ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ

Suvarna News   | Asianet News
Published : Feb 20, 2020, 04:32 PM ISTUpdated : Feb 20, 2020, 08:09 PM IST
ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ

ಸಾರಾಂಶ

ಬಿರಿಯಾನಿ ಭಾರತದ ನಾನ್‍ವೆಜ್ ಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂಬುದು ಎಲ್ಲರಿಗೂ ಗೊತ್ತು. ವಿದೇಶದಲ್ಲಿರುವವರಿಗೆ ಕೂಡ ಈ ಖಾದ್ಯದ ಬಗ್ಗೆ ಕುತೂಹಲವಿದೆ ಎಂಬುದಕ್ಕೆ ಇಂಟರ್ನೆಟ್‍ನಲ್ಲಿ ಜಾಗತಿಕವಾಗಿ ಅತಿಹೆಚ್ಚು ಸರ್ಚ್‍ಗೊಳಗಾದ ಭಾರತೀಯ ಖಾದ್ಯಗಳಲ್ಲಿ ಬಿರಿಯಾನಿ ಟಾಪ್ ಸ್ಥಾನ ಗಳಿಸಿರುವುದೇ ಸಾಕ್ಷಿ. ಅಷ್ಟಕ್ಕೂ ಯಾವ ಬಿರಿಯಾನಿ?

ಬಿರಿಯಾನಿ ಹೆಸರು ಕೇಳಿದ್ರೆ ಕೆಲವರಿಗೆ ಬಾಯಿಯಲ್ಲಿ ನೀರಿಳಿಯುತ್ತದೆ. ಅದರಲ್ಲೂ ನೀವು ನಾನ್‍ವೆಜಿಟೇರಿಯನ್ ಆಗಿದ್ರೆ ನಿಮ್ಮ ಮೆಚ್ಚಿನ ಖಾದ್ಯಗಳ ಪಟ್ಟಿಯಲ್ಲಿ ಚಿಕನ್ ಬಿರಿಯಾನಿಯಂತೂ ಇದ್ದೇಇರುತ್ತದೆ. ರೆಸ್ಟೋರೆಂಟ್‍ಗೆ ಹೋದ್ರೂ, ಮನೆಯಲ್ಲಿ ಪಾರ್ಟಿ ಮಾಡಿದ್ರೂ ನಿಮ್ಮ ಫೇವರೆಟ್ ಫುಡ್ ಬಿರಿಯಾನಿನೇ ಆಗಿರೋದ್ರಲ್ಲಿ ಸಂಶಯವೇ ಇಲ್ಲ. ರೈಸ್ ಹಾಗೂ ಮಸಾಲ ಎರಡರ ಟೆಸ್ಟ್ ಅನ್ನೂ ಒಟ್ಟಿಗೆ ಹೊಂದಿರುವ ಬಿರಿಯಾನಿ ಭಾರತೀಯರಿಗೆ ಇಷ್ಟವಾದ್ರೆ, ಬೇರೆ ದೇಶದಲ್ಲಿರುವವರಿಗೆ ಈ ರೆಸಿಪಿ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿದೆ.ಇದಕ್ಕೆ 2019ರಲ್ಲಿ ಇಂಟರ್ನೆಟ್‍ನಲ್ಲಿ ಜಾಗತಿಕವಾಗಿ ಅತಿಹೆಚ್ಚು ಸರ್ಚ್‍ಗೆ ಒಳಗಾಗಿರುವ ಭಾರತೀಯ ಖಾದ್ಯಗಳ ಪಟ್ಟಿಯಲ್ಲಿ ಚಿಕನ್ ಬಿರಿಯಾನಿ ಮೊದಲ ಸ್ಥಾನ ಗಳಿಸಿದ್ದರೆ, ದಕ್ಷಿಣ ಭಾರತದ ಮಸಾಲೆ ದೋಸೆ ಎರಡನೇ ಸ್ಥಾನ ಪಡೆದಿದೆ.  ಹೊಸ ಅಧ್ಯಯನವೊಂದು ಈ ವಿಷಯ ಬಹಿರಂಗಪಡಿಸಿದ್ದು, ಅದರಲ್ಲಿ ಕಂಡುಬಂದ ಆಸಕ್ತಿಕರ ಸಂಗತಿಗಳು ಇಲ್ಲಿವೆ:

ಅನ್ನ-ದಾಲ್ ಎಂಬ ಅನನ್ಯ ಡಯಟ್ ಫುಡ್!

-ಬಿರಿಯಾನಿಯಲ್ಲಿ ಚಿಕನ್ ಬಿರಿಯಾನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. 2019ನೇ ಸಾಲಿನಲ್ಲಿ ಪ್ರತಿ ತಿಂಗಳು ಸುಮಾರು 4.56 ಲಕ್ಷ ಜನರು ಇಂಟರ್ನೆಟ್‍ನಲ್ಲಿ ಚಿಕನ್ ಬಿರಿಯಾನಿ ಬಗ್ಗೆ ಸರ್ಚ್ ಮಾಡಿದ್ದಾರೆ.
- ಅತಿ ಹೆಚ್ಚು ಸರ್ಚ್‍ಗೊಳಗಾದ ಟಾಪ್ 10 ಭಾರತೀಯ ಖಾದ್ಯಗಳಲ್ಲಿ ಬಟರ್ ಚಿಕನ್, ಸಮೋಸ, ಚಿಕನ್ ಟಿಕ್ಕ, ಮಸಾಲ ದೋಸೆ, ತಂದೂರಿ ಚಿಕನ್, ಪಾಲಕ್ ಪನ್ನೀರ್, ನಾನ್, ದಾಲ್ ಮಖನಿ ಹಾಗೂ ಚಾಟ್ ಕೂಡ ಸೇರಿವೆ.
-ಜನಪ್ರಿಯ ಪಂಜಾಬಿ ಖಾದ್ಯ ಬಟರ್ ಚಿಕನ್ ಸರಿಸುಮಾರು 4ಲಕ್ಷ ಬಾರಿ ಸರ್ಚ್ ಮಾಡಲ್ಪಟ್ಟಿದೆ.
-ಉತ್ತರ ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ಸಮೋಸ 3.9ಲಕ್ಷ ಬಾರಿ ಸರ್ಚ್‍ಗೊಳಗಾಗಿದೆ.
-ಇನ್ನೊಂದು ಜನಪ್ರಿಯ ಪಂಜಾಬಿ ಖಾದ್ಯ ಚಿಕನ್ ಟಿಕ್ಕ ಮಸಾಲ 2.5 ಲಕ್ಷ ಬಾರಿ ಸರ್ಚ್‍ಗೊಳಗಾಗಿದೆ.
-ಇನ್ನು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ ದೋಸೆ 2.8 ಲಕ್ಷ ಬಾರಿ ಇಂಟರ್ನೆಟ್‍ನಲ್ಲಿ ಹುಡುಕಲ್ಪಟ್ಟಿದೆ.

ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

-ಸ್ನಾಕ್ಸ್ಗಳಲ್ಲಿ ಖಾರ ಹಾಗೂ ಪರಿಮಳಭರಿತವಾದ ಸಮೋಸ ಹಾಗೂ ಚಾಟ್ ಮಾತ್ರ ಟಾಪ್ 10 ಸರ್ಚ್‍ಗೊಳಗಾದ ಖಾದ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.ಇವುಗಳ ರೆಸಿಪಿ ಬಗ್ಗೆ ಆನ್‍ಲೈನ್‍ನಲ್ಲಿ ಸಾಕಷ್ಟು ಹುಡುಕಾಟ ನಡೆದಿದೆ.ಈ ಎರಡೂ ಖಾದ್ಯಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದು,ವಿಶ್ವದ ವಿವಿಧ ಭಾಗದಲ್ಲಿ ನೆಲೆಸಿರುವ ಈ ಭಾಗದ ಕುಟುಂಬಗಳು ಈ ಎರಡೂ ಖಾದ್ಯಗಳ ರೆಸಿಪಿಗೆ ಹೆಚ್ಚು ಹುಡುಕಾಟ ನಡೆಸಿವೆ.
-ಈ ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಎರಡೇ ಎರಡು ಸಸ್ಯಹಾರಿ ಖಾದ್ಯಗಳೆಂದರೆ ಪಾಲಕ್ ಪನ್ನೀರ್ ಹಾಗೂ ದಾಲ್ ಮಖನಿ. ಈ ಎರಡೂ ಖಾದ್ಯಗಳು ಕೂಡ ಉತ್ತರ ಭಾರತದ್ದಾಗಿವೆ ಎಂಬುದು ವಿಶೇಷ. 
-ಇನ್ನು ಲಿಸ್ಟ್ನಲ್ಲಿರುವ ಏಕೈಕ ಬ್ರೆಡ್ ಐಟಂ ಅಂದ್ರೆ ನಾನ್. ಇದನ್ನು ರೆಸ್ಟೋರೆಂಟ್‍ಗಳಲ್ಲಿ ಪರಿಣಿತ ಬಾಣಸಿಗರು ಮಾತ್ರ ಸಮರ್ಪಕವಾಗಿ ಸಿದ್ಧಪಡಿಸಬಲ್ಲರು. 
-ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಪಂಜಾಬಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಆ ಭಾಗದ ಖಾದ್ಯಗಳು ಹೆಚ್ಚು ಸರ್ಚ್‍ಗೊಳಗಾಗಿವೆ ಎಂಬುದು ಅಧ್ಯಯನದ ನೇತೃತ್ವ ವಹಿಸಿದ್ದ ಸೆಮ್ರೊಶ್ ಸಂಸ್ಥೆಯ ಕಮ್ಯುನಿಕೇಷನ್ ಹೆಡ್ ಫೆರ್ನಡೋ ಅಂಗುಲೊ ಅಭಿಪ್ರಾಯ. 

ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್

-ಈ ಅಧ್ಯಯನದಿಂದ ಭಾರತ ಹಾಗೂ ಜಗತ್ತಿನಾದ್ಯಂತವಿರುವ ಬಾಣಸಿಗರಿಗೆ ಭಾರತೀಯ ಅಡುಗೆಯ ಮಾರ್ಕೆಟಿಂಗ್ ಟ್ರೆಂಡ್ ಹೇಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದು ಅವರಿಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ ಎಂಬುದು ಅಧ್ಯಯನದಲ್ಲಿ ಪಾಲ್ಗೊಂಡವರ ಅಭಿಪ್ರಾಯ. 

ನಿಮಿಷಕ್ಕೆ 95 ಬಿರಿಯಾನಿ ಆರ್ಡರ್: ಭಾರತದಲ್ಲಿ ಬಿರಿಯಾನಿ ನಾನ್‍ವೆಜ್ ಪ್ರಿಯರ ಅಚ್ಚುಮೆಚ್ಚಿನ ಫುಡ್ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಸಾಕ್ಷಿಯೆಂಬಂತೆ 2019ರಲ್ಲಿ ಭಾರತೀಯರು ಒಂದು ನಿಮಿಷಕ್ಕೆ 95 ಅಥವಾ ಸೆಕೆಂಡ್‍ಗೆ 1.6 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿಯ ವಾರ್ಷಿಕ ವರದಿ ಹೇಳಿದೆ. ಅದರಲ್ಲೂ ಬೋನ್‍ಲೆಸ್ ಚಿಕನ್ ಬಿರಿಯಾನಿ ಹಾಗೂ ಚಿಕನ್ ದಮ್ ಬಿರಿಯಾನಿ ಅತಿಹೆಚ್ಚು ಆರ್ಡರ್ ಮಾಡಲ್ಪಟ್ಟ ಫುಡ್‍ಗಳಾಗಿವೆ.

ಇನ್ನು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ ದೋಸೆ 2.8 ಲಕ್ಷ ಬಾರಿ ಇಂಟರ್ನೆಟ್‍ನಲ್ಲಿ ಹುಡುಕಲ್ಪಟ್ಟಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!