ಡಯಾಬಿಟಿಸ್ ಇರೋರು ಯಾವ ಬೇಳೆಕಾಳು ತಿನ್ಬೇಕು? ಯಾವುದನ್ನು ತಿನ್ಬಾರ್ದು?

By Vinutha Perla  |  First Published Oct 20, 2023, 3:40 PM IST

ಇತ್ತೀಚಿನ ವರ್ಷಗಳಲ್ಲಿ ಶುಗರ್‌ ಅಥವಾ ಡಯಾಬಿಟಿಸ್‌ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸ್ಬೇಕು. ಅದರಲ್ಲೂ ಕೆಲವು ಬೇಳೆ ಕಾಳುಗಳು ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ. ಅವು ಯಾವುವು?


ಇತ್ತೀಚಿನ ವರ್ಷಗಳಲ್ಲಿ ಶುಗರ್‌ ಅಥವಾ ಡಯಾಬಿಟಿಸ್‌ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸ್ಬೇಕು. ಮಧುಮೇಹದಿಂದ ಬಳಲುತ್ತಿರುವವರಿಗೆ ರೋಗವನ್ನು ನಿಯಂತ್ರಿಸಲು ಸರಿಯಾದ ಆಹಾರ ಸೇವನೆ ಅತ್ಯಗತ್ಯ. ಅನೇಕ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು. ಅದರಲ್ಲೂ ಕೆಲವು ಬೇಳೆ ಕಾಳುಗಳು ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ. ಅವು ಯಾವುವು ಎಂಬುದಾಗಿ ತಿಳಿದುಕೊಳ್ಳೋಣ.

ಡಯಾಬಿಟಿಕ್ ಆಹಾರದ ಪಟ್ಟಿಯು ಧಾನ್ಯಗಳಿಂದ ತುಂಬಿದ್ದರೆ, ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಧ್ಯತೆಗಳು ಸಾಕಷ್ಟು ಹೆಚ್ಚು. ಏಕೆಂದರೆ ಧಾನ್ಯಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೀಗಾಗಿ ಸಕ್ಕರೆಗಳನ್ನು ನಿಧಾನವಾಗಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಮಧುಮೇಹ ಆಹಾರ ಯೋಜನೆಯಲ್ಲಿ ಸೇರಿಸಬಹುದಾದ ಆರೋಗ್ಯಕರ ಧಾನ್ಯಗಳ ಕುರಿತಾದ ಮಾಹಿತಿ ಇಲ್ಲಿದೆ.

Latest Videos

undefined

Health Tips: ಡಯಾಬಿಟಿಸ್ ಇರೋರು ಈ ಪಾನೀಯ ಕುಡಿದರೆ ವಿಷದಷ್ಟೇ ಡೇಂಜರ್‌!

ಗೋಧಿ 
ಸಂಸ್ಕರಿಸಿದ ಗೋಧಿ (ಮೈದಾ) ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಹೀಗಾಗಿ ಇದು ರಕ್ತಪ್ರವಾಹಕ್ಕೆ ಗ್ಲೂಕೋಸ್ ಅನ್ನು ತ್ವರಿತವಾಗಿ ಬಿಡುಗಡೆ ಮಾಡುತ್ತದೆ. ಆದರೆ, ಸಂಪೂರ್ಣ ಗೋಧಿ ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದೆ. ಹೀಗಾಗಿ ಚಪಾತಿ ಅಥವಾ ಪೂರಿಯ ಸೇವನೆ ಒಳ್ಳೆಯದು. ಕಡಿಮೆ ಸಕ್ಕರೆಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ರಾಗಿ
ರಾಗಿಯು ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ರಾಗಿಯು ಹೃದಯದ ಆರೋಗ್ಯಕರ ಭಾರತೀಯ ಧಾನ್ಯವಾಗಿದ್ದು ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಕೊಲೆಸ್ಟ್ರಾಲ್ ಮಟ್ಟಗಳು ಹೃದಯ ಕಾಯಿಲೆಗಳು ಮತ್ತು ರಕ್ತ ಪರಿಚಲನೆ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆ ಇರುವುದರಿಂದ ಮಧುಮೇಹ ಸ್ನೇಹಿಯಾಗಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೋಳ
ಜೋಳವು ಉತ್ಕರ್ಷಣ ನಿರೋಧಕಗಳೊಂದಿಗೆ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಜೋಳದ ರೊಟ್ಟಿ, ಜೋಳದ ಗಂಜಿಯ ಸೇವನೆ ತೂಕ ನಷ್ಟಕ್ಕೆ ಸಹ ಒಳ್ಳೆಯದು. ಇದು ದೇಹದಲ್ಲಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ತಿನ್ನುವುದನ್ನು ನಿಲ್ಲಿಸಿ, ನಿಮ್ಮ ದೇಹದ ಮೇಲಾಗುವ ಮ್ಯಾಜಿಕ್ ನೀವೇ ನೋಡಿ!

