ಪಾನಿ ಪುರಿ ಅಂದ್ರೆ ವೆಜ್ ಅಂತಾ ಸಸ್ಯಹಾರಿಗಳು ಕಣ್ಮುಚ್ಚಿ ತಿನ್ನುತ್ತಿದ್ರು. ಇನ್ಮುಂದೆ ಹಾಗಲ್ಲ.. ವೆಜ್ ಪಾನಿಪುರಿ ಕೊಡಿ ಅಂತಾ ಪ್ರತ್ಯೇಕವಾಗಿ ಕೇಳ್ಬೇಕು. ಯಾಕೆಂದ್ರೆ ಪಾನಿಪುರಿ ಕ್ಷೇತ್ರಕ್ಕೂ ನಾನ್ ವೆಜ್ ಎಂಟ್ರಿಯಾಗಿದೆ.
ಪಾನಿ ಪುರಿ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರೂರುತ್ತೆ. ಮಧ್ಯರಾತ್ರಿ ಎಬ್ಬಿಸಿ ಪಾನಿಪುರಿ ನೀಡಿದ್ರೂ ನಿದ್ದೆಗಣ್ಣಿನಲ್ಲಿ ಅದನ್ನು ಸೇವನೆ ಮಾಡೋರಿದ್ದಾರೆ. ಬಿಸಿ ಉರಿಯ ಮಧ್ಯಾಹ್ನದ ಸಮಯದಲ್ಲಿ ಕೂಡ ಪಾನಿಪುರಿ ಅಂಗಡಿ ಮುಂದೆ ಜನರಿರ್ತಾರೆ. ಈರುಳ್ಳಿ, ಆಲೂಗಡ್ಡೆ ಚಾಟ್ ಮಸಾಲಾ ಜೊತೆ ಸಿಹಿ, ಖಾರದ ನೀರಿನ್ನ ಬೆರೆಸಿ ಪುರಿಯನ್ನು ಬಾಯೊಳಗೆ ಇಡ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಬಾಯಿ ಚಪ್ಪರಿಸ್ತಾ, ಬಿಸಿ ಹೊಗೆ ಹೊರಗೆ ಬಿಡ್ತಾ, ಪಾನಿ ಪುರಿ ತಿನ್ನುತ್ತಿದ್ರೆ ಅದು ಎಷ್ಟು ಒಳಗೆ ಹೋಗಿದೆ ಅನ್ನೋದೇ ತಿಳಿಯೋದಿಲ್ಲ. ಈ ಪಾನಿಪುರಿಯಲ್ಲಿ ಕೂಡ ಗೂಲ್ಮಾಲ್ ಮಾಡ್ಬಹುದು ಅಂದ್ರೆ ನೀವು ನಂಬ್ಲೇಬೇಕು.
ಗೂಲ್ಮಾಲ್ ಅಂದ್ರೆ ವೆಜ್ ಪಾನಿ ಪುರಿ (Veg Panipuri) ನಾನ್ ವೆಜ್ ಆಗಿರೋದ್ರ ಬಗ್ಗೆ ನಾವು ಹೇಳ್ತಿದ್ದೇವೆ. ಯಸ್, ನೀವು ಓದುತ್ತಿರೋದು ಸತ್ಯ. ಈಗಿನ ದಿನಗಳಲ್ಲಿ ಆಹಾರದ ಮೇಲೆ ಹೊಸ ಹೊಸ ಪ್ರಯೋಗ ನಡೆಯುತ್ತಿದೆ. ಕೆಲವರು ಇಷ್ಟವಾದ್ರೆ ಕೆಲವು ಕೇಳೋದೇ ಕಷ್ಟ, ಇನ್ನು ತಿನ್ನೋದು ಹೇಗೆ ಎನ್ನುತ್ತಾರೆ ಸಾಮಾಜಿಕ ಜಾಲತಾಣ ಬಳಕೆದಾರರು. ಈಗ ಅಂತಹದ್ದೇ ಒಂದು ಫೋಟೋ ವೈರಲ್ (Viral) ಆಗಿದೆ. ಬಂಗಾಳದಲ್ಲಿ ನಾನ್ ವೆಜ್ ಪಾನಿ ಪುರಿ ಮಾರಾಟವಾಗ್ತಿದೆ. ಬಂಗಾಳದಲ್ಲಿ ಒಂದು ಅಂಗಡಿಯಿದೆ, ಅನೇಕ ವಿಧದ ನಾನ್ ವೆಜ್ ಪುಚ್ಕೆ ಲಭ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ಮೆನು ಚರ್ಚೆಗೆ ಕಾರಣವಾಗಿದೆ.
Health Tips: ಗರಿಗರಿ ರಸ್ಕ್ ಅಂದ್ರೆ ಇಷ್ಟವಾ? ಆರೋಗ್ಯ ಹಾಳಾಗೋಕೆ ಇದೊಂದು ಸಾಕು ಬಿಡಿ
ನಾನ್ ವೆಜ್ ಪಾನಿ ಪುರಿ : ಋತುಪರ್ಣ ಚಟರ್ಜಿ' (@MasalaBai) ಹೆಸರಿನ ಟ್ವಿಟರ್ (Twitter) ಖಾತೆಯಲ್ಲಿ ಅಂಗಡಿ ಮೆನುವನ್ನು ಹಂಚಿಕೊಳ್ಳಲಾಗಿದೆ. ಈ ನಾನ್ ವೆಜ್ ಪಾನಿ ಪುರಿಯಲ್ಲೂ ನೀವು ವೆರೈಟಿ ನೋಡ್ಬಹುದು. ಅಲ್ಲಾ, ಈರುಳ್ಳಿ, ಆಲೂಗಡ್ಡೆ ಜೊತೆ ಮಟನ್, ಚಿಕನ್ ಸೇರಿಸಿ ತಿಂದ್ರೆ ಏನಾಗ್ಬೇಡ ಹೇಳಿ? ಅದ್ರ ಟೇಸ್ಟ್ ಹೇಗಿರಬಹುದು ಅಂತಾ ಈ ಟ್ವಿಟರ್ ಫೋಸ್ಟ್ ನೋಡಿ ಜನ ಮಾತನಾಡಿಕೊಳ್ತಿದ್ದಾರೆ.
ಮೆನುವಿನಲ್ಲಿ ಏನಿದೆ? : ಇನ್ನು ವೈರಲ್ ಆಗಿರುವ ಮೆನು ನೋಡಿದ ಜನರು ದಂಗಾಗಿದ್ದಾರೆ. ಒಂದಾ ಎರಡಾ, ಐದಾರು ವೆರೈಟಿ ನಾನ್ ವೆಜ್ ಪಾನಿ ಪುರಿಯನ್ನು ನೀವು ಇಲ್ಲಿ ನೋಡ್ಬಹುದು. ಮಟನ್ ಪುಚ್ಕಾ, ಚಿಕನ್ ಪುಚ್ಕಾ, ಚಾಕೊಲೇಟ್ ಪುಚ್ಕಾ, ಪ್ರಾನ್ಸ್ ಪುಚ್ಕಾ ಮತ್ತು ಫಿಶ್ ಪುಚ್ಕಾ ಅಂತಾ ಬೋರ್ಡ್ ನಲ್ಲಿ ಹಾಕಲಾಗಿದೆ.
Kitchen Tips : ತಲೆಯ ಮೇಲೊಂದೇ ಅಲ್ಲ ಅಡಿಗೆಗೂ ಬಳಸ್ಬಹುದು ಈ ಹೂವನ್ನು!
ಟ್ವಿಟರ್ ಗೆ ಪ್ರತಿಕ್ರಿಯೆ : ಋತುಪರ್ಣ ಚಟರ್ಜಿ, ನಾನ್ ವೆಜ್ ಪಾನಿ ಪುರಿ ಮೆನು ಹಾಕಿ, ಬಂಗಾಳ ಮತ್ತು ಬಂಗಾಳದ ಜನ ಎಷ್ಟು ಮುಂದೆ ಹೋಗಿದ್ದಾರೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಟ್ವೀಟರನ್ನು ಇದುವರೆಗೆ 55 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 200 ಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ. ಅನೇಕ ಬಳಕೆದಾರರು ಈ ಫೋಟೋಕ್ಕೆ ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡುವುದು ಇಷ್ಟೇ ಎಂದು ಕೆಲವರು ಕಮೆಂಟ್ ಹಾಕಿದ್ರೆ ಮತ್ತೆ ಕೆಲವರು ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ ಎಂದು ಬರೆದಿದ್ದಾರೆ. ಗೋಲ್ಹಪ್ಪ ಕೂಡ ನಾನ್ ವೆಜ್ ಆಗಬಹುದೆಂದು ನಾವು ಊಹಿಸಲೂ ಸಾಧ್ಯವಿಲ್ಲ ಎಂದು ಕೆಲವರು ಬರೆದಿದ್ದಾರೆ.
ನಾನು ಒಮ್ಮೆ ತಿಂದಿದ್ದೇನೆ. ಮನೆಯಲ್ಲಿ ಅದನ್ನು ಟ್ರೈ ಮಾಡಿದ್ದೇನೆ. ನಿಜವಾಗಿಯೂ ಅದ್ಭುತವಾಗಿದೆ. ಸೀಗಡಿ ಗೋಲ್ ಗಪ್ಪಾವನ್ನು ಮೊಸರಿನೊಂದಿಗೆ ಬೆರೆಸಿ ನೀಡಲಾಗುತ್ತದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ತಾವೂ ಟ್ರೈ ಮಾಡಿದ್ದು, ಇದು ತುಂಬಾ ರುಚಿಯಾಗಿದೆ ಎಂದಿದ್ದಾರೆ. ಕೆಲವರು ಚಾಕೋಲೇಟ್ ಪಾನಿಪುರಿಯನ್ನು ವಿರೋಧಿಸಿದ್ದಾರೆ.
Have Bengalis and Bengal gone too far? pic.twitter.com/ZdyIxf0ahu
— Rituparna Chatterjee (@MasalaBai)