ದೋಸೆ ಸರಿಯಾಗಿ ಆಗಬೇಕು ಅಂದ್ರೆ ದೋಸೆ ಹಿಟ್ಟನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಸಿದ್ಧಪಡಿಸಬೇಕು. ಹೆಚ್ಚು ದಪ್ಪ ಅಥವಾ ಹೆಚ್ಚು ತೆಳು ಆಗಬಾರದು. ಹಿಟ್ಟು ಚೆನ್ನಾಗಿ ಆದ ದೋಸೆ ಸಹ ಕ್ರಿಸ್ಪೀಯಾಗಿ ರುಚಿಕರವಾಗಿರುತ್ತದೆ.
Image credits: others
ಹುದುಗುವಿಕೆ
ದೋಸೆ ಸರಿಯಾಗಿ ಆಗಲು ಹಿಟ್ಟಿನ ಹುದುಗುವಿಕೆ ಸಹ ಸರಿಯಾಗಿರಬೇಕು. ಹಿಟ್ಟು ಚೆನ್ನಾಗಿ ಹುದುಗದಿದ್ದರೆ ದೋಸೆ ಸಹ ಚೆನ್ನಾಗಿ ಆಗೋದಿಲ್ಲ. ಹೀಗಾಗಿ 8-12 ಗಂಟೆಗಳ ಕಾಲ ಹಿಟ್ಟು ಹುದುಗುವಂತೆ ನೋಡಿಕೊಳ್ಳಿ.
Image credits: others
ಹಿಟ್ಟನ್ನು ಸರಿಯಾಗಿ ಹರಡಿ
ದೋಸೆ ಹೊಯ್ಯೋದು ಕೂಡಾ ಒಂದು ಕಲೆ. ಅರ್ಧಂಬರ್ಧ ದೋಸೆ ಹೊಯ್ದರೆ ಅದು ಎಲ್ಲಾ ಕಡೆ ಸರಿಯಾಗಿ ಬೇಯದೇ ಇರಬಹುದು. ಹೀಗಾಗಿ ದುಂಡಗೆ, ದೋಸೆಯನ್ನು ನೀಟಾಗಿ ಎರೆದುಕೊಳ್ಳಿ.
Image credits: others
ಎಣ್ಣೆಯ ಬಳಕೆ
ದೋಸೆಗೆ ಎಣ್ಣೆಯ ಬಳಕೆ ಮಿತ ಪ್ರಮಾಣದಲ್ಲಿರಲಿ. ಹೆಚ್ಚೂ ಅಲ್ಲ.ಕಡಿಮೆಯೂ ಅಲ್ಲ. ಎಣ್ಣೆ ಹೆಚ್ಚಾದರೂ ದೋಸೆ ರುಚಿ ಕೆಡುತ್ತದೆ. ಕಡಿಮೆಯಾದರೂ ಇದು ದೋಸೆಯ ಕ್ರಿಸ್ಪೀನೆಸ್ ಹಾಳು ಮಾಡಬಹುದು.
Image credits: others
ಮಧ್ಯಮ ಉರಿಯಲ್ಲಿ ಬೇಯಿಸಿ
ದೋಸೆಯನ್ನು ಯಾವಾಗಲೂ ಮಧ್ಯಮ ಉರಿಯಲ್ಲಿ ಬೇಯಿಸಿ. ಇಲ್ಲದಿದ್ದರೆ ಸೀದು ಹೋಗಬಹುದು. ದೋಸೆ ಹೊಯ್ದ ತಕ್ಷಣ ಮಗುಚಿ ಹಾಕಲು ಹೋಕಬೇಡಿ. ಇದರಿಂದ ಹಿಟ್ಟು ತವಾಕ್ಕೆ ಅಂಟಿಕೊಂಡು ದೋಸೆ ಹಾಳಾಗುತ್ತದೆ.