ಬಾರ್ಲಿ
ಬಾರ್ಲಿಯ ದೊಡ್ಡ ಆರೋಗ್ಯ ಪ್ರಯೋಜನವೆಂದರೆ ಅದು ಯಕೃತ್ತಿಗೆ ಒಳ್ಳೆಯದು. ಬಾರ್ಲಿಯು ಸುಲಭವಾಗಿ ಹೀರಲ್ಪಡುತ್ತದೆ. ಕಡಿಮೆ ಕ್ಯಾಲೋರಿಯಿಂದಾಗಿ  ಯಕೃತ್ತು ಮತ್ತು ಇಡೀ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಂಪೂರ್ಣ ಮತ್ತು ಸಂಸ್ಕರಿಸದ ಬಾರ್ಲಿಯು ಅಡುಗೆಯ ಪ್ರಕ್ರಿಯೆಯನ್ನು ಅವಲಂಬಿಸಿ 22 ರಿಂದ 35ರ ವರೆಗಿನ ಅತ್ಯಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ.

ಅಕ್ಕಿ ಹಿಟ್ಟು
ಒರಟಾದ ಅಕ್ಕಿ ಹಿಟ್ಟು ಧಾನ್ಯಕ್ಕಿಂತ ಕಡಿಮೆ ಪಿಷ್ಟ ಮತ್ತು ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ. ಅಕ್ಕಿ ಹಿಟ್ಟಿನಿಂದ ಮಾಡಿದ ರೊಟ್ಟಿಗಳು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಹೃದಯಕ್ಕೆ ಒಳ್ಳೆಯದು. ಮಾತ್ರವಲ್ಲ ಅಕ್ಕಿ ಹಿಟ್ಟಿನಲ್ಲಿ ಕಾರ್ಬೋಹೈಡ್ರೇಟ್‌ ಹೆಚ್ಚಿಲ್ಲ.

ತೊಗರಿಬೇಳೆ
ಮಧುಮೇಹಿಗಳು ತೊಗರಿಬೇಳೆಯನ್ನು ಸೇವಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಇದೆ. ಇದರಲ್ಲಿ ಕಬ್ಬಿಣ, ಫೋಲೇಟ್, ಸತು ಮತ್ತು ಸಾಕಷ್ಟು ಜೀವಸತ್ವಗಳಿವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಕಂದು ಅಕ್ಕಿ
ಬ್ರೌನ್ ರೈಸ್ ಮೆಗ್ನೀಸಿಯಮ್‌ನ ಪ್ರಬಲ ಮೂಲವಾಗಿದೆ. ಇದು ಮಧ್ಯಮ GL 16 ಅನ್ನು ಹೊಂದಿದೆ. ಮಧುಮೇಹವನ್ನು ನಿರ್ವಹಿಸುವ ಯಾರಿಗಾದರೂ ಮೆಗ್ನೀಸಿಯಮ್ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಮತ್ತು ಸ್ನಾಯು ಮತ್ತು ನರಗಳ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಡಯಾಬಿಟಿಸ್ ಇರುವವರು ಉದ್ದಿನ ಬೇಳೆ, ಕಡಲೆ ಬೇಳೆ, ಹೆಸರುಬೇಳೆಯ ಸೇವನೆಯನ್ನು ತಪ್ಪಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. 

click me!