
ಸಂಜೆಯ ಟೀ ಜೊತೆಗೆ, ಹಾಗೆಯೇ ಬೋರಾದಾಗ ಸವಿಯಲು ಹಸಿರು ಬಟಾಣೆ ಚೆನ್ನಾಗಿರುತ್ತದೆ. ಈ ಕಾಳುಗಳು ಆರೋಗ್ಯಕ್ಕೂ ಚೆನ್ನಾಗಿರೋ ಕಾರಣ, ಹೆಚ್ಚಿನವರು ಇದನ್ನು ತಿನ್ನಲು ಪ್ರಿಫರ್ ಮಾಡುತ್ತಾರೆ. ಇದಕ್ಕೆ ಸ್ಪಲ್ಪ ಮಸಾಲೆಯನ್ನು ಸಹ ಬೆರೆಸಿದರೆ ತಿನ್ನಲು ಸಖತ್ ಟೇಸ್ಟೀಯಾಗಿರುತ್ತದೆ. ಇವತ್ತಿನ ದಿನಗಳಲ್ಲಿ ಮನೆಯಿಂದ ಹೊರಗಡೆ ಯಾವುದನ್ನಾದರೂ ಖರೀದಿಸಿ ತಿನ್ನುವ ಮೊದಲು ಹತ್ತಾರು ಬಾರಿ ಯೋಚಿಸಬೇಕು. ಯಾಕೆಂದರೆ ಇವುಗಳೆಲ್ಲವೂ ಬಹುತೇಕ ಕೆಮಿಕಲ್ ಹಾಗೂ ಕಲರ್‌ನ್ನು ಒಳಗೊಂಡಿವೆ. ಎಲ್ರೂ ಇಷ್ಟಪಟ್ಟು ತಿನ್ನೋ ಹಸಿರು ಬಟಾಣಿ ಸಹ ಮಾಡೋ ರೀತಿ ನೋಡಿದ್ರೆ ನೀವು ತಿನ್ನೋದನ್ನೇ ಬಿಟ್ ಬಿಡೋದು ಖಂಡಿತ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ಹಸಿರು ಬಟಾಣಿ ತಯಾರಿಸುವುದನ್ನು ಒಳಗೊಂಡಿದೆ. ಇದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಹಸಿರು ಬಟಾಣಿ (Green matar) ಹೇಗ್ ಮಾಡ್ತಾರೆ ಅನ್ನೋ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋದಲ್ಲಿ, ಹುರಿದ ಕಡಲೆಯನ್ನು ಹಸಿರು ಬಣ್ಣವನ್ನು (Green colour) ಪಡೆಯಲು ಕೃತಕ ಬಣ್ಣದಲ್ಲಿ ಮುಳುಗಿಸುವುದನ್ನು ನೋಡಬಹುದು. ಆರೋಗ್ಯದ (Health) ಬಗ್ಗೆ ಕಾಳಜಿ ಇರೋರು ಈ ವಿಡಿಯೋ ನೋಡಿದ್ರೆ ಮತ್ತೆಂದೂ ಹಸಿರು ಬಟಾಣಿ ತಿನ್ನೋ ರಿಸ್ಕ್ ತಗೊಳ್ಳಲ್ಲ.
ಬಾಯಿ ಚಪ್ಪರಿಸಿಕೊಂಡು ಭೇಲ್ ತಿನ್ತೀರಾ? ಮಂಡಕ್ಕಿ ಹೇಗ್ ಮಾಡ್ತಾರೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ!
ಹಸಿರು ಬಟಾಣಿಯನ್ನು ಹೇಗೆ ತಯಾರಿಸಲಾಗುತ್ತದೆ?
ಕೆಲಸಗಾರರೊಬ್ಬರು ಬೃಹತ್ ಪಾತ್ರೆಯಿಂದ ನೆನೆಸಿದ ಕಡಲೆಯನ್ನು ತೆಗೆಯುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಆ ನಂತರ ಇನ್ನೊಬ್ಬ ಕೆಲಸಗಾರ ಕಡಲೆ ಮೇಲೆ ಪುಡಿಮಾಡಿದ ಕೃತಕ ಬಣ್ಣವನ್ನು ಎರಚುತ್ತಾನೆ. ಬಳಿಕ ಅದನ್ನು ತನ್ನ ಕೈಗಳಿಂದ ಬೆರೆಸುತ್ತಾನೆ. ನಂತರ, ಹಸಿರು-ಬಣ್ಣದ ಕಡಲೆಯನ್ನು ಬಕೆಟ್ ತರಹದ ಪಾತ್ರೆಗೆ ವರ್ಗಾಯಿಸುವುದನ್ನು ಕಾಣಬಹುದು. ಈ ಬಟಾಣಿಗಳನ್ನು ಸೂರ್ಯನ ಕೆಳಗೆ ನೆಲದ ಮೇಲೆ ಇರಿಸಲಾಗಿರುವ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಲಾಗುತ್ತದೆ. ನಂತರ ಇದನ್ನು ಕುದಿಯುವ ಎಣ್ಣೆಗೆ (Boiling oil) ಹಾಕಿ ಹುರಿದು ತೆಗೆಯುತ್ತಾರೆ. ನಂತರ ಒಣಗಿಸುತ್ತಾರೆ. ಹೀಗೆ ಒಣಗಿಸುವಾಗಲೂ ಗಾಢ ಹಸಿರು ಬಣ್ಣ ಹಾಗೆಯೇ ಇರುವುದನ್ನು ನೋಡಬಹುದು.
ಕೃತಕ ಬಣ್ಣಗಳ ಬಳಕೆಯ ಹೊರತಾಗಿ, ವೀಡಿಯೊದಲ್ಲಿ ತೋರಿಸಿರುವ ಪ್ರಕ್ರಿಯೆಯು ನೈರ್ಮಲ್ಯ ಅಭ್ಯಾಸಗಳ ಮೇಲೆ ಕಳವಳವನ್ನು ಉಂಟುಮಾಡುತ್ತದೆ. ಗಮನಾರ್ಹವಾಗಿ, ಆಹಾರ ವ್ಲಾಗರ್ ಸಲೋನಿ ಬೋತ್ರಾ ಅವರು ಹಂಚಿಕೊಂಡ ಕ್ಲಿಪ್‌ನಲ್ಲಿ ಯಾವುದೇ ಕೆಲಸಗಾರರು ಕೈಗವಸುಗಳನ್ನು ಧರಿಸಿಲ್ಲ. ಪ್ರತಿದಿನ ಸುಮಾರು 120 ಕೆಜಿ ಹಸಿರು ಮಟರ್ ಅನ್ನು ಕಾರ್ಮಿಕರು ತಯಾರಿಸುತ್ತಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ..
60 ಐಟಂ ಸೇರಿಸಿ ಮಾಡೋ ಡ್ಯಾನ್ಸಿಂಗ್ ಭೇಲ್‌ಪುರಿ; ಬೆವರೂ ಸೇರಿಸ್ತೀರಾ, ಕಾಲೆಳೆದ ನೆಟ್ಟಿಗರು!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಈ ವೀಡಿಯೊ ಹಲವಾರು ನೆಟಿಜನ್‌ಗಳು ತಮ್ಮ ಸ್ನ್ಯಾಕ್ಸ್ ಆಯ್ಕೆಗಳನ್ನು ಪ್ರಶ್ನಿಸುವಂತೆ ಮಾಡಿದೆ. ಬಟಾಣಿ ನೈಸರ್ಗಿಕವಾಗಿ ಹಸಿರು ಬಣ್ಣವಿದೆ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಈ ವಿಡಿಯೋ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ವೀಡಿಯೋ ನೋಡಿದ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು 'ನನ್ನ ಸಂಪೂರ್ಣ ಬಾಲ್ಯವು ಹಾಳಾಗಿದೆ. ಈ ಬಟಾಣಿಗಳು ನೈಸರ್ಗಿಕವಾಗಿ ಹಸಿರು ಎಂದು ನಾನು ನಂಬಿದ್ದೆ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಆಹಾರಕ್ಕೆ ಬಣ್ಣವನ್ನು ಸೇರಿಸುವ ಅಭ್ಯಾಸ ಒಳ್ಳೆಯದಲ್ಲ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ' ಎಂದಿದ್ದಾರೆ. ಮೂರನೇ ಬಳಕೆದಾರರು 'ನಾನು ಇದನ್ನು ಇನ್ನೆಂದೂ ತಿನ್ನುವುದಿಲ್ಲ' ಎಂದು ಕಮೆಂಟಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.