ಶುಂಠಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಯಲು ಬಿಡಿ. ಚೆನ್ನಾಗಿ ಕುದ್ದ ಬಳಿಕ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಪ್ರತಿ ದಿನ ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಜಿಂಜರ್ ವಾಟರ್ ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
ಭಾರತೀಯ ಅಡಿಗೆಪದಾರ್ಥಗಳ ಘಾಟಿ ಮುದುಕಿ ಶುಂಠಿ. ತಂಬುಳಿಗೆ ಘಾಟು, ಮಸಾಲೆಗೆ ಪರಿಮಳ, ಜ್ಯೂಸ್‌ಗೆ ಫ್ಲೇವರ್ ನೀಡಿ ತನ್ನ ಇರುವಿಕೆಯನ್ನು ಸಾಬೀತುಪಿಸುವಷ್ಟು ಸ್ಟ್ರಾಂಗ್ ವ್ಯಕ್ತಿತ್ವ ಅದರದ್ದು. ಕೇವಲ ಅಡುಗೆಯಷ್ಟೇ ಅಲ್ಲದೆ, ಕೆಮ್ಮು, ಕಫ, ಶೀತಕ್ಕೆ ಮದ್ದಾಗಿ, ಸಂಕಟಕ್ಕೆ ಶಮನಕಾರಿಯಾಗಿ, ಇನ್ಫೆಕ್ಷನ್‌ಗಳನ್ನು ಇಂಚಿಂಚಾಗಿ ಹೋಗಲಾಡಿಸುವ ತಾಕತ್ತು ಶುಂಠಿಗಿದೆ. ಹಾಗಾಗಿಯೇ ಆಯುರ್ವೇದ ಹಾಗೂ ಹೋಮಿಯೋಪತಿ ವೈದ್ಯಕೀಯ ಪದ್ಧತಿಗಳಲ್ಲಿ ಶುಂಠಿಗೆ ಮಹತ್ವದ ಸ್ಥಾನವಿದೆ. ಹೀಗೆ ಶುಂಠಿಯ ಪ್ರಯೋಜನಗಳು ದೇಹಕ್ಕೆ ದಿನಾ ಸಿಗಬೇಕೆಂದರೆ, ಪ್ರತಿ ದಿನ ಶುಂಠಿ ನೀರನ್ನು ಕುಡಿವ ಅಭ್ಯಾಸ ಮಾಡಿಕೊಳ್ಳಿ. ಈ ಜಿಂಜರ್ ವಾಟರ್ ಮಾಡುವುದೂ ಸುಲಭವೇ.
ಶುಂಠಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಯಲು ಬಿಡಿ. ಚೆನ್ನಾಗಿ ಕುದ್ದ ಬಳಿಕ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಪ್ರತಿ ದಿನ ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಜಿಂಜರ್ ವಾಟರ್ ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
ಬಿಪಿ ನಿಯಂತ್ರಣ
ರಕ್ತದೊತ್ತಡ ಸಮಸ್ಯೆ ಇರುವವರು ಈ ಜಿಂಜರ್ ವಾಟರ್ ಕುಡಿವ ಅಭ್ಯಾಸ ರೂಢಿಸಿಕೊಳ್ಳುವುದರಿಂದ, ಬಿಪಿ ನಿಯಂತ್ರಣದಲ್ಲಿಡಬಹುದು. ಸ್ಮಾರ್ಟ್ ವ್ಯಕ್ತಿಯ ಆಸ್ಪಿರಿನ್ ಎಂದೇ ಹೆಸರಾಗಿರುವ ಶುಂಠಿಯು ರಕ್ತವನ್ನು ತೆಳುವಾಗಿಸುತ್ತದೆ. ಜಿಂಜರ್ ವಾಟರ್‌ನಈ ಗುಣ ರಕ್ತ ಅಲ್ಲಲ್ಲಿ ಗಂಟು ಕಟ್ಟುವುದನ್ನೂ ತಡೆಯುತ್ತದೆ.
ವರ್ಷದ ಕೂಸಿಗೆ ಹರ್ಷ ನೀಡುವ ಫುಡ್ ಪಟ್ಟಿ, ನಿಮ್ಮ ಮಗುವಿಗೆ ಏನ್‌ಕೊಡ್ತಿದ್ದೀರಾ?...
ಕೊಲೆಸ್ಟೆರಾಲ್ ಮಟ್ಟ ಇಳಿಕೆ
ಎಲ್‌ಡಿಎಲ್ ಅಧಿಕ ಮಟ್ಟ ಅಥವಾ ಕೆಟ್ಟ ಕೊಲೆಸ್ಟೆರಾಲ್ ಹೃದಯ ಕಾಯಿಲೆಗಳನ್ನು ತರುವುದರಲ್ಲಿ ನಂಬರ್ ಒನ್ ವಿಲನ್. 2014ರಲ್ಲಿ ನಡೆದ ಅಧ್ಯಯನದ ಪ್ರಕಾರ, ಶುಂಠಿಯು ನಮ್ಮ ಕೊಲೆಸ್ಟೆರಾಲ್ ಹಾಗೂ ಟ್ರೈಗ್ಲಿಸೆರೈಡ್ಸ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ, ಹೃದಯ ಸಮಸ್ಯೆಗಳಿರುವವರು ಶುಂಠಿಯನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ.
