ಈ ಜೂನ್ ತಿಂಗಳಲ್ಲಿ ಜನರು ಅನೇಕ ರೀತಿ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಸಣ್ಣಪುಟ್ಟ ರೋಗವೇ ದೊಡ್ಡದಾಗಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಆರೋಗ್ಯ ಸಚಿವಾಲಯ ನೀಡಿದ ಮಾರ್ಗಸೂಚಿ ಪಾಲಿಸೋದು ಉತ್ತಮ.
ಭಾರತದ ಅನೇಕ ರಾಜ್ಯಗಳಲ್ಲಿ ಬಿಸಿಲ ಝಳ ಜೋರಾಗಿದೆ. ಕೆಲವು ಕಡೆ 45 ಡಿಗ್ರಿಗಿಂತ ಹೆಚ್ಚು ತಾಪಮಾನ ವರದಿಯಾಗ್ತಿದೆ. ಸೂರ್ಯನ ಬಿಸಿ, ಸೆಖೆ ಹಾಗೂ ಬದಲಾಗ್ತಿರುವ ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜನರು ಅನಾರೋಗ್ಯಕ್ಕೆ ತುತ್ತಾಗೋದು ಹೆಚ್ಚಾಗ್ತಿದೆ. ಮೇ ಹಾಗೂ ಜೂನ್ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಜೂನ್ ತಿಂಗಳಿನಲ್ಲಿ ಫುಡ್ ಪಾಯಿಸನ್ ಅಪಾಯ ಹೆಚ್ಚಿರುವ ಕಾರಣ, ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಆರೋಗ್ಯ ಸಚಿವಾಲಯ ಕೆಲ ಸಲಹೆಗಳನ್ನು ನೀಡಿದೆ. ಅದನ್ನು ತಪ್ಪದೆ ಪಾಲಿಸಿದಲ್ಲಿ ಆಸ್ಪತ್ರೆಯಿಂದ ದೂರ ಇರಬಹುದು.
ಆರೋಗ್ಯ (Health) ಸಚಿವಾಲಯದ ಸೂಚನೆ ಏನು? : ಆರೋಗ್ಯ ಸಚಿವಾಲಯವು ಜನರಿಗೆ ಬಿಟ್ ದಿ ಹೀಟ್ ಸಲಹೆಗಳನ್ನು ನೀಡಿದೆ. ಅಲ್ಲದೆ, ಹೀಟ್ ಸ್ಟ್ರೋಕ್ (Heat Stroke) ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಸಚಿವಾಲಯ (Ministry) ಸೂಚನೆ ನೀಡಿದೆ. ಬಲವಾದ ಸೂರ್ಯನ ಬೆಳಕು ಮತ್ತು ಶಾಖದಿಂದಾಗಿ ಆರೋಗ್ಯ ಹದಗೆಟ್ಟಿರಬಹುದು. ಈ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯವೆಂದು ಸಚಿವಾಲಯ ತಿಳಿಸಿದೆ. ವಾಕರಿಕೆ, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆಯಲ್ಲಿ ಇಳಿಕೆ, ತ್ವರಿತ ಹೃದಯ ಬಡಿತ, ತಲೆನೋವು ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಹೀಟ್ ಸ್ಟ್ರೋಕ್ ಲಕ್ಷಣವಾಗಿದೆ. ಇದನ್ನು ತಡೆಗಟ್ಟಲು ಆರೋಗ್ಯ ಸಚಿವಾಲಯ ಮಾರ್ಗಸೂಚಿ ನೀಡಿದೆ.
undefined
ಬೆಳಗ್ಗೆದ್ದು ಏನೇನೋ ತಿನ್ಬೇಡಿ, ಆರೋಗ್ಯಕ್ಕೆ ಈ ಉಪಾಹಾರ ಬೆಸ್ಟ್
ಆಹಾರದ ಬಗ್ಗೆ ಸಚಿವಾಲಯದ ಮಾರ್ಗಸೂಚಿ (Guideline) :
ಗಾಳಿಯಾಡುವ ಜಾಗದಲ್ಲಿ ಅಡುಗೆ : ಅಡುಗೆ ಮನೆಯಲ್ಲಿ ಸಾಕಷ್ಟು ಗಾಳಿ ಆಡುವಂತೆ ನೋಡಿಕೊಳ್ಳಿ. ಅಡುಗೆ ಮಾಡುವ ಸಮಯದಲ್ಲಿ ಅಡುಗೆ ಮನೆ ಕಿಟಕಿ ಬಾಗಿಲನ್ನು ತೆರೆದಿಡಿ
ಈ ಸಮಯದಲ್ಲಿ ಅಡುಗೆ ಮಾಡ್ಬೇಡಿ : ಆರೋಗ್ಯ ಸಚಿವಾಲಯ ಯಾವಾಗ ಅಡುಗೆ ಮಾಡಬಾರದು ಎಂಬ ಮಾಹಿತಿಯನ್ನು ಕೂಡ ನೀಡಿದೆ. ಬೆಳಿಗ್ಗೆ 11 ಗಂಟೆ ನಂತ್ರ ಬಿಸಿ ಏರುತ್ತದೆ. ಹಾಗಾಗಿ 11 ಗಂಟೆ ನಂತ್ರ ಅಡುಗೆ ಮಾಡಬೇಡಿ ಶಾಖ ಮತ್ತು ಉರಿಯುತ್ತಿರುವ ಒಲೆಯಿಂದಾಗಿ ಅಡುಗೆಮನೆಯ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಈ ಶಾಖದಿಂದ ರಕ್ಷಣೆ ಬೇಕೆಂದ್ರೆ ಬೆಳಿಗ್ಗೆಯೇ ಆಹಾರ ತಯಾರಿಸಿ ಎನ್ನುತ್ತದೆ ಸಚಿವಾಲಯ.
ಹೆಚ್ಚು ಪ್ರೋಟೀನ್ ಇರುವ ಆಹಾರ ಸೇವನೆ ಮಾಡ್ಬೇಡಿ : ಬಿಸಿಲು ಹೆಚ್ಚಿರುವ ಸಮಯದಲ್ಲಿ ನೀವು ಪ್ರೋಟೀನ್ ಹೆಚ್ಚಿರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಡಿ. ಜಿಮ್ ಗೆ ಹೋಗುವವರು, ತೂಕ ಇಳಿಸಿಕೊಳ್ಳಲು ಬಯಸುವವರು ಅಧಿಕ ಪ್ರೋಟೀನ್ ಸೇವನೆಗೆ ಒತ್ತು ನೀಡುತ್ತಾರೆ. ಆದ್ರೆ ಈ ಬೇಸಿಗೆ ಸಮಯದಲ್ಲಿ ಪ್ರೋಟೀನ್ ಹೆಚ್ಚಿರುವ ಆಹಾರ, ಮೊಟ್ಟೆ, ಮೀನು, ಮಾಂಸವನ್ನು ಅತಿಯಾಗಿ ತಿನ್ನಬೇಡಿ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ.
ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!
ಹಳಸಿದ ಆಹಾರ ಸೇವನೆ ಬೇಡ : ಈಗ ಮಾಡಿದ ಆಹಾರವನ್ನು ಈಗ್ಲೇ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಬೇಸಿಗೆಯಲ್ಲಿ ಆಹಾರ ಬೇಗ ಹಾಳಾಗುತ್ತದೆ. ನೀವು ಬೆಳಿಗ್ಗೆ ಮಾಡಿದ ಆಹಾರ, ಸಾಮಾನ್ಯ ತಾಪಮಾನದಲ್ಲಿಟ್ಟರೆ ಸಂಜೆಯ ವೇಳೆಗೆ ಹಾಳಾಗಿರುತ್ತದೆ. ಹಾಗೆಯೇ ರಾತ್ರಿ ಮಿಕ್ಕ ಆಹಾರವನ್ನು ಫ್ರಿಜ್ ನಲ್ಲಿ ಇಟ್ಟು ಬೆಳಿಗ್ಗೆ ತಿನ್ನುವ ಸಹವಾಸಕ್ಕೆ ಹೋಗ್ಬೇಡಿ.
ಈ ಪಾನೀಯದಿಂದ ದೂರವಿರಿ : ಬೇಸಿಗೆಯಲ್ಲಿ ಕಾಫಿ, ಟೀ ಸೇವನೆಯನ್ನು ಅತಿಯಾಗಿ ಮಾಡ್ಬೇಡಿ. ಹಾಗೆಯೇ ತಂಪು ಪಾನೀಯಗಳನ್ನು ಕೂಡ ಕುಡಿಯಬೇಡಿ. ಬೇಸಿಗೆ ಸಂದರ್ಭದಲ್ಲಿ ಇದನ್ನು ನಿರಂತರ ಹಾಗೂ ಅತಿಯಾಗಿ ಕುಡಿದಾಗ ನಿಮ್ಮ ದೇಹ ನಿರ್ಜಲೀಕರಣ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.