
'ಆಧುನಿಕ ಅಡುಗೆಯ ಗಾಡ್‌ಫಾದರ್' ಎಂದೇ ಹೆಸರಾದವರು ಇಂಗ್ಲೆಂಡ್‌ನ ಶೆಫ್ ಮಾರ್ಕೋ ಪಿಯರ್ ವೈಟ್. 1994ರ ಹೊತ್ತಿಗೇ ತಮ್ಮ 33ನೇ ವಯಸ್ಸಿಗಾಗಲೇ 3 ಮಿಶ್ಲೆನ್ ಸ್ಟಾರ್‌ಗಳನ್ನು ಗಳಿಸಿದ ಖ್ಯಾತಿ ಇವರದ್ದು. ಈ ವರ್ಷ ಗೋಲ್ಡ್ ರಶ್‌ನ 'ವರ್ಲ್ಡ್ ಆನ್ ಎ ಪ್ಲೇಟ್' ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದ ಮಾರ್ಕೋ, ಭಾರತೀಯ ಆಹಾರದ ಕುರಿತು ಕೆಲ ಮಾತನ್ನಾಡಿದ್ದು, ಅದರಲ್ಲಿ ಓದುಗರಿಗೆ ಹೆಮ್ಮೆ ಎನಿಸುವಂಥ ಸಂಗತಿಗಳಿವೆ.
ಅವರೇನಂದಿದ್ದಾರೆಂದು ಅವರ ಮಾತಲ್ಲೇ ಕೇಳೋಣ ಬನ್ನಿ...
'ಭಾರತೀಯ ಬೇಳೆಕಾಳುಗಳ ಮೇಲೆ ನನಗೆ ಲವ್ ಆಗಿದೆ. ಯಾವುದೇ ದಿನದ ಯಾವುದೇ ಹೊತ್ತಿನಲ್ಲಿ ಕೊಟ್ಟರೂ ನಾನು ಖುಷಿಯಿಂದ ತಿನ್ನಬಲ್ಲೆನಿಂಬ ಅಡುಗೆಯೊಂದಿದ್ದರೆ ಅದು ಸಾಂಬಾರ್. ಹುಳಿ, ಸುಹಿ ಹಾಗೂ ಖಾರಗಳ ಪರ್ಫೆಕ್ಟ್ ಮಿಶ್ರಣದಿಂದಾಗಿ ಸಾಂಬಾರ್ ಎಂಬುದಕ್ಕೆ ಮ್ಯಾಜಿಕಲ್ ರುಚಿ ದೊರೆಯುತ್ತದೆ. ಭಾರತೀಯ ಸಾಂಬಾರ ಪದಾರ್ಥಗಳ ವಿಷಯಕ್ಕೆ ಬಂದರೆ, ಅವು ಇಲ್ಲಿನ ಅಡುಗೆಯೆಂಬ ಪುಟಕ್ಕಿಟ್ಟ ಚಿನ್ನ. ದಾಲ್ಚೀನಿಯಿಂದ ಹಿಡಿದು ಅರಿಶಿನದವರೆಗೆ ಇಲ್ಲಿನ ಎಲ್ಲ ಸಾಂಬಾರ್ ಪದಾರ್ಥಗಳೂ ಬಹಳ ಆಕರ್ಷಕವೇ. ಸಮಯ ಹೋದಂತೆಲ್ಲ, ಹೆಚ್ಚು ಹೆಚ್ಚು ಆಹಾರ ಪದಾರ್ಥಗಳ ರುಚಿ ನೋಡಿದಂತೆಲ್ಲ ನನಗೆ ತಿಳಿದದ್ದೇನೆಂದರೆ ಈ ಸಾಂಬಾರ ಪದಾರ್ಥಗಳು ಒಂದೊಂದು ಆಹಾರದಲ್ಲಿ ಒಂದೊಂದು ರುಚಿ ಕೊಟ್ಟು ಭಿನ್ನವಾಗಿ ವರ್ತಿಸುತ್ತವೆ. ಅವನ್ನು ಎಷ್ಟು ಬಳಸುತ್ತೇವೆ, ಯಾವುದರೊಂದಿಗೆ ಬಳಸುತ್ತೇವೆ ಎಂಬ ಆಧಾರದಲ್ಲಿ ರುಚಿಯನ್ನೂ ಬೇರೆಯಾಗಿ ನೀಡುತ್ತವೆ. ಆಧರೆ, ಇಂಗ್ಲೆಂಡ್‌ನಲ್ಲಿ ನಾವು ಬಳಸುವ ಮಸಾಲೆ ಪದಾರ್ಥಗಳು ಹಾಗಲ್ಲ.'
ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ...
ಆಹಾರ ಹಾಗೂ ಆಧ್ಯಾತ್ಮ
'ಆಧ್ಯಾತ್ಮ ಹೇಗೆ ನಿಮ್ಮನ್ನು ನಿಮ್ಮ ಅಂತರಂಗಕ್ಕೆ ಕನೆಕ್ಟ್ ಮಾಡುತ್ತದೆಯೋ, ಭಾರತದ ಆಹಾರಗಳೂ ಅದೇ ಕೆಲಸ ಮಾಡುತ್ತವೆ. ಇಲ್ಲಿ ಆಹಾರ ಪದಾರ್ಥಗಳು ಕೇವಲ ಬಾಯಿಚಪಲದ ತಿನಿಸಾಗದೆ, ಹೆಚ್ಚು ತತ್ವಗಳನ್ನಡಗಿಸಿಕೊಂಡಿವೆ. ಅಷ್ಟೇ ಅಲ್ಲದೆ, ಇಲ್ಲಿನ ಪ್ರತೀ ಆಹಾರದ ಹಿಂದೂ ಒಂದೊಂದು ಕತೆ ಅಡಗಿದೆ. ಇದರಿಂದ ಆ ಆಹಾರವು ನಮ್ಮ ಹಾಗೂ ಅದರ ನಡುವಿನ ಬಾಂಡ್ ಹೆಚ್ಚಿಸುತ್ತದೆ. ಭಾರತದ ನನ್ನ ಪ್ರವಾಸದಲ್ಲಿ ಫೋರ್ಕ್ ಹಾಗೂ ನೈಫ್ ಎಸೆದು, ಬೆರಳುಗಳಿಂದ ಆಹಾರ ಸೇವಿಸುವ ಸುಖವನ್ನು ಅರಿತಿದ್ದೇನೆ. ಇದೊಂತರಾ ವಿಶೇಷ ತೃಪ್ತಿ ನೀಡುತ್ತದೆ.'
ಬ್ರಿಟನ್‌ನಲ್ಲಿ ಭಾರತೀಯ ಆಹಾರ
'ಭಾರತೀಯ ಬಟರ್ ಚಿಕನ್‌ಗೂ ಇಂಗ್ಲೆಂಡ್‌ನ ಆಹಾರ ಸಂಸ್ಕೃತಿಗೂ ಒಂದು ಸಂಬಂಧವಿದೆ. ಅಲ್ಲಿನ ಜನರು ಇದನ್ನು ಸವಿಯುವ ಪರಿ ನೋಡಿ ನಾನು ಬೆರಗಾಗಿದ್ದೇನೆ. ಆದರೆ ಭಾರತೀಯ ನೆಲದಲ್ಲಿ ಆಹಾರಕ್ಕೆ ಸಿಗುವ ಆ ಒಂದು ಮ್ಯಾಜಿಕ್ ಫ್ಲೇವರ್, ಇಂಗ್ಲೆಂಡ್‌ನಲ್ಲಿ ಮಿಸ್ ಆಗಿದೆ. ಈ ಮ್ಯಾಜಿಕ್ ನಾನು ಮೊದಲ ಬಾರಿ ಮುಂಬೈಗೆ ಬಂದಿಳಿದಾಗಲೇ ಅನುಭವಕ್ಕೆ ಬಂದಿತು.'
ಸ್ಟ್ರೀಟ್ ಫುಡ್ ಹಾಗೂ ಮಾರ್ಕೋ
'ನನಗೆ ಸ್ಟ್ರೀಟ್ ಫುಡ್ ಇಷ್ಟ. ಏಕೆಂದರೆ, ರೆಸ್ಟೋರಾಗಳ ಗೋಡೆಯಾಚೆಗೆ ಸಾಂಬಾರ ಪದಾರ್ಥಗಳು ಹೇಗೆ ವರ್ತಿಸುತ್ತವೆ ಎಂದು ಅರಿಯಲು ಅವು ಸಹಾಯ ಮಾಡುತ್ತವೆ. ಜೊತೆಗೆ, ಆಹಾರ ಹೇಗೆ ಸಂಸ್ಕೃತಿಯೊಂದಿಗೆ ಬೆರೆತಿದೆ ಎಂದು ಅರ್ಥ ಮಾಡಿಕೊಳ್ಳಲು ಸ್ಟ್ರೀಟ್ ಫುಡ್ ಸುಲಭದ ದಾರಿ. ಆದರೂ, ಭಾರತದ ಸ್ಟ್ರೀಟ್ ಫುಡ್‌ಗಳನ್ನು ನಾನು ಇನ್ನಷ್ಟು ಎಕ್ಸ್‌ಪ್ಲೋರ್ ಮಾಡಬೇಕಿದೆ ಹಾಗೂ ಮಸಾಲೆಗಳನ್ನು ಬಳಸುವ ಕಲೆ ಅರಿತಿರುವ ನೆಲದ ಆಹಾರದ ಕುರಿತು ನನ್ನ ಜ್ಞಾನವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕಿದೆ.'
ಅನ್ನ-ದಾಲ್ ಎಂಬ ಅನನ್ಯ ಡಯಟ್ ಫುಡ್!...
ಮಾರ್ಕೋ ಅವರ ಮಾತು ಕೇಳುತ್ತಿದ್ದರೆ, ಭಾರತೀಯರ ಪ್ರತಿ ಮನೆ ಮನೆಯಲ್ಲೂ ವರ್ಲ್ಡ್ ಕ್ಲಾಸ್ ಶೆಫ್‌ಗಳಿದ್ದಾರೆ ಎನಿಸುತ್ತದೆ ಅಲ್ಲವೇ? ಪ್ರತಿಯೊಬ್ಬರ ಕೈ ರುಚಿಯಲ್ಲೂ ಪಳಗಿದ ಪಾಕ ಪ್ರಾವೀಣ್ಯತೆ ಇದೆ. ಮಸಾಲೆ ಪದಾರ್ಥಗಳು ನಮ್ಮ ಬೆರಳಿನ ಚಲನೆಗೆ ತಕ್ಕಂತೆ ನರ್ತಿಸುತ್ತವೆ. ಆಹಾರದ ವೆರೈಟಿ ಎಂಬುದಂತೂ ಇಲ್ಲಿ ಇನ್ಫಿನಿಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.