ಸೋಂಕು ಶಮನ
ತಾಜಾ ಶುಂಠಿಯಿಂದ ಕುದಿಸಿದ ನೀರು ದೇಹದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಹಾಗಾಗಿ, ಪ್ರತಿದಿನ ಸೇವಿಸುವುದರಿಂದ ಹಲವಾರು ಸೋಂಕುಗಳನ್ನು ದೂರವಿಡಬಹುದು. ಇನ್ನು ಉಸಿರಾಟಕ್ಕೆ ಸಂಬಂಧಿಸಿದ ಇನ್ಫೆಕ್ಷನ್‌ಗಳನ್ನು ತರುವ ರೆಸ್ಪಿರೇಟರಿ ಸಿನ್ಸಿಟಿಕಲ್ ವೈರಸ್ ವಿರುದ್ಧ ಕೂಡಾ ಶುಂಠಿ ಪರಿಣಾಮಕಾರಿಯಾಗಿ ಹೋರಾಡಿ ಉಸಿರಾಟ ಸಮಸ್ಯೆಗಳನ್ನು ತಗ್ಗಿಸುತ್ತದೆ.
ಆ್ಯಂಟಿಆಕ್ಸಿಡೆಂಟ್‌ಗಳು
ಶುಂಠಿಯಲ್ಲಿ ಜಿಂಜೆರಾಲ್ ಎಂಬ ಕೆಮಿಕಲ್ ಹೇರಳವಾಗಿದ್ದು, ಇದು ಬಹುತೇಕ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಈ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ, ಯಾವುದೇ ಗಡ್ಡೆಯಾಗದಂತೆ ನೋಡಿಕೊಳ್ಳುತ್ತದೆ. ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಿದ್ದಷ್ಟೂ ತ್ವಚೆ ಹೊಳಪು ಪಡೆಯುತ್ತದೆ ಎಂಬುದು ಮತ್ತೊಂದು ಪ್ಲಸ್ ಪಾಯಿಂಟ್.
ವೀಕೆಂಡ್‌ನಲ್ಲಿ ಮಕ್ಕಳಿಗೆ ವೆಜ್ ಪರೋಠಾ ಮಾಡ್ಕೊಡಿ...
ರಕ್ತ ಸಂಚಲನ
ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುವಲ್ಲಿ ಜಿಂಕ್ ಹಾಗೂ ಮೆಗ್ನೀಶಿಯಂ ಪ್ರಮುಖ ಪಾತ್ರ ವಹಿಸುತ್ತವೆ. ಈ ಎರಡೂ ಕೂಡಾ ಶುಂಠಿಯಲ್ಲಿ ಅಧಿಕವಾಗಿವೆ. ಹೀಗಾಗಿ, ಪ್ರಥಿ ದಿನ ಜಿಂಜರ್ ವಾಟರ್ ಸೇವನೆಯಿಂದ ರಕ್ತ ಪರಿಚಲನೆ ಚೆನ್ನಾಗಾಗುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.
ನ್ಯೂಟ್ರಿಯೆಂಟ್ಸ್
ಪ್ರತಿದಿನ ಜಿಂಜರ್ ವಾಟರ್ ಸೇವನೆಯಿಂದ ಆರೋಗ್ಯ ಬಹಳಷ್ಟು ಮಟ್ಟಿಗೆ ಚೆನ್ನಾಗಾಗುತ್ತದೆ. ಏಕೆಂದರೆ, ಶುಂಠಿಯು ಹೊಟ್ಟೆಯಲ್ಲಿ ಬೈಲ್ ಜ್ಯೂಸ್ ಹೆಚ್ಚು ಉತ್ಪಾದನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಎಲ್ಲ ಆಹಾರಗಳ ಪೋಷಕಸತ್ವಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಫ್ಲೂ ವಿರುದ್ಧ ಹೋರಾಟ
ಸದಾ ಶೀತದಿಂದ ಒದ್ದಾಡುವವರು ಶುಂಠಿ ನೀರನ್ನು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಇದು ಫ್ಲೂ ಹಾಗೂ ಶೀತವನ್ನು ದೂರವಿಡಲು ಸಹಾಯ ಮಾಡುತ್ತದೆ. ಶುಂಠಿಯು ಎದೆ ಹಾಗೂ ಗಂಟಲು ಕಟ್ಟುವಿಕೆ ತಡೆಯುತ್ತದೆ. ಜೊತೆಗೆ ಅತಿಯಾದ ಸಿಂಬಳವು ಒಣಗುವಂತೆ ಮಾಡಿ, ಅದು ಕಟ್ಟದಂತೆ ನೋಡಿಕೊಳ್ಳುತ್ತದೆ.
ಕೈಕಾಲು ನೋವು
ಜಿಂಜರ್‌ನ ಆ್ಯಂಟಿ ಇನ್ಫ್ಲಮೇಟರಿ ಗುಣದಿಂದಾಗಿ ಅದು ಸ್ನಾಯು ಹಾಗೂ ಗಂಟುಗಳಲ್ಲಿ ನೋವು ಬರದಂತೆ ನೋಡಿಕೊಂಡು ಕಂಫರ್ಟ್ ಆಗಿಡುತ್ತದೆ. ಇದೇನು ತಕ್ಷಣ ಸಾಧ್ಯವಾಗುವ ವಿಷಯವಲ್ಲ. ಆದರೆ, ಜಿಂಜರ್ ವಾಟರ್ ಅಭ್ಯಾಸವಾದಲ್ಲಿ ಒಂದಿಷ್ಟು ಸಮಯದ ಬಳಿಕ ಈ ಬೆಳವಣಿಗೆ ಗಮನಕ್ಕೆ ಬರುತ್ತದೆ.