟೇಲ್ ಸಿಬ್ಬಂದಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹೊಟೇಲ್‌ಗೆ ಬೀಗ ಬಿದ್ದಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಮಲೇಷ್ಯಾದಲ್ಲಿ. ಮಲೇಷ್ಯಾದ ಸೆರೆಂಬನ್‌ನಲ್ಲಿರುವ ರೆಸ್ಟೋರೆಂಟೊಂದರಲ್ಲಿ ಕೆಲಸಗಾರನೊಬ್ಬ ಈಗಾಗಲೇ ಸಿದ್ಧಪಡಿಸಿ ಮಾರಾಟವಾಗದೇ ಬಾಕಿ ಉಳಿದ ಆಹಾರವನ್ನು ಮತ್ತೆ ಬಡಿಸುವ ಉದ್ದೇಶದಿಂದ ನೀರಿನಲ್ಲಿ ತೊಳೆಯುತ್ತಿರುವ ವೀಟಿಯೋ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಹೊಟೇಲ್ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಹೆ ಆಹಾರ ಇಲಾಖೆಗೂ ದೂರು ನೀಡಿದ್ದರು. ಹೀಗಾಗಿ ಆ ಹೊಟೇಲ್‌ಗೆ ಈಗ ಬೀಗ ಬಿದ್ದಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬೇಟೆ, ಕೇರಳದಲ್ಲಿ ಹುಲಿ ಚರ್ಮ ಉಗುರು ಮಾರಾಟಕ್ಕೆ ಯತ್ನಿಸಿದ ಖದೀಮರ ಬಂಧನ
ದಿ ಸ್ಟ್ರೈಟ್ಸ್ ಟೈಮ್ಸ್ ಪ್ರಕಾರ ಫೆಬ್ರವರಿ 3 ರ ಮಧ್ಯರಾತ್ರಿಯ ನಂತರ ಈ ಘಟನೆ ಸಂಭವಿಸಿದೆ, ಖಾಲಿಯಾಗದೇ ಉಳಿದ ಆಹಾರವನ್ನು ಹೊಟೇಲ್ ಸಿಬ್ಬಂದಿ ಹೊಟೇಲ್ ಆವರಣದ ಹಿಂದೆ ತೊಳೆಯುತ್ತಿರುವುದನ್ನು ದಾರಿಹೋಕರೊಬ್ಬರು ನೋಡಿದ್ದು, ವೀಡಿಯೋ ಮಾಡಿದ್ದಾರೆ. ಹೊಟೇಲ್ ಸಿಬ್ಬಂದಿ ಕೋಳಿ, ಮಟನ್ ಮತ್ತು ಬೀನ್ ಕರ್ಡ್‌ನ್ನು ತೊಳೆಯುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ನೋಡಿವರು ಪ್ರಶ್ನಿಸಿದಾಗ, ಆ ಸಿಬ್ಬಂದಿ ಆರಂಭದಲ್ಲಿ ಏನು ಹೇಳಬೇಕು ಎಂದು ತಿಳಿಯದೇ ತಡವರಿಸಿದ್ದಾರೆ ಪ್ರಶ್ನೆಗೆ ಉತ್ತರಿಸಲು ನಿರ್ಲಕ್ಷಿಸಿದ್ದಾನೆ. ಆದರೆ ಆ ದಾರಿಹೋಕರು ಬಿಡದೇ ಕೇಳಿದಾಗ ಆಹಾರವನ್ನು ಮರುದಿನ ಮತ್ತೆ ಬೇಯಿಸಿ ಮರುಬಳಕೆ ಮಾಡಲಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಈ ವೀಡಿಯೊ ತ್ವರಿತವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಹೊಟೇಲ್‌ನ ಸ್ವಚ್ಛತಾ ಮಾನದಂಡಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಯ್ತು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವಾದ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.
ನಂತರ ಮಲೇಷ್ಯಾದ ಆಹಾರ ಕಾಯ್ದೆಯಡಿಯಲ್ಲಿ ರೆಸ್ಟೋರೆಂಟ್ ಮುಚ್ಚಲಾಗಿದೆ. ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ನೆಗೇರಿ ಸೆಂಬಿಲನ್ ಆರೋಗ್ಯ ಇಲಾಖೆಯು ವೀಡಿಯೊ ವೈರಲ್ ಆದ ಕ್ಷಣದಿಂದ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿತು ಮತ್ತು ನಂತರ ಮಲೇಷ್ಯಾದ ಆಹಾರ ಕಾಯ್ದೆ 1983 ರ ಸೆಕ್ಷನ್ 11 ರ ಅಡಿಯಲ್ಲಿ ರೆಸ್ಟೋರೆಂಟ್ ಅನ್ನು 14 ದಿನಗಳವರೆಗೆ ಮುಚ್ಚಲು ಆದೇಶಿಸಿತು. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳಲು ವಿಫಲವಾದ ಹೊಟೇಲ್ ಮಾಲೀಕರಿಗೆ RM 750 (ಅಂದಾಜು 13,000 ರೂ) ದಂಡ ವಿಧಿಸಲಾಯ್ತು. ಇಲ್ಲಿ ಹೊಟೇಲ್ ಹೀಗೆ ಮುಚ್ಚಲ್ಪಟ್ಟರೆ 3ನೇ ದಿನ ಅಧಿಕಾರಿಗಳು ಮತ್ತೆ ಬಂದು ಪರಿಶೀಲಿಸುತ್ತಾರೆ. ವ್ಯವಸ್ಥೆ ಸರಿಪಡಿಸಲಾಗಿದೆಯೋ ಎಂದು ಗಮನಿಸುತ್ತಾರೆ. ಬೇಯಿಸಿದ ಉಳಿದ ವಸ್ತುಗಳನ್ನು ತೊಳೆದು ಮರುಬಳಕೆ ಮಾಡುವುದರಿಂದ ಗ್ರಾಹಕರು ಆಹಾರ ವಿಷ ಮತ್ತು ಗಂಭೀರ ಆರೋಗ್ಯ ಅಪಾಯಗಳಿಗೆ ಒಳಗಾಗಬಹುದು ಎಂದು ಅಧಿಕಾರಿಗಳು ಒತ್ತಿ ಹೇಳಿದರು.
ಇದನ್ನೂ ಓದಿ: 50ನೇ ವಸಂತಕ್ಕೆ ಕಾಲಿರಿಸಿದ ಅಭಿಷೇಕ್ ಬಚ್ಚನ್: ಎಲ್ಲರ ಗಮನ ಸೆಳೆಯಿತು ಪತ್ನಿ ಐಶ್ ಮಾಡಿದ ವಿಶ್
ಇತ್ತ ಆಹಾರವನ್ನು ಮರು ಬಳಕೆಗಾಗಿ ತೊಳೆಯುತ್ತಿರುವ ವೀಡಿಯೋ ವೈರಲ್ ಆಗ್ತಿದ್ದಂಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೊದಲ್ಲಿ ಸಿಬ್ಬಂದಿ ಉಳಿದ ಆಹಾರವನ್ನು ಬೇಸಿನ್‌ನಲ್ಲಿ ತೊಳೆದು, ನಂತರ ಅವುಗಳನ್ನು ಟ್ರೇಗಳಿಗೆ ಹಾಕುವುದನ್ನು ನೋಡಬಹುದು. ಈ ವೀಡಿಯೋ ಮಾಡಿದ ಪ್ರತ್ಯಕ್ಷದರ್ಶಿ ಈ ಕೃತ್ಯವನ್ನು ಅಪಾಯಕಾರಿ ಹಾಗೂ ಕಾನೂನು ಬಾಹಿರ ಎಂದು ಬಣ್ಣಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.