
ಪಿಜ್ಜಾ ಹಲವರ ಫೇವರಿಟ್. ತರಕಾರಿ, ಸಾಸ್‌ಗಳನ್ನು ಸೇರಿಸಿ ಮಾಡೋ ಪಿಜ್ಜಾ ವೆಜ್ ಹಾಗೂ ನಾನ್ ವೆಜ್ ಎರಡೂ ವೆರೈಟಿಯಲ್ಲಿ ಲಭ್ಯವಿದೆ. ಆದರೆ ಅನಾರೋಗ್ಯಕರ ಆಹಾರ ಎಂಬ ಖ್ಯಾತಿಯನ್ನು ಗಳಿಸಿದೆ. ನಿಮ್ಮ ಮೆಚ್ಚಿನ ರೆಸ್ಟೋರೆಂಟ್‌ನಿಂದ ನೀವು ಸಾಮಾನ್ಯವಾಗಿ ಆರ್ಡರ್ ಮಾಡುವ ಪಿಜ್ಜಾದಲ್ಲಿ ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬು, ಸೇರಿಸಿದ ಸಕ್ಕರೆ ಮತ್ತು ಸಂರಕ್ಷಕಗಳು ಹೆಚ್ಚಾಗಿರುತ್ತದೆ. ಇಂಥಹಾ ಪದಾರ್ಥಗಳಿಂದ ತಯಾರಿಸಿದ ಪಿಜ್ಜಾವು ಹೃದಯರಕ್ತನಾಳದ ಕಾಯಿಲೆಗಳು, ಸ್ಥೂಲಕಾಯತೆ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಹೀಗಾಗಿ ಅನ್‌ಹೆಲ್ದೀ ಅನ್ನೋ ಕಾರಣಕ್ಕೆ ಬಹುತೇಕ ಜನರು ಹೊರಗಡೆಯಿಂದ ಪಿಜ್ಜಾ ಆರ್ಡರ್ ಮಾಡೋದನ್ನು ಬಿಟ್ಟು ಬಿಡುತ್ತಾರೆ. ಮನೆಯಲ್ಲೇ ಮಾಡೋಕೆ ತುಂಬಾ ಪ್ರೊಸೀಜರ್ ಸಹ ಇರೋ ಕಾರಣ ಮನೆಯಲ್ಲಿ ಮಾಡೋಕೆ ಟ್ರೈ ಮಾಡೋದು ಸಹ ಕಷ್ಟ. ಹಾಗಂತ ಪಿಜ್ಜಾ ತಿನ್ನುವುದನ್ನು ಬಿಟ್ಟುಬಿಡಬೇಕಾಗಿಲ್ಲ. ಪಿಜ್ಜಾವನ್ನು ಮನೆಯಲ್ಲೇ ಆರೋಗ್ಯಕರವಾಗಿ (Healthy) ತಯಾರಿಸಬಹುದು.. ಸ್ನೇಹಿತರು ಮತ್ತು ಕುಟುಂಬ (Family)ದೊಂದಿಗೆ ನೀವು ಮನೆಯಲ್ಲೇ ತಯಾರಿಸಿ, ಆನಂದಿಸಬಹುದಾದ ಬ್ರೆಡ್ ಪಿಜ್ಜಾದ ಬಗ್ಗೆ ಮಾಹಿತಿ ಇಲ್ಲಿದೆ.
AI ಎಫೆಕ್ಟ್: ನೀವ್ ಆರ್ಡರ್ ಮಾಡದಿದ್ರೂ ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಟೇಬಲ್‌ಗೆ ಬರುತ್ತೆ ಪಿಜ್ಜಾ!
ಬೇಕಾದ ಪದಾರ್ಥಗಳು
ಬ್ರೆಡ್ 2
ಕ್ಯಾರೆಟ್ 1
ಟೊಮೆಟೋ 1
ಕ್ಯಾಪ್ಸಿಕಂ 1
ಹಸಿಮೆಣಸು 2
ಆಲೂಗಡ್ಡೆ 1
ಮುಕ್ಕಾಲು ಟೀ ಸ್ಪೂನ್ ಸಕ್ಕರೆ
ಬ್ಲ್ಯಾಕ್ ಪೆಪ್ಪರ್ 1 ಟೀ ಸ್ಪೂನ್
2 ಟೇಬಲ್ ಸ್ಪೂನ್ ಪಿಜ್ಜಾ ಸಾಸ್
ಬೇಕಾದಷ್ಟು ಬಟರ್
ಉಪ್ಪು
ಚೀಸ್ ಕ್ಯೂಬ್ಸ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲಿಗೆ ಹಸಿಮೆಣಸು, ಕ್ಯಾರೆಟ್, ಕ್ಯಾಪ್ಸಿಕಂ, ಟೊಮೆಟೋ. ಆಲೂಗಡ್ಡೆಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ಪನೀರ್‌ನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಬಟರ್ ಹಾಕಿಕೊಂಡು ಇದರಲ್ಲಿ ತರಕಾರಿಗಳನ್ನು (Vegetables) ಸೇರಿಸಿ ಬೇಯಿಸಬೇಕು. ಆ ಬಳಿಕ ಸಕ್ಕರೆ, ಬ್ಲ್ಯಾಕ್ ಪೆಪ್ಪರ್ ಪೌಡರ್, ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.
ವಡಾ ಪಾವ್ ಪಿಜ್ಜಾ ಮಾಡೋ ವೀಡಿಯೋ ವೈರಲ್, ಯಾಕ್ರಪ್ಪಾ ಹೀಗೆಲ್ಲಾ ಅಸಹ್ಯ ಮಾಡ್ತೀರಿ!
ಆ ನಂತರ ಪಿಜ್ಜಾ ಸಾಸ್‌ಗಳನ್ನು ಸೇರಿಸಿಕೊಳ್ಳಬೇಕು. ಈಗ ಬ್ರೆಡ್‌ನ್ನು ತೆಗೆದುಕೊಂಡು ಒಂದೊಂದು ಬ್ರೆಡ್‌ಗೂ ಬೆಣ್ಣೆ ಹಚ್ಚಿಕೊಳ್ಳಿ. ಇದರ ಮೇಲೆ ಈಗಾಗ್ಲೇ ಸಿದ್ಧಪಡಿಸಿರುವ ಮಸಾಲೆಯನ್ನು ಹರಡಿ. ಮೇಲಿನಿಂದ ಪನೀರ್ ತುಂಡುಗಳನ್ನು ಇಟ್ಟು ಚೀಸ್ ಸೇರಿಸಿ. ಇದನ್ನು ತವಾ ಮೇಲಿಟ್ಟು ಮುಚ್ಚಳ ಮುಚ್ಚಿ ಬಿಸಿ ಮಾಡಿ. ಸ್ಪಲ್ಪ ಹೊತ್ತಿನ ನೀಟಾಗಿ ಕಟ್ ಮಾಡಿಕೊಳ್ಳಿ. ಬಿಸಿ ಬಿಸಿಯಾದ ಬ್ರೆಡ್ ಪಿಜ್ಜಾ ಸವಿಯಲು ಸಿದ್ಧ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.