ಎದೆಹಾಲಿನ ಐಸ್‌ಕ್ರೀಮ್. ಶೀಘ್ರದಲ್ಲೇ ಹೊಸ ಐಸ್‌ಕ್ರೀಮ್ ಲಭ್ಯವಾಗುತ್ತಿದೆ. ಇದರ ರುಚಿ ಹೇಗಿರುತ್ತೆ? ಈ ಐಸ್‌ಕ್ರೀಮ್‌ನಲ್ಲಿರುವ ಪೌಷ್ಠಿಕಾಂಶಗಳೇನು? ಈ ಐಸ್‌ಕ್ರೀಮ್ ಕುರಿತು ನೆಟ್ಟಿಗರು ಕೇಳಿದ ಕುತೂಹಲದ ಪ್ರಶ್ನೆ ಏನು?
ಐಸ್‌ಕ್ರೀಮ್ ಬಹುತೇಕರಿಗೆ ಇಷ್ಟ. ವೆನಿಲ್ಲಾ, ಮ್ಯಾಂಗೋ, ಚಾಕ್ಲಲೇಟ್ ಸೇರಿದಂತೆ ಹಲವು ಬಗೆಯ ಐಸ್‌ಕ್ರೀಮ್ ಲಭ್ಯವಿದೆ. ಇದೀಗ ಈ ಸಾಲಿಗೆ ಮತ್ತೊಂದು ಸೇರಿಕೊಳ್ಳುತ್ತಿದೆ. ಜನಪ್ರಿಯ ಬ್ರ್ಯಾಂಡ್ ಕಂಪನಿ ಇದೀಗ ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಬಿಡುಗಡೆ ಮಾಡುತ್ತಿದೆ. ಈ ಐಸ್‌ಕ್ರೀಮ್ ಬಿಡುಗಡೆ ಮಾಡಲು ಪ್ರಮುಖ ಕಾರಣವನ್ನು ಕಂಪನಿ ಬಹರಂಗಪಡಿಸಿದೆ. ಹೌದು, ಎದೆ ಹಾಲು ರುಚಿ ಹೇಗಿರುತ್ತೆ ಅನ್ನೋ ಪ್ರಶ್ನೆ ಹಲವರಲ್ಲಿದೆ. ಇದೀಗ ಈ ಕುತೂಹಲಕ್ಕೆ ಬ್ರೆಸ್ ಮಿಸ್ಕ್ ಐಸ್‌ಕ್ರೀಮ್ ಉತ್ತರ ನೀಡಲಿದೆ ಎಂದು ಕಂಪನಿ ಹೇಳಿದೆ. ಜೊತೆಗೆ ಎದೆಹಾಲಿನ ಪೌಷ್ಠಿಕಾಂಶಗಳು ಈ ಐಸ್‌ಕ್ರೀಮ್‌ನಲ್ಲಿ ಇರಲಿದೆ ಎಂದಿದೆ.
ಎದೆಹಾಲಿನ ಐಸ್‌ಕ್ರೀಮ್ ಕುತೂಹಲ
ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಎಂದು ಹಲವರು ಮಾರುದ್ದ ದೂರ ಸಾಗಿದ್ದಾರೆ. ಆದರೆ ಇದು ಎದೆಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್ ಅಲ್ಲ. ಬದಲಾಗಿ ಇದು ಎದೆ ಹಾಲಿನ ಫ್ಲೇವರ್ ಐಸ್‌ಕ್ರೀಮ್. ಎದೆ ಹಾಲಿನಲ್ಲಿರುವ ಪೌಷ್ಠಿಕಾಂಶಗಳು, ಎದೆಹಾಲಿನ ರುಚಿಯನ್ನು ಒಳಗೊಂಡಿರಲಿದೆ ಎಂದು ಕಂಪನಿ ಹೇಳಿದೆ.
ಒಂದು ಸಣ್ಣ ಕೋನ್ ಐಸ್ ಕ್ರೀಂಗಾಗಿ ಪರದಾಡಿದ ಸಿರಿವಂತೆ ಮುಕೇಶ್ ಅಂಬಾನಿ ಸೊಸೆ ರಾಧಿಕಾ!
