ಎಲೆಕೋಸು ನಕಲಿಯಾ? ಅಸಲಿಯಾ? ಈ ಬಗ್ಗೆ ಮಹಿಳೆಯೊಬ್ಬಳು ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಅದ್ರಲ್ಲಿ ಏನಿದೆ? ಹೇಗೆ ಪತ್ತೆ ಮಾಡೋದು? ಬಳಕೆದಾರರ ಉತ್ತರ ಏನು ಎಂಬ ಮಾಹಿತಿ ನಿಲ್ಲಿದೆ.
ಎಲೆಕೋಸು (Cabbage) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚೈನೀಸ್ ಆಹಾರ ತಯಾರಿಸೋಕೆ ಎಲೆಕೋಸನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತೆ. ನೂಡಲ್ಸ್ ನಿಂದ ಹಿಡಿದು ಮೊಮೊಸ್ ವರೆಗೆ ಎಲ್ಲಕ್ಕೂ ಎಲೆಕೋಸ್ ಬೇಕು. ಎಲೆಕೋಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಇದೆ. ಇತ್ತೀಚಿನ ದಿನಗಳಲ್ಲಿ ನಕಲಿ ಆಹಾರ ಪದಾರ್ಥಗಳ ಹಾವಳಿ ಹೆಚ್ಚಾಗಿದೆ. ನಕಲಿ ಎಲೆಕೋಸು ಮಾರುಕಟ್ಟೆಯಲ್ಲಿ ಸಿಗುತ್ತೆ ಎನ್ನುವ ಮಾತಿದೆ. ಪ್ಲಾಸ್ಟಿಕ್ ನಿಂದ ಎಲೆಕೋಸನ್ನು ಮಾಡಲಾಗುತ್ತೆ ಎಂಬ ವರದಿಯೊಂದಿದೆ. ನಕಲಿ ಎಲೆಕೋಸು ಸೇವಿಸೋದ್ರಿಂದ ಹೊಟ್ಟೆ ನೋವು, ಗ್ಯಾಸ್, ಅಜೀರ್ಣ ಮುಂತಾದ ಸಮಸ್ಯೆ ನಮ್ಮನ್ನು ಕಾಡುತ್ತದೆ. ಮಾರುಕಟ್ಟೆಯಿಂದ ತಂದ ಎಲೆಕೋಸು ನಕಲಿ (fake) ಯಾ, ಅಸಲಿಯಾ ಎಂಬುದನ್ನು ಪತ್ತೆ ಮಾಡೋದು ಹೇಗೆ?
ಸೋಶಿಯಲ್ ಮೀಡಿಯಾದಲ್ಲಿ ನಕಲಿ ಎಲೆಕೋಸು ಪತ್ತೆ ಮಾಡೋದು ಹೇಗೆ ಎಂಬ ಪ್ರಶ್ನೆಗೆ ಅನೇಕ ವಿಡಿಯೋ ಲಭ್ಯವಿದೆ. ಮಹಿಳೆಯೊಬ್ಬಳು ಯೂಟ್ಯೂಬ್ ವಿಡಿಯೋ (YouTube video) ನೋಡಿ, ಆನ್ಲೈನ್ ನಲ್ಲಿ ಖರೀದಿ ಮಾಡಿದ ಎಲೆಕೋಸಿನ ಪರೀಕ್ಷೆ ನಡೆಸಿದ್ದಾಳೆ. ಆದ್ರೆ ಅದು ನಕಲಿಯಾ, ಅಸಲಿಯಾ ಎನ್ನುವ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಬಳಕೆದಾರರಿಗೆ ಈ ಪ್ರಶ್ನೆ ಇಟ್ಟಿದ್ದಾಳೆ.
ಕಾಂಚಿಪುರಂ ದೇವಸ್ಥಾನದ ಸ್ಪೆಷಲ್ ದೋಸೆ ರೆಸಿಪಿ; ಹಳೆ ರುಚಿಯಲ್ಲಿದೆ
ಸ್ವಿಗ್ಗಿ ಮಾರ್ಟ್ ನಿಂದ ಎಲೆಕೋಸನ್ನು ಖರೀದಿ ಮಾಡಿದ್ದೇನೆ. ಅದರ ಅಸಲಿಯತ್ತು ಪತ್ತೆ ಮಾಡೋಣ ಎನ್ನುತ್ತ ಎಲೆ ಕೋಸಿನ ಸಣ್ಣ ಭಾಗವನ್ನು ತೆಗೆದು ಗ್ಯಾಸ್ ಹಚ್ಚಿ, ಅದ್ರ ಮೇಲೆ ಇಡ್ತಾಳೆ. ಅದು ತಕ್ಷಣ ಸುಡೋದಿಲ್ಲ. ನಂತ್ರ ಅದನ್ನು ತೆಗೆದು ಹರಿಯುವ ಪ್ರಯತ್ನ ನಡೆಸ್ತಾಳೆ. ಬಿಸಿಯಾಗ್ತಿದ್ದಂತೆ ಎಲೆಕೋಸು ನಾರಿನಂತಾಗಿದ್ದು, ಅದನ್ನು ತುಂಡು ಮಾಡಲು ಸಾಧ್ಯವಾಗ್ತಿಲ್ಲ ಎಂದು ಮಹಿಳೆ ವಿಡಿಯೋದಲ್ಲಿ ಹೇಳೋದನ್ನು ಕೇಳ್ಬಹುದು.
ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಜನರು ಕಮೆಂಟ್ ಮಾಡಿದ್ದಾರೆ. ಮಹಿಳೆ ಕೆಲಸವನ್ನು ಬಹುತೇಕರು ಖಂಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಯಾವುದೇ ನಕಲಿ ಎಲೆಕೋಸು ಲಭ್ಯವಿಲ್ಲ ಎನ್ನುವುದು ನೆಟ್ಟಿಗರ ವಾದ. 10 ರೂಪಾಯಿಗೆ ಸಿಗುವ ಎಲೆಕೋಸನ್ನು ಯಾಕೆ ಪ್ಲಾಸ್ಟಿಕ್ ನಿಂದ ಮಾಡ್ತಾರೆ, ಪ್ಲಾಸ್ಟಿಕ್ ಎಲೆಕೋಸು, ಸಾಮಾನ್ಯ ಎಲೆಕೋಸಿಗಿಂತ ದುಬಾರಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ, ಇಂಟರ್ ನೆಟ್ ನೋಡೋದನ್ನು ಬಿಡಿ. ಅಲ್ಲಿ ಎಲ್ಲವೂ ಸತ್ಯವಾಗಿರೋದಿಲ್ಲ ಎನ್ನುವುದು ಮತ್ತೆ ಕೆಲವರ ವಾದವಾಗಿದೆ. ಈಗ ನೀವು ಸುಟ್ಟಿರುವ ಎಲೆಕೋಸು ಬಾಡಿದೆ. ಅದ್ರಲ್ಲಿ ನೀರಿನ ಅಂಶವಿಲ್ಲ. ಹಾಗಾಗಿ ಅದು ನಾರಿನಂತಾಗಿದೆ ಎಂಬುದು ಮತ್ತೆ ಕೆಲ ಬಳಕೆದಾರರ ಸಲಹೆಯಾಗಿದೆ. ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿ ಮಾಡುವ ಬದಲು, ಆನ್ಲೈನ್ ಖರೀದಿ ಏಕೆ ಎಂಬ ಪ್ರಶ್ನೆಯನ್ನು ಬಳಕೆದಾರರು ಕೇಳಿದ್ದಾರೆ. ಅಪರೂಪಕ್ಕೆ ಒಂದೆರಡು ಮಂದಿ ಮಾತ್ರ ಇದು ನಕಲಿ ಎಂದಿದ್ದಾರೆ.
ನಿಂತ್ಕೊಂಡು ನೀರು ಕುಡಿತೀರಾ? ಈ ಸಮಸ್ಯೆ ಶುರು ಆಗತ್ತೆ ಅಂತಾರೆ
ಈಗಿನ ದಿನಗಳಲ್ಲಿ ನಕಲಿ – ಅಸಲಿ ಪರೀಕ್ಷೆ ಜಾಸ್ತಿಯಾಗ್ತಿದೆ. ಅಕ್ಕಿಯಿಂದ ಹಿಡಿದು ತರಕಾರಿಯವರೆಗೆ ಎಲ್ಲವೂ ಕಲಬೆರಿಕೆ ಎನ್ನುವ ಮಾತಿದೆ. ಎಲೆಕೋಸನ್ನು ಕೂಡ ಪ್ಲಾಸ್ಟಿಕ್ ನಿಂದ ಮಾಡಲಾಗುತ್ತದೆ ಎನ್ನುವವರು ಅದನ್ನು ಹೇಗೆ ಪತ್ತೆ ಮಾಡೋದು ಎಂಬ ಸಲಹೆ ಕೂಡ ನೀಡಿದ್ದಾರೆ.
ನೀವು ಎಲೆಕೋಸು ಖರೀದಿ ಮಾಡುವ ಸಮಯದಲ್ಲಿ ಕೆಲ ವಿಷ್ಯವನ್ನು ಗಮನಿಸಿ. ನಿಜವಾದ ಎಲೆಕೋಸಿನ ಎಲೆಗಳು ಸ್ವಾಭಾವಿಕವಾಗಿ ಸ್ವಲ್ಪ ಬಾಗಿರುತ್ತವೆ. ಸ್ಪರ್ಶಕ್ಕೆ ಒರಟಾಗಿರುತ್ತವೆ. ಆದರೆ ನಕಲಿ ಎಲೆಕೋಸು ಎಲೆಗಳು ಹೊಳೆಯುತ್ತವೆ. ನಕಲಿ ಎಲೆಕೋಸು ರಾಸಾಯನಿಕಗಳು ಅಥವಾ ಪ್ಲಾಸ್ಟಿಕ್ ವಾಸನೆ ಹೊಂದಿರುತ್ತವೆ. ಹಾಗೆಯೇ ಎಲೆಕೋಸನ್ನು ಕತ್ತರಿಸಿದಾಗ ಒಳಗೆ ತಿಳಿ ಬಿಳಿ ಬಣ್ಣವಿದ್ದರೆ ಅದು ಅಸಲಿ. ಹಾಗೆಯೇ ಎಲೆ ಕೋಸಿನ ಎಲೆಗೆ ಸುಟ್ಟಾಗ, ಬೇಗನೆ ಉರಿಯಲು ಶುರುವಾದ್ರೆ ಅದು ನಿಜವಾದ ಎಲೆಕೋಸು ಎನ್ನಲಾಗುತ್ತದೆ. ಆದ್ರೆ ಈವರೆಗೂ ಎಲೆಕೋಸು ನಕಲಿ ಎಂಬುದನ್ನು ಯಾರೂ ಸೂಕ್ತ ಸಾಕ್ಷ್ಯದ ಜೊತೆ ದೃಢಪಡಿಸಿಲ್ಲ.