ಚಪಾತಿ ಮಿಕ್ಕಿದ್ಯಾ? ಚಿಂತೆ ಬಿಡಿ, ಅದ್ರಿಂದಾನೇ ಗರಿಗರಿಯಾದ ದೋಸೆ ಮಾಡಿ

By Vinutha Perla  |  First Published Jun 23, 2023, 10:57 AM IST

ರಾತ್ರಿ ಮಾಡಿರೋ ಚಪಾತಿ ಮಿಕ್ಕಿದ್ರೆ ಏನ್ ಮಾಡೋದಪ್ಪಾ ಅನ್ನೋ ಚಿಂತೆ ಹಲವರನ್ನು ಕಾಡುತ್ತೆ. ಬೆಳಗ್ಗೆಗೆ ಈ ಚಪಾತಿ ಗಟ್ಟಿಯಾಗೋ ಕಾರಣ ಹಾಗೇ ತಿನ್ನೋಕಂತೂ ಆಗಲ್ಲ. ಮತ್ತೇನ್ ಮಾಡ್ಬೋದು. ಇಲ್ಲಿದೆ ಕೆಲವು ಟಿಪ್ಸ್. ಇದನ್ನು ಫಾಲೋ ಮಾಡಿದ್ರೆ ನೀವು ಚಪಾತಿಯಿಂದ ಗರಿ ಗರಿಯಾದ ದೋಸೆ ಮಾಡ್ಬೋದು.


ಚಪಾತಿ, ಭಾರತೀಯ ಆಹಾರದ ಅವಿಭಾಜ್ಯ ಅಂಗವಾಗಿದೆ. ಚಪಾತಿ ಇಲ್ಲದೆ ಇಲ್ಲಿ ಯಾವ ಹೊತ್ತಿನ ಊಟವೂ ಪೂರ್ಣಗೊಳ್ಳುವುದಿಲ್ಲ. ಮಧ್ಯಾಹ್ನದ ಊಟವಾಗಿರಲಿ, ರಾತ್ರಿಯ ಊಟವಾಗಿರಲಿ ಸಾಕಷ್ಟು ಚಪಾತಿಯನ್ನಂತೂ ಮಾಡುತ್ತಾರೆ. ಆದರೆ ಹೀಗೆ ಚಪಾತಿ ಮಾಡಿದಾಗ ಕೆಲವೊಮ್ಮೆ ಒಂದೆರಡು ಚಪಾತಿಗಳು ಉಳಿದು ಬಿಡುತ್ತವೆ. ಆದರೆ ಅದನ್ನು ಮರುದಿನ ತಿನ್ನುವುದು ಕಷ್ಟ. ಹೀಗಾದಾಗ ಏನು ಮಾಡುವುದು. ಈ ಸಮಸ್ಯೆ ಹಲವರನ್ನು ಕಾಡಿರುತ್ತದೆ. ಕಷ್ಟಪಟ್ಟು ಮಾಡಿರುವ ಕಾರಣ ಅದನ್ನು ಎಸಿಯೋಕೆ ಯಾರಿಗೂ ಮನಸ್ಸು ಬರುವುದಿಲ್ಲ. ಇಂಥಾ ಸಮಸ್ಯೆ ಎದುರಾದಾಗ ಏನ್ ಮಾಡ್ಬೇಕು. ಮಿಕ್ಕ ಚಪಾತಿಯಿಂದ ಏನ್ ಮಾಡ್ಬೋದು. ಇಲ್ಲಿದೆ ಮಾಹಿತಿ.

ಗರಿ ಗರಿ ದೋಸೆಯನ್ನು (Dosa) ತಿನ್ನೋಕೆ ಯಾರು ತಾನೇ ಇಷ್ಟಪಡಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹೀಗೇ ರುಚಿಕರವಾದ (Tasty) ದೋಸೆಯನ್ನು ನೀವು ಮಿಕ್ಕಿರುವ ಚಪಾತಿಯಿಂದಲೂ ತಯಾರಿಸಬಹುದು. ಉಳಿದಿರುವ ಚಪಾತಿಗಳಿಂದ ನೀವು ಈ ಅದ್ಭುತವಾದ ಉಪಹಾರವನ್ನು ಮಾಡಬಹುದು. ಹೌದು, ಚಪಾತಿಯಿಂದ ಟೇಸ್ಟೀ ದೋಸೆ ಹೇಗೆ ತಯಾರಿಸಬಹುದು. ಹೆಚ್ಚಿನ ವಿವರ ಕೆಳಗಿದೆ.

Tap to resize

Latest Videos

ದೋಸೆ ಹೇಗೇಗೋ ಮಾಡಿದ್ರೆ ಚೆನ್ನಾಗಿ ಬರಲ್ಲ, ಸಿಂಪಲ್ ಟ್ರಿಕ್ಸ್ ತಿಳ್ಕೊಳ್ಳಿ

ಬೇಕಾದ ಪದಾರ್ಥಗಳು
ಮೂರರಿಂದ ನಾಲ್ಕು ಚಪಾತಿ
1/2 ಕಪ್ ಮೊಸರು
ಅರ್ಧ ಟೀಚಮಚ ಸಕ್ಕರೆ
ಒಂದು ಕಪ್ ರವೆ
1/4 ಟೀಚಮಚ ಅಡಿಗೆ ಸೋಡಾ
ರುಚಿಗೆ ಉಪ್ಪು
ಅಗತ್ಯವಿರುವಷ್ಟು ನೀರು
ದೋಸೆಯನ್ನು ಬೇಯಿಸಲು ಎಣ್ಣೆ ಅಥವಾ ಬೆಣ್ಣೆ

ಮಾಡುವ ವಿಧಾನ:
ಚಪಾತಿಯಿಂದ ದೋಸೆ ಮಾಡಲು, ಮೊದಲು ಮೂರರಿಂದ ನಾಲ್ಕು ಹಳೆಯ ಚಪಾತಿಯನ್ನು ತುಂಡುಗಳಾಗಿ ಕತ್ತರಿಸಿ. ಅದರಲ್ಲಿ ಅರ್ಧ ಕಪ್ ಮೊಸರು ಮತ್ತು ಅರ್ಧ ಚಮಚ ಸಕ್ಕರೆ (Sugar)ಯನ್ನು ಬೆರೆಸಿ 10 ರಿಂದ 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಚಪಾತಿ ಮೊಸರಿನಲ್ಲಿ ಚೆನ್ನಾಗಿ ಮೆತ್ತಗಾದ ನಂತರ ಅದನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ ಮತ್ತು ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಅರ್ಧ ಕಪ್ ರವೆ, ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಉಳಿದ ಅರ್ಧ ಕಪ್ ರವೆ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ದೋಸೆ ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅಗತ್ಯಕ್ಕೆ ತಕ್ಕಷ್ಟು ನೀರು (Water), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ಪಲ್ಪ ಅಡಿಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅಬ್ಬಾ ಏನ್‌ ಕ್ರಿಯೇಟಿವಿಟಿ..ಬೆಕ್ಕಿನ ಆಕಾರದ ದೋಸೆ ಮೇಕಿಂಗ್ ವೀಡಿಯೋ ವೈರಲ್

ದೋಸೆ ತವಾವನ್ನು ಬಿಸಿ ಮಾಡಿ. ಅದು ಸ್ವಲ್ಪ ಬಿಸಿಯಾದಾಗ, ದೋಸೆ ಹಿಟ್ಟನ್ನು ಅದರ ಮೇಲೆ ಸಮವಾಗಿ ಹರಡಿ. ಸ್ವಲ್ಪ ಬೆಣ್ಣೆ (Butter) ಅಥವಾ ಎಣ್ಣೆಯಿಂದ ಎರಡೂ ಬದಿಗಳಿಂದ ಗರಿಗರಿಯಾದ ಮತ್ತು ಚಿನ್ನದ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನೀವು ಇಷ್ಟಪಡುವುದಾದರೆ ಈ ದೋಸೆಯ ಮೇಲೆ ಆಲೂಗಡ್ಡೆ ಸ್ಟಫಿಂಗ್ ಅನ್ನು ಹಾಕಬಹುದು ಅಥವಾ ನೀವು ಸ್ವಲ್ಪ ತರಕಾರಿಗಳು ಮತ್ತು ಚೀಸ್ ಸೇರಿಸಿ ಅದನ್ನು ತುಂಬಿಸಬಹುದು. ಈಗ ಉಳಿದಿರೋ ಚಪಾತಿಯಿಂದ ಮಾಡಿದ ಗರಿಗರಿಯಾದ ಚಪಾತಿ ಸವಿಯಲು ಸಿದ್ಧವಾಗಿದೆ. ಇದನ್ನು ಸಾಂಬಾರ್, ಚಟ್ನಿ ಜೊತೆ ಸವಿಯಬಹುದು.

Gold coated Dosa: ವಾವ್ಹ್..ಮಿರಿಮಿರಿ ಮಿನುಗೋ ಚಿನ್ನದ ದೋಸೆ, ಬೆಲೆ ಕೇಳಿದ್ರೆ ದಂಗಾಗ್ತೀರಾ!

click me!