ಫ್ರಿಡಾ ಕಂಪನಿಯಿಂದ ಐಸ್‌ಕ್ರೀಮ್
ಎದೆ ಹಾಲಿನ ಐಸ್‌ಕ್ರೀಮ್‌ನ್ನು ಫ್ರಿಡಾ ಕಂಪನಿ ತರುತ್ತಿದೆ. ಇದು ಅಮೆರಿಕದ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್. ಹಾಗಂತ ಇದು ಅಮೆರಿಕದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ, ಬಹುತೇಕ ದೇಶದಲ್ಲಿ ಬಿಡುಗಡೆಯಾಗುತ್ತಿದೆ. ಫ್ರಿಡಾ ಹೇಳಿದಂತೆ ಜಗತ್ತಿನ ಹಲವರಲ್ಲಿರುವ ಇರುವ ಎದೆ ಹಾಲಿನ ರುಚಿ ಕುತೂಹಲಕ್ಕೆ ಈ ಐಸ್‌ಕ್ರೀಮ್ ಉತ್ತರ ನೀಡಲಿದೆ ಎಂದಿದೆ. ಹೀಗಾಗಿ ಹಲವು ದೇಶಗಳಲ್ಲಿ ಫ್ರಿಡಾ ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಲಭ್ಯವಾಗಲಿದೆ.
ಸ್ವೀಟಿ, ನಟ್ಟಿ, ಸಾಲ್ಟಿ
ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ರುಚಿಯನ್ನು ಕಂಪನಿ ಒಂದೇ ವಾಕ್ಯದಲ್ಲಿ ಉತ್ತರಿಸಿದೆ. ಇದು ಸಿಹಿಯಾಗಿ, ಬಾದಾಮಿ ಪಿಸ್ತಾ ರೀತಿಯ ಒಣ ಹಣ್ಣುಗಳ ರುಚಿಯಂತೆ ಹಾಗೂ ಹಿತಮಿತವಾಗಿ ಉಪ್ಪು ಇರಲಿದೆ ಎಂದು ಕಂಪನಿ ಹೇಳಿದೆ. ಎದೆಹಾಲಿನ ಫಾರ್ಮುಲಾದಲ್ಲಿ ಈ ಐಸ್‌ಕ್ರೀಮ್ ತಯಾರಾಗಿದೆ. ಈ ಐಸ್‌ಕ್ರೀಮ್‌ನಲ್ಲಿ ಮೆದಳು ಶಕ್ತಿ ಹೆಚ್ಚಿಸುವ ಒಮೆಗಾ 3s, ಎನರ್ಜಿ ಉತ್ತೇಜನ ನೀಡುವ ಲ್ಯಾಕ್ಟೋಸ್, ಪ್ರೊಟಿನ್, ವಿಟಮಿನ್, ಮಿನರಲ್ಸ್ ಒಳಗೊಂಡಿರಲಿದೆ ಎಂದಿದೆ.
ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಘೋಷಣೆ ಹೊರಬೀಳುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಐಸ್‌ಕ್ರೀಮ್ ರುಚಿ ನೋಡಲು ಸವಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಈ ಫ್ಲೇವರ್ ಮಕ್ಕಳಿಗೋ ಅಥವಾ ಎಲ್ಲರಿಗೋ ಎಂದು ಹಲವರು ಪ್ರಶ್ನಿಸಿದ್ದಾರೆ.ಇದೇ ವೇಳೆ ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಉತ್ತಮ ಪರಿಕಲ್ಪನೆಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಬಗೆ ಬಗೆಯ ಐಸ್‌ಕ್ರೀಮ್ ಲಭ್ಯವಿದೆ. ಇದರ ಜೊತೆಗೆ ಇದೀಗ ಬ್ರೆಸ್ ಮಿಲ್ಕ್ ಐಸ್ ಕ್ರೀಮ್ ಕೂಡ ಲಭ್ಯವಾಗಲಿದೆ. ಐಸ್‌ಕ್ರೀಮ್ ಮಾರುಕಟ್ಟೆಯಲ್ಲಿ ಹೊಸ ಫ್ಲೇವರ್ ಐಸ್‌ಕ್ರೀಮ್ ಯಾವ ರೀತಿ ಮರಾಟವಾಗಲಿದೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.
ರಾತ್ರಿ ನಿದ್ದೆ ಬರಬೇಕಂದ್ರೆ ನಟ ನಾಗಾರ್ಜುನ ಇದನ್ನೇ ತಿನ್ನಬೇಕಂತೆ: ಅಕ್ಕಿನೇನಿ ಫ್ಯಾಮಿಲಿಯ ಫೇವರೆಟ್ ಫುಡ್ ಇದೇನಾ?