ಮೈಸೂರು ಶೈಲಿಯ ಟೊಮೆಟೊ ರಸಂ: ನಾಲಿಗೆಗೂ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್

ಮನೆಯಲ್ಲಿಯೇ ಮೈಸೂರು ಶೈಲಿಯ ಟೊಮೆಟೊ ರಸಂ ತಯಾರಿಸಿ. ಇದು ರುಚಿಕರ ಮಾತ್ರವಲ್ಲದೆ, ತಯಾರಿಸಲು ಕೆಲವೇ ನಿಮಿಷಗಳು ಬೇಕಾಗುತ್ತದೆ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.


ಸಾಮಾನ್ಯವಾಗಿ ದಕ್ಷಿಣ ಭಾರತದ ಊಟದಲ್ಲಿ ಊಟಕ್ಕಾಗಿ ಟೊಮೆಟೋ ರಸಂ ಮತ್ತು ಮೆಣಸಿನ ರಸಂ ಇದ್ದೇ ಇರುತ್ತದೆ. ಟೊಮೆಟೊ ರಸಂನಲ್ಲೂ ಹಲವು ವಿಧಗಳಿವೆ. ಹಾಗಾದರೆ, ಈ ಬಾರಿ ನೀವು ಮನೆಯಲ್ಲಿಯೇ ಮೈಸೂರು ಸ್ಟೈಲ್​ ಟೊಮೆಟೊ ರಸಂ ಟ್ರೈ ಮಾಡಿ ನೋಡಿ. ಮೈಸೂರು ಶೈಲಿಯಲ್ಲಿ ಟೊಮೆಮೊ ರಸಂ ತಯಾರಿಸಲು ಕೆಲವೇ ನಿಮಿಷಗಳು ಸಾಕು. ಈ ರಸಂ ನಾಲಿಗೆಗೂ ಟೇಸ್ಟ್ ಹಾಗೂ ಆರೋಗ್ಯಕ್ಕೂ ಬೆಸ್ಟ್ ಆಗಿದೆ.

ಮೈಸೂರು ಟೊಮೆಟೊ ರಸಂ ಮಾಡಲು ಬೇಕಾಗುವ ಪದಾರ್ಥಗಳು:
ತೊಗರಿ ಬೇಳೆ: ಅರ್ಥ ಟೀ ಕಪ್
ಹುಣಸೆಹಣ್ಣು- ಸುಮಾರು ನಿಂಬೆಹಣ್ಣಿನ ಗಾತ್ರದಷ್ಟು
ಟೊಮೆಟೊ - 4
ಮೆಣಸಿನಕಾಯಿ - 4
ಬೆಲ್ಲ - ಒಂದು ಟೀ ಸ್ಪೋನ್
ಅರಿಶಿನ - ಚಿಟಿಕೆ
ಅಡುಗೆ ಎಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಸ್ವಲ್ಪ ಕೊತ್ತಂಬರಿ ಸೊಪ್ಪು
ಏಳೆಂಟು ಕರಿಬೇವಿನ ಎಲೆಗಳು

Latest Videos

ರಸಂ ಪುಡಿಗಾಗಿ ಮಾಡಲು ಬೇಕಾಗುವ ಸಾಮಗ್ರಿಗಳು:
ಅಡುಗೆ ಎಣ್ಣೆ - 2 ಟೀ ಚಮಟ
ಕರಿಮೆಣಸು - 1 ಟೀ ಸ್ಪೂನ್
ಬ್ಯಾಡಗಿ ಕೆಂಪು ಮೆಣಸಿನಕಾಯಿ-3
ಧನಿಯಾ ಪುಡಿ - 1 ಟೇಬಲ್​ ಸ್ಪೂನ್​
ಜೀರಿಗೆ - ಅರ್ಧ ಚಮಚ
ಹಸಿ ಕಡಲೆ - ಒಂದು ಚಮಚ
ಹಸಿ ಕೊಬ್ಬರಿ - 1/2 ಕಪ್ 

ಇದನ್ನೂ ಓದಿ: ಅಕ್ಕಿ, ಉದ್ದಿನ ಬೇಳೆ ಇಲ್ಲದೆ ತಯಾರಿಸಿ ಹತ್ತಿಯಂತಹ ಇಡ್ಲಿ! ಒಮ್ಮೆ ಟ್ರೈ ಮಾಡಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಜೀರಿಗೆ- 1 ಟೀ ಸ್ಪೂನ್
ತುಪ್ಪ- 1 ಚಮಚ
ಸಾಸಿವೆ- 1 ಟೀ ಸ್ಪೂನ್
ಕಂಪು ಮೆಣಸಿನಕಾಯಿ - 2
ಇಂಗು - ಒಂದು ಟೀ ಚಮಚ

ಮೈಸೂರು ಟೊಮೆಟೊ ರಸಂ ಮಾಡುವುದು ಹೇಗೆ?:
ಮೊದಲು ತೊಗರಿ ಬೇಳೆಯನ್ನು ನೀರಿನಲ್ಲಿ 30 ನಿಮಿಷ ನೆನೆಸಿಟ್ಟು, ಕುಕ್ಕರ್‌ನಲ್ಲಿ ಹಾಕಿ ಬೇಯಿಸಿ. ಕಡಿಮೆ ಉರಿಯಲ್ಲಿ 2 ಸಿಟಿ ಹಾಕಿಸಿ ನಂತರ ಪಕ್ಕಕ್ಕೆ ಇಡಿ. ಇನ್ನೊಂದು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಲೋ ಫ್ಲೇಮನ್‌ನಲ್ಲಿ ಹಸಿಕೊಬ್ಬರಿ ಹಾಕಿ ಹಸಿ ವಾಸನೆ ಹೋಗುವವರೆಗೆ ಉರಿಯಬೇಕು. ನಿಮ್ಮ ಬಳಿ ಬ್ಯಾಡಗಿ ಮೆಣಸಿನಕಾಯಿ ಇಲ್ಲದಿದ್ದರೆ, ನೀವು ಖಾರಕ್ಕೆ ತಕ್ಕಂತೆ ಒಬದಲಿ ಒಣ ಮೆಣಸಿನಕಾಯಿ ಬಳಸಬಹುದು.

ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಒಂದು ಬೌಲ್‌ನಲ್ಲಿ ಕತ್ತರಿಸಿದ ಟೊಮೆಟೊ ತುಂಡುಗಳು, ಸ್ವಲ್ಪ ಉಪ್ಪು, ಬೆಲ್ಲ, ಅರಿಶಿನ, ಹುಣಸೆ ಹಣ್ಣು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ಈಗ ದೊಡ್ಡ ಬಟ್ಟಲಿನಲ್ಲಿ ಟೊಮೆಟೊ ರಸವನ್ನು ಹಾಕಿ, ಅದಕ್ಕೆ ನಿಮಗೆ ಅಗತ್ಯವಿರುವಷ್ಟು ನೀರು 1 ಲೀಟರ್‌ವರೆಗೆ ಸುರಿಯಿರಿ. ಇದಕ್ಕೆ ಒಂದೆರಡು ಹಸಿರು ಮೆಣಸಿನಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ ರಸಂ ಕುದಿ ಬರುವವರೆಗೆ ಬೇಯಿಸಿ.

ಇದನ್ನೂ ಓದಿ: ಬೆಂಗಳೂರು 2025ರ ಬೆಸ್ಟ್ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಪ್ರಶಸ್ತಿ ಪ್ರದಾನ! ಯಾರಿಗೆ ಯಾವ ಅವಾರ್ಡ್ ಸಿಕ್ತು ನೋಡಿ!

ಒಲೆ ಮೇಲೆ ಕುದಿಯುವ ಟೊಮೆಟೊ ರಸಂಗೆ ಬೇಯಿಸಿದ ಬೇಳೆ, ರುಬ್ಬಿದ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಪುನಃ 4 ನಿಮಿಷ ಕುದಿಸಿ. ಇದೇ ವೇಳೆ ಒಗ್ಗರಣೆ ಕೊಡಲು ಪಕ್ಕದ ಒಲೆಯಲ್ಲಿ ಬಾಣಲೆ ಇಟ್ಟು ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಮೆಣಸು, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಈಗ ಕುದಿಯುತ್ತಿರುವ ರಸಂ ಒಲೆಯನ್ನು ಲೋ ಫ್ಲೇಮ್ ಮಾಡಿ, ಒಗ್ಗರಣೆಯನ್ನು ಸೇರಿಸಿ ಒಂದೆರಡು ನಿಮಿಷ ಕುದಿಸಿ. ಈಗ ಮೈಸೂರು ಟೊಮೆಟೊ ರಸಂ ಊಟಕ್ಕೆ ಸಿದ್ಧವಾಗುತ್ತದೆ.

